Monday, January 8, 2007

ಇಣುಕಿದಾಗ ಏನು ಕಂಡೀತು...?

ನಿಮಗಷ್ಟೇ ಅಲ್ಲ; ಇಣುಕಿದಾಗ ಏನು ಕಂಡೀತೆಂಬ ಕುತೂಹಲ ನಮಗೂ ಇದೆ! ಆ ಕುತೂಹಲವನ್ನು ತಣಿಸುವ ಪ್ರಯತ್ನವೇ ಈ ಬ್ಲಾಗು.

ನಮ್ಮಲ್ಲಿ ಇತ್ತೀಚಿನ ವರೆಗೂ ಪ್ರೀತಿಯ ಬಗ್ಗೆ ಸಹ ಸಾರ್ವಜನಿಕವಾಗಿ ಮಾತನಾಡಬಾರದು ಎಂಬ ಅಘೋಷಿತ ನಿಯಮವಿತ್ತು. ಪೋಷಕರ ಬಳಿ ತಮ್ಮ ಪ್ರೇಮದ ಬಗ್ಗೆ ಹೇಳಲು ಹೆದರುತ್ತಿದ್ದ ಹುಡುಗ-ಹುಡುಗಿಯರ ಕಾಲವದು. ಆದರೆ ಆ ನಿಯಮ ಮುರಿದಾಗಿದೆ. ನಾವು ಮುಂದುವರೆದಿದ್ದೇವೆ!

ಆದರೆ ಕಾಮದ ಬಗ್ಗೆ ಮಾತ್ರ ಈಗಲೂ ನಾವು ಮುಕ್ತವಾಗಿ ಮಾತನಾಡಲೊಲ್ಲೆವು. ನಮ್ಮ ಕಾಲೇಜಿನಲ್ಲಿ ಒಮ್ಮೆ ಒಂದು ಚರ್ಚಾಸ್ಪರ್ಧೆ ಏರ್ಪಡಿಸಿದ್ದರು. 'ಯುವಕರ ನೈತಿಕತೆಯ ಅಭಿವೃದ್ಧಿಗೆ ಲೈಂಗಿಕ ಶಿಕ್ಷಣದ ಅಗತ್ಯತೆ ಇದೆಯೇ? ಇಲ್ಲವೇ?' -ಎಂಬುದು ವಿಷಯ. ಸಾಮಾನ್ಯವಾಗಿ ಚರ್ಚಾಸ್ಪರ್ಧೆಗಳಲ್ಲಿ ತುಂಬಾ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರಾದರೂ ಈ ಸ್ಪರ್ಧೆಗೆ ಹೆಸರು ಕೊಟ್ಟಿದ್ದವರು ಕೇವಲ ಇಬ್ಬರು! ಇಬ್ಬರೂ ಹುಡುಗರು. ನಾನೊಬ್ಬ; ಮತ್ತೊಬ್ಬ ನನ್ನ ಗೆಳೆಯ. ನಾವಾದರೂ ಸ್ಪರ್ಧೆಯ ವಿಷಯವನ್ನು declare ಮಾಡಿದ್ದ ಆ ಲೆಕ್ಚರರ್ರಿಗೆ ಬೇಜಾರಾಗಬಾರದು ಎಂಬ ದೃಷ್ಟಿಯಿಂದ ಸೇರಿದ್ದವರು! ಮಾತನಾಡಲಿಕ್ಕಂತೂ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಾಜಕುಮಾರನೆದುರು ಪ್ರೇಮ ನಿವೇದನೆಗೆ ನಿಂತ ರಾಜಕುವರಿಯಂತೆ, ಪೂರ್ತಿ ನೆಲವನ್ನೇ ನೋಡುತ್ತಾ, ಕತ್ತೆತ್ತದೇ, ಒಂದೆರಡು ಮಾತಾಡಿ ಮುಗಿಸುವಷ್ಟರಲ್ಲಿ ಸಾಕುಬೇಕಾಗಿತ್ತು!

ಪೋಲೀ ಜೋಕುಗಳು ಸಮಾನ ವಯಸ್ಕ ಗೆಳೆಯರ/ಗೆಳತಿಯರ ನಡುವೆ ಎಸ್ಸೆಮ್ಮೆಸ್ಸಾಗಿ ಓಡಾಡುತ್ತವೆಯಾದರೂ ಅದೇ ಜೋಕುಗಳು ಹುಡುಗರ ಮೊಬೈಲಿನಿಂದ ಹುಡುಗಿಯರ ಮೊಬೈಲಿಗಾಗಲೀ ಹುಡುಗಿಯರ ಮೊಬೈಲಿನಿಂದ ಹುಡುಗರ ಮೊಬೈಲಿಗಾಗಲೀ ಹರಿದಾಡುವುದೇ ಇಲ್ಲ. ಹುಡುಗರು ಹುಡುಗರ ಜೊತೆ ಮಾತಿಗೆ ಕುಳಿತಾಗ ಅದೆಷ್ಟೋ ಕೆಟ್ಟಾಕೊಳಕ ಜೋಕುಗಳನ್ನು, double meaning ಜೋಕುಗಳನ್ನು ಆಡಿಕೊಂಡು ನಕ್ಕಿರುತ್ತೇವೆ. ಆದರೆ ಅವನ್ನು ನಾವು publicನಲ್ಲಿ ಆಡುವಂತಿಲ್ಲ. ಅಂತಹ ಅನೇಕ ಜೋಕುಗಳು ನಿಮಗೆ ಈ ಬ್ಲಾಗಿನಲ್ಲಿ ಸಿಗುತ್ತವೆ.

ಹಾಗಂತ ಇದೇನು ಕೇವಲ ಅಶ್ಲೀಲ ಜೋಕುಗಳ ತಾಣವಲ್ಲ. ಅಶ್ಲೀಲ ಎಂಬ ಪದವೇ ಒಂಥರಾ ಅಶ್ಲೀಲ ಕಣ್ರೀ. ಇಷ್ಟಕ್ಕೂ ಯಾವುದು ಅಶ್ಲೀಲ? ಬಟ್ಟೆ ಬಿಚ್ಚಿದರೆ ಅಶ್ಲೀಲ ಅಂತಲಾ? ಎಷ್ಟು ಬಿಚ್ಚಿದರೆ?? ಮಲ್ಲಿಕಾ ಶೆರಾವತ್‍ನಷ್ಟು? ಅಶ್ಲೀಲತೆಯ ಪರಿಧಿ ಯಾವುದು? ಯಾವುದನ್ನು ಬರೆಯಬಹುದು, ಯಾವುದನ್ನು ಬರೆಯಬಾರದು? ಬರೆದರೆ ಅದಕ್ಕೆ ಪ್ರತಿಕ್ರಿಯೆ ಹೇಗಿರಬಹುದು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಈ ಬ್ಲಾಗನ್ನು ಓಪನ್ನು ಮಾಡುತ್ತಿದ್ದೇವೆ.

ಕಾಮ ಬರೆಯಬಾರದ ವಿಷಯವೇನಲ್ಲ. ಕನ್ನಡದಲ್ಲಿ ಜನ್ನ, ಪಂಪರಂತಹ ಆದಿಕವಿಗಳಿಂದ ಹಿಡಿದು ನವ್ಯಕವಿಗಳವರೆಗೆ ಎಲ್ಲರೂ ಕಾಮದ ಬಗ್ಗೆ, ಶೃಂಗಾರದ ಬಗ್ಗೆ ಬರೆದಿದ್ದಾರೆ. ಪುರುಸೊತ್ತಾದಾಗಲೆಲ್ಲ ಹೆಣ್ಣಿನ ಮೊಲೆಯ ಸೆಳಕಿನ ಬಗ್ಗೆ, ಸೊಂಟದ ಬಳುಕಿನ ಬಗ್ಗೆ, ನಿತಂಬದ ಝಳಕಿನ ಬಗ್ಗೆ ತಮ್ಮ ಕಾವ್ಯದಲ್ಲಿ ಬಳಸಿದ್ದಾರೆ. ಶೃಂಗಾರ ರಸಕಾವ್ಯಗಳಿಗೇನೂ ಕೊರತೆಯಿಲ್ಲ ನಮ್ಮಲ್ಲಿ. ನಿನ್ನೆ ತಾನೇ ರವಿ ಬೆಳಗೆರೆ ಬರೆದದ್ದು ಓದುತ್ತಿದ್ದೆ: "ಹೇಳಿದಷ್ಟೂ ಮುಗಿಯುವುದಿಲ್ಲ ಕಾಮದ ಬಗ್ಗೆ; ಅದಕ್ಕೇ ಅದನ್ನು 'ಕೇಳಿ' ಅನ್ನುವುದು!" ಅಂತ. ಹಾಗೆ ಅವರು ಬರೆದ ಕಾವ್ಯಸಾಲುಗಳ ಬಗ್ಗೆ ಸಹ ಇಲ್ಲಿ ಮಾತಾಡೋಣ.

ದಿನನಿತ್ಯವೂ ನಮ್ಮ ಕಣ್ಣೆದುರೇ ನಡೆಯುವ ಅದೆಷ್ಟೋ ಘಟನೆಗಳಲ್ಲಿ, ಆಡುವ ಮಾತುಗಳಲ್ಲಿ ದ್ವಂದ್ವಾರ್ಥಗಳಿರುತ್ತವೆ. 'ಹೀಗೆ' ಹೇಳಿದ್ದನ್ನೇ 'ಹಾಗೆ' ಸಹ ಅರ್ಥ ಮಾಡಿಕೊಳ್ಳಬಹುದು. ಅವನ್ನೇ ನೆನಪಿಟ್ಟುಕೊಂಡು ಒಂದೆಡೆ ಬರೆದಿಟ್ಟರೆ ಮುಂದೆಂದೋ ಬಿಡುವಿದ್ದಾಗ, mood out ಆಗಿದ್ದಾಗ ಓದಿಕೊಂಡು ನಕ್ಕು, ಮನಸ್ಸನ್ನು ಸರಿ ಮಾಡಿಕೊಳ್ಳಬಹುದು. ಖಿನ್ನತೆಗೆ ನಗುವಿನಷ್ಟು ಒಳ್ಳೆಯ ಔಷಧ ಬೇರೆ ಯಾವುದಿದೆ ಹೇಳಿ?

ಅಶ್ಲೀಲತೆಯೆಂಬ ಪರಿಧಿಯನ್ನು ಸ್ವಲ್ಪವೇ ದಾಟಿ, ಆ ಮೋಟುಗೋಡೆಯನ್ನು ಹತ್ತಿ, ಆಚೆ ಇಣುಕಿ ನೋಡಲಿದ್ದೇವೆ. ಕಂಡದ್ದನ್ನು ಕಂಡಹಾಗೆ, ಆದರೂ ತುಂಬಾ ಅಶ್ಲೀಲವಾಗದ ಹಾಗೆ present ಮಾಡಲಿಕ್ಕೆ ಆದಷ್ಟೂ ಪ್ರಯತ್ನ ಮಾಡುತ್ತೇವೆ. ಈ ಬ್ಲಾಗಿಗೆ ನಾವು ಐವರು contributors ಇದ್ದೇವೆ: ನಾನು- ಸುಶ್ರುತ, ಶ್ರೀನಿಧಿ, ಸಂದೀಪ ನಡಹಳ್ಳಿ (Alpazna), ಹರ್ಷ ಮತ್ತು ಪರಿಸರಪ್ರೇಮಿ ಅರುಣ್. ಬರೆದ ಜೋಕು, ಲೇಖನ, ಅಂತಃಪುರಗೀತೆ.... ಇತ್ಯಾದಿಗಳಿಗೆ ನಿಮ್ಮ ಪ್ರತಿಕ್ರಿಯೆಯನ್ನು ಬಯಸುತ್ತೇವೆ. ನಮ್ಮ ಪ್ರಯತ್ನವನ್ನು ನೀವು ಪ್ರೋತ್ಸಾಹಿಸುತ್ತೀರೋ ಅಥವಾ 'ಛೀ!' ಅನ್ನುತ್ತೀರೋ ಎಂಬ ಅನುಮಾನದಲ್ಲೇ,

-ನಾವು!

[Disclaimer: ಅನೇಕ ಕವಿ/ಲೇಖಕರ ಕವಿತೆ/ಬರಹಗಳನ್ನು ಅವರ ಅನುಮತಿ ಇಲ್ಲದೇ ಈ ಬ್ಲಾಗಿನಲ್ಲಿ ಬಳಸಿಕೊಂಡಿದ್ದೇವೆ. ಕೆಲ ವೆಬ್‌ಸೈಟ್‌ಗಳಲ್ಲಿ ಸಿಕ್ಕ ಚಿತ್ರಗಳನ್ನು ಹಾಕಿದ್ದೇವೆ. ಲಿಂಕ್ಸ್ ಕೊಟ್ಟುಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದವರ ವಿರೋಧವಿದ್ದರೆ ದಯವಿಟ್ಟು ನಮಗೆ ತಿಳಿಸಿ. ತಕ್ಷಣ ಅದನ್ನು ಇಲ್ಲಿಂದ ತೆಗೆಯಲಾಗುವುದು.]

32 comments:

Anonymous said...

ಮೋಟು ಗೋದೆಯಬಗ್ಗೆ ತಿಳಿಯಿತು. ಇನ್ನು ಆಚೆಗೆ ಇಣುಕುವದು ಯಾವಾಗ? 'ತುದಿಗಾಲಲ್ಲಿ ನಿತಿರುವೆ......

-- ಹ

alpazna said...

@ಹ,

ಅತಿ ಆತುರ ಸಲ್ಲ, "ಹ" ಅವರೆ.
ಹೆಚ್ಚು ಕಾಯಿಸುವುದೂ ಸರಿಯಲ್ಲವೆಂದು
ನಮಗೆ ಗೊತ್ತು.

ಹಾಗೆಂದು ಇಣುಕುವವರು ನಾವು ತುದಿಗಾಲಲ್ಲಿ
ನಿಂತು ಇಣುಕಿದರೆ ಆಚೆ ಮಗುಚಿಬೀಳಬಹುದಲ್ಲವೇ?:)

Srikanth.K.S(ಶ್ರೀಕಾಂತ) said...

ನಿಮ್ಮ ಇಣುಕುನೋಟದ ಪ್ರಯತ್ನ ಸರಿಯಾಗಿದೆ.ನಾವು ಬದುಕುತ್ತಿರುವ ಇಂದಿನ ನವ ಪ್ರಪಂಚದಲ್ಲಿ, ಇಂಥಾ ವಿಷಯಗಳ ಬಗ್ಗೆ ಪರಸ್ಪರ ಚರ್ಚೆಯಿಂದ ಪರಂಪರಾಗತವಾಗಿ ಈ ವಿಷಯದ ಬಗ್ಗೆ ಇರುವ'ಅಡ್ಡಗೋಡೆ'ಯನ್ನು ಹೋಗಲಾಡಿಸಬಹುದು.

ಶ್ರೀನಿಧಿ...... said...

ನಮಸ್ತೇ ಶ್ರೀಕಾಂತ್,
ತಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯ, ನಿಮ್ಮಂತಹ ಬೆನ್ನು ತಟ್ಟುವ ಜನರಿದ್ದರೆ ಅಡ್ದಗೋಡೆಯನ್ನ ಹೋಗಲಾಡಿಸಲು ನಮ್ಮಿಂದಾದಷ್ಟು ಪ್ರಯತ್ನ ನಾವು ಮಾಡಿಯೇ ಮಾಡುತ್ತೇವೆ.
- ಇಣುಕುವವರು.

Vijendra ( ವಿಜೇಂದ್ರ ರಾವ್ ) said...

ಸೂಪರ್ !!ಆಗಾಗ ಬೋರದಾಗ ಬಂದು ಇಣುಕ್ತಾ ಇರ್‌ತೇನೆ

Sudhindra said...

ಅರೆ, ಇಷ್ಟು ದಿನ ನಾನು ಮೋಟುಗೋಡೆಯನ್ನು ನೋಡಿಯೆ ಇರಲಿಲ್ಲ. ಈಗ ಮೋಟುಗೋಡೆಯಾಚೆ ಇಣುಕಿದಾಗ ತುಂಬಾ ಖುಶಿಯಾಯಿತು. ಹಾಸ್ಯ ಜೀವನದ ಅತಿ ಅವಶ್ಯ ರಸ. ಅದನ್ನು ಇನ್ನಷ್ಟು ನೀಡಿ.

jayaram Gowda said...

ಬರವಣಿಗೆಯ ಶೈಲಿ ಇಷ್ಟವಾಯಿತು. ಎಲ್ಲರಂತೆ ನಾವು ಗೋಡೆ ಇಣುಕುವವರೆ. ನಾನು ಈ ಬ್ಲಾಗಿನಲ್ಲಿ ಇನ್ನೂ ಅನೇಕ ಇಂತಹ ಬರವಣಿಗೆಗಳನ್ನ ನಿರೀಕ್ಷಿಸುತ್ತೇನೆ. ಪ್ರಯತ್ನ ಉತ್ತಮವಾಗಿದೆ. ಇದು ಹೀಗೆ ಸಾಗಲಿ.

preetisha said...

moTu goDe adbhutavaagide.... ee goDe hinge great wall of kannada aagli....

Preetish

Anonymous said...

MOTU GODEYACHE ENIDE ENDU INUKIDAVARU HELTHIRA ............PLEASE ?

kathegara said...

ಶೃಂಗಾರ ಎನ್ನುವುದು ಅತಿ ಮುಖ್ಯ ಹಾಗೂ ಸ್ವಾರಸ್ಯಕರವಾದ ರಸ..ನಾವು ಸಂಕೋಚ ಬಿಟ್ಟು ಬರೆದರೆ ಹೇಗಿರುತ್ತೆ?
ಹೇಗಿರುತ್ತೆ ಏನ್ಬಂತು?
ನನ್ನ ಹೊಸ ಬ್ಲ್ಲಗ್ ನಂತೊರುತ್ತೆ...ಓ?
ನೋಡಿಲ್ವೆ?
http://shrungara.blogspot.com/

ಇತಿ ನಿಮ್ಮ ಸವಿನಯ,
ಶೃಂಗಾರ ಕತೆಗಾರ

Anonymous said...

ಅಶ್ಲೀಲತೆ ಇರುವದು ಮನದಲ್ಲಿ. "ಮೊಲೆಯ ಮೇಲಾಡುವ ಯೋಗಿಗಳುಂಟು, ಹಿಮಾಲಯದ ಗುಹೆಗಳಲಿ ತಪಗೈವ ಭೋಗಿಗಳುಂಟು" ಎಂಬ ಮಾತು ಸತಟ್ಯಕ್ಕೆ ದೂರವಲ್ಲ.

minuk said...

ee inukuva majave bere. adannu noduva usabariginta nodte heluva tavakane heccu maja kodtu . navu adanne ashisutteve.

neevellaru bahala cholo kelsa madidri.

minuka

Rajesh said...

ayyo astella tale kedisikollabedi. Kannadadavaru e vishayadalli tumba munde eddare. shuru hacchikolli.
rajesh

magu said...

ನಿಮ್ಮ ಪ್ರಯತ್ನ ಶ್ಲಾಘನೀಯ. ನನ್ನ ಕಡೆಯಿ೦ದ ೧ ಕೈ ಯಾವಾಗಲೂ ನಿಮಗೆ ಮೀಸಲು.

ಬೆಂಕಿಕಡ್ಡಿ said...

ಮೋಟುಗೋಡೆಯಾಚೆ ಇಣುಕಿ ....ಅಂತ ಅವಧಿ ಹೇಳಿದ ಮೇಲೆ ನಿಮ್ಮ ಪ್ರತಾಪ ಅಲ್ಲಲ್ಲ ಪ್ರಯತ್ನ ಗೊತ್ತಾಯ್ತು.Good! ಶೃಂಗಾರವಿರದ ಬದುಕು ಯಾರದೂ ಆಗುವುದು ಬೇಡ. ಸಂಕೋಚ ಮತ್ತು ಅನುಮಾನಗಳಿಲ್ಲದೇ ಎಲ್ಲರೂ ಚರ್ಚಿಸುವಂತಾಗಲಿ.

hema said...

ಮೋಟುಗೋಡೆ ಟೀಮಿಗೊಂದು ಹಾಯ್,

ನಿಮ್ಮ ಬ್ಲಾಗೊಂದು ಉತ್ತಮ ಪ್ರಯತ್ನ. ’ಇಂತಹ’ ವಿಷಯಗಳನ್ನು ಹೀಗೂ ಬರೆಯಬಹುದೆಂದು ತೋರಿಸಿಕೊಟ್ಟಿದ್ದೀರಿ. ನಿಮಗೊಂದು ಮಾತು ನಿಮ್ಮ ಬ್ಲಾಗ್ ಎಲ್ಲಿಯೂ ಅಶ್ಲೀಲವೆನಿಸಲಿಲ್ಲ. ಕೆಲವು ಕಡೆ ಪೋಲಿ ಅನಿಸಿದರೂ, ಹಾಸ್ಯ ವಿಫುಲವಾಗಿದೆ. ಕಮೆಂಟು ಮಾಡಿಬಹುದೇ ಎಂದು ಯೋಚಿಸಿದೆ... ಮಾಡದಷ್ಟು ಪೋಲಿಯಾಗೇನಿಲ್ಲ ಎನಿಸಿತು. ಇಣುಕುವಿಕೆ ಮುಂದುವರೆಸಿ :) ಗುಡ್ ಲಕ್....

ಹೇಮ ಪವಾರ್

chinmay said...

this blog is a real fun@!!!

kardi said...

Ennukorige Namaskara..!

Godde bage thilithu.. chanagide.. munduvarse ok..
Godde bilada hage nodikoli...

Enthi..
Godde pakka nanu..Kardi

Anonymous said...

i have an article. u can publish

http://prayapraya.blogspot.com/2011/01/blog-post_27.html

-Koneyolagina kalla.

gowda mallesh said...

ಅರೆ, ಇಷ್ಟು ದಿನ ನಾನು ಮೋಟುಗೋಡೆಯನ್ನು ನೋಡಿಯೆ ಇರಲಿಲ್ಲ. ಈಗ ಮೋಟುಗೋಡೆಯಾಚೆ ಇಣುಕಿದಾಗ ತುಂಬಾ ಖುಶಿಯಾಯಿತು. ಹಾಸ್ಯ ಜೀವನದ ಅತಿ ಅವಶ್ಯ ರಸ. ಅದನ್ನು ಇನ್ನಷ್ಟು ನೀಡಿ.

ಪವನ್ ಮೈರ್ಪಾಡಿ said...

ಶೃಂಗಾರ ಇಲ್ಲದಿದ್ದರೆ ಬದುಕು ಬಂಗಾರವಾಗುವುದು ನನಸಲ್ಲ ಹೀಗಾಗೆ ಇದರ ಬಳಕೆ ಸೂರ್ಯರಶ್ಮಿಯಂತಲ್ಲ ಅದು ಟಾರ್ಚ್ ನಂತೆ ಬೇಕಾದಾಗ ಮಾತ್ರ ಉರಿಸಬಹುದಾದದ್ದು ಆರೀತಿಯ ಹಂಬಲಗಳ ಲಘುಬಿತ್ತರ ಶ್ಲಾಘನೀಯ

pavana mairpaady

ಪವನ್ ಮೈರ್ಪಾಡಿ said...

ಶೃಂಗಾರ ಇಲ್ಲದಿದ್ದರೆ ಬದುಕು ಬಂಗಾರವಾಗುವುದು ನನಸಲ್ಲ ಹೀಗಾಗೆ ಇದರ ಬಳಕೆ ಸೂರ್ಯರಶ್ಮಿಯಂತಲ್ಲ ಅದು ಟಾರ್ಚ್ ನಂತೆ ಬೇಕಾದಾಗ ಮಾತ್ರ ಉರಿಸಬಹುದಾದದ್ದು ಆರೀತಿಯ ಹಂಬಲಗಳ ಲಘುಬಿತ್ತರ ಶ್ಲಾಘನೀಯ

gofiseeds.com said...

Preethiya Motugodeyache enuki,
Blagu tumba chalu ithiri. Adra singamnalli (ajay devgan Movie) nambagge mathdirod nodi bala basraythri.

ISHWARA BHAT K said...

ಯಾರೇನೇ ಅಂದರೂ ಓದಿ ಖುಷಿಪಟ್ಟಿದ್ದಾರೆ. ನಾನೂ ಓದಿದೆ.. ಸ್ವಲ್ಪ ಲೇಟಾಗಿ ಬುದ್ಧಿಬಂದದಕ್ಕೆ ವಿಷಾದವಿದೆ ನನ್ ಮೇಲೇನೆ :)

Koti said...

So nice..................

shodhan basrur said...

nice blog

shodhan basrur said...

nice blog

shodhan basrur said...

good

shodhan basrur said...
This comment has been removed by the author.
ಸಂಧ್ಯಾ ... said...

ಮೊದಲ ಬಾರಿ ಇಣುಕಿದ್ದು..:) ತುಂಬಾ ಇಷ್ಟವಾಯಿತು....

prakruthi srushti said...

hi ....unbeleavable sambandada bagge bareyiri ...ashchryakara sambanda thrill agiruthade....kriyegintha .....munche ....sandarbagala creation bagge bareyiri

Anonymous said...

ಅಶ್ಲೀಲವೆಂಬ ತಪ್ಪು ಹಣೆಪಟ್ಟಿ ಹೊತ್ತಿರುವ ಶೃಂಗಾರವನ್ನು ತಿಳಿಹಾಸ್ಯವಾಗಿ ಪರಿವರ್ತಿಸಿದ ಎಲ್ಲರಿಗೂ ಶುಭವಾಗಲಿ