Wednesday, June 20, 2007

ಈಗ ಡುಂಡೀರಾಜ್ ಸಮಯ..!

ಹನಿಗವನಗಳ ರಾಜ ಶ್ರೀ ಎಚ್. ಡುಂಡೀರಾಜರ ಒಂದಷ್ಟು ಪೋಲೀ ಹನಿಗಳು:

ಯೋಜನೆ

ನಾವಿಬ್ಬರು
ನಮಗಿಬ್ಬರು
ಮೂರಾಗದಂತೆ ರಬ್ಬರು

ಮಗು

ಎಪ್ಪತ್ತು ವರುಷದ ಮುದುಕ
ಅಪ್ಪನಾದನಂತೆ
ವಿಚಿತ್ರ! ಆದರೂ ನಿಜ.
ಮುದ್ದು ಮುದ್ದಾದ
ಗಂಡು ಮಗು
ಹೆಸರು ವಯಾಗ್ರಜ!

ಆ-ಶ್ರಮ

ಕಟ್ಟಾ ಬ್ರಹ್ಮಚಾರಿಯಾಗಿದ್ದವ
ಪ್ರಸ್ತದ ಮರುದಿನ
ಏದುಸಿರು ಬಿಡುತ್ತಾ ಹೇಳಿದ-
ಅಬ್ಬಾ! ಎಂಥಾ ಶ್ರಮ
ಈ ಗೃಹಸ್ಥಾಶ್ರಮ!

ಅಭಿಪ್ರಾಯ

ಪಾನ ನಿರೋಧ
ಬೇಕೇ? ಬೇಡವೇ?
ಎನ್ನುವ ಚರ್ಚಾಗೋಷ್ಠಿಯಲ್ಲಿ
ಹೇಳಿದನೊಬ್ಬ ಮೆಲುದನಿಯಲ್ಲಿ
ಪಾನ
ನಿರೋಧ
ಎರಡೂ ಇರಲಿ.

ಬದಲಾವಣೆ

ಕಾಶಿ, ರಾಮೇಶ್ವರ
ಎನ್ನುತ್ತಿದ್ದ ತಾತ
ಶುರುಮಾಡಿದ್ದಾನೆ ಈಗ
ಹೊಸ ವರಾತ:
ನೋಡಬೇಕಂತೆ ಸಿಮ್ಲಾ,
ಕಾಶ್ಮೀರ, ಆಗ್ರ
ಎಲ್ಲೋ ಸಿಕ್ಕಿರಬೇಕು
ವಯಾಗ್ರ!

ಲಿಂಗ

ನಲ್ಲ ಪುಲ್ಲಿಂಗ
ನಲ್ಲೆ ಸ್ತ್ರೀಲಿಂಗ
ಏಕಾಂತದಲ್ಲಿ
ಭೇದವೆಲ್ಲಿ?
ಇಬ್ಬರೂ ಒಂದೇ
ಡಾರ್ಲಿಂಗ!

ಹುಟ್ಟು

ಸರತಿ ಸಾಲು
ಶುರುವಾದದ್ದು
ದ್ವಾಪರ ಯುಗದಲ್ಲಿ
ಪಾಂಡುಪುತ್ರರಿಗೆ
ದ್ರೌಪದಿ ನುಡುದಳು-
ಸ್ವಾಮಿ, ಕ್ಯೂ ನಿಲ್ಲಿ.

ಕಿವಿ ಮಾತು

ಆಗಿರಬಹುದು ವೇದಿಕೆಯಲ್ಲಿ
ನೀವು ಜನಪ್ರಿಯ ಕವಿ ಡುಂಡಿ
ಬೆಡ್‍ರೂಮಿನಲ್ಲಿ ಚುಟುಕು ಬೇಡ
ಎಂದಳು ಹೆಂಡತಿ ಕಿವಿ ಹಿಂಡಿ!

ಕದನ ವಿರಾಮ

ಗಂಡ ಹೆಂಡಿರ ಜಗಳ ಉಂಡು ಮಲಗುವ ವರೆಗೆ
ಆಮೇಲೆ ಕತ್ತಿ ಒರೆಗೆ!

ಮುಂದೆ

ಮೊದಲು ಎಲ್ಲರೂ ಮುಂದೆ ಬರುತ್ತಾರೆ
ಸಲಿಗೆ ಕೊಟ್ಟರೆ ಮುಂದುವರಿಸುತ್ತಾರೆ
ಅಕಸ್ಮಾತ್ ಮುಂದೆ ಬಂದರೆ
ಮುಂದೆ ಯಾರು ವರಿಸುತ್ತಾರೆ??

ಪಥ್ಯ

ಒಂದೊಂದು ರೋಗಕ್ಕೆ ಒಂದೊಂದು ಮದ್ದು; ಒಂದೊಂದು ಪಥ್ಯ
ಲೈಂಗಿಕ ರೋಗಕ್ಕೆ ಒಂದೇ ಮದ್ದು- ದಾಂಪತ್ಯ!

ಫ್ಯಾಷನ್

ಏನು ಪ್ರಯೋಜನ
ಇಂಥಾ ಬಟ್ಟೆ ತೊಟ್ಟು?
ಬೇಡವೆಂದರೂ ಎದ್ದು
ತೋರುವುದು- ತೊಟ್ಟು!

ಭಾವೈಕ್ಯ

ಭಾವೈಕ್ಯ ಭಾವೈಕ್ಯ
ಎಲ್ಲಿದೆ ಸ್ವಾಮಿ ಭಾವೈಕ್ಯ?
ಮನೆಗೆ ಹೋಗಿ ನೀವೇ ನೋಡಿ:
ಅಕ್ಕನ ಜೊತೆ ಭಾವ ಐಕ್ಯ!

[ಇಲ್ಲಿಯ ಕೆಲ ಹನಿಗಳನ್ನು ನಮಗಾಗಿ ಕಳುಹಿಸಿಕೊಟ್ಟ ಚಿನ್ಮಯ್ ಶಾಸ್ತ್ರಿ ಅವರಿಗೆ ಧನ್ಯವಾದಗಳು.]

4 comments:

ಜಿ ಎನ್ ಮೋಹನ್ said...

innondu dundi kavana..

poornime...

naachutta aake
edeya melina hodike
sarisuttaa koncha konchave badige
padya...
bidige..
tadige...
poornime

i think i have quoted it properly
this was sent to me long back by dundi as new year greetings

long live dundi and his....

-G N Mohan

Prakash Shetty said...

ಏನ್ರೀ ಸೋಮೇರಾ....

ನಮ್ ಡುಂಡಿ ಮಾಮನನ್ನು ಪೋಲಿ ಕವಿ ಅಂತಾ ಗೀಚಿ ಬಿಟ್ರಲ್ಲೋ...

ಏನಾರ ಅವರ ಹೆಣ್ತಿ ನೋಡಿದ್ರೆ... ನಿಜ್ವಾಗ್ಲೂ ಕಿವಿ ಹಿಂಡ್ತಾರೆ ಕಣ್ರೀ,....

Sushrutha Dodderi said...

@ mohan

Thanx for the comment and update sir..

@ ಪ್ರಕಾಶ್ ಶೆಟ್ಟಿ ಉಳೆಪಾಡಿ

ಇಲ್ಲಾ ಸ್ವಾಮೀ... ಡುಂಡಿ ಮಾಮನ್ನ ಪೋಲಿ ಅಂದಿಲ್ಲ.. ಅವ್ರು ಬರೆದ ಈ ಹನಿಗಳನ್ನ ಪೋಲೀ ಅಂದದ್ದು... ಹೆಂಡ್ತಿಗೆ ಅರ್ಥ ಆಗೊತ್ತೆ ಬಿಡಿ...

Sandeepa said...

ಸಂಪಲಪ...

ಮತ್ತೆ ಸರ್ವಜ್ಞ ಯಾವಾಗ್ ಬತ್ತ?? :)