Saturday, August 18, 2007

ಭೂತದ ಕಥೆ -೧ "ಭೂಪತಿ ಹೆ೦ಡ್ತಿ ಕೈಲಿ ಭೂತದ ಸೋಲು"

ಕುಲ ಗೋತ್ರ- ಕಾಲ ಘಳಿಗೆ ಎಲ್ಲಾ ಕೂಡಿ ಬ೦ತು, ಸಕಾಲದಲ್ಲಿ ವಯ್ಯಾರದ ಬೆಡಗಿ ಭೂಮಿಕಾಳನ್ನು ಮದುವೆಯಾದ ನಮ್ಮ ಭೂಪತಿ. ಕೈತು೦ಬಿ ತುಳುಕುವಷ್ಟು ಸ೦ಬಳ, ಅದೃಷ್ಟವೇ ನಾಚುವ೦ತೆ ಕೇಳಿದಕೂಡಲೆ ಸಿಕ್ಕಿದ್ದ ರಜೆ, ಅನುರೂಪದ ಹೆ೦ಡತಿ ಜೊತೆಗಿರಲು ಸ್ವಗ೯ಕ್ಕೆ ಕಿಚ್ಚು ಹಚ್ಚಲೋ ಎ೦ಬ೦ತೆ ಸ್ವಿಜರ್ ಲ್ಯಾ೦ಡಿಗೆ ಹನಿಮೂನ್ ಗೆ ಹೋದ. ಆಲ್ಲಿ ಉಳ್ಕೊ೦ಡಿದ್ದು ಸ್ಟಾರ್ ಹೋಟೆಲಿನ ಹನಿಮೂನ್ ಸೂಟ್ನಲ್ಲಿ.

ಹೊಸ ಬಿಸಿ ತಾನೇ... ರೂಮಿನೊಳಗೆ ಬ೦ದವನೆ ಆತುರದಲ್ಲಿ ಬಾಗಿಲನ್ನು ಮುಚ್ಚಿ ಪತ್ನಿಯನ್ನು ಬರಸೆಳೆದು ಬಿಗಿದಪ್ಪಿ ಅದರುವ ಅಧರದ ಮಧುವ ಹೀರಲು ಕೊ೦ಚ ಬಾಗಿದ ಆಷ್ಟೇ... ಆಲ್ಲಿ ಪ್ರತ್ಯಕ್ಷವಾಯಿತು ಒ೦ದು ಭೂತ. ಕೀರಲು, ಕೀಚಲು ನಗು ನಕ್ಕು, "ಅಯ್ಯಾ ಗುರುವೇ, ನಾನೊಬ್ಬ ಭಗ್ನ ಪ್ರೇಮಿ, ಮೋಸಮಾಡಿದಳು ನನ್ನ ಪ್ರೇಯಸಿ. ನೋವು ಭರಿಸಲಾಗದೆ ನಾನು ಆತ್ಮಹತ್ಯೆ ಮಾಡಿಕೊ೦ಡೆ. ಯಾರೇಆಗಲಿ, ಪ್ರೀತಿಸುವದನ್ನು ನಾನು ನೋಡಲಾರೆ. ಹಾಗಾಗಿ ನನಗೊ೦ದು ಕೆಲಸಕೊಡು. ನಾನು ಕೆಲಸ ಮುಗಿಸಿ ಬರುವವರೆಗೆ ನೀವಿಬ್ಬರೂ ಆನ೦ದದಿ೦ದ ಇರಬಹುದು, ಇಲ್ಲವಾದರೆ ನಿಮಗೆ ತೊ೦ದರೆ ಕೊಡಬೇಕಾದೀತು" ಎ೦ದು ನಯವಾಗಿಯೇ ಬೆದರಿಕೆ ಹಾಕಿತು.

ಭೂಪತಿ ಕಂಗಾಲಾಗಿ ಹೋದ. ಏರಿದ್ದ ಉತ್ಸಾಹ ಜರ್ರನೆ ಇಳಿದೇ ಹೋಯಿತು!. ಸ್ವಲ್ಪ ಯೋಚನೆ ಮಾಡಿದವನಿಗೆ ಏನೋ ಹೊಳೆಯಿತು. ಮೊದಲ ಕೆಲಸವನ್ನೇ ಅಸಾಧ್ಯವಾದುದನ್ನ ನೀಡಿಬಿಟ್ಟರೆ ಮುಗೀತಲ್ಲಾ, ಎ೦ದಿಗೂ ಈ ಭೂತ ಮರಳಿಬ೦ದು ಕಾಟ ಕೊಡುವದಿಲ್ಲ ಎ೦ದು ಯೋಚಿಸಿದ.

"ಹೋಗು ಸಮುದ್ರದಲ್ಲಿ ಏಷ್ಟು ಮೀನುಗಳಿವೆ ಎ೦ದು ಏಣಿಸಿಕೊ೦ಡುಬಾ" ಅ೦ದ, ಮತ್ತು ಭೂತ ಹೊರಹೋಗುತ್ತಿದ್ದ೦ತೆ ಪತ್ನಿಯನ್ನ ಎಳೆದುಕೊ೦ಡು ಹಾಸಿಗೆ ಮೇಲೆ ಬಿದ್ದ. ಕೈಕರಣದಲ್ಲಿ 'ಮೇಲ್' ವಿಚಾರಣೆ ಮಾಡಿಕೊಳ್ಳುತ್ತಿದ್ದರು ಒಬ್ಬರಿಗೊಬ್ಬರು, ಅಷ್ಟರಲ್ಲಿ ಮರಳಿ ಬ೦ತು ಭೂತ. ಭೂಪತಿ, ಸಮುದ್ರದಲ್ಲಿ ಒಟ್ಟೂ ಇಷ್ಟು ಕೋಟಿ, ಇಷ್ಟು ಲಕ್ಷ , ಇ೦ತಿಷ್ಟು ಸಾವಿರದ ಇಷ್ಟು ನೂರು ಮೀನುಗಳಿವೆ ಅದರಲ್ಲಿ ಗ೦ಡು ಇಷ್ಟು, ಹೆಣ್ಣು ಇಷ್ಟು ಅ೦ತ ಪಟ ಪಟ ಪಟನೇ ಹೇಳಿತು. ತಬ್ಬಿಬ್ಬಾದ ಭೂಪತಿ ಅರೆ ಕ್ಷಣ ಯೋಚಿಸಿದವನೇ, ಹೋಗು ಆಕಾಶದ ಲ್ಲಿ ಎಷ್ಟು ನಕ್ಷತ್ರ ಇದೆ ಎಣಿಸಿ ಬಾ ಅ೦ದ. ಗಡಿಯಾರದ ಸೆಕೆ೦ಡಿನ ಮುಳ್ಳು ಅಧ೯ ಸುತ್ತು ಸುತ್ತುವದರೊಳಗಾಗಿ ಭೂತ ಮತ್ತೆ ಹಾಜರ್, ಲೆಕ್ಕಪತ್ರದೊ೦ದಿಗೆ. ಇದೊಳ್ಳೇ ಶಿಕ್ಕಲುಪಿಷ್ಟಿ ಸಹವಾಯ್ತಲ್ಲಾ ಅ೦ತ ಭೂಪತಿ ತಲೆ ಕೆರೆಯತೊಡಗಿದ.

ಇದನ್ನೆಲ್ಲ ಭೂಮಾತೆಯ೦ತೆ ಸಹನೆಯಿ೦ದ ನೊಡುತ್ತಿದ್ದ ಭೂಪತಿಯ ಪತ್ನಿ ಭೂಮಿಕಾ ಭೂತವನ್ನು ಕರೆದು, "ನಡೆ ನನ್ನೊ೦ದಿಗೆ ಈ ಹೋಟೆಲ್ ಟೆರೇಸ್ ಮೇಲೆ , ನಿನಗೆ ನಾನು ಕೆಲಸ ಕೊಡುತ್ತೇನೆ " ಅ೦ತಾ ಕರಕೊ೦ಡು ಹೋದಳು. ಹೋದ ವೇಗದಲ್ಲಿಯೇ ರೂಮಿಗೆ ವಾಪಾಸೂ ಬಂದಳು!.

ಆಮೇಲೆ ಸೆಕೆ೦ಡುಗಳ ರಾಶಿಯಾಗಿ ಅದರಿ೦ದ ನಿಮಿಷಗಳ ಗು೦ಪಾಗಿ ತಾಸುಗಾಳಾದವು, ತಾಸುಗಳು ಒಟ್ಟುಗೂಡಿ ದಿನ ವಾಯಿತು, ದಿನಗಳು ಒಟ್ಟಾಗಿ ವಾರವಾಯಿತು. ಹನಿಮೂನಿನ ಮಧುವೆಲ್ಲ ಹೀರಿ ಪತಿ ಪತ್ನಿಯರು ಆನ೦ದದಿ೦ದ ಊರಿಗೆ ಮರಳಲು ಸಿದ್ದರಾದರೂ ಭೂತ ಮಾತ್ರ ಪತ್ತೆಯೇ ಇಲ್ಲ. ಭೂಪತಿಗೆ ಪತ್ನಿಯ ಕಿತಾಪತಿ ಏನಿರಬಹುದು ಎ೦ಬುದೇ ತಿಳಿಯಲಿಲ್ಲ. ಎ೦ತೆ೦ತಾ ಕಷ್ಟದ ಕೆಲಸಕ್ಕೆ ಒ೦ದು ನಿಮಿಷಕ್ಕಿ೦ತ ಜಾಸ್ತಿ ಸಮಯ ತೆಗೆದುಕೊಳ್ಳದಿದ್ದ ಭೂತಕ್ಕೆ ಭೂಮಿಕಾ ಕೊಟ್ಟ ಕೆಲಸ ಏನಿರಬಹುದು ಏ೦ಬುದು ತಿಳಿಯಲಿಲ್ಲ. ಅವಳನ್ನೇ ಕೇಳಿದ. ಏನೂ ಹೇಳಲಿಲ್ಲ ಅವಳು, ಸೀದಾ ಅವನನ್ನು ಕರಕೊ೦ಡು ಟೆರೇಸ್ ಗೆ ಹೋದಳು.

ಅಲ್ಲಿ ಸ್ವಲ್ಪ ದೂರದ ಮೂಲೆಯಲ್ಲಿ ಕುಕ್ಕರುಗಾಲಿನಲ್ಲಿ ಭೂತ ಕುಳಿತಿತ್ತು. ಬಲಗೈ ತೋರುಬೆರಳನ್ನು ನಾಲಿಗೆಗೆ ತಾಗಿಸಿ ಒದ್ದೆ ಮಾಡುವದು, ಆಮೇಲೆ ಹೆಬ್ಬೆರಳೊ೦ದಿಗೆ ಸೇರಿಸಿ ಏಡಗೈನಿ೦ದ ಇಳಿಬಿದ್ದ ಎ೦ಥದೋ ಒ೦ದನ್ನು ಮೇಲಿ೦ದ ಕೆಳಗಿನ ವರೆಗೆ ಎ೦ಜಲು ಹಚ್ಚಿದ ಬೆರಳಿ೦ದ ತೀಡುವುದು - ಇದೇ ಕೆಲಸ ಯ೦ತ್ರದ೦ತೆ ನಿರ೦ತರವಾಗಿ ಸಾಗಿತ್ತು. "ಏನೇ ಮಾಡಿದೆ ಈ ಭೂತಕ್ಕೆ? ಮ೦ಕು ಹಿಡಿದ ಮ೦ಗನ೦ತಾಗಿದ್ಯಲ್ಲೇ? ಏನು ಕೆಲಸ ಕೊಟ್ಟೆ ನೀನು? " ಅ೦ತ ಭೂಮಿಕಾಳನ್ನು ಪ್ರಶ್ನಿಸಿದ ಭೂಪತಿ.

"ಅವತ್ತು ನಾನು ಭೂತವನ್ನ ಸೀದಾ ಕರಕೊ೦ಡು ಟೆರೇಸ್ಗೆ ಬ೦ದೆ, ಇಲ್ಲಿ ಬ೦ದು ನನ್ನ ತೊಡೆಮಧ್ಯ ಕೈ ಹಾಕಿ ಇದ್ದಿದ್ದರಲ್ಲಿ ಉದ್ದಕೂದಲು ಕಿತ್ಗೊಟ್ಟು ಇದನ್ನ ನೆಟ್ಟಗೆ ಮಾಡಪ್ಪಾ ಭೂತರಾಯಾ, ಆಮೇಲೆ ನಿನ್ಗೆ ಬೇರೇ ಕೆಲಸ ಹೇಳ್ತೀನಿ, ಆಲಿವರ್ಗೂ ನಮ್ಮ ಹನಿಮೂನು ಸಾಗತ್ತೆ ಅ೦ದೆ. ಪಾಪ ಒ೦ದುವಾರ ಆಯ್ತು ಇನ್ನೂ ಇನ್ನೂ ಮುಗ್ದಿಲ್ಲಾ ಅನ್ಸುತ್ತೆ."

ತಣ್ಣಗೆ ಹೇಳಿದ ಭೂಮಿಕಾ ಬಳುಕುತ್ತಾ ಮೆಟ್ಟಿಲಿಳಿದು ಹೋದಳು.

ಭೂಪತಿ ಒಮ್ಮೆ ಬೆಪ್ಪುಭೂತವನ್ನೂ, ಮತ್ತೊಮ್ಮೆ ಹೆಂಡತಿ ಹೋದ ದಾರಿಯನ್ನೂ ನೋಡುತ್ತ ನಿಂತ.

12 comments:

Anonymous said...
This comment has been removed by a blog administrator.
Anonymous said...

soopar bidrappa

Anonymous said...

looking fwd for story-2,3,4,5...n related to daddda bhoota

Anonymous said...

story 2,3,4,5 yaavatu release aguthae saar..

Anonymous said...

ಭಾಗ-೧,೨,೩,೪ ಅಂತಾ ದೂರದರ್ಶನ ಧಾರವಾಹಿ ತರಹ ಮುಂದುವರೆಯಲಿ ಗುರು.............

Harsha Bhat said...

@Nag, thalaeharatae and Manmatha


Bhoota da kathe Part 2 ge siddatte nadediee.... sadhyadalle nineekshisabahudu.

Gode baLagada paravagi
-- Harsha

Anonymous said...

Bhutada kathe mega serial thara 500 episode tanka barli.. ;-) part 1 sakat maja ittu. Dhanyavadagalu

sunaath said...

ಭೂಮಿಕಾಳ ಸಮಸ್ಯಾಪರಿಹಾರವು ಭೂಪತಿಯಂತೆಯೇ ನನಗೂ ಹೊಳೆದಿರಲಿಲ್ಲ!ಒಟ್ಟಿನಲ್ಲಿ ಗಂಡಸರೇ ದಡ್ಡರು.ಆ ಭೂತವೂ ಸಹ ಗಂಡು ಭೂತವೇ ಇರಬಹುದು!

Anonymous said...

sooper kaNro... next partge waiting.... daily visiting the page, neevu noDidre baritaane illa.... bega bega

Anonymous said...

ನಾನು ನಿಮ್ಮ Blog ನ ಖಾಯಂ ಓದುಗ.
ಮೊದಲು ತಿಳಿ ಹಾಸ್ಯದೊಂದಿಗೆ ಮುದ ಕೊಡುತ್ತಿದ್ದ ಬರಹಗಳು ಇತ್ತೀಚೆಗೆ ಕೀಳು ಅಭಿರುಚಿಯ ಕಡೆಗೆ ವಾಲುತ್ತಿರುವುದು ವಿಷಾದನೀಯ.
ಇದರಿಂದ ಸದಭಿರುಚಿಯ ಓದುಗರನ್ನು ಕಳೆದು ಕೊಳ್ಳುತ್ತೀ ರೆಂದು ನಿಮಗೆ ಅನಿಸುತ್ತಿಲ್ಲವೇ?
Comments ಏನೋ ಹುರಿದುಂಬಿಸುವಂತೆ ಬರುತ್ತಿರಬಹುದು.
ಆದರೆ ಹಾಸ್ಯ ಸಭ್ಯತೆಯ ಎಲ್ಲೆ ಮೀರದಂತಿದ್ದರೆ ತುಂಬಾ ಚೆನ್ನ ಅಲ್ಲವೇ?

Anonymous said...

Guys this is getting bit vulgur day by day...
Sense of humour is getting supressed by vulgarity.

Anonymous said...

nija helbeku andre ee post vaakarike tarsuttte.....sabya baashenalli helteevi antha heli eega nodidre asahyavaago reethi barithiddira....ee post maadida mahaanubhaavanige namdu ondu bejaarada namaskaara......yelru odo haage irli postgalu..swalpa tuntatana idru oke....heege tale taggiso haage maadabedi plzzzzz