Tuesday, September 4, 2007

ಟೋಪಿ

ಮಾಸ್ ಕಮ್ಯೂನಿಕೇಶನ್ ಓದುವಾಗ ನನ್ನ ಫ್ರೆಂಡ್ 'ಶೋಭಿ' ಎನ್ನುವವನೊಬ್ಬನಿಗೆ ತುಂಬಾ ಗುಂಗುರು ಕೂದಲಿತ್ತು. ಅದು ಎಷ್ಟು ಚೆನ್ನಾಗಿತ್ತು ಎಂದರೆ, ಎಲ್ಲಾ ಹುಡುಗಿಯರು ಕಣ್ಣಲ್ಲಿ ಮೆಚ್ಚುಗೆ ಸೂಸುತ್ತಿದ್ದರು. ಸಾಧ್ಯವಾದಾಗಲೆಲ್ಲ ಅವನ ಹಿಂದೆ ಬೀಳುತ್ತಿದ್ದರು.

ನಮಗೋ ಹೊಟ್ಟೆಕಿಚ್ಚು. ಒಮ್ಮೆ ಕಾರಿಡಾರಿನಲ್ಲಿ ಹುಡುಗ ಹುಡುಗಿಯರೆಲ್ಲ ಸೇರಿ ಹರಟೆ ಕೊಚ್ಚುತ್ತಿದ್ದಾಗ ಶೋಭಿಯ ತಲೆ ಕೂದಲಿನ ಪ್ರಸ್ತಾಪ ಬಂತು. ಹುಡುಗಿಯರೆಲ್ಲ "ಶೋಭಿ ಅದು ಹೇಗೆ ಅಷ್ಟು ಗುಂಗುರಾಗಿ ಇಟ್ಟಿದಾನೆ ಕೂದ್ಲು.. ಅದರ ಗುಟ್ಟೇನಾದ್ರೂ ನಿಂಗೆ ಗೊತ್ತಾ? ಗೊತ್ತಿದ್ರೆ ನಮಗೂ ಹೇಳಿಕೊಡೋ" ಎಂದು ನನಗೆ ಗಂಟು ಬಿದ್ದರು.

ಪಕ್ಕದಲ್ಲಿದ್ದ ನನ್ನ ಗೆಳೆಯನಿಗೆ ಉರಿದುಹೋಯ್ತು ಅನ್ಸುತ್ತೆ, "ಶೋಭಿ ತಲೆಗೆ ಟೋಪಿ ಹಾಕ್ಕೊಳ್ಳೋ ಬದಲು ಅಂಡರ್‌ವೇರ್ ಹಾಕ್ಕೋಳ್ತಾನೆ ಅಷ್ಟೇ" ಎಂದ. ಆಮೇಲೆ ಹುಡುಗಿಯರು ತುಟಿ ಪಿಟಿಕ್ ಎನ್ನಲಿಲ್ಲ!

[ಮೋಟುಗೋಡೆಗೆ ಹಾಕಲಿಕ್ಕೆ ಈ ಟೋಪಿಯನ್ನು ಕಳುಹಿಸಿಕೊಟ್ಟವರು ಶ್ರೀ ಜಿ.ಎನ್. ಮೋಹನ್]

4 comments:

Sudhindra said...

ಸುಪರ್ಬ್!ಬೋಳು ತಲೆಯವರೆಲ್ಲರೂ ಈ ರೆಸಿಪಿಯನ್ನು ಟ್ರೈ ಮಾಡಬಹುದು?

G N Mohan said...

nannadu bolutale antha nimage hege gottaytu maarayare...?

ಅಹರ್ನಿಶಿ said...

ನಮಸ್ಕಾರ ಎಲ್ಲರಿಗೂ,ಹರ್ಷ,ಶುಶ್ರುತ,ಶ್ರೀನಿಧಿ ಹಾಗು Alpazna.ಇಲ್ಲಿ ಇಣುಕ್ತಾ ಇರೋರು ನೀವೇ ಅ೦ದುಕೊತಿನಿ.ಶ್ರೀನಿಧಿ ಅವ್ರು alpazna ಅವರ ಮಾತು ಕೇಳಿ ಶರ್ಟ್ ಕೂಡ ಬಿಚ್ಹಿದಾರೆ?anyway Have a nice time.ಇಷ್ಟಕ್ಕೂ ನೀವುಗಳು ಇಣುಕುತ್ತಿರುವುದು ಯಾವುದಾದ್ರು ಲೇಡೀಸ್ ಹಾಸ್ತಲ್ಲಾ?????.ಯಾಕೋ ನಾಲ್ಕೂ ಜನ ತು೦ಬಾ ಬ್ಯುಸಿಯಾಗಿಬಿಟ್ಟಿದೀರ.ಮೋಟುಗೋಡೆಯ ಬ್ಲಾಗಿನಲ್ಲಿ ಇತ್ತೀಚೆಗೆ ಬರಹಗಳು ಕಡಿಮೆ ಆಗಿದೆ.ದಯವಿಟ್ಟುharsha ಶ್ರೀನಿಧಿ ಮತ್ತು Alpazna ಅವರಿಗು ತಿಳಿಸಿಬಿಡಿ ಅವರ ಈ ಮೈಲ್ ಸಿಗಲಿಲ್ಲ. .ಆವಾಗಾವಾಗ ಇಣುಕ್ತಾ ಇರಿ ಹಾಗೆ ತಿಣುಕ್ತಾನೂ ಇರಿ.

ವ೦ದನೆಗಳೊ೦ದಿಗೆ,

ಶ್ರೀಧರ್"ಕಾ೦ಡೋಮುಹಾಕಿ"

ಅರೆರೆ ಇದೇನಿದು ಇದ್ದಕ್ಕಿದ್ದ ಹಾಗೆ ಶ್ರೀಧರ್ ಕುಟು೦ಬ ಯೋಜನೆ ಬಗ್ಗೆ ಮಾತಾಡ್ತಾ ಇದಾರೆ ಅ೦ತೀರಾ!........ಈ ಕೆಳಗಿನ ಲೇಖನ ಓದಿ. ನಿಮಗೇ ಅರ್ಥ ಆಗುತ್ತೆ.
ಕಾ೦ಡೋಮುಹಾಕಿ ಸುಖಿ ಕುಟು೦ಬ ನೆಡೆಸುವ ಬುದ್ದಿಜೀವಿಗಳಿಗೊ೦ದು ವಿನೋದದ ಕಚಗುಳಿ. "ಮೋಟುಗೋಡೆಯಾಚೆ" ಬ್ಲಾಗಿನವರಿಗೊ೦ದು ಚೆ೦ದದ ಹೂರಣ.


ಜನನ ನಿಯಂತ್ರಿಸುವ ಕಾಂಡೋಮ್ ಹಾಕಿ ರಂಗಕ್ಕೂ ಲಗ್ಗೆ!


ಜಲಂಧರ್, ಸೆಪ್ಟೆಂಬರ್ 05 : ಭಾರತೀಯರಿಗೂ ಕಾಂಡೋಮ್ ಗಳಿಗೂ ನಂಟು ಬೆಳೆದಾಗ ಮಾತ್ರ, ಜನಸಂಖ್ಯೆ ಹತೋಟಿಯಲ್ಲಿರುತ್ತದೆ! ಆ ಮಾತು ಬಿಡಿ, ಕಾಂಡೋಮ್ ಈಗ ಕ್ರೀಡಾರಂಗಕ್ಕೂ ಲಗ್ಗೆ ಹಾಕಿದೆ. ಹಾಕಿ ಸ್ಟಿಕ್‌ಗಳ ರಕ್ಷಣೆಗೆ ಇದು ಬಳಕೆಯಾಗುತ್ತಿದೆ!ಹಾಕಿ ಸ್ಟಿಕ್‌ಗಳಿಗೆ ಕಾಂಡೋಮ್ ಬಳಸಿದ್ದರಿಂದಲೇ ಭಾರತೀಯರು, ಸಿಂಹಳೀಯರೊಂದಿಗಿನ ಮ್ಯಾಚ್‌ನಲ್ಲಿ 20 ಮತ್ತು 0 ಅಂತರದಿಂದ ಗೆದ್ದದ್ದು ಎಂಬ ಗುಮಾನಿ ಉಂಟಾಗಿದೆ. ಈ ಬಗ್ಗೆ ಯಾವುದೇ ಶಾಸ್ತ್ರೀಯ ಆಧಾರಗಳಿಲ್ಲದಿದ್ದರೂ ಹಾಕಿ ಸ್ಟಿಕ್‌ಗಳಿಗೆ ಕಾಂಡೋಮ್ ಬಳಸುವುದರಿಂದ ಬಹಳಷ್ಟು ಪ್ರಯೋಜನ ಇದೆ ಎಂಬುದು ಕೆಲವರ ವಾದ.ಅಂದ ಹಾಗೆ, ಭಾರತ ತಂಡ ಉಪಯೋಗಿಸುವ ಹಾಕಿ ಸ್ಟಿಕ್‌ಗಳನ್ನು ಜಲಂಧರ್ ನಲ್ಲಿನ ಆರ್ ಕೆ ಸ್ಪೋರ್ಟ್ ಸಂಸ್ಥೆ ತಯಾರಿಸುತ್ತದೆ. ಆ ಸಂಸ್ಥೆಯ ಎಂಡಿ ಸಂಜಯ್ ಕೋಹ್ಲಿಯವರೆ 'ಕಾಂಡೋಮ್ ಪ್ರಯೋಗದ' ಸೂತ್ರಧಾರಿ.ಹಾಕಿ ಸ್ಟಿಕ್‌ನ ಹುಕ್ ಗೊತ್ತಲ್ಲ, ಸ್ಟಿಕ್‌ನ ಬಹು ಮುಖ್ಯಭಾಗ ಅದೆ. ಅದನ್ನು ಮಲ್ಬರಿ ಗಿಡದ ಕಾಂಡದಿಂದ ತಯಾರಿಸುತ್ತಾರೆ. ಅದನ್ನು ಪ್ರತ್ಯೇಕ ಯಂತ್ರಗಳಿಂದ ಬಗ್ಗಿಸಿ ಹುಕ್‌ಗೆ ಹ್ಯಾಂಡಿಲ್ ಅಳವಡಿಸುತ್ತಾರೆ. ಅದು ಎಷ್ಟೇ ಬಲಿಷ್ಟವಾಗಿದ್ದರೂ ಬಲು ಬೇಗನೆ ಹಾಳಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಬ್ಯಾಟ್ ತಯಾರಿಕಾ ಸಂಸ್ಥೆ, ಹಲವಾರು ಪ್ರಯೋಗಗಳನ್ನು ಮಾಡಿಯಾಯ್ತು. ಮುಂಚೆ ಹುಕ್ಕಿಗೆ ಪ್ಲಾಸ್ಟಿಕ್ ಬಳಸುತ್ತಿದ್ದರು. ಅದು ನಿರೀಕ್ಷಿಸಿದಷ್ಟು ಫಲಕಾರಿಯಾಗಲಿಲ್ಲ. ಈಗ ನೇರವಾಗಿ ಕಾಂಡೋಮ್‌ಗಳನ್ನು ಬಳಸಲಾಗುತ್ತಿದೆ. ಹಾಗಾಗಿ ಸ್ಟಿಕ್‌ಗಳೂ ಬಹಳಷ್ಟು ಕಾಲ ಬಾಳಿಕೆ ಬರುತ್ತಿವೆಯಂತೆ. ಹೀಗಂತ ಹೇಳುತ್ತಾರೆ ಸಂಜಯ್ ಕೋಹ್ಲಿಯವರು. ಅಂದಹಾಗೆ ಇದರ ಪೇಟೆಂಟ್ ಕೂಡ ಪಡೆಯಲಾಗಿದೆಯಂತೆ.
Source:www.thatskannada.com--
Posted By ಅಹರ್ನಿಶಿ to ಶ್ರೀ..ಮನೆ at 9/07/2007 11:06:00 PM

Raghu said...

ha ha ha super uttara guru!!!!!!