Thursday, March 13, 2008

ಬರೀ ಏಳ್ನಿಮ್ಷ ಸಾಕಂತೆ!!

'ತಮಾಷೆಯಾದರೂ ಸತ್ಯ' ತರಹದ ಈ ವಾಕ್ಯಗಳನ್ನ ನೀವೂ ಓದಿರುತ್ತೀರಿ:

  • ಹಂದಿಯೊಂದರ ಕಾಮೋದ್ರೇಕ (orgasm) ಮೂವತ್ತು ನಿಮಿಷಗಳಷ್ಟಿರುತ್ತದೆ. (ಮುಂದಿನ ಜನ್ಮದಲ್ಲಿ ನಾನು ಹಂದಿಯೇ ಆಗಬಯಸುವೆ!)
  • ಕೆಲವು ಸಿಂಹಗಳು ದಿನಕ್ಕೆ 50 ಬಾರಿ ಸಂಭೋಗ ಪ್ರಕ್ರಿಯೆಯಲ್ಲಿ ತೊಡಗುತ್ತವೆ. (ಇಲ್ಲ, ನಾನು ಹಂದಿಯೇ ಆಗಬಯಸುವೆ. ನನಗೆ 'ಕ್ವಾಲಿಟಿ'ಗಿಂತ 'ಕ್ವಾಂಟಿಟಿ' ಮುಖ್ಯ!)

* *
ಆದರೆ ನೀವು ಈ ಮನುಷ್ಯ ಜನ್ಮ ಏನೇನೂ ಉಪಯೋಗವಿಲ್ಲ ಎಂದು ಆತುರದ ತೀರ್ಮಾನ ಕೈಗೊಂಡು, ಮುಂದಿನ ಜನ್ಮದಲ್ಲಿ ಹಂದಿಯೋ ಸಿಂಹವೋ ಆಗಲಿಕ್ಕೆಂದು ಈಗಲೇ ತಪಸ್ಸಿಗೆ ಕೂರುವ ಅಗತ್ಯವಿಲ್ಲ! ಏಕೆಂದರೆ, ಸಂಶೋಧನೆಯೊಂದರ ವರದಿಯ ಪ್ರಕಾರ ಅತ್ಯುತ್ತಮ ಮಿಲನ ಮಹೋತ್ಸವ ಆಚರಿಸಲು ಕೇವಲ 7 (ಏಳು) ನಿಮಿಷ ಸಾಕಂತೆ! ನಾನೇನು ಸುಳ್ಳು ಹೇಳ್ತಿಲ್ಲ, ಬೇಕಾದ್ರೆ ನೀವೇ ನೋಡಿ ಈ ವರದಿ!!

ಕನ್ನಡ ಪ್ರಭದಲ್ಲಿ
ದಟ್ಸ್ ಕನ್ನಡದಲ್ಲಿ

7 comments:

Keshav.Kulkarni said...

ದೊಡ್ಡೇರಿಯವರೇ,

ಕಾಮೋದ್ರೇಕ ಅಂದರೆ arousal. Orgasm ಕನ್ನಡದಲ್ಲಿ "ತುರೀಯಸ್ಥಿತಿ" ಆಗುತ್ತದೆ, ಇದಕ್ಕಿಂತಲೂ ಸರಳ ಕನ್ನಡ ಶಬ್ದ ನನಗೆ ಸಿಗುತ್ತಿಲ್ಲ.

-ಕೇಶವ (www.kannada-nudi.blogspot.com)

Sushrutha Dodderi said...

@ keshav

Thanks for the correction Keshav.. ಕನ್ನಡ ನಿಘಂಟುವಿನಲ್ಲಿ ನೋಡಿದೆ: "(ಕಾಮದ) ತೀವ್ರೋದ್ರೇಕ", "ಸಂಭೋಗೋದ್ರೇಕದ ಪರಾಕಾಷ್ಠೆ" ಅಂತ ಸಿಗ್ತು Orgasm ಗೆ ಕನ್ನಡ ಪದ. ;)

Anonymous said...

ಓಶೋ ಹೇಳ್ತಾರೆ, ಕಾಮೋದ್ರೇಕದ ಉತ್ತುಂಗವನ್ನೂ ಪಾಸಿಟಿವ್ ದಿಕ್ಕಿಗೆ ತಿರುಗಿಸಿದ್ರೆ ಅದು ತುರೀಯ ಸ್ಥಿತಿಯೇ ಆಗತ್ತೆ ಅಂತ.
ಇರಲಿ. ಇಷ್ಟು ದಿನಕ್ಕೆ ಇವತ್ತು ಈ ಬ್ಲಾಗ್ ನೋಡಿದೆ. ಈ ಹುಡುಗ್ರು ಏನು ಬೇಕಾದ್ರೂ ಬರೀಬಹುದು, ನೋಡೋ ಉಸಾಬರಿಗೆ ಹೋಗದಿರೋದೇ ಒಳ್ಳೇದು ಅಂದ್ಕೊಂಡು ಸುಮ್ನಿದ್ದೆ. ಬಟ್ ಹಾಗೇನಿಲ್ಲ, ಚೆನ್ನಗಿ ಮ್ಯಾನೇಜ್ ಮಾದ್ತಿದೀರಿ. ನಿಮ್ಮ ಅಭಿರುಚಿಗೆ, ವಂದೇ.

-ಚೇತನಾ

Anonymous said...

ಚೇತನಕ್ಕಯ್ಯ ಬ್ಲಾಗಿಗರ ಕಾಳಗದಲ್ಲಿ 'celebrity' ಸ್ಟೇಟಸ್ ಬಂದಾ ಮ್ಯಾಲೆ ಎಲ್ಲ ಬ್ಲಾಗಗಳಿಗೂ ವಿಸಿಟ್ ಕೊಡಲನಕಿದ್ದು ಕಾಣ್ತು :)

Vishwanatha Krishnamurthy Melinmane said...

Hello,

cHENNAGI varnisideera...

only 7 mts andre...kashta...modale janasankhye jasthi bharathadalli...

--
Vishwa

Shankar Prasad ಶಂಕರ ಪ್ರಸಾದ said...

ಪ್ರಿಯ ವಿಶ್ವನಾಥ ಕೃಷ್ಣಮೂರ್ತಿ ಮೇಲಿನಮನೆ ಅವರೆ,
ಬರೀ 7 ನಿಮಿಷ ಬೇಕಾದಷ್ಟು ಕಣ್ರೀ. ನೀವು ಉಲ್ಲೇಖಿಸಿರುವ ಕಾಮೋದ್ರೇಕ ಹಾಗು ಜನಸಂಖ್ಯೆಯ ಸಂಬಂಧ ನಂಗಂತೂ ಅರ್ಥ ಆಗ್ಲಿಲ್ಲಾ. ಕಾಮಕೇಳಿಗೂ ಜನಸಂಖ್ಯೆಗೂ ಅಷ್ಟೊಂದು ಲಿಂಕ್ ಇಲ್ಲಾ ಅನ್ಸುತ್ತೆ. ನಿಯಂತ್ರಣಕ್ಕೆ ಬಹಳಷ್ಟು ವಿಧಾನಗಳಿವೆ ಬಿಡಿ.
ಏನಂತೀರಾ ಮೋಟುಗೋಡೆಯ ಮಿತ್ರರೆ ?

ಕಟ್ಟೆ ಶಂಕ್ರ
http://somari-katte.blogspot.com

ಶ್ರೀನಿಧಿ.ಡಿ.ಎಸ್ said...

ಚೇತನಾ ಮೇಡಮ್,

ಮೋಟುಗೋಡೆ ಇಣುಕಿದ್ದಕ್ಕೆ ಥ್ಯಾಂಕ್ಸು:)ಬರ್ತಾ ಇರಿ!

ಹೆಗ್ಡೆ,

ಹಂಗೇನು ಅನ್ಸಲ್ಲೆ ನಂಗೆ!

ವಿಶ್ವನಾಥ್, ಶಂಕ್ರಣ್ಣ ಉತ್ರ ಹೇಳಿದಾರೆ ನಿಮ್ಗೆ.:)

ಹೌದ್ ಶಂಕ್ರಣ್ಣ, ವಿಶ್ಯ ಕರೆಕ್ಟು!