Tuesday, August 26, 2008

ಅವನು v/s ಅವಳು

ದೃಶ್ಯ - 1

ಜೀವಹೋದ ನೆಪ ಅಷ್ಟೇ, ಅವನು ಸತ್ತೇ ಹೋದ. ಅವಳು ಅವನ ಹೆಂಡತಿ, ಅವನ ಜೀವ ಹೋದ್ದು ನೋಡಿಯೇ ಸತ್ತಳು. ಜೀವ ಹೋಗಿದೆ ಅ೦ದಮೇಲೆ ಇದೆಯಲ್ಲ, ಮೊದಲು ಅವನ ಆತ್ಮಕ್ಕೆ ಯಮಲೋಕದ ಪಯಣ. ಲೆಕ್ಕದ ಪುಸ್ತಕ ತೆಗೆದ ಚಿತ್ರಗುಪ್ತ. ಯಮನ ವಿಚಾರಣೆ ಆರ೦ಭವಾಯಿತು. ಅವತ್ಯಾಕೋ ರಸಿಕತೆಯಲ್ಲಿದ್ದ ಯಮರಾಜ. "ಚಿತ್ರಗುಪ್ತಾ, ಇವನ ಲೈ೦ಗಿಕ ಜೀವನದ ಬಗ್ಗೆ ವಿಚಾರಣೆ ಆರ೦ಭವಾಗಲಿ. ಏನೇನು ಮಾಡಿರುವನು ಈ ನರ ಮಾನವನು? ಈತನ "ಅದರ " ಆಧಾರದ ಮೇಲೆ ಶಿಕ್ಷೆ ಘೋಷಣೆಯಾಗಲಿ" ಎಂದು ಮೀಸೆಯಮೇಲೆ ಆಡುತ್ತಿದ್ದ ಕೈ ಸ೦ದಿಯಿ೦ದಲೇ ಯಮರಾಜ ಹೇಳಿದ.


ಯಮರಾಜಾ, ಜೀವನದಲ್ಲಿ ಐದು ಅಥವಾ ಐದಕ್ಕೂ ಮಿಕ್ಕವರೊ೦ದಿಗೆ "ಅದನ್ನು" ಮಾಡಿದ್ದರೆ ಅವರಿಗೆ ಬ್ರೇಕ್ ಇಲ್ಲದ ಸೈಕಲ್ ಕೊಟ್ಟು ಸ್ವಗ೯ಕ್ಕೆ ಒ೦ದು ಸುತ್ತು ಹೋಗಿಬರಲು ಹೇಳುವದು. ನಾಲ್ಕು ಜನರೊ೦ದಿಗಾದರೆ ಒ೦ದು ಲಟ್ಟು ಲೂನಾದಲ್ಲಿ ಸ್ವಗ೯ಕ್ಕೆ ಪ್ರಯಾಣ, ಮೂವರಾದರೆ ಯಾವುದಾದರೂ ಬೈಕ್ ನಲ್ಲಿ, ಇಬ್ಬರಾದರೆ ಮಾರುತಿ 800 ಕಾರಿನಲ್ಲಿ. ಆದರೆ ಈ ಮನುಶ್ ಏಕಪತ್ನಿ ವೃತಸ್ಥ, ಇವನನ್ನು ಮಸಿ೯ಡೀಸ್ ಕಾರಿನಲ್ಲೇ ಕಳಿಸಬೇಕು. ಚಿತ್ರಗುಪ್ತನ ಶಿಕ್ಷೆ ಘೋಷಣೆ ಆಯಿತು.


ಹೂ೦, ಸೆಕ್ಸನ್ನೇ ಸ್ವಗ೯ ಎ೦ದು ತಿಳಿದು ಅದರಲ್ಲೇ ಮುಳುಗಿಹೋದವರಿಗೆ ನಮ್ಮ ಸ್ವಗ೯ ಹೇಗಿದೆ ಎ೦ಬುದನ್ನ ತೋರಿಸುವ ನಮ್ಮ ಈ ರಿವೈಸ್ಡ್ ಶಿಕ್ಷೆ ಇವನಿ೦ದಲೇ ಜಾರಿಯಾಗಲಿ. ಜನಕ್ಕೆ ಸತ್ಯದ ಅರಿವಾಗಿ ಸ್ವಗ೯ದ ಹೆಸರು ಹಾಳಾಗುವದು ನಿಲ್ಲಲಿ. ಕಳಿಸಿ ಇವನನ್ನು ಸ್ವಗ೯ಕ್ಕೆ ಅ೦ದನು ಯಮರಾಜ,


ದೃಶ್ಯ - 2

ಎಸ್.ಎಚ್(ಸ್ವಗ೯ ಹೈವೆ) 69 ರಲ್ಲಿ ಸಾಗಿ ಬೃಹದಾಕಾರದ ಕಮಾನಿನ ಟೋಲ್ ಗೇಟ್ ದಾಟಿ ಅವನು ಸ್ವಗ೯ಕ್ಕೆ ಪ್ರವೇಶಿಸಿದ. ರಸ್ತೆಯ ಮಧ್ಯದಲ್ಲಿ ನೆಟ್ಟು ಬೆಳೆಸಲಾಗದ ಕಾರಣಕ್ಕೆ ರಸ್ತೆಯ ಪಕ್ಕದಲ್ಲಿ ಬೆಳೆಸಿದ ಸಾಲು ಮರಗಳು, ಹುಲ್ಲಿದ್ದಲ್ಲೇ ಮೇಯಬೇಕೆನ್ನುವ ತತ್ವಕ್ಕೆ ಬದ್ದವಾಗಿ ರಸ್ತೆ ಪಕ್ಕದ ಹಸಿರು ಹುಲ್ಲುಗಾವಲಲ್ಲಿ ಮೇಯುತ್ತಿರುವ ಸ್ವಗ೯ದ ಗೋಸ೦ಪತ್ತು, ಎಲ್ಲೂ ಡೊ೦ಕಿಲ್ಲದ ನೇರ ಅಗಲವಾದ ವಿಶಾಲ ರಸ್ತೆಗಳು, ರಸ್ತೆಯ ಪಕ್ಕದ ಕೊಳದ ನೀರಿನಲ್ಲಿ ಜಲಕ್ರೀಡೆ ಆಡುತ್ತಿದ್ದ ನೀರೆಯರು, ಮತ್ತು ಅವರ ಸು೦ದರ ಸೌಷ್ಠವ, ಹೀಗೆ ಸ್ವಗ೯ದ ಸೌ೦ದಯ೯ ಸವಿಯುತ್ತ ಅವ ಸಾಗತೊಡಗಿದ. ದಾರಿಯಲ್ಲೆಲ್ಲ. ಇ೦ದ್ರನ ಅರಮನೆಗೆ ಬ೦ದು ತಲುಪಿದರೆ ಅವನಿಗೆ ಅದನ್ನು ನೋಡಲು ಎರಡು ಕಣ್ಣು ಸಾಲದು, ಅ೦ಥಾ ಅಗಾಧ ಅದ್ಭುತ ಸೌ೦ದಯ೯ದ ಅರಮನೆಯನ್ನು ಬಾಯಿಬಿಟ್ಟು ನೋಡ ತೊಡಗಿದ್ದ. ಜೀವನದ ಮೊದಲ ನೀಲ ಚಿತ್ರ ನೋಡುತ್ತಿರುವವನ೦ತೆ. ಎಲ್ಲೆಲ್ಲೂ ಕುಲುಕುತ್ತ ಬಳುಕುತ್ತ ಕಿಲಕಿಲ ನಗುತ್ತ ಅತ್ತಿತ್ತ ಸಾಗುತ್ತಿರುವ ಸ್ವಗ೯ ಸಖಿಯರನ್ನು ನೋಡಿ ರೋಮಾ೦ಚಿತನಾದ. ಆಗತಾನೇ ಆರ೦ಭವಾದ ಮೇನಕೆಯ ನೃತ್ಯವನು ಪೂರಾ ಮುಗಿಯುವ ವರೆಗೂ ನೋಡಿ ಅವಳ ಮೈಕಟ್ಟು , ನೃತ್ಯದ ಭ೦ಗಿಗಳು, ಇನ್ನೂ ಏನೇನೋ, ಒಟ್ಟಿನಲ್ಲಿ ಕ೦ಡಿದ್ದನ್ನೆಲ್ಲ ನೋಡಿ ಪುಳಕ ಗೊ೦ಡ. ಸುಮ್ಮನೆ ಅವನ ಮಸಸ್ಸು ಒ೦ದುಸತಿ೯ ಪ್ಲ್ಯಾಶ್ ಬ್ಯಾಕ್ ಗೆ ಹೋಯಿತು. ಛೇ..! ಯಾವದನ್ನೋ ಸ್ವಗ೯ ಅ೦ದ್ಕೊ೦ಡು, ಯಾವಯವಗ್ಲೋ "ಆಹಾ೦... ಸ್ವಗ೯ದಲ್ಲಿ ತೇಲಿದ೦ತಾಗುತ್ತೆ " ಅ೦ತೆಲ್ಲ ಹೇಳಿದ್ದು ನೆನಪಾಯಿತು.

ಸ್ವಗ೯ದಲ್ಲಿ ನೋಡುವದಿದ್ದಿದ್ದನ್ನೆಲ್ಲ ನೋಡಿ, ಮಾಡುವದನ್ನೆಲ್ಲ ಮಾಡಿದ ಅವನು ನರಕಾಭಿಮುಖನಾಗಿ ಹೊರಟ. ಹೋಗಲು ಮನಸಿಲ್ಲ, ಮನಸ್ಸಿಲ್ಲ ಅನ್ನುವ ಕಾರಣಕ್ಕೆ ಇರುವ೦ತಿಲ್ಲ, ಒಟ್ಟಾರೆಯಾಗಿ ಹೊರಟ. ಕಾರು ಒ೦ದು ಹದವಾದ ವೇಗದಲ್ಲಿ ಹೋಗುತ್ತಿದ್ದರೆ ಡಿವಿಡಿ ಪ್ಲೇಯರ್ ನಿ೦ದ ಗ೦ಧವ೯ಗಾನ ಬರುತ್ತಿತ್ತು. ದಾರಿ ಸಾಗಿತ್ತು, ಸಮರಸ್ತೆ ಕಳೆದು ಘಾಟ್ ರಸ್ತೆ ಆರ೦ಭವಾಗಿತ್ತು. ಕಾರು ಏರುತ್ತ ಏರುತ್ತ ಸಾಗುತ್ತಿದ್ದರೆ ಎದುರಿ೦ದ ರಣವೇಗದಲ್ಲಿ ಸದ್ದುಮಾಡುತ್ತ ಬ್ರೇಕ್ ಇಲ್ಲದ ಸೈಕಲ್ಲೊ೦ದು ಬ೦ದು ಧಡಾರ್ ಎನ್ನುವ ಶಬ್ದದೊ೦ದಿಗೆ ಅವನ ಕಾರಿಗೆ ನೋಡನೋಡುತ್ತಲೇ ಗುದ್ದಿತು. ಅಯ್ಯೋ, ಯಾರಪ್ಪಾ ಅದು ಸೈಕಲ್ ನಲ್ಲಿ ಬ೦ದು ಈರೀತಿ ಗುದ್ದಿ ಬಿದ್ದವರು ಎನ್ನುತ್ತಲೇ ಅವನು ಕಾರು ನಿಲ್ಲಿಸಿ ಹೊರಗೆ ಬ೦ದ. ಇನ್ನು ಕಾರಿನ ಮು೦ದಿನ ಚಕ್ರದ ಮು೦ದೆ ಮಲಗಿಯೇ ಬಿದ್ದಿದ್ದವರನ್ನು ನಿಧಾನವಾಗಿ ಎತ್ತಿದಾಗ ಅವನಿಗೆ ಕಂಡಿದ್ದು ಅವಳ ಮುಖ.




Monday, August 18, 2008

FSH ಮತ್ತು LH

ಹೇಳಿ ಕೇಳಿ ನಾನೊಬ್ಬ ಸ್ಕೂಲ್ ಮೇಷ್ಟ್ರು. ಇಲ್ಲಿ ಬರೆಯುವಂಥಾ ವಿಷಯಗಳನ್ನೆಲ್ಲಾ ತಲೆಯಲ್ಲಿ ತುಂಬಿಕೊಂಡಿದ್ದಾನಾ, ಮೇಷ್ಟ್ರಾಗಿ ನಾಚಿಕೆಯಾಗಲ್ವಾ? ಅಂತ ಬೈಯ್ಯುವವರಿದ್ದಾರೆ. ಮೇಷ್ಟ್ರಾಗಿ ಇಷ್ಟೂ ಹಿಂಜರಿಕೆಯಿರುವವನಾ ಅಂತ ಬೈಯ್ಯುವವರೂ ಇದ್ದಾರೆ. ಬೈಯ್ಯೋರು ಬೈಯ್ಯುತ್ತಲೇ ಇರುತ್ತಾರೆ - ಹೇಗಿದ್ದರೂ..

ಮೋಟುಗೋಡೆಯ ಮೇಲೆ ನಿಂತು ಮೊದಲ ಪಾಠ ಶುರು ಮಾಡೇ ಬಿಡೋಣ ಅಂತ ಬಂದಿದ್ದೀನಿ.

ಶ್ರೀನಿವಾಸನೊಡನೆ ದೇಹ ಎಂಥ ವಿಸ್ಮಯ ಅಂತ ಮಾತನಾಡಿಕೊಳ್ಳುತ್ತಾ ಇರುವಾಗ ಮಾತಿಗೆ ಮಾತು ಬಂದು ಹಾರ್ಮೋನುಗಳಿಗೆ ತಿರುಗಿತು. ಅವನೋ ಯೋಗಾಸನದ ಮೇಷ್ಟ್ರು. ನಾನೋ ಬಯಾಲಜಿ ಹವ್ಯಾಸೀ ಮೇಷ್ಟ್ರು. ಸರಿ, ಮಾತು FSH ಮತ್ತು LH ಕಡೆ ಹೋಗದೇ ಇರಲು ಸಾಧ್ಯವೇ ಇರಲಿಲ್ಲ. ಪುರಾಣ ಕಥೆಗಳೆಲ್ಲವೂ ನಮ್ಮ ಚರ್ಚೆಯ ಪರಿಧಿಯೊಳಗೆ ಬಂದುಬಿಟ್ಟವು.

FSH ಮತ್ತು LH ಕಥೆ ಕೊನೆಗೆ ಹೇಳ್ತೀನಿ. ಮೊದಲು ಒಂದಷ್ಟು ನಿದರ್ಶನಗಳನ್ನು ನೋಡೋಣ.

ಮಹಾಭಾರತದ ಕಾಲ.

ಸತ್ಯವತಿ ಎಂಬಾಕೆಯನ್ನು ನೋಡಿ ಮೋಹಿತನಾಗುತ್ತಾನೆ ಪರಾಶರ ಮುನಿ. ಮುನಿಗಳೂ ಮೋಹಿತರಾಗುವುದುಂಟು. ಮುನಿಗಳು ಸನ್ಯಾಸಿಗಳೇನಲ್ಲ. ಸಾಮಾನ್ಯ ಮನುಷ್ಯರಿಗಿಂತ ಸ್ವಲ್ಪ ಜಾಸ್ತಿಯೇ ಅಂತ ಹೇಳಬೇಕು. ತಪ: ಎಂದರೆ ಉಷ್ಣ ಎಂದೂ ಅರ್ಥ ಇದೆ. ಹಾಗಾಗಿ ತಪಸ್ಸನ್ನಾಚರಿಸಿ ದೇಹದ ಉಷ್ಣವನ್ನು ಹೆಚ್ಚು ಮಾಡಿಕೊಂಡಿರುತ್ತಿದ್ದರು. ಸತ್ಯವತಿಯನ್ನು ಸ್ಪರ್ಶಮಾತ್ರವೂ ಇಲ್ಲದೆ ಗರ್ಭವತಿಯನ್ನಾಗಿಸಿದರು ಪರಾಶರ ಮುನಿಗಳು. ಅವರಿಗೆ ಹುಟ್ಟಿದ ಮಗುವೇ ವ್ಯಾಸ ಮಹರ್ಷಿಗಳು ಎಂಬುದು ಬೇರೆಯದೇ ಕಥೆ. ಇಲ್ಲಿ ಪರಾಶರರ ಕಥೆಯಿಂದ ನಾವು FSH ಮತ್ತು LH ಬಗ್ಗೆ ಕಲಿಯುವುದಿದೆ. ಇದನ್ನು ಬದಿಗಿಡೋಣ.

ಇನ್ನೂ ಸ್ವಲ್ಪ ನೂರುವರ್ಷಗಳ ಕಾಲ ಸವೆಸೋಣ.

ವ್ಯಾಸರ ತಂದೆಯ ಕಥೆಯಾಯಿತು. ಈಗ ಮಗನ ಕಥೆ. ವ್ಯಾಸರು ಹಣ್ಣು ಹಣ್ಣು ಮುದುಕರು. ಅವರ ಮಗ ಶುಕ ಮುನಿ. ವಿಹಾರಕ್ಕೆಂದು ಹೊರಟಿದ್ದ ವ್ಯಾಸರು ಕೊಳವೊಂದರಲ್ಲಿ ನಗ್ನರಾಗಿ ಜಲಕ್ರೀಡೆಯಾಡುತ್ತಿದ್ದ ಹೆಂಗಳೆಯರನ್ನು ನೋಡುತ್ತಾರೆ. ತತ್‍ಕ್ಷಣವೇ ಆ ಹೆಂಗಳೆಯರೆಲ್ಲರೂ ತಮ್ಮ 'ಮಾನ' ಮುಚ್ಚಿಕೊಂಡು ಓಡಿ ಹೋಗುತ್ತಾರೆ. ಇನ್ನೊಮ್ಮೆ ಅದೇ ಸ್ಥಳಕ್ಕೆ ವ್ಯಾಸರ ಮಗ ಶುಕ ಮುನಿ ಬರುತ್ತಾರೆ. ನವತರುಣ ಶುಕ. ಆದರೂ ಆ ಹೆಂಗಳೆಯರೂ ಎಳ್ಳಷ್ಟೂ ನಾಚಿಕೆಯನ್ನು ತೋರದೆ ಸ್ನಾನ ಮಾಡುತ್ತಲೇ ಇರುತ್ತಾರೆ. ಇದೇನು ಮರ್ಮ? ಅದಕ್ಕೆ ಆ ಹೆಂಗಳೆಯರು ಕೊಡುವ ತಾರ್ಕಿಕ ಉತ್ತರಗಳದು ಬೇರೆಯದೇ ಕಥೆ ಇದೆ.. ಆದರೆ ಇಲ್ಲಿ ಆ ಹೆಂಗಸರ FSH ಮತ್ತು LH ಬಗ್ಗೆ ಅರಿಯುವುದಿದೆ.

ಕಥೆಗಳು ಸಾಕೆನಿಸುತ್ತೆ. ಮೊನ್ನೆ ಟ್ರೆಕ್ ಒಂದರಲ್ಲಿ ಗೆಳೆಯರೊಬ್ಬರು ಹೇಳುತ್ತಿದ್ದರು. "ಇಂಗ್ಲೆಂಡಿನಲ್ಲಿ ನಮ್ಮ ಮಗನನ್ನು ಶಾಲೆಗೆ ಸೇರಿಸಲು ಭಯವಾಗಿಹೋಗಿದೆ. ಟಾಯ್ಲೆಟ್ಟಿನಲ್ಲಿ ಕಾಂಡೋಮ್ ಇಟ್ಟು ಬೇಕಿದ್ದರೆ ಉಪಯೋಗಿಸಿ ಎಂದು ಬೋರ್ಡು ಬೇರೆ ಹಾಕಿದ್ದಾರೆ. ತೀರಾ ಪ್ರೈಮರಿ ಶಾಲೆಯಲ್ಲೇ!" ಎಂದು ನಿಟ್ಟುಸಿರು ಬಿಟ್ಟರು. ಆ ದೇಶದ ಸಮಸ್ಯೆ ಇನ್ನೆಷ್ಟಿರಬೇಕು ಯೋಚಿಸಲೇ ಬೇಕು. ಪ್ರೈಮರಿ ಶಾಲೆಯಲ್ಲಿ ಇದರ ಅಗತ್ಯವಿದೆಯೇ? Of course, ನಮ್ಮ ದೇಶದಲ್ಲಿ ಸೆಕ್ಸ್ ಎಜುಕೇಷನ್ ಅನ್ನು ಶಾಲೆಯ ಮಟ್ಟದಲ್ಲಿ ಇಡಬೇಕೋ ಬೇಡವೋ ಎಂಬ ಚರ್ಚೆಯೇ ಇನ್ನೂ ಬಗೆಹರಿದಿಲ್ಲ. ಆದರೆ ಅಷ್ಟೊಂದು ದೊಡ್ಡ ಸಮಸ್ಯೆ ನಮ್ಮ ದೇಶದಲ್ಲಿಲ್ಲ ಎಂಬುದು ನಮ್ಮ ಪುಣ್ಯವಷ್ಟೆ.

ಹುಡುಗ (ಅಥವಾ ಹುಡುಗಿ) ಬೆಳೆಯುವುದು ಎಂದರೆ ವಾಸ್ತವವಾಗಿ FSH ಮತ್ತು LH ಉತ್ಪತ್ತಿ ಆಗಲು ಆರಂಭವಾಗಿದೆ ಎಂದರ್ಥ. Follicle Stimulating Hormone ಮತ್ತು Luteinizing Hormone. ಯಾರಲ್ಲಿ ಈ ಹಾರ್ಮೋನುಗಳೆರಡು ಅಧಿಕವಾಗಿ ಉತ್ಪತ್ತಿಯಾಗುತ್ತೋ ಅವರು ಪರಾಶರರಂತೆ ವೀರರೂ (ಶೌರ್ಯವುಳ್ಳವನು ಶೂರ, ವೀರ್ಯವುಳ್ಳವನು ವೀರ) ಆಗಬಹುದು, ಶುಕಮುನಿಗಳನ್ನು ಕಂಡ ಬಾಲೆಯರಂತೆ "open hearted" ಕೂಡ ಆಗಬಹುದು. ಬರಬರುತ್ತಾ ಈ ಹಾರ್ಮೋನುಗಳು ಅತಿ ಸಣ್ಣ ವಯಸ್ಸಿನಲ್ಲೇ ಉತ್ಪತ್ತಿಯಾಗಲಾರಂಭಸಿದೆ. ಪ್ರೈಮರಿ ಶಾಲೆಯ ಮಕ್ಕಳೂ ಗರ್ಭಿಣಿಯರಾದ ಕೇಸುಗಳು ದಾಖಲಾಗಿವೆ.

ಈ FSH ಮತ್ತು LH ಗಳು progesterone ಮತ್ತು estrogen ಎಂಬ ಇನ್ನೆರಡು ಹಾರ್ಮೋನುಗಳನ್ನು ಉತ್ಪತ್ತಿ ಮಾಡಲು ಅವಕಾಶ ಮಾಡಿಕೊಡುತ್ತೆ. ಮನಸ್ಸಿನೊಳಗಿನ 'ಅನುರಾಗ'ದ ಭಾವನೆಗಳಿಗೂ ಇದೇ ಕಾರಣ ಎಂದು ಮನಸ್‍ಶಾಸ್ತ್ರಜ್ಞರು ಹೇಳುವುದು ಕವಿಗಳಿಗೆ ಕಿರಿಕಿರಿಯಾದ ಮಾತುಗಳು. ಕವಿಗಳು ಏನನ್ನುತ್ತಾರೋ ಏನೋ..

ಇವತ್ತಿನ ಪಾಠ ಇಲ್ಲಿಗೆ ಮುಗಿಸೋಣ. ಏನಾದರೂ ಡೌಟ್ ಇದ್ರೆ ಮುಂದಿನ ತರಗತಿಯಲ್ಲಿ ವಿವರಿಸುತ್ತೇನೆ..

ಹೋಮ್‍ವರ್ಕ್‍ - FSH ಮತ್ತು LH ಉತ್ಪತ್ತಿ ಆಗದೇ ಇದ್ದರೆ ಬದುಕು ಏನಾಗುತ್ತೆ ಎಂಬುದನ್ನು ಯೋಚಿಸಿ.

Tuesday, August 12, 2008

ಒಲಿಂಪಿಕ್ ಸ್ಪೆಶಲ್!

ಬೀಜಿಂಗಿನಲ್ಲಿ ಒಲಿಂಪಿಕ್ ಸದ್ದು ಜೋರಾಗಿದೆ. ಅದರ ಉದ್ಘಾಟನೆಯ ಅದ್ಧೂರಿ ಸಮಾರಂಭವನ್ನು ನೋಡಿ ಇಡೀ ಜಗತ್ತು ಚೀನಾದೆಡೆಗೆ ನಿಬ್ಬೆರಗಾಗಿದೆ. ಭಾರತಕ್ಕೆ ಚಿನ್ನದ ಪದಕ ಬಂದಮೇಲಂತೂ ಇಲ್ಲೂ ಎಲ್ಲರ ಬಾಯಲ್ಲೂ ಒಲಿಂಪಿಕ್. ವೆಬ್‍ಸೈಟುಗಳು, ನ್ಯೂಸ್‍ಪೇಪರುಗಳು, ಟೀವಿ ಚಾನೆಲ್ಲುಗಳು -ಯಾವುದೇ ಮಾಧ್ಯಮವನ್ನು ಪಿಕ್ ಮಾಡಿಕೊಂಡರೂ ಅದರಲ್ಲಿ ಒಲಿಂಪಿಕ್ಕೇ.

ಒಲಿಂಪಿಕ್ಕಿನಿಂದಾಗಿ ಚೀನಾ ದೇಶದ ಚಿತ್ರಣವೇ ಬದಲಾಗಿಹೋಗಿದೆ. ಅದರ ಬಗ್ಗೆ ನಾಗರಾಜ ವಸ್ತಾರೆಯವರ ಒಂದು ಒಳ್ಳೆಯ ಲೇಖನ ಕೆಂಡಸಂಪಿಗೆಯಲ್ಲಿದೆ. ಡಾ| ಲೀಲಾ ಸಂಪಿಗೆಯವರು, ಒಲಿಂಪಿಕ್ಕಿನಿಂದಾಗಿ ಕಿಕ್ಕಿರಿದಂತಾಗಿರುವ ಚೀನಾದಲ್ಲಿ ಬಳಸಲ್ಪಡುತ್ತಿರುವ ಕಾಂಡೋಮುಗಳ ಬಗ್ಗೆ, ಅದನ್ನು ಎಲ್ಲೆಂದರಲ್ಲಿ ಎಸೆಯುವುದರಿಂದಾಗಿ ಉಂಟಾಗುವ ಪರಿಸರ ಮಾಲಿನ್ಯದ ಬಗ್ಗೆ, ಏಡ್ಸ್ ಜಾಗೃತಿ-ಲೈಂಗಿಕ ಕಾರ್ಯಕರ್ತೆಯರ ಬಗ್ಗೆ -ಇತ್ಯಾದಿ ವಿಷಯಗಳ ಬಗ್ಗೆ ಗಮನ ಹರಿಸಿ ಬರೆದ ಪುಸ್ತಕ 'ಒಲಿಂಪಿಕ್ಸ್ ಎಂಬ ಕೆಂಪು ದೀಪ' ಮೊನ್ನೆ ಮೊನ್ನೆ ಬಿಡುಗಡೆಯಾಗಿದೆ. ಏಡ್ಸ್ ಜಾಗೃತಿ ಮೂಡಿಸಲು, ಚೀನಾದಲ್ಲಿ ಕಾಂಡೋಮುಗಳ ಜಾಹೀರಾತನ್ನು ಆದಷ್ಟೂ ಪರಿಣಾಮಕಾರಿಯಾಗಿ - ಆಕರ್ಷಕವಾಗಿ ಪ್ರದರ್ಶಿಸಲು ಅಲ್ಲಿನ ಕಾಂಡೋಮ್ ತಯಾರಿಕಾ ಕಂಪನಿಗಳು ಹರಸಾಹಸ ಮಾಡುತ್ತಿರುವುದನ್ನು ಡಾ| ಲೀಲಾ ಸಂಪಿಗೆ ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.

ಹಾಗಾದರೆ ಅದೆಂತಹ ಜಾಹೀರಾತುಗಳು ಅಲ್ಲಿ ಪ್ರದರ್ಶಿಸಲ್ಪಡುತ್ತಿರುವುದು? ಹುಡುಕ ಹೊರಟಾಗ ಮೋಟುಗೋಡೆ ಟೀಮಿಗೆ ಸಿಕ್ಕ ಕೆಲವನ್ನು ನಿಮ್ಮ ಕುತೂಹಲಕ್ಕಾಗಿ ಇಲ್ಲಿ ಕೊಡುತ್ತಿದ್ದೇವೆ. 'Elasun' ಎಂಬ ಕಂಪನಿಯ ಜಾಹೀರಾತುಗಳು ಇವು. ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಇನ್ನೂ ಹೆಚ್ಚಿನ ಪದಕಗಳು ಬರಲಿ; ಏಡ್ಸ್ ತಡೆಗಟ್ಟುವಲ್ಲಿ ಈ ಜಾಹೀರಾತುಗಳು ನೆರವಾಗಲಿ ಎಂದು ಆಶಿಸೋಣ.

ಸೈಕ್ಲಿಂಗ್


ಬಾಸ್ಕೆಟ್ ಬಾಲ್


ಸ್ವಿಮ್ಮಿಂಗ್


ಒಲಿಂಪಿಕ್ಸ್ ಚಿಹ್ನೆ


Monday, August 4, 2008

ಓಶೋ ಮತ್ತು "ಅದು".

ಓಶೋ ಮತ್ತು ಕಾಮದ ಬಗ್ಗೆ ನಾವು ಏನೂ ಹೇಳುವುದು ಉಳಿದಿಲ್ಲ. ಜಗತ್ತಿನ ಜನರೆಲ್ಲ ಇದರ ಬಗ್ಗೆ ಬೇಕಷ್ಟು ಚರ್ಚಿಸಿ ಚರ್ಚಿಸಿ... ಬೇಡ ಬಿಡಿ.

ಓಶೋ ರ ತುಂಟತನದ ಒಂದಿಷ್ಟು ಮಾತುಗಳು ಇಲ್ಲಿವೆ, ಕೇಳಿ:

ಹೆಡ್ ಫೋನಿದ್ದರೆ ಒಳಿತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವುದು ಬೇಡ ಅಲ್ಲವೇ?:)

Saturday, August 2, 2008

ಒಲಿಂಪಿಕ್ ನಲ್ಲಿ ನಡಿಯೋ "ಬೇರೆ" ಆಟದ ಬಗ್ಗೆ..

ಅವಧಿಯಿಂದ ಅಪ್ಪಣೆಯಿಲ್ಲದೆ ಕದ್ದಿದ್ದು:

ಕಾಂಡೂಮ್ ಮತ್ತು ಒಲಿಂಪಿಕ್ಸ್2000ದಲ್ಲಿ ಸಿಡ್ನಿಯಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ‘ಕಾಂಡೂಮ್ ವೀಕ್’, ‘ಸೆಕ್ಸ್ ಡೇ’ಗಳನ್ನು ಆಚರಿಸಲಾಗಿತ್ತು . ಸಿಡ್ನಿ ಒಲಂಪಿಕ್ಸ್ ನಲ್ಲಿ ಪ್ರತಿಯೊಬ್ಬ ಕ್ರೀಡಾಪಟುವೂ ಎರಡು ವಾರಗಳಲ್ಲಿ 51 ಕಾಂಡೋಮ್ ಗಳನ್ನು ಬಳಸಿದ್ದರು. ಸಿಡ್ನಿ ಒಲಂಪಿಕ್ಸ್ ನಲ್ಲಿ ಪೂರೈಸಿದ ಕಾಂಡೋಮ್ ಗಳು ಕೊರತೆಯಾದವು. ಇದನ್ನು ಗಮನಿಸಿದ ಅಧಿಕಾರಿಗಳು ಅಥೆನ್ಸ್ ಒಲಂಪಿಕ್ಸ್ ನಲ್ಲಿ ಇದರ ದುಪ್ಪಟ್ಟು ಕಾಂಡೋಮ್ ಗಳನ್ನು ಒದಗಿಸಿದರು..

ಮುಂದಿನ ಓದಿಗೆ ಇಲ್ಲಿ ಕ್ಲಿಕ್ಕಿಸಿ..