Tuesday, August 12, 2008

ಒಲಿಂಪಿಕ್ ಸ್ಪೆಶಲ್!

ಬೀಜಿಂಗಿನಲ್ಲಿ ಒಲಿಂಪಿಕ್ ಸದ್ದು ಜೋರಾಗಿದೆ. ಅದರ ಉದ್ಘಾಟನೆಯ ಅದ್ಧೂರಿ ಸಮಾರಂಭವನ್ನು ನೋಡಿ ಇಡೀ ಜಗತ್ತು ಚೀನಾದೆಡೆಗೆ ನಿಬ್ಬೆರಗಾಗಿದೆ. ಭಾರತಕ್ಕೆ ಚಿನ್ನದ ಪದಕ ಬಂದಮೇಲಂತೂ ಇಲ್ಲೂ ಎಲ್ಲರ ಬಾಯಲ್ಲೂ ಒಲಿಂಪಿಕ್. ವೆಬ್‍ಸೈಟುಗಳು, ನ್ಯೂಸ್‍ಪೇಪರುಗಳು, ಟೀವಿ ಚಾನೆಲ್ಲುಗಳು -ಯಾವುದೇ ಮಾಧ್ಯಮವನ್ನು ಪಿಕ್ ಮಾಡಿಕೊಂಡರೂ ಅದರಲ್ಲಿ ಒಲಿಂಪಿಕ್ಕೇ.

ಒಲಿಂಪಿಕ್ಕಿನಿಂದಾಗಿ ಚೀನಾ ದೇಶದ ಚಿತ್ರಣವೇ ಬದಲಾಗಿಹೋಗಿದೆ. ಅದರ ಬಗ್ಗೆ ನಾಗರಾಜ ವಸ್ತಾರೆಯವರ ಒಂದು ಒಳ್ಳೆಯ ಲೇಖನ ಕೆಂಡಸಂಪಿಗೆಯಲ್ಲಿದೆ. ಡಾ| ಲೀಲಾ ಸಂಪಿಗೆಯವರು, ಒಲಿಂಪಿಕ್ಕಿನಿಂದಾಗಿ ಕಿಕ್ಕಿರಿದಂತಾಗಿರುವ ಚೀನಾದಲ್ಲಿ ಬಳಸಲ್ಪಡುತ್ತಿರುವ ಕಾಂಡೋಮುಗಳ ಬಗ್ಗೆ, ಅದನ್ನು ಎಲ್ಲೆಂದರಲ್ಲಿ ಎಸೆಯುವುದರಿಂದಾಗಿ ಉಂಟಾಗುವ ಪರಿಸರ ಮಾಲಿನ್ಯದ ಬಗ್ಗೆ, ಏಡ್ಸ್ ಜಾಗೃತಿ-ಲೈಂಗಿಕ ಕಾರ್ಯಕರ್ತೆಯರ ಬಗ್ಗೆ -ಇತ್ಯಾದಿ ವಿಷಯಗಳ ಬಗ್ಗೆ ಗಮನ ಹರಿಸಿ ಬರೆದ ಪುಸ್ತಕ 'ಒಲಿಂಪಿಕ್ಸ್ ಎಂಬ ಕೆಂಪು ದೀಪ' ಮೊನ್ನೆ ಮೊನ್ನೆ ಬಿಡುಗಡೆಯಾಗಿದೆ. ಏಡ್ಸ್ ಜಾಗೃತಿ ಮೂಡಿಸಲು, ಚೀನಾದಲ್ಲಿ ಕಾಂಡೋಮುಗಳ ಜಾಹೀರಾತನ್ನು ಆದಷ್ಟೂ ಪರಿಣಾಮಕಾರಿಯಾಗಿ - ಆಕರ್ಷಕವಾಗಿ ಪ್ರದರ್ಶಿಸಲು ಅಲ್ಲಿನ ಕಾಂಡೋಮ್ ತಯಾರಿಕಾ ಕಂಪನಿಗಳು ಹರಸಾಹಸ ಮಾಡುತ್ತಿರುವುದನ್ನು ಡಾ| ಲೀಲಾ ಸಂಪಿಗೆ ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.

ಹಾಗಾದರೆ ಅದೆಂತಹ ಜಾಹೀರಾತುಗಳು ಅಲ್ಲಿ ಪ್ರದರ್ಶಿಸಲ್ಪಡುತ್ತಿರುವುದು? ಹುಡುಕ ಹೊರಟಾಗ ಮೋಟುಗೋಡೆ ಟೀಮಿಗೆ ಸಿಕ್ಕ ಕೆಲವನ್ನು ನಿಮ್ಮ ಕುತೂಹಲಕ್ಕಾಗಿ ಇಲ್ಲಿ ಕೊಡುತ್ತಿದ್ದೇವೆ. 'Elasun' ಎಂಬ ಕಂಪನಿಯ ಜಾಹೀರಾತುಗಳು ಇವು. ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಇನ್ನೂ ಹೆಚ್ಚಿನ ಪದಕಗಳು ಬರಲಿ; ಏಡ್ಸ್ ತಡೆಗಟ್ಟುವಲ್ಲಿ ಈ ಜಾಹೀರಾತುಗಳು ನೆರವಾಗಲಿ ಎಂದು ಆಶಿಸೋಣ.

ಸೈಕ್ಲಿಂಗ್


ಬಾಸ್ಕೆಟ್ ಬಾಲ್


ಸ್ವಿಮ್ಮಿಂಗ್


ಒಲಿಂಪಿಕ್ಸ್ ಚಿಹ್ನೆ


3 comments:

ವಿ.ರಾ.ಹೆ. said...

ಜಾಹೀರಾತಿನ creativity ಮೆಚ್ಚುವಂತಿದೆ

sunaath said...

ಜಾಹೀರಾತುಗಳೇನೊ ಮುದ್ದಾಗಿವೆ. ಆದರೆ,sportsಗಿಂತ
'ಇದರ'ಹಾವಳಿಯೇ ಹೆಚ್ಚಾಯಿತಲ್ಲ!

ಮನಸ್ವಿ said...

ಆಕರ್ಷಕ ಜಾಹೀರಾತು.. !!!
ಇದರ ಉಪಯೋಗಿಸಲುಇಷ್ಟೊಂದು ಉತ್ತೇಜಿಸಿದ ಮೇಲೆ 'ಆಟಕ್ಕೆ' ಕಳೆ ಬರದೆ ಇರುತ್ತದೆಯೇ ಚೀನಾದಲ್ಲಿ !!