Friday, January 9, 2009

ಪ್ರಕೃತಿಯ ಶಾಪ - ೨

ಈ ಪಾಠಕ್ಕೆ ಒಂದಷ್ಟು ಪೂರ್ವಸಿದ್ಧತೆಗಳು ಬೇಕು. ವಿಜ್ಞಾನದ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಬೇರೆಯವರಿಗೆ ಅರ್ಥವಾಗುವುದು ಕಷ್ಟ. ನನ್ನ ಕೈಯಲ್ಲಾದಷ್ಟು ಮಟ್ಟಿಗೆ ಇದನ್ನು simplify ಮಾಡಲು ಯತ್ನಿಸುತ್ತೇನೆ.

[ಟಿಪ್ಪಣಿ: ನಮ್ಮ ದೇಹವು ಲೆಕ್ಕವಿಲ್ಲದಷ್ಟು ಜೀವಕೋಶಗಳಿಂದ ಮಾಡಲ್ಪಟ್ಟಿದೆ. ಪ್ರತಿಯೊಂದು ಕೋಶದಲ್ಲೂ ನ್ಯೂಕ್ಲಿಯಸ್ ಎಂಬ ಅಂಶವಿದ್ದೂ, ಪ್ರತಿಯೊಂದು ನ್ಯೂಕ್ಲಿಯಸ್ಸಿನಲ್ಲೂ ಅಗಣಿತ ಡಿ.ಎನ್.ಎ.ಗಳು ಇರುತ್ತವೆ. ಪ್ರತಿಯೊಂದು ಡಿ.ಎನ್.ಎ ಕೂಡ ಕ್ರೋಮೋಸೋಮುಗಳಿಂದ ರಚಿಸಲ್ಪಟ್ಟಿದೆ. ಎರಡು ಬಗೆಯ ಕ್ರೋಮೋಸೋಮುಗಳಿವೆ: X ಮತ್ತು Y. ಕ್ರೋಮೋಸೋಮುಗಳು ಯಾವಾಗಲೂ ಜೋಡಿಗಳಾಗಿರುತ್ತವೆ. X ಕ್ರೋಮೋಸೋಮು ಗಂಡು ಹೆಣ್ಣು ಎರಡು ಜಾತಿಗಳಲ್ಲೂ ಇರುತ್ತೆ. ಆದರೆ Y ಕ್ರೋಮೋಸೋಮು ಕೇವಲ ಗಂಡು ಜಾತಿಯಲ್ಲಿ ಮಾತ್ರ ಲಭ್ಯ. ಹಾಗಾಗಿ XX ಎಂದರೆ ಸ್ತ್ರೀ ಎಂದೂ, XY ಎಂದರೆ ಪುರುಷ ಎಂದು ಅರ್ಥ ಮಾಡತಕ್ಕದ್ದು.]

ಸಿಗ್ನಲ್ಲುಗಳಲ್ಲಿ ನಾವು ನೋಡುವ ಆ "ಸ್ಪೆಷಲ್" ಭಿಕ್ಷುಕರನ್ನು ನೆನೆಸಿಕೊಳ್ಳಿ! ರೈಲುಗಳಲ್ಲಿ ಸೆರಗನ್ನು ಕೆಳಕ್ಕೆ ಸರಿಸಿ ಅರ್ಧಸ್ತನವನ್ನು ಪ್ರದರ್ಶಿಸಿ ಮೈಮೇಲೇ ಬಿದ್ದು ಹಣ ವಸೂಲಿ ಮಾಡುವ ಗಂಡು ಧ್ವನಿಯುಳ್ಳ ಆ "ಸ್ಪೆಷಲ್" ಭಿಕ್ಷುಕರನ್ನು ನೆನೆಸಿಕೊಳ್ಳಿ. ಅಜ್ಞಾತವಾಸದಲ್ಲಿ ನೃತ್ಯದ ಮೇಷ್ಟ್ರಾದ ಬೃಹನ್ನಳೆಯನ್ನು ನೆನೆಸಿಕೊಳ್ಳಿ (ಇವನ/ಇವಳ ದೆಸೆಯಿಂದ ಚಲನಚಿತ್ರಗಳಲ್ಲಿ ಡ್ಯಾನ್ಸ್ ಟೀಚರ್‍ಗಳೆಲ್ಲರೂ ಇವನಂತೆಯೇ/ಇವಳಂತೆಯೇ ಆಗಿಬಿಟ್ಟಿರುತ್ತಾರೆ)! ಮೈಕೆಲ್ ಜ್ಯಾಕ್ಸನ್‍ನನ್ನು ನೆನೆಸಿಕೊಳ್ಳಬೇಡಿ. (ಬೇಡ ಅಂದಿದ್ ಕೆಲ್ಸಾನೇ ಮಾಡೋದು ಜನ ಅಂತ ನನಗೆ ಗೊತ್ತು)!

ಇವರನ್ನು ನೋಡಿದಾಗ ಎಷ್ಟು ಅಸಹ್ಯವಾಗುತ್ತೆ ಅಲ್ಲವೆ? ಅವರ ಹುಚ್ಚಾಟವನ್ನೂ, ಹೆಂಗಸಿನ ರೂಪದಲ್ಲಿ ಅವರುಗಳು ಗಂಡಸುಗಳಂತಾಡುವುದನ್ನು ನೋಡಿದಾಗ ಮರೆಯಲ್ಲಿ ನಗು ಬರುತ್ತೆ ಅಲ್ಲವೆ? ಅವರು ಎದುರೇ ಬಂದಾಗ ಕೈಕಾಲು ನಡುಕವೂ ಬರಬಹುದು ಅಲ್ಲವೆ? ಅವರುಗಳಿಗೆ "ಹೆಸರು"ಗಳನ್ನು ಕೊಟ್ಟು ಹಾಸ್ಯ ಮಾಡಲು ಒಳ್ಳೇ ಕಥಾವಸ್ತುಗಳಲ್ಲವೆ?

ಜೇನಲ್ ಬಿಷಾಪ್ - ಮಿಸ್ ಟೀನ್ USA ಪ್ರಶಸ್ತಿ ವಿಜೇತಳು

ಹೀಗೆ ನಾವು ಕಂಡಿರುವ ಈ "ಸ್ಪೆಷಲ್" ಗುಣವುಳ್ಳ ಮಗುವೊಂದು ನಮ್ಮ ಮನೆಯಲ್ಲೇ ಹುಟ್ಟಿಬಿಟ್ಟರೆ?

ಇದು ಸಾಧ್ಯವೆಂಬುದು ನೆನಪಿನಲ್ಲಿರಲಿ!

ಅರ್ರೆ? ನಾನು ಆರೋಗ್ಯವಾಗಿದ್ದೀನಿ, ಪ್ಯೂರ್ ಗಂಡ್ಸು! ನನ್ನಾಕೆ ಪ್ಯೂರ್ ಹೆಂಗ್ಸು!! ನಮಗೆ ಹುಟ್ಟೋ ಮಗು ಅದು ಹೇಗೆ ..... ಆಗುತ್ತೆ? ಈ ಪ್ರಶ್ನೆ ಕೇಳಿಕೊಳ್ಳುವುದಕ್ಕೆ ಮುಂಚೆ ಒಂದಷ್ಟು ತಿಳಿವಳಿಕೆ ಅವಶ್ಯ.

ಹೆಂಗಸಿನ ವಿಷಯಕ್ಕೆ ಮುಂದಿನ ಪಾಠದಲ್ಲಿ ಬರುತ್ತೇನೆ. ಈಗ ಗಂಡಸಿನ ವಿಷಯದ ಬಗ್ಗೆ ಗಮನ ಹರಿಸೋಣ.

ನಾವು ಪ್ಯೂರ್ ಗಂಡಸೋ ಅಲ್ಲವೋ ಎನ್ನುವುದನ್ನು ತೀರ್ಮಾನ ಮಾಡುವುದು ನಮ್ಮ ಜೀನ್. ಟಿಪ್ಪಣಿಯಲ್ಲಿ ಹೇಳಿದಂತೆ XY ಜೋಡಿಯುಳ್ಳ ಕ್ರೋಮೋಸೋಮು ಹೊಂದಿರುವ ಜಾತಿಯನ್ನು ಗಂಡು ಎನ್ನಬಹುದು.

ನಮ್ಮ ಪ್ರತಿಯೊಂದು ಗುಣಲಕ್ಷಣಗಳಿಗೂ ಕಾರಣ ನಮ್ಮೊಳಗಿನ ಜೀನುಗಳು. ನಮ್ಮ ಮೈಬಣ್ಣ, ಕಣ್ಣಿನ ಗಾತ್ರ, ಧ್ವನಿ, ಆರೋಗ್ಯ, ಜೀರ್ಣಶಕ್ತಿ, ಸಂತಾನೋತ್ಪತ್ತಿ ಶಕ್ತಿ, ನಡತೆ, ಮನಸ್ಸಿನ ಭಾವಗಳು - ನಿರ್ಭಾವಗಳು - ಹೀಗೆ ಪ್ರತಿಯೊಂದಕ್ಕೂ ಜೀನ್‍ಗಳೇ ಕಾರಣ. ನಾನು ಪುರುಷನೋ ಸ್ತ್ರೀ-ನೋ ಎಂಬ ತೀರ್ಮಾನವನ್ನೂ ಜೀನೇ ಮಾಡುವುದು.


ಹರಿಸು - ದಕ್ಷಿಣ ಕೊರಿಯಾ ದೇಶದ ಪ್ರಖ್ಯಾತ ಗಾಯಕಿ, ನಾಯಕ 'ನಟಿ'/ಬಾಲ್ಯ'ನಟ' ಹಾಗೂ ರೂಪದರ್ಶಿ - ಹುಡುಗನನ್ನು ಮದುವೆಯಾಗಿ ಒಂದು ವರ್ಷವಾಯಿತು

ಜೆನಿಟಿಕ್ಸ್-ನಲ್ಲಿ X (Capital X) - ಅನ್ನು Dominant Gene ಎಂದೂ [ಗುಣವು ವ್ಯಕ್ತವಾಗುವ ಜೀನ್], x (Small x) - ಅನ್ನು Recessive Gene [ಗುಣವು ವ್ಯಕ್ತವಾಗದ, ಆದರೆ ಪೀಳಿಗೆಯಿಂದ ಪೀಳಿಗೆಗೆ ಸಾಗುವ ಜೀನ್] ಎಂದೂ ಕರೆಯುತ್ತೇವೆ. ಅಂತೆಯೇ Y ಮತ್ತು y ಅನ್ನು ಕ್ರಮವಾಗಿ Dominant ಮತ್ತು Recessive Genes ಎನ್ನುತ್ತೇವೆ. ಈ ಜೀನುಗಳು ಉತ್ಪತ್ತಿಯಾಗುವುದು ವೀರ್ಯಾಣುಗಳಲ್ಲಿ ಮೊದಲು (Meiosis).

ವೀರ್ಯರಸದಲ್ಲಿರುವ ಮಿಲಿಯಾಂತರ ವೀರ್ಯಾಣುಗಳಲ್ಲಿ ಒಂದು ಮಾತ್ರ ಅಂಡಾಣುವನ್ನು ಹೊಂದುವುದೆಂದು ನಮಗೆ ಗೊತ್ತಿದೆಯಷ್ಟೆ. ಯಾವ ವೀರ್ಯಾಣು ಮಿಲನವಾಗುತ್ತೋ ಅದರ ಲಿಂಗವೂ ಸಹ ಆಗಲೇ ನಿರ್ಣಯವಾಗಿರುತ್ತೆ. XY ಇರುವ ವೀರ್ಯಾಣು ಸೇರಿದರೆ ಗಂಡು ಭ್ರೂಣ, XX ಇರುವ ವೀರ್ಯಾಣು ಸೇರಿದರೆ ಹೆಣ್ಣು ಭ್ರೂಣ - ನಂತರ ಬದುಕಿದರೆ ಮಗುವಿನ ಜನನ. ನನ್ನಲ್ಲಿ ಯಾವುದಾದರೂ ಆನುವಂಶಿಕ (Genetic) ರೋಗದ Dominant Gene ಇತ್ತೆಂದರೆ ಅದು ಖಚಿತವಾಗಿ ನನ್ನ ಮುಂದಿನ ಪೀಳಿಗೆಗೂ ಮುಂದುವರೆಯುತ್ತೆ ಎಂಬುದನ್ನು ಸಾಮಾನ್ಯವಾಗಿ ಎಲ್ಲರೂ ಬಲ್ಲೆವು. ಆದರೆ, ನನ್ನಲ್ಲಿ ಒಂದು ವೇಳೆ Recessive Gene ಇದ್ದರೆ?


ಬ್ರೆಜಿಲಿನ ವಾಲಿಬಾಲ್ ಆಟಗಾರ್ತಿ - 2oo0 ಮತ್ತು 2004 ಒಲಂಪಿಕ್ಸ್-ನಲ್ಲಿ ಆಡಿದವಳು

ಆಗಲೇ ಹೇಳಿದ ಹಾಗೆ Recessive Gene ಇದ್ದರೂ ಪೀಳಿಗೆಯಿಂದ ಪೀಳಿಗೆಗೆ ಅದು ಮುಂದುವರೆಯುತ್ತೆ. ಅದು ನನ್ನಲ್ಲಿ ವ್ಯಕ್ತವಾಗದೆ, ನನ್ನ 'ಮೊಮ್ಮಗ'ನಲ್ಲಿ ವ್ಯಕ್ತವಾಗುತ್ತೆ!! (ಮೊಮ್ಮಗಳ ವಿಷಯಕ್ಕೆ ಇನ್ನೊಮ್ಮೆ ಬರುತ್ತೇನೆ). ಯಾಕೆ ಮೊಮ್ಮಗನಲ್ಲಿ? ಮಗನಲ್ಲಿ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರವನ್ನು ಈ ಪವರ್‍ಪಾಯಿಂಟ್ ಪ್ರೆಸೆಂಟೇಷನ್ ನೀಡಬಲ್ಲುದು. ಇಲ್ಲವಾದರೆ ಆ ವಿಷಯವೇ ಹೆಚ್ಚು ಸ್ಥಳಾವಕಾಶ ತೆಗೆದುಕೊಂಡೀತು. (ಇದು ಅರ್ಥವಾಗದಿದ್ದಲ್ಲಿ ನಾನು ನಂತರ ವಿವರಿಸುತ್ತೇನೆ.)

ನನ್ನಲ್ಲಿ ಈ "ಸ್ಪೆಷಲ್" ಗಂಡಸಿನ ರಿಸಿಸಿವ್ ಜೀನ್ ಇದ್ದರೆ, ನನ್ನ ಮೊಮ್ಮಗನಲ್ಲಿ ಅದು ವ್ಯಕ್ತವಾಗಿ ಅವನು "ಸ್ಪೆಷಲ್" ಪುರುಷನಾಗುತ್ತಾನೆ ಎನ್ನುವುದು ಇಲ್ಲಿನ ತಾತ್ಪರ್ಯ. ಆದರೆ ಈ ರಿಸಿಸಿವ್ ಜೀನು ನನ್ನೊಬ್ಬನಲ್ಲಿ ಮಾತ್ರ ಇದ್ದರೆ ಸಾಲದು. ನನ್ನ ಪತ್ನಿಯಲ್ಲೂ ಇರಬೇಕು. ಎಂದರೆ, ನನ್ನ XY ಜಾಗದಲ್ಲಿ xY ಇರಬೇಕು, ಅವಳ XX ಜಾಗದಲ್ಲಿ xX ಅಥವಾ Xx ಅಥವಾ xx ಇರಬೇಕು. ಆಗ ಮಾತ್ರವೇ ಇದು ಸಾಧ್ಯ. ಆದರೆ, ಸಂಶೋಧನೆಯ ಪ್ರಕಾರ ಐದು ನೂರು ಪುರುಷರಲ್ಲೊಬ್ಬರಲ್ಲಿ ಈ ರಿಸಿಸಿವ್ ಕ್ಯಾರಿಯರ್ ಜೀನು ಇರುತ್ತೆ. ನನ್ನಲ್ಲಿ, ನಿಮ್ಮಲ್ಲಿ, ಅವನಲ್ಲಿ, ಅವಳಲ್ಲಿ - ಇರಬಹುದು ಗೊತ್ತಿಲ್ಲ. ಮಕ್ಕಳಾದ ಮೇಲೆ ಗೊತ್ತಾಗುತ್ತೆ. ಗೊತ್ತಾಗದೆಯೂ ಇರಬಹುದು!

ಅಂಥಾ 'ಮಗ'ನಲ್ಲಿ ('ಮಗಳ' ವಿಷಯಕ್ಕೆ ಇನ್ನೊಮ್ಮೆ ಬರುತ್ತೇನೆ) ಒಂದು X ಕ್ರೋಮೋಸೋಮು extra ಇರುತ್ತೆ. ಎಂದರೆ XY ಬದಲು XXY ಇರುತ್ತೆ. ಈ ಅನಾರೋಗ್ಯಕ್ಕೆ ಕ್ಲೈನ್‍ಫೆಲ್ಟರ್ ಸಿಂಡ್ರೋಮ್ ಎಂದು ಅದನ್ನು ಕಂಡು ಹಿಡಿದ ವಿಜ್ಞಾನಿಯ ಹೆಸರನ್ನೇ ಇಟ್ಟಿದ್ದಾರೆ.

ಈ ಅನಾರೋಗ್ಯ ಸ್ಥಿತಿಗೆ ಯಾರು ಕಾರಣ? ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕೇ ಈ "ಸ್ಪೆಷಲ್" ಜನ?ಪ್ರಕೃತಿಯ ಈ ಶಾಪಕ್ಕೆ, ಎಂದರೆ ಕ್ಲೈನ್‍ಫೆಲ್ಟರ್ ಸಿಂಡ್ರೋಮ್‍ಗೆ ಗುರಿಯಾದವರು:

೧. ಹುಟ್ಟಿದಾಗ ಗಂಡು ಮಕ್ಕಳಾಗಿರುತ್ತಾರೆ. ಎಲ್ಲಿ ನೋಡಬೇಕೋ ಅಲ್ಲಿ ನೋಡಿದರೆ ಯಾವ ಸಂದೇಹವೂ ಇಲ್ಲದೆ ಗಂಡು ಎಂದು ತೀರ್ಮಾನ ಮಾಡಬಹುದು.

೨. ಖಂಡಗಳಾಗಲೀ, ಮೂಳೆಗಳಾಗಲೀ ಅಷ್ಟೇನೂ ಬಿಗಿಯಾಗಿರುವುದಿಲ್ಲ. ದೇಹವು ಬಲಾಢ್ಯವಾಗಿಯೂ ಇರುವುದಿಲ್ಲ.

೩. ಓದಲು, ಬರೆಯಲು, ಹೇಳಿದ್ದನ್ನು ಕೇಳಿಸಿಕೊಳ್ಳಲು, ಅದನ್ನು ಅರ್ಥ ಮಾಡಿಕೊಳ್ಳಲು, ಕಲಿಯಲು ಬಹಳ ಸಮಯ ತೆಗೆದುಕೊಳ್ಳುತ್ತಾನೆ.

೪. 'ವಯಸ್ಸಿಗೆ' ಬರುವಾಗ (Secondary Sexual Growth / Puberty) ಮುಖವು ಗಂಡಸಿನಂತಿದ್ದೂ ಸ್ತನಗಳು ಬೆಳವಣಿಗೆಯಾಗುತ್ತೆ. ಗಂಟಲು ಒಡೆಯುವುದಾದರೂ ಮಾತಿನ ಶೈಲಿ ಹೆಣ್ಣಿನಂತಿರುತ್ತೆ. ನಿತಂಬಗಳ ಗಾತ್ರವು ಹೆಚ್ಚುತ್ತೆ.

೫. ಎದೆಯ ಮೇಲೆ ಕೂದಲು, ಮೀಸೆ, ಗಡ್ಡವು ಬೆಳೆಯುವುದಿಲ್ಲ. ಬೆಳೆದರೂ ತೀರ ಕಡಿಮೆ.

೬. ಇವರು ಸಂಭೋಗ ಮಾಡಬಹುದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಹುದು! ಆದರೆ ವೀರ್ಯಾಣುಗಳು ಅತ್ಯಂತ ಕಡಿಮೆಯಾಗಿರುತ್ತೆ. ಇವರುಗಳು impotent ಅಲ್ಲ, ಬದಲಿಗೆ infertile.

೭. ಸ್ತನಗಳ ಕ್ಯಾನ್ಸರ್, ಆಸ್ಟಿಯೋಪೋರೋಸಿಸ್, ಹುಳುಕು ಹಲ್ಲು, ಮಾನಸಿಕ ಖಿನ್ನತೆ, ಬುದ್ಧಿ ಭ್ರಮಣೆ ಮುಂತಾದ ಕಾಯಿಲೆಗಳು ಈ "ಹುಡುಗ"ರಿಗೆ ಬರುವುದು ಸುಲಭ.


ಕ್ಯಾರೊಲೊನ್ ಕೋಸೆ - ಪ್ರಖ್ಯಾತ ಪ್ಲೇಬಾಯ್ ಪತ್ರಿಕೆಗೆ ಪೋಸ್ ಮಾಡಿದ ಮೊದಲ ರೂಪದರ್ಶಿ, ಜೇಮ್ಸ್ ಬಾಂಡ್ ಚಿತ್ರದಲ್ಲಿ ನಟಿಸಿದಾಕೆ - ವಿಶೇಷವೆಂದರೆ ಈಕೆಗೆ XXXY ಇತ್ತು. ಎಂದರೆ, ಎರಡು X ಕ್ರೋಮೋಸೋಮು!!

ಇಂಥಾ ವಿದ್ಯಾರ್ಥಿಗಳನ್ನು ಶಿಕ್ಷಕರೇನಾದರೂ ಗುರುತಿಸಿದರೆ, ಇವರನ್ನೂ ಮತ್ತು ಇವರ ಸಹಪಾಠಿಗಳನ್ನು ಸರಿಯಾದ ರೀತಿಯಲ್ಲಿ ತಿಳಿವಳಿಕೆ ಹೇಳುವುದು ಒಳ್ಳೆಯದು. ಎಲ್ಲರಂತೆ ಈ ವಿದ್ಯಾರ್ಥಿಗಳೂ ಬಾಳುವ ಅಧಿಕಾರವನ್ನು ಹೊಂದಿದ್ದಾರೆಂದು ಮನವರಿಕೆ ಮಾಡಿಕೊಡತಕ್ಕದ್ದು. ಮನೋರೋಗ ತಜ್ಞರಿಂದ ಕೌನ್ಸೆಲಿಂಗ್ ಕೂಡ ಕೆಲವೊಮ್ಮೆ ಅವಶ್ಯವಿರುತ್ತೆ ಈ ವಿದ್ಯಾರ್ಥಿಗಳಿಗೆ. TRT (Testosterone Replacement Therapy) ಎಂಬ ಚಿಕಿತ್ಸೆಯಿಂದ ಈ ಹುಡುಗರೂ ಸಹ ಎಲ್ಲರಂತೆ, ಎಲ್ಲರಷ್ಟೇ ಟೆಸ್ಟೋಸ್ಟೀರೋನ್ ಉತ್ಪತ್ತಿಸಿ ಯಶಸ್ವಿ ಲೈಂಗಿಕ ಜೀವನವನ್ನು ನಡೆಸಬಲ್ಲರು.

ಇನ್ನೂ ಹಣವಂತರು, ಛಲವಾದಿಗಳು ಆಪರೇಶನ್ ಮಾಡಿಸಿಕೊಂಡು ತಮ್ಮ ಜನನೇಂದ್ರಿಯವನ್ನು ತೆಗೆಸಿಕೊಂಡುಬಿಡುತ್ತಾರೆ. Officially ಸ್ತ್ರೀಯರಾಗುತ್ತಾರೆ. ಇಂಥವರನ್ನು Transsexual Females ಎಂದು ಕರೆಯುತ್ತಾರೆ. ಅಮೇರಿಕದ ಪ್ರಖ್ಯಾತ ಗಾಯಕಿ ಈಡೆನ್ ಅಟ್‍ವುಡ್, ರೂಪದರ್ಶಿ-ನಟಿ ಕ್ಯಾರೋಲಿನ್ ಕೋಸೀ, ಮಿಸ್ ಟೀನ್ ಪ್ರಶಸ್ತಿ ವಿಜೇತ ಜೇನಲ್ ಬಿಷಾಪ್, ಒಲಂಪಿಕ್ಸ್-ನಲ್ಲಿ ವಾಲಿಬಾಲ್ ಆಡಿದ ಬ್ರೆಜಿಲ್‍ನ ಎರಿಕಾ ಕೊಯಿಂಬ್ರಾ, ಕೊರಿಯಾದ ಗಾಯಕಿ ಹರಿಸು - ಇವರೆಲ್ಲರೂ ಹುಟ್ಟಿದಾಗ "ಪುರುಷ"ರೇ.. ಕ್ಲೈನ್‍ಫೆಲ್ಟರ್ ಸಿಂಡ್ರೋಮಿನವರೇ.ಇನ್ನು ಮುಂದೆ ಪ್ರಕೃತಿಯ ಶಾಪವನ್ನು ಪಡೆದ ಈ ಸ್ಪೆಷಲ್ ಪುರುಷರನ್ನು ನೋಡಿದಾಗ ಅಸಹ್ಯವಾಗಲೀ, ನಗುವಾಗಲೀ, ಅಸ್ಪೃಶ್ಯ ಭಾವನೆಯಾಗಲೀ, ಭೀತಿಯಾಗಲೀ ಪಡುವ ಅವಶ್ಯವಿಲ್ಲವೆಂದು ನಂಬಿರುತ್ತೇನೆ. ಇದು ನಿಜವಾದರೆ ಈ ಪಾಠದ ಸಾರ್ಥಕ್ಯವು ದೊರೆತಂತೆ.

-ಅ
09.01.2009
4.30AM

11 comments:

Santhosh Kumar N J said...

ತುಂಬ ಚೆನ್ನಾಗಿ ಬರೆದಿದ್ದೀರ.. ಆದರೆ ಕೆಲವು ಕಡೆ ವಿಷಯ ವಿವರಿಸುವಲ್ಲಿ ಎಡವಿದಿರಾ ಎಂದು ನನ್ನ ಭಾವನೆ... ಒಟ್ಟಾರೆ ಒಳ್ಳೆ ಬರಹ...

ವಿಕಾಸ್ ಹೆಗಡೆ said...

times of india ದವರು ಬರೆದಂತಿದೆ!

sunaath said...

ಆಪ್ತಶೈಲಿಯ ತಿಳಿಯಾದ ನಿರೂಪಣೆ, ಮನಮೋಹಕ ಚಿತ್ರಗಳು.
ನಿಮಗೆ ಅಭಿನಂದನೆಗಳು.

Vijaya said...

see line-u motugode ge correct aagide : ನನ್ನ XY ಜಾಗದಲ್ಲಿ xY ಇರಬೇಕು, ಅವಳ XX ಜಾಗದಲ್ಲಿ xX ಅಥವಾ Xx ಅಥವಾ xx ಇರಬೇಕು.!!
olle information ... actually nange kshitijadedege no, motugode no marthe hogittu oduvaaga.

Parisarapremi said...

[ವಿಜಯಾ] Actually ನಿನ್ನ ಕಮೆಂಟಿನ ಮೊದಲನೆ ಸಾಲು ದೇವ್ರಾಣೆ ಅರ್ಥ ಆಗ್ಲಿಲ್ಲ.

[ಸುನಾಥ್] ಚಿತ್ರಗಳಲ್ಲಿರುವವರೆಲ್ಲಾ ಹುಟ್ಟಿದಾಗ "ಗಂಡು" ಈಗ ಮನಮೋಹಕ "ಹೆಣ್ಣು"ಗಳು. ಹೇಗೆ ನೋಡಿ ಪ್ರಪಂಚ!!

[ವಿಕಾಸ್ ಹೆಗಡೆ] ಅದರಲ್ಲೂ ವಿಶೇಷವಾಗಿ Bangalore Times ಥರಾ ಅಂತಾನೂ ಹೇಳ್ಬಿಡೀಪ್ಪಾ... ;-) ;-) ;-)

[ಸಂತೋಷ್] ಧನ್ಯವಾದಗಳು. ಎಡವಿರುವ ಕಡೆ ಕೈ ಹಿಡಿದು ಎಚ್ಚೆತ್ತುವಂತೆ ಮಾಡಿರೆಂದು ಕೋರುತ್ತೇನೆ. ದಯವಿಟ್ಟು ತಿದ್ದಿ.

ಚಿತ್ರಾ said...

ಒಳ್ಳೆಯ ಮಾಹಿತಿ ಪೂರ್ಣ ಬರೆಹ.

ನಾನು ಥಾಯ್ಲ್ಯಾಂಡ್ ನಲ್ಲಿ ’ ಟಿಫಾನೀ’ ಶೋ ನೋಡುವಾಗ ಅವರ ನಯ- ನಾಜೂಕಾದ ನೃತ್ಯ ನೋಡಿ ತುಂಬಾ ಆಶ್ಚರ್ಯ ಪಟ್ಟಿದ್ದೆ !ನನ್ನ ಮಗಳಂತೂ ಅವರಲ್ಲಿ ಹೆಚ್ಚಿನವರು ಹುಟ್ಟಿನಿಂದ ಗಂಡಸರು ಹಾಗೂ ಉಳಿದವರೂ ಸಹ ಸಂಪೂರ್ಣ ಹೆಂಗಸರಲ್ಲ ಎನ್ನುವುದನ್ನು ನಂಬಲೇ ಸಿದ್ಧವಿರಲಿಲ್ಲ !
ಪ್ರಕೃತಿಯ ವೈಚಿತ್ರ್ಯವನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ ಅಲ್ಲ?

Prashant C said...

ಮೊಟುಗೊಡೆಗೆ ಅಂಟಿಸೊಕೆ ಒಳ್ಳೆಯ ಸುದ್ದಿ ಒಂದು ಸಾರಿ ಒದಿ ನೊಡಿ

http://www.in.com/news/readnews-Lifestyle-american-woman-22-auctions-off-virginity-for-25million-but-7561941-57f51c652d3c9d53ab025e892a47b028caf5348b-rhp.html

hEmAsHrEe said...

very good article !!!

Ramesh BV (ಉನ್ಮುಖಿ) said...

ಇವ್ರ ಜೀವನಕ್ಕಿರೋ ಮೋಟಿವ್ ಫ್ಹೋರ್ಸ್ ಯಾವುದು? ತಿಳಿತಾ ಇಲ್ವೇ..

Parisarapremi said...

[ಚಿತ್ರಾ] ಇದು ವೈಚಿತ್ರ್ಯ ಅಂತ ಅನ್ನಿಸುತ್ತಾ? ನಂಗೇನೋ ಇಲ್ಲ. ವೈಚಿತ್ರ್ಯವು ನಮ್ಮ ಭಾವನೆಯಲ್ಲಿದೆಯಲ್ಲವೆ? ಎಲ್ಲವೂ ಸಾಮಾನ್ಯ ಎಂದುಕೊಂಡರೆ ಯಾವ ಭೇದವೂ ಹುಟ್ಟುವುದಿಲ್ಲ.

[ಹೇಮಾಶ್ರೀ] ಧನ್ಯವಾದಗಳು.

[ರಮೇಶ್] ಅಲ್ಲಾ, ಮೋಟಿವ್ ಫೋರ್ಸ್ ಅನ್ನೋದು ಬದುಕುವ ಹಂಬಲವಷ್ಟೆ. ಅದಿದ್ದರೆ ಸಾಕು, ಬದುಕಬಹುದು. "ಕುರ್ವನ್ನೇವೇಹ ಕರ್ಮಾಣಿ, ಜಿಜೀವಿಷೇಚ್ಛತಗ್‍ಂ ಸಮಾಃ" ಅನ್ನೋ ಥರ.

Ramesh BV (ಉನ್ಮುಖಿ) said...

I fear, am I not misunderstood..

I meant, don't they have feels to carry their legacy through their offspring..?