Sunday, March 8, 2009

ನನ್ನ ಕಣ್ಣು ಮೇಲಿದೆ

ಅಮೆರಿಕಾದ ಮಹಿಳಾ ಸಂಘಟನೆಯೊಂದು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ, ಪುರುಷರ ವಿರುದ್ಧ (ಪುರುಷರ ಕಣ್ಣೋಟದ ವಿರುದ್ಧ) ನಡೆಸಿದ ಹೋರಾಟದಲ್ಲಿ ಇಂಥದ್ದೊಂದು ಟಿ-ಶರ್ಟು ಬಿಡುಗಡೆ ಮಾಡಿದ್ದರು - ಬಹಳ ಹಿಂದೆಯೇ. ಬಹಳ ಖ್ಯಾತಿಯನ್ನೂ ಪಡೆದುಕೊಂಡಿತು ಈ ಅಂಗಿ.



ಇದೇ ತಲೆಬರಹವಿರುವ ಟೋಪಿಗಳೂ, ಪ್ಯಾಂಟುಗಳೂ, ಗಡಿಯಾರಗಳೂ, ಚೀಲಗಳೂ ಸಹ ಮಾರಾಟಕ್ಕಿವೆ. ಇದು ಆಂದೋಲನಕ್ಕೆ ಹೇಗೆ ಸಮಂಜಸವೋ ಗೊತ್ತಿಲ್ಲ.

-ಅ
08.03.2009
11.30PM

4 comments:

Shankar Prasad ಶಂಕರ ಪ್ರಸಾದ said...

ಟೀ ಶರ್ಟಿನ ಮೇಲೆ ಏನು ಬರ್ಕೊಂಡ್ರೆ ಏನಾಗುತ್ತೆ ಸಿವಾ?
ನೋಡೋರ ಕಣ್ಣನ್ನು ಬದಲಾಗಿಸಲಾಗುತ್ತದೆಯೇ ? ಬೆಂಗಳೂರಲ್ಲಿ ಜೀನ್ಸ್ ಹಾಕಿ ಅದರ ಮೇಲೆ ಈ ಬಿಳಿ ಟೀ ಷರ್ಟನ್ನು ತೊಟ್ಟಿ ಬಂದರೆ, ಆ ಹುಡುಗಿಯ ಕಣ್ಣು ನೋಡಲು ಆ ಶರ್ಟಿನ ಮೇಲೇ (???) ಏನು ಬರೆದಿದೆ ಅಂತಾ ಗೊತ್ತಾಗೋದಕ್ಕೆ ಎಲ್ಲಿ ನೋಡಬೇಕು ?
ಇಂಥದ್ದೆಲ್ಲಾ ಅಮೇರಿಕಾದಂಥ ದೇಶಕ್ಕ ಸರಿಯೇ ಹೊರತು, ನಮ್ಮಲ್ಲಲ್ಲಾ...ಏನಂತೀಯಾ?

ಕಟ್ಟೆ ಶಂಕ್ರ

sunaath said...

ಟೀಶರ್ಟ ಹಾಕಿಕೊಂಡೋಳ ಕಣ್ಣುಗಳು ಎಲ್ಲಿವೆ ಅಂತ ನೋಡಬೇಕಾದ್ರೆ, ಮೊದಲು ಆ ಬರಹವನ್ನು ಓದಬೇಕು, ಅಂದರೆ ಬರೆದ ಜಾಗ ನೋಡ್ಬೇಕು. ನೊಡಿದ್ರಾ ಈ ಹುಡುಗೀರ ಕಿಲಾಡಿತನ!

Shrinidhi Hande said...

MTV did a sting operation related to this recently-fix a secret camera near the chest of a lady and record where people are looking...

Ravi said...

ಕವಿಗಳ ಮಾತು ನೆನಪಿಗೆ ಬರುತ್ತಲಿಹುದು:-
-----
ಆಕಾಶ ಮೇಲೆ ಇಟ್ಟನು ನಮ್ಮ ಶಿವ ಪಾತಾಳ ಕೆಳಗೆ ಬಿಟ್ಟನು
ನೆಲ್ಲಿಕಾಯಿ ಮರದಲಿಟ್ಟನು ನಮ್ಮ ಶಿವ ಕುಂಬಳಕಾಯಿ ಬಳ್ಳಿಲಿಟ್ಟನು
ಕತ್ತಲ್ಲಲ್ಲಿ ನ್ಯಾಯ ವಿಟ್ಟನು ನಮ್ಮ ಶಿವ ಕಣ್ಣುಗಳ ಕಟ್ಟಿಬಿಟ್ಟನು
ನ್ಯಾಯ ನೀತಿಗಾಗಿ ತಲೆಯ ಚಚ್ಚಿ ಕೊಳ್ಳಿರೆಂದು ಹೇಳಿ
ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು