Wednesday, April 1, 2009

ಶೃಂಗಾರ ಮಂಗಳಂ

ಡಿ.ವಿ.ಗುಂಡಪ್ಪನವರ 'ಶೃಂಗಾರ ಮಂಗಳಂ'‍ನ ಆಯ್ದ ಸಾಲುಗಳು ನಿಮಗಾಗಿ.

ನಿಮ್ಮ ಬೇಸಗೆಯು ಶೃಂಗಾರಮಯವಾಗಿರಲೆಂದು ಮೋಟುಗೋಡೆ ತಂಡವು ಹಾರೈಸುತ್ತೆ.

ಭೋಗಂ ದೋಷಮೆ ಸುಕೃತೋ- |
ದ್ಯೋಗಕ್ಕದು ಸಾಹ್ಯಮಾಗದೇಂ, ಭೋಜನದೊಳ್ ||
ರೋಗಭಯಮೆನುತುಪೋಷ್ಯಮೆ |
ಜಾಗೃತನಶನದಿನೆ ಗಳಿಸಲಾಗದೆ ಬಲಮಂ? ||

ಘೃತದಿಂದೇಳದೆ ಬೀಳ್ಗುಮೆ |
ಹುತವಹನಜ್ವಾಲೆ, ಕಾಮನುಪಭೋಗಗಳಿಂ ||
ಜಿತನಪ್ಪನೆ, ತಾಂ ಪೆರ್ಚನೆ? |
ರತಿಪತಿವಹ್ನಿಗಳಿಗೆಂತು ಶಮನೋಪಾಯಂ? ||

ಹುತವಹನುಂ ರತಿಪತಿಯುಂ |
ಸತತ ಜಗನ್ಮೂಲ ಚೇತನಿಕರ್, ಅನಿವಾರ್ಯರ್ ||
ಅತಿಯೊಳ್ ಭಯಕರರಾದರ್ |
ಮಿತಿಯೊಳ್ ಸುಖಕಾರರ್, ಅಮಲಸಂಸ್ಕಾರಕರರ್ ||

ಪ್ರಣಯಮತೃಪ್ತಂ ಮನದೊಳ್ |
ವ್ರಣಮಪ್ಪುದು ಕೀವು ನೋವುಗಳನಾಗಿಸುತುಂ ||
ಇನಿತೊಲಿಯುತಮಿನಿತದುಮುತ- |
ಮಣಗಿಸಲಹುದದನು ಮಿಶ್ರಮಧುಕಟುನಯದಿಂ ||

ಕಾಮನನೀಶಂ ದಹಿಸಲ್ |
ಕ್ಷೇಮಮದಾರ್ಗಾಯ್ತು, ಸತ್ತನೇನಾ ಕಾಮಂ? ||
ಪ್ರೇಮದ ಪುನರಂಕುರಿತದೆ |
ಸೋಮನೆ ತಾನಾದನಲ್ತೆ ಗೃಹಿಗಳಿಗಾದ್ಯಂ ||

ಶೃಂಗಾರಮಖಿಲಸೃಷ್ಟಿಯ |
ಸಂಘಟಕಂ ಜೀವಿಯಂತರನಿಲೋಪಶಮಂ ||
ಸಂಗಾನುಭವಗಳಿಂ ನಿ-
ಸ್ಸಂಗಕೆ ಜೀವವನು ಪಕ್ವಬಡಿಸುವುಪಾಯಂ ||

2 comments:

sunaath said...

ಈ ಸಾಲುಗಳನ್ನು ಸರಳಗನ್ನಡದಲ್ಲಿ ಅನುವಾದಿಸಿ ಹೇಳಿದರೆ,
ನಮ್ಮಂಥ ಪಾಮರರಿಗೆ ಅನುಕೂಲವಾದೀತು!

Parisarapremi said...

[ಸುನಾಥ್] ನಿಮ್ಮ ವಿವರಣೆಗಳನ್ನು ಓದಲು ಸೊಗಸಾಗಿರುತ್ತೆ, ಕವನದ ವಿಮರ್ಶೆಗಳು. ಹಿಂದೆ ನೀವು ಬೇಂದ್ರೆಯವರ "ಇಳಿದು ಬಾ ತಾಯಿ.." ಬಗ್ಗೆ ಬರೆದಿದ್ದನ್ನು ನಾನು ಓದಿದ್ದೇನೆ. ಆ ವರೆಗೆ ಅದು ಕೊಂಚವೂ ಅರ್ಥವಾಗಿರಲಿಲ್ಲ. ಈಗ ಇದನ್ನೂ ನೀವೇ ವಿವರಿಸಿದರೆ ಇನ್ನೂ ಹೆಚ್ಚು ಸೊಗಸಾಗಿರುತ್ತೆ ಎಂದು ನನ್ನ ಅಭಿಪ್ರಾಯ. :-)