Thursday, June 25, 2009

ಅಡಿಗರ ’ಮೋಟುಗೋಡೆ’ ಕವನ

ಗೋಪಾಲ ಕೃಷ್ಣ ಅಡಿಗರ ವಿರುದ್ಧ ಡಿ.ವಿ.ಗುಂಡಪ್ಪನವರು ಜಗಳ ಮಾಡಲು ಒಂದು ಕಾರಣವಿತ್ತು. 1957ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾದ ಅಡಿಗರ ಒಂದು ಕವನವು ಎಲ್ಲೆ ಮೀರಿದ ಅಶ್ಲೀಲತೆಯಿಂದ ಕೂಡಿದೆಯೆಂದು ಡಿ.ವಿ.ಜಿ.ಯ ಅಭಿಪ್ರಾಯ. ಅಡಿಗರ ವಿರುದ್ಧ ಕೋರ್ಟಿನಲ್ಲಿ ಕೇಸು ಹಾಕುವವರೆಗೂ ಹೋಗಿದ್ದರಂತೆ ಗುಂಡಪ್ಪನವರು. ವಾಸ್ತವದಲ್ಲಿ ಡಿ.ವಿ.ಜಿ ಕೂಡ ಅನೇಕ ’ಶೃಂಗಾರ’ ಕವನಗಳನ್ನು ನಮಗೆ ಕೊಟ್ಟಿದ್ದಾರಾದರೂ, ವಯಕ್ತಿಕವಾಗಿ ಅವರೂ ಸಹ ನಮ್ಮ ’ಮೋಟುಗೋಡೆ’ಗಿಂತಲೂ ಒಂದು ಹೆಜ್ಜೆ ಮೀರಿದ ಚರ್ಚೆಗಳಲ್ಲಿ ತೊಡಗಿದ್ದಾರಾದರೂ ಪತ್ರಿಕೆಗಳಲ್ಲಿ ಪ್ರಕಟವಾಗುವ ಕವನಗಳಿಗೆ, ಅಂಕಣಗಳಿಗೆ ಒಂದು ಮಿತಿಯಿರುತ್ತೆಂದು ನಂಬಿದ್ದವರು. ಮತ್ತು ಆ ಮಿತಿಯನ್ನು ದಾಟಿದವರ ಬಗ್ಗೆ ಗೌರವವೂ ಇಟ್ಟುಕೊಳ್ಳುವುದಿಲ್ಲ ತಾವೆಂದು ಕೆಂಡಾಮಂಡಲವಾಗಿ ಗುಡುಗಿದ್ದವರು.

ಅಡಿಗರೆಂದರೆ ನಮಗೆ ನೆನಪಿಗೆ ಬರುವ ಕೇವಲ ’ಯಾವ ಮೋಹನ ಮುರಲಿ’ಯೋ ’ಅಮೃತವಾಹಿನಿ’ಯೋ, ’ಅಳುವ ಕಡಲೊಳು’ನೋ, ’ಮೌನ ತಬ್ಬಿತು ನೆಲವ ಜುಮ್ಮೆನೆ’ಯೋ ಅಲ್ಲದೆ, ಶಾಶ್ವತವಾಗಿ ಕುವೆಂಪುರವರ ವೈರುಧ್ಯದಲ್ಲಿದ್ದ ಅಡಿಗರಿಗೆ ಡಿ.ವಿ.ಜಿ.ಯವರ ವೈರುಧ್ಯವನ್ನೂ ಗಳಿಸಿಕೊಟ್ಟ ಒಂದು ’ಪ್ರಾರ್ಥನೆ’ಯೂ ಇದೆ!

ಕವನದ ಗಾತ್ರವು ದೊಡ್ಡದಾಗಿರುವುದರಿಂದ ಇಲ್ಲಿ ಪ್ರಕಟಿಸುತ್ತಿಲ್ಲ. ಅದರ PDF ಇಲ್ಲಿದೆ, ಕ್ಲಿಕ್ಕಿಸಿ ಕವನವನ್ನು ಓದಿಕೊಳ್ಳಿ.

(ಮೇಲಿನ ಘಟನೆಗೆ ಮೂಲವು ಪ್ರೊ.ಅ.ರಾ.ಮಿತ್ರ ಅವರ ಒಂದು ಉಪನ್ಯಾಸ)

1 comment:

sunaath said...

ಮೋಟುಗೋಡೆಯ ಮಿತ್ರರೆ,
ನನ್ನ ನೆಚ್ಚಿನ ಕವಿ ಅಡಿಗರಿಗೆ ‘ಮೋಟುಗೋಡೆ’ಯಲ್ಲಿ ಜಾಗ ಕೊಟ್ಟಿದ್ದಕ್ಕೆ ಧನ್ಯವಾದಗಳು.
(He is buried here with other celebrities ಅನ್ನೋ ಅರ್ಥದಲ್ಲಿ ನಾನು ಹೇಳ್ತಾ ಇಲ್ಲ!)