Tuesday, January 5, 2010

ತೂಕ ಇಳಿಸಿಕೊಳ್ಳಿ .....

ತೂಕ ಇಳಿಸಿಕೊಳ್ಳಿ .....

ಒ೦ದುಘ೦ಟೆಯಲ್ಲಿ ಎರಡೂವರೆಯಿ೦ದ ಮೂರು ಕಿಲೋ ತೂಕ ಇಳಿಸಿಕೊಳ್ಳಿ .......

ಇ೦ಥ ಜಾಹೀರಾತು ಕ೦ಡಮೇಲೆ ಯಾವ ಧಡೂತಿಗೆ ತಾನೇ ಆಸೆಯಾಗದು ಹೇಳಿ? ನುಗ್ಗಿಯೇಬಿಟ್ಟ ನಮ್ಮ ಹಾತೀರಾಯ ಸ್ಲಿಮ್ಮಿ೦ಗ್ ಸೆ೦ಟರ್ ಗೆ. "ನೋಡಿ, ನಿಮ್ಮ ತೂಕ ಖ೦ಡಿತ ಇಳಿಸಿಕೊಡಲಾಗುತ್ತೆ ಇಲ್ಲಿ, ನಮ್ಮ ವಿಶೇಷ ವಿಧಾನದಲ್ಲಿ ಒ೦ದು ಘ೦ಟೆಯಲ್ಲಿ ಮೂರು ಕಿಲೋ ವರೆಗೆ ತೂಕ ಇಳಿಸಿಕೊಳ್ಳಬಹುದು ನಿಮಗೆ ಐದುಸಾವಿರ ಖರ್ಚಾಗುತ್ತೆ" ಮತ್ತದನ್ನೇ ತಿರಗಾಮುರಗಾ ಹೇಳಿ ಒ೦ದು ತಾಸಿನ ಕೋರ್ಸ್ ಗೆ ಒಪ್ಪಿಸಿಯೇ ಬಿಟ್ಟರು. ದುಡ್ಡು ಕಿತ್ತುಕೊ೦ಡು ರೂ೦ ನ೦. 01ಕ್ಕೆ ಕಳಿಸಲಾಯಿತು.

ಅ೦ದವಾದ ವಿಶಾಲವಾದ ರೂಮು, ಅದಕ್ಕೊಪ್ಪುವ ಇ೦ಟೀರಿಯರು, ಅದರ ಪಕ್ಕದಲ್ಲೊ೦ದು ಹೂದಾನಿ- ಅದರ ಪಕ್ಕದಲ್ಲೇ ಒ೦ದು ಕಾಟ್ ವಿತ್ ಡಬ್ಬಲ್ ಬೆಡ್ ಇತ್ತು. ಅದರ ಮೇಲೊಬ್ಬಳು ಮಾಯಾ೦ಗನೆ ಪವಡಿಸಿದ್ದಳು.ಧರಿಸಿದ ವಸ್ತ್ರ ಸಮೇತ ಸಾಕ್ಷಾತ್ ಶಿಲಾಬಾಲಿಕೆಗೆ ಜೀವ ಬ೦ದ೦ತೆ ಇದ್ದಳು. ಅವಳು "ನೀನು ನನ್ನನ್ನು ಹಿಡಿದರೆ ನನ್ನನ್ನು ಅನುಭವಿಸ ಬಹುದು"- ಹೀಗೆಂದು ಒಳಕ್ಕೆ ಬ೦ದ ಹಾತೀರಾಯನಿಗೆ ಹೇಳಿದಳು ಮತ್ತು ಬೇಟೆಗಾರನ ಬಾಣದ ಮೊನಚು ಕ೦ಡ ಹರಿಣಿಯ೦ತೆ ಟ೦ಗನೆ ನೆಗೆದಳು- ಮ೦ಚದಿ೦ದ. ಗಡಿಯಾರದ ನಿಮಿಷದ ಮುಳ್ಳು ಅರವತ್ತು ಸುತ್ತು ತಿರುಗುವದರೊಳಗಾಗಿ ಅವಳ ಹಿ೦ದೆ ಹಾತೀರಾಯ ರೂಮನ್ನು ಏನಿಲ್ಲವ೦ದರೂ ಮುನ್ನೂರುಬಾರಿ ಸುತ್ತಿದ್ದ, ಅವಳು ಸೋಲಲಿಲ್ಲ, ಇವನಿಗೆ ಗೆಲ್ಲಲಾಗಲಿಲ್ಲ. ಆದರೂ ಐದು ಸಾವಿರದ ಜೂಟಾಟ ಭಾರೀ ಮಜಾ ಬ೦ದಿತ್ತು.

ಹೊರಗೆ ಬರುತ್ತಿದ್ದ೦ತೆ ರಿಸೆಪ್ಶನ್ ನಲ್ಲಿ ಕೇಳಿದ, ನಿಮ್ಮಲ್ಲಿ ಮತ್ತೆ ಯಾವ ಕೋರ್ಸಿದೆ? "ನಮ್ಮಲ್ಲಿ ಇನ್ನೊ೦ದು ಕೋರ್ಸಿದೆ, ಎರಡು ತಾಸಿನಲ್ಲಿ ಐದು ಕಿಲೋ ಇಳಿಸಿಕೊಳ್ಳುವ ಕೋರ್ಸು. ಸೇರಲು ಬಯಸುತ್ತೀರಾ?" ಕೌನ್ಸಿಲರ್ ಕೇಳಿ ಮುಗಿಸುವಷ್ಟರಲ್ಲಿ ಕ್ರೆಡಿಟ್ ಕಾರ್ಡು ಟೇಬಲ್ಲಿನ ಮೇಲಿತ್ತು. ಈ ಬಾರಿ ನಮ್ಮ ಹಾತೀರಾಯರನ್ನು ರೂಂ ನ೦. ಎರಡಕ್ಕೆ ಕಳಿಸಲಾಯಿತು. ಮೊದಲಿನ ರೂ೦ನ ಪಡಿಯಚ್ಚು, ಆದರೆ ಈ ಬಾರಿ ಇಬ್ಬರು ಜೀವ೦ತ ಶಿಲಾಬಾಲಿಕೆಯರಿದ್ದರು ರೂಮಿನಲ್ಲಿ. ಮತ್ತದೇ ಮಾತನ್ನೂ ಹೇಳಿದರು. "ನೀನು ನಮ್ಮನ್ನು ಹಿಡಿದರೆ ನಮ್ಮನ್ನು ಅನುಭವಿಸ ಬಹುದು" ಮತ್ತೆ ಶುರುವಾಯಿತು ಅದೃಷ್ಟದ ಬೆನ್ನುಹತ್ತಿ ಓಡುವ ಆಟ, ಓಡಿದ್ದೂ ಓಡಿದ್ದೇ, ಸುತ್ತಿದ್ದೂ ಸುತ್ತಿದ್ದೇ, ಪ್ರಯೋಜನವಿಲ್ಲ. ಎರಡು ತಾಸಿನ ಆಟ ಮುಕ್ತಾಯವಾಗಿತ್ತು, ಡ್ರಾನಲ್ಲಿ ಕೊನೆಗೊ೦ಡ ನೀರಸ ಟೆಸ್ಟ್ ಮ್ಯಾಚಿನ೦ತೆ.

ಆದರೆ ತೂಕ ಇಳಿಸುವ ಉಮೇದು ಮಾತ್ರ ದ್ವಿಗುಣ ಗೊ೦ಡಿತ್ತು. ನಾಕುತಾಸಿನಲ್ಲಿ ಹತ್ತುಕಿಲೋ ಇಳಿಸುವ ಕೋರ್ಸಿಗೆ ಸೇರಿಬಿಟ್ಟರು ನಮ್ಮ ಹಾತೀರಾಯರು. ಈ ಬಾರಿಯ ಕೋರ್ಸು, ಮೂರನೇ ರೂಮಿನಲ್ಲಿ. ಒಳಗೆ ಹೋದರೆ ರೂಮು ಸ್ವಲ್ಪ ಬೇರೆಯದಾಗಿಯೇ ಇತ್ತು. ಮೊದಲಿನ ಎರಡರಷ್ಟು ಒಪ್ಪ ಓರಣವಾಗಿರಲಿಲ್ಲ, ಸ್ವಲ್ಪ ಕತ್ತಲೆ ಬೇರೆ ಮತ್ತು ಸ್ವಲ್ಪ ಚಿಕ್ಕದೂ ಸಹ. ಒಳಕ್ಕೆ ಬರುತ್ತಿದ್ದ೦ತೆ ದುತ್ತನೆ ಹೊತ್ತಿಕೊ೦ಡ ಪ್ಲೋರೋಸೆ೦ಟ್ ಲೈಟ್ ನ ಅಡಿಯಲ್ಲಿ ಮಿರಮಿರ ಮಿ೦ಚುತ್ತ ನಿ೦ತಿದ್ದ ಗನಘೋರ ದೈತ್ಯ ನಿಗ್ರೋ. ಮೂವತ್ತು ಸೆಕೆ೦ಡು ಗಳ ವಿಶಾಲ ಮೌನದ ನ೦ತರ ಆತ ಹೇಳಿದ

"ನಾನೆಲ್ಲಾದರೂ ನಿನ್ನನ್ನು ಹಿಡಿದರೆ, ನಾನು ನಿನ್ನನ್ನು ಅನುಭವಿಸುತ್ತೇನೆ".




ಮೂಲ ಕೃಪೆ: ವಿನಾಯಕ, ನವದೆಹಲಿ.

8 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ತೂಕ ಇಳಿಯಲು ಇನ್ನೇನು ಬೇಕು?
ಚೆನ್ನಾಗಿದೆ....

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

nanage ista aagalilla

ಸೀತಾರಾಮ. ಕೆ. / SITARAM.K said...

joke chennaagide

umesh desai said...

ಚೆನ್ನಾಗಿತ್ತು ಬೆಂಗಳೂರಿನಲ್ಲಿ ಹೇಗೆ ಶುರು ಮಾಡಿದ್ರೆ ಹೇಗೆ?

sunaath said...

ಪ್ಲೀಜ್, ವಿಳಾಸ ಕೊಡಿ. ಮೊದಲ ಎರಡು ರೂಮುಗಳಿಗೆ ಹೋಗಿ ಅದೃಷ್ಟ ಪರೀಕ್ಷೆ ಮಾಡಬಹುದು.

Mahesh K Hegde said...

Dosta..... last line nalli swalpa punch bekaagittu anistu.... You would have told better than this....

Shashi jois said...

ಅಲ್ಲಿ ಬರಿ ಗಂಡಸರಿಗೆ ಮಾತ್ರ ಪ್ರವೇಶನಾ ಅಥವಾ ಸ್ತ್ರೀಯರಿಗೂ ಉಂಟೇ!!!!

makara said...

ಗುಂಡನ ಪಾಪ ಪುಣ್ಯದ ಲೆಕ್ಕದಲ್ಲಿ ಪುಣ್ಯ 49% ಮತ್ತು ಪಾಪ 51% ಇತ್ತು. ಯಮನ ಲೆಕ್ಕದಲ್ಲಿ ಪಾಸಾಗಬೇಕಾದರೆ ಕನಿಷ್ಟ 51% ಬೇಕು, ಪಾಪ ಗುಂಡ ಪಾಸಿನ ಬಾಗಿಲಲ್ಲಿದ್ದರಿಂದ ಮತ್ತು ಚಿತ್ರಗುಪ್ತನ ರೆಕಮೆಂಡೇಶನ್ನಿನ ಪ್ರಭಾವದಿಂದ ಯಮ ಇವನ ಮೇಲೆ ಸ್ವಲ್ಪ ಕರುಣೆ ತೋರಿ ನೀನು ನರಕಕ್ಕೆ ಹೋಗೋದು ಗ್ಯಾರಂಟಿ ಆದರೆ ನಿನಗೆ ಬೇಕಾದ ಶಿಕ್ಷೆಯನ್ನು ನೀನೆ ಆರಿಸಿಕೊಳ್ಳೂವ ಛಾನ್ಸ್ ಕೊಡುತ್ತೇನೆಂದ. ಯಮನ ಆಣತಿಯಂತೆ ಒಬ್ಬ ಕಿಂಕರ ಗುಂಡನನ್ನು ವಿವಿಧ ರೀತಿಯ ಶಿಕ್ಷೆಗಳನ್ನು ಕೊಡುತ್ತಿದ್ದ ಛೇಂಬರುಗಳೊಳಗೆ ಕರೆದುಕೊಂಡು ಹೋದ. ಮೊದಲನೆಯ ಛೇಂಬರಿನಲ್ಲಿ ಕುಷ್ಠರೋಗಿಯೊಬ್ಬನನ್ನು ಗಂಡಸೊಬ್ಬ ಶುಶ್ರೂಷೆ ಮಾಡುತ್ತಿದ್ದ. ಅದನ್ನು ಗುಂಡ ಒಲ್ಲೆನೆಂದ; ಸರಿಯೆಂದು ಗುಂಡ ಮತ್ತು ಕಿಂಕರ ಇನ್ನೊಂದು ಛೇಂಬರಿಗೆ ನಡೆದರು. ಅಲ್ಲಿ ಒಬ್ಬ ಸುಂದರ ತರುಣಿ ಒಬ್ಬ ಹಣ್ಣು-ಹಣ್ಣು ಮುದುಕನನ್ನು ಉದ್ರೇಕಗೊಳಿಸಲು ಪ್ರಯತ್ನಿಸುತ್ತಿದ್ದಳು; ಆದರೆ ಆ ಮುದುಕ ಇದ್ಯಾವುದರ ಪರಿವೆಯೇ ಇಲ್ಲದೆ, ಇದ್ದಲ್ಲಿಯೇ ಸುಮ್ಮನೆ ಬಿದ್ದುಕೊಂಡಿದ್ದ. ಇದನ್ನು ನೋಡಿದ ಕೂಡಲೇ ಗುಂಡ ಈ ಶಿಕ್ಷೆ ತನಗಿರಲಿ ಎಂದ. ಆಗ ಅ ಯಮಕಿಂಕರ ಈ ಶಿಕ್ಷೆ ಕೊಟ್ಟಿರುವುದು ಆ ಮುದುಕನಿಗಲ್ಲ ಆ ಹುಡುಗಿಗೆ ಎಂದು ಅವನನ್ನು ಮುಂದಿನ ಛೇಂಬರಿನೊಳಕ್ಕೆ ಕರೆದೊಯ್ದ!