Tuesday, February 16, 2010

ಕಪ್ಪೆ ಕಥೆ

ಅಮೆರಿಕದ ಯಾವುದೋ ನಗರ. ಸಂಜೆ ಹೊತ್ತು. ಬಿಳಿಗೂದಲ ಸುಂದರಿಯೊಬ್ಬಳು ಸುಮ್ಮನೇ ನಡೆದು ಹೋಗುತ್ತಿರುವಾಗ ಆಕರ್ಷಕ ಜಾಹಿರಾತೊಂದು ಕಣ್ಣಿಗೆ ಬಿತ್ತು.

"ಸೆಕ್ಸ್ ಕಪ್ಪೆಗಳು"- ಕೇವಲ ಇಪ್ಪತ್ತು ಡಾಲರ್
ಮನೀ ಬ್ಯಾಕ್ ಗ್ಯಾರೆಂಟಿ ಇದೆ.
ಸಲಹೆಗಳನ್ನು ಓದಿಕೊಳ್ಳಿ

ಯಾಕೋ ಹೊಸ ತರಹದ ಸಾಹಸಕ್ಕೆ ಮನ ಮಾಡಿದ ಹುಡುಗಿ, ಇಪ್ಪತ್ತು ಡಾಲರ್ ಗಳನ್ನು ಕೊಟ್ಟು, ಮನೆಗೆ ಬಂದಳು. ಬಂದವಳೇ, ಕಪ್ಪೆ ಇರೋ ಬಾಕ್ಸಿನ ಮೇಲಿದ್ದ ವಿವರಣೆಗಳನ್ನು ಓದಿಕೊಂಡಳು.

೧. ಚೆನ್ನಾಗಿ ಸ್ನಾನ ಮಾಡಿ
೨.ಒಳ್ಳೇ ಘಮ ಘಮಿಸೋ ಸುಗಂಧ ಹಾಕಿಕೊಳ್ಳಿ
೩. ಒಳ್ಳೇ ಆಕರ್ಷಕ ಬಟ್ಟೆ ತೊಟ್ಟುಕೊಳ್ಳಿ.
೪. ಕಪ್ಪೆ ಜೊತೆ ಮಂಚಕ್ಕೆ ತೆರಳಿ.

ಉದ್ವೇಗದಿಂದಲೇ ಅಲ್ಲಿದ್ದಂತೆಯೇ ಮಾಡಿದ ಸುಂದರಿ, ಕಪ್ಪೆಯೊಡನೆ ಮಂಚಕ್ಕೆ ತೆರಳಿದಳು. ನಿಮಿಷ ಕಳೆದರೂ ಏನೂ ಆಗಲಿಲ್ಲ. ಐದು ನಿಮಿಷ ಕಳೆದರೂ ಏನೂ ಆಗಲಿಲ್ಲ. ಹತ್ತಾದರೂ.ತಲೆ ಕೆಟ್ಟ ಹುಡುಗಿ, ಮತ್ತೊಮ್ಮೆ ಕಪ್ಪೆ ತಂದ ಬಾಕ್ಸು ನೋಡಿದಳು. ಅಡಿ ಭಾಗದಲ್ಲೊಂದು ಒಕ್ಕಣೆ ಇತ್ತು.

ಏನಾದರೂ ಸಮಸ್ಯೆಗಳಿದ್ದರೆ ಅಥವಾ ಪ್ರಶ್ನೆಗಳಿದ್ದರೆ ದಯವಿಟ್ಟು ನೀವು ಕಪ್ಪೆ ಕೊಂಡ ಶಾಪ್ ಗೆ ಫೋನ್ ಮಾಡಿ, ನಂ...

ಪಟಪಟನೆ ನಂಬರೊತ್ತಿದ ಆಕೆ ಅತ್ತಕಡೆಯಿಂದ ಧ್ವನಿ ಕೇಳಿದೊಡನೇ ತನ್ನ ಸಮಸ್ಯೆಯನ್ನ ಬಡಬಡ ಅಂತ ಹೇಳಿದಳು. ಆ ಕಡೆಯ ವ್ಯಕ್ತಿ ಮೆತ್ತಗೆ - ಹೌದಾ, ಇಲ್ಲಿ ಇನ್ನೊಂದು ನಿಮ್ಮದೇ ತರದ ಸಮಸ್ಯೆ ಅಟೆಂಡ್ ಮಾಡ್ತಾ ಇದೀನಿ ಮೇಡಂ, ಅಡ್ರೆಸ್ ಹೇಳಿ ಅಂದವನೇ, ಕಾಲು ಗಂಟೆಲಿ ಬರುವುದಾಗಿ ತಿಳಿಸಿದ.

ಸರಿಯಾಗಿ ೧೫ ನಿಮಿಷಗಳ ನಂತರ ಮನೆಯ ಬೆಲ್ ರಿಂಗಾಯಿತು. ಸಮಸ್ಯೆಗೆ ಅರ್ಧ ಪರಿಹಾರ ಸಿಕ್ಕ ಖುಷಿಯಲ್ಲಿ ಬೆಡಗಿ ಬಾಗಿಲು ತೆರೆದಳು. ಮತ್ತೊಮ್ಮೆ ಕೂತು ಅಂಗಡಿಯಾತ ತಾಳ್ಮೆಯಿಂದ ಇವಳ ಕಥೆಯೆಲ್ಲ ಕೇಳಿದ. ಬನ್ನಿ ಮೇಡಮ್, ಬೆಡ್ ರೂಮ್ ಗೆ ಹೋಗೋಣ ಅಂದವನೇ, ಕಪ್ಪೆ ಕೈಯಲ್ಲಿ ಹಿಡಿದುಕೊಂಡ.

ಆಕೆಯನ್ನ ಮಂಚಕ್ಕೆ ಹೋಗಲು ಹೇಳಿ, ಅತ್ಯಂತ ಕಾಳಜಿಯ ಧ್ವನಿಯಲ್ಲಿ ಕಪ್ಪೆಯನ್ನು ನೋಡುತ್ತ ಅಂದ-

"ನೋಡು ಮರೀ, ಇದೊಂದೇ ಬಾರಿ -ಕೊನೇ ಸಲ ನಾನು ನಿನಗೆ ಏನು ಮಾಡಬೇಕು ಅಂತ ಹೇಳಿ ಕೊಡ್ತಿರೋದು. ಸರಿಯಾಗಿ ನೋಡ್ಕೋ..ಪ್ಲೀಸ್, ಮರಿಬೇಡ"

14 comments:

Subrahmanya said...

kappege thorisikodovaregu adallirutta ?? ....hahahahaha..:)

ವಿ.ರಾ.ಹೆ. said...

:-) :-) :-)

V.R.BHAT said...

:))

ಜಿ ಎನ್ ಮೋಹನ್ said...

ತರಲೆಗಳಾ...!!

sunaath said...

ಹಹ್ಹಹ್ಹಾ!!

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಅಂಗಡಿಯಾತನಿಗೆ
ಸಹಾಯಕರು ಬೇಕಾಗಿದ್ದಾರಂತೆ!!!
ಈಗ ಅಂಗಡಿಯೆದುರು ತರುಣರ ಸಾಲು!!

umesh desai said...

ಮೋಟುಗೋಡೆ ಯಲ್ಲಿ ಪಂಚು ಇದ್ದೇ ಇರುತ್ತೆ ಅದೆಂಥಾ ಕಲ್ಪನಾರಿ ವಾರೆ ವಾಃ...!

PARAANJAPE K.N. said...

ಚೆನ್ನಾಗಿದೆ

Unknown said...

ha ha ha

ಯಜ್ಞೇಶ್ (yajnesh) said...

hahaha

Unknown said...

ಸೂಪರ್

Unknown said...

ನಾನೂ ಕ್ಯೂ ನಿಂತುಕೊಳ್ಳಲಾ ಅಂಗಡಿ ಮುಂದೆ?

ಶ್ರೀನಿಧಿ.ಡಿ.ಎಸ್ said...

ಓದಿ ಕಮೆಂಟಿಸಿದ ಎಲ್ಲರಿಗೂ ಥ್ಯಾಂಕ್ಸು,
:)

Enigma said...

ha ha