Friday, October 19, 2012

ಗುಬ್ಬಿ ಚಟ

"ಗುಬ್ಬಿ ಚಟ" ಅನ್ನೋ ಈ ನಾಣ್ಣುಡಿಯನ್ನ ತಾವು ಕೇಳಿರಲೇಬೇಕು. ಅದ್ರ ಅರ್ಥನೂ ಗೊತ್ತಿರಲೇ ಬೇಕು. ಆದ್ರೆ  ಗುಬ್ಬಿ ಚಟ ಅನ್ನೋ ಗಾದೆ ಅಥವಾ ಮಾತು ಹ್ಯಾಗೆ ಬಂತು ಗೊತ್ತ? ಇಲ್ಲಿ ಕೇಳಿ ಅದರ ಕತೆ.

ಒಂದಲ್ಲ ಒಂದು ದೊಡ್ಡ ಕಾಡಲ್ಲಿ ಒಂದು ದೊಡ್ಡ ಆನೆ ಇತ್ತಂತೆ. ಅದಕ್ಕೆ ಒಂದು  ದಿನ ಯಾಕೊ ಬೆನ್ನಲ್ಲಿ ತುರಿಕೆ ಬಂತು. ಅದು ಅಂತಿಂತಾ ಜಾಗ ಅಲ್ಲ, ಅದೆಲ್ಲೋ ಕೆರಕೊಳೋದು ಕಷ್ಟವಾದ ಜಾಗ. ತುರಿಕೆಯಿಂದ ಅದು ಅಸಹನೆಗೆ  ಒಳಗಾಯಿತು, ಘೀಳಿಡುತ್ತಾ ಅತ್ತ ಇತ್ತ ಸುತ್ತ ಮುತ್ತ ತಿರುಗಾಡ ತೊಡಗಿತು. ಇದನ್ನೆಲ್ಲಾ ಒಂದು ಪುಟ್ಟ ಗುಬ್ಬಿ ಅಲ್ಲೇ ಪಕ್ಕದ ಮರದಮೇಲೆ  ಕೂತು ನೋಡುತ್ತಿತ್ತು. ಅದಕ್ಕೆ ಆನೆಯ ಅಂತರಾಳ ಅರ್ಥವಾಗಲಿಲ್ಲ, ತನಗೆ ತಿಳಿದಂಗೆ ಅದು ಯೋಚಿಸತೊಡಗಿತು.

ಆನೆ ಬೆದೆಗೆ ಬಂದಿದೆ ಅದರ ಸಾಥಿ ಹಾಥಿಗಾಗಿ ಘಿಳಿಡುತ್ತಿದೆ ಅಂದುಕೊಂಡಿತು. ಆನೆಯ  ತುರಿಕೆಯ ಅಸಹನೆ ಹೆಚ್ಚಾಗುತ್ತ ಸಾಗಿತು. ಗುಬ್ಬಿ ಅತ್ತಿತ್ತ ಸುತ್ತಮುತ್ತೆಲ್ಲ ಹಾರಾಡಿ  ಗಂಡಾನೆ ಇದೆಯೋ ನೋಡಿತು, ಯಾವುದೂ ಕಂಡುಬರಲಿಲ್ಲ. ಆನೆ ದಾರಿಕಾಣದೆ ಸಿಕ್ಕಸಿಕ್ಕಲ್ಲೆಲ್ಲ ಓಡತೊಡಗಿತು. ಅತ್ತಿತ್ತ ಓಡಿದ ಆನೆಗೊಂದು ತೆಂಗಿನ ಮರ ಕಂಡಿತು. ತನ್ನ ತುರಿಕೆಯ ಬೆನ್ನನ್ನು ಹಾಕಿ ಅದಕ್ಕೆ ತಿಕ್ಕಿಕೊಳ್ಳ ತೊಡಗಿತು. ಇತ್ತ ಈ ಗುಬ್ಬಿಗೆ, ಆನೆಗೆ ಏನಾದರು ಸಹಾಯ ಮಾಡೇ ತೀರಬೇಕೆಂಬ ಬಯಕೆ ಮತ್ತಷ್ಟು ಜೋರಾಯಿತು. ಆನೆಗೆ ಸಂಗಾತಿ ಹಾತಿ ಸಿಗದಿದ್ದರೆ ಏನಂತೆ, ತನ್ನ ಕೈಲಾದಷ್ಟು (?) ಸಹಾಯ ಮಾಡುವ ಉದ್ದೇಶದಿಂದ ಆನೆಯ ಹಿಂದಿಂದ ತನ್ನೆಲ್ಲ ಶಕ್ತಿ ಹಾಕಿ ಬಜಾಯಿಸ ತೊಡಗಿತು. ಇದೇ ಸಮಯಕ್ಕೆ ಸರಿಯಾಗಿ ಆನೆ ಬೆನ್ನು ಹಾಕಿ ಉಜ್ಜಿದ ರಭಸಕ್ಕೆ  ಒಂದು ಒಣ ತೆಂಗಿನ ಕಾಯಿ ಆನೆಯ ತಲೆಯಮೇಲೆ ಬಿತ್ತು. ತೆಂಗಿನ ಕಾಯಿ ಬಿದ್ದ ಏಟಿಗೆ ಆನೆ ಒಮ್ಮೆ ಸೊಂಡಿಲೆತ್ತಿ ಜೋರಾಗಿ ಘೀಳಿಟ್ಟಿತು. ಗುಬ್ಬಿ ಅದನ್ನ ಕೇಳಿ, "ಆಹ್, ಆನೆ ಸಂತೃಪ್ತ ವಾಗಿದೆ, ತನ್ನ ಶ್ರಮ ಸಾರ್ಥಕ ಅಂದುಕೊಂಡು ಅಲ್ಲಿಂದ ಹಾರಿ ಹೋಯಿತು.

ಹೇಗಿದೆ ಗುಬ್ಬಿ ಚಟದ ಕಥೆ?           Thursday, September 20, 2012

ಕಾಂಡೋಮ್ ಜಾಹೀರಾತುಗಳು


Monday, August 20, 2012

ಹೀಗೊಂದು ಹೊಸ ಜೆಲ್!!

ವಿಷಯ ಹೀಗಿದೆ: ಅಲ್ಟ್ರಾಟೆಕ್ ಇಂಡಿಯಾ ಎಂಬ ಕಂಪನಿ, ಹೊಸದೊಂದು ಕ್ರಾಂತಿಕಾರಿ ಜೆಲ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೆಂಗಸರ ಯೋನಿಯನ್ನು ಮತ್ತೆ ಹದಿನೆಂಟರ ಪ್ರಾಯದಲ್ಲಿದ್ದಾಗ(!) ಮಾಡುವಂತಹ, "18 Again" ಎಂಬ ಈ ಜೆಲ್ ಭಾರತದ ಮಟ್ಟಿಗೆ ಹೊಸದು. ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಈ ಜೆಲ್ ನ ಬಿಡುಗಡೆ ಮಾಡಿದ್ದಾರೆ. ಯೂ ಟ್ಯೂಬ್ ನಲ್ಲಿರುವ ಈ ಜಾಹೀರಾತು ಸದ್ಯಕ್ಕೆ ಎಲ್ಲೆಡೆ ಹವಾ ಎಬ್ಬಿಸ್ತಾ ಇದೆ.ಅಲ್ಟ್ರಾಟೆಕ್ ಎಂ.ಡಿ ರಿಶಿ ಭಾಟಿಯಾ ಪ್ರಕಾರ, ಹೆಂಗಸರ "ಸಬಲೀಕರಣ" ಕ್ಕೆಈ ಜೆಲ್ ಸಹಕರಿಸಲಿದೆಯಂತೆ!!ವಿದೇಶಗಳಲ್ಲಿ ಇಂತಹ ಜೆಲ್ ಗಳು ಈಗಾಗಲೇ ಪ್ರಚಲಿತದಲ್ಲಿದೆ. ಆದರೆ ನಮ್ಮಲ್ಲಿ ಇಂತಹ ಜೆಲ್ ಗಳನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವದನ್ನು ಕಾದು ನೋಡಬೇಕಿದೆ.

Wednesday, July 18, 2012

Tuesday, June 19, 2012

ಕಾಮ ಕಲೆಗೆ 28,000 ವರ್ಷಗಳ ಇತಿಹಾಸ!

 ಆಸ್ಟ್ರೇಲಿಯಾದ ಗುಹೆಯೊಂದರಲ್ಲಿ ಕಂಡ ಪೇಟಿಂಗು, ಕಾಮಕಲೆಗೆ 28 ಸಾವಿರ ವರ್ಷಗಳ ಇತಿಹಾಸ ಇದೆ ಅನ್ನೋದನ್ನ ಪ್ರೂವ್ ಮಾಡಿದೆ ಎಂದು ವರದಿಯೊಂದು ಹೇಳಿದೆ.ವಿವರಗಳು ಇಲ್ಲಿವೆ:)

http://www.indiatimes.com/art-and-culture/porn-may-be-28000-years-old-28426.html

Monday, June 11, 2012

ಅಕ್ಕಾ……ನಿಜವೇನೆ….

ಸಂಜೆ ಮುಡಿದ ಮಲ್ಲಿಗೆ
ಮೆಲ್ಲಗೆ ಬಾಡಿದೆ,
ಹಣೆಯ ಕುಂಕುಮ
ಯಾರೋ ತೀಡಿದ ಹಾಗಿದೆ…

ಅಧರಾಮೃತದ ಬಟ್ಟಲು ಕಾಲಿ,
ನೋಡು ನಡೆಯುವಾಗಲು ಯಾಕಿಷ್ಟು ಜೋಲಿ….
ಕೆನ್ನೆ ಬೆಂಕಿಯ ಕೆನ್ನಾಲಿಗೆ!!
ನಿನ್ನ ಗಲ್ಲವೇನು ಬೆಲ್ಲದುಂಡೆಯ?
ಯಾಕಿಷ್ಟು ಗಾಯಾ…!

ಕೊರಳಬಳ್ಳಿಯಲ್ಯಾರು ಜೋಕಾಲಿ ಆಡಿದರು,
ಎದೆಯ ಹೊಲದೊಳಗ್ಯಾರು ಓಕುಳಿ ಹಚ್ಚಿದರು…
ಎದೆಯ ಇಳಿಜಾರಿನಲ್ಲಿ
ಸುಖದ ಹೂವೆನೆ,
ಮತ್ತೆ ಹಿತವಾದ ನೋವೇನೆ….

ಮುತ್ತಿನ ಮೂಗುತಿ ಎಲ್ಲಿ ಮರೆತೆಯೆ?
ಇಂತ ಬಂಗಾರದ ಮೈಯ್ಯಿಗೂ ಬಟ್ಟೆಯ ಕೊರತೆಯೆ…!!
ಸೆರಗಲ್ಲೇನು ಮಕ್ಕಳನ್ನಾಡಿಸುತ್ತಿದ್ದೆಯ?
ಕಣ್ಣುಗಳಲ್ಲಿ ಬೆಳದಿಂಗಳನ್ನೇ ಸುರಿದುಕೊಂಡಿದ್ದೀಯ….

ಬೆಳ್ಳಿ ಗೆಜ್ಜೆಗಳನ್ನೇನು ಗಿರವಿ ಇಟ್ಟೆಯ,
ಹಸಿರು ಬಳೆಗಳನ್ನ ಬೆಂಕಿಯಲ್ಲಿ ಸುಟ್ಟೆಯ…
ರೆಪ್ಪೆಗಳೇಕೆ ಕಾಡಿಗೆ ಬೇಡುತ್ತಿವೆ?
ನಿನ್ನ ತುಂಟ ಹೊಕ್ಕಳೇಕೆ ಎನೋ ಹೇಳುತ್ತಿದೆ…
ಅಕ್ಕಾ.. ನಿನ್ನ ಗುಟ್ಟುರಟ್ಟು ಮಾಡಿಬಿಟ್ಟೆ
ಮಜವೇನೆ? ಇಲ್ಲ ನನಗೆ ಸಜೆಯೇನೆ?..
ಅಕ್ಕಾ……ನಿಜವೇನೆ….


(ಬರೆದಿದ್ದು ನ.ಸೋಮು) :)

Thursday, March 29, 2012

ತುಂಟ ಜಾಹೀರಾತುಗಳು

ಮೋಟುಗೋಡೆಯಲ್ಲಿ ನಾವು ಆಗಿಂದಾಗ ತುಂಟ  ಜಾಹೀರಾತುಗಳನ್ನು ಹಾಕುತ್ತ ಬಂದಿದ್ದೇವೆ. ಇಲ್ಲಿ ಇನ್ನೊಂದಿಷ್ಟು ಚಿತ್ರಗಳಿವೆ. ನೋಡಿ ಆನಂದಿಸಿ. ಕೆಲವನ್ನು ನೀವು ಮೊದಲೇ ನೋಡಿರಬಹುದು. ಇನ್ನು ಕೆಲವು ಹೊಸತಿರಬಹುದು. ಅರ್ಥವಾದರೆ ನಕ್ಕುಬಿಡಿ, ಅರ್ಥವಾಗದಿದ್ದರೆ, ಮತ್ತೊಮ್ಮೆ ನೋಡಿ:)Monday, March 26, 2012

Wednesday, March 21, 2012

ತುಂಟ ಚಿತ್ರಗಳು

ಗೋಪಾಲಕೃಷ್ಣ ಕುಂಟಿನಿ ಮೊನ್ನೆ ತಮ್ಮ ಫೇಸ್ ಬುಕ್ ಪ್ರೊಫೈಲಿನಲ್ಲಿ "ಆನೆ ಚಿತ್ರ ಬಿಡಿಸುವ ಸುಲಭ ರೀತಿ!!" ಎಂಬ ತಲೆ ಬರಹದ ಅಡಿಯಲ್ಲಿ, ತುಂಟ ಚಿತ್ರವೊಂದನ್ನು ಹಂಚಿಕೊಂಡಿದ್ದರು. 


ಈ ಚಿತ್ರ ನೋಡಿದ ಕೂಡಲೇ, ಹಿಂದೊಮ್ಮೆ ಯೂಟ್ಯೂಬ್ ನಲ್ಲಿ ನೋಡಿದ್ದ ಇಂತಹ ತುಂಟ ಚಿತ್ರಗಳ ಸರಣಿ ನೆನಪಾಯಿತು. ಅದನ್ನು ಮತ್ತೆ ಹುಡುಕಿದೆ.  ಇಲ್ಲಿದೆ, ನೋಡಿ: (ಆಫೀಸಲ್ಲಿದ್ದರೆ ಬೇಡ!:)

Thursday, March 15, 2012

ಸೆಕೆ ಮತ್ತು ಚಳಿ

ವೃದ್ಧಾಪ್ಯ ಸಮೀಪಿಸುತ್ತಿರುವ ತುಕ್ಕೋಜಿರಾಯರೂ ಅವರ ಹೆಂಡತಿಯೂ ವೈದ್ಯರಲ್ಲಿಗೆ ತಪಾಸಣೆಗೆ ತೆರಳಿದರು. ತುಕ್ಕೋಜಿರಾಯರ ಅಮೂಲಾಗ್ರ ತಪಾಸಣೆಯನ್ನು ಮಾಡಿದ ಡಾಕ್ಟರು, "ಈ ಪ್ರಾಯದಲ್ಲಿ ನಿಮ್ಮ ಆರೋಗ್ಯ ಹೇಗಿದ್ದರೆ ಚೆನ್ನವೋ ಹಾಗೇ ಇದೆ. ಬಿಪಿ-ಶುಗರ್ರು ನಾರ್ಮಲ್ ಆಗಿದೆ. ಒಂದಿಷ್ಟು ಸಣ್ಣ ಪುಟ್ಟ ಸಮಸ್ಯೆಗಳಿವೆ, ಅವೆಲ್ಲ ಮಾಮೂಲಿ, ಏನೂ ಚಿಂತೆ ಮಾಡಬೇಕಾಗಿಲ್ಲ" ಎಂದು ಸಮಾಧಾನದ ಮಾತುಗಳನ್ನ ಆಡಿದರು. "ನಿಮಗೇನಾದರೂ ಸಮಸ್ಯೆ ಇದೆ ಅನ್ನಿಸಿದರೆ ಕೇಳಿ, ಪರಿಹರಿಸೋಣ" ಎಂಬ ಸಲಹೆಯನ್ನೂ ನೀಡಿದರು.

ತುಕ್ಕೋಜಿ ರಾಯರು ಏನನ್ನೋ ಹೇಳೋಕೆ ಹೊರಟಿದ್ದು ವೈದ್ಯರ ಗಮನಕ್ಕೂ ಬಂತು. ಆದರೆ ಏನೋ ಮುಜುಗರ ಇದ್ದ ಹಾಗಿತ್ತು. ವೈದ್ಯರು "ಪರವಾಗಿಲ್ಲ ಹೇಳಿ, ಸಂಕೋಚ ಬೇಡ" ಎಂದು ಮತ್ತೆ ಹೇಳಿದ ಮೇಲೆ, ನಿಧಾನವಾಗಿ ಬಾಯಿಬಿಟ್ಟರು ರಾಯರು.

"ಏನಿಲ್ಲ ಡಾಕ್ಟ್ರೇ, ಹೆಂಡತಿ ಜೊತೆಗೆ ಮೊದಲ ಬಾರಿ ಸೆಕ್ಸ್ ಮಾಡೋವಾಗ ಸೆಕೆ ಆಗತ್ತೆ, ಆದರೆ ಎರಡನೇ ಬಾರಿ ಮಾಡುವಾಗ ತುಂಬಾ ಚಳಿ ಆಗತ್ತೆ" ಎಂದರು.

ಡಾಕ್ಟರಿಗೂ ಇದು ಹೊಸ ಸಮಸ್ಯೆ. ಇಲ್ಲಿವರೆಗೆ ಇಂತದ್ದೊಂದು ಕೇಳಿರಲಿಲ್ಲ.

"ಇರಲಿ ನೋಡೋಣ ರಾಯರೇ, ಏನು ಸಮಸ್ಯೆ ಅಂತ ಕಂಡುಹಿಡಿಯೋಣ" ಎಂದವರೇ, ಅವರ ಹೆಂಡತಿಯನ್ನು ಬರಹೇಳಿದರು.

ಆಕೆಗೂ ಎಲ್ಲ ಚೆಕಪ್ ಇತ್ಯಾದಿಗಳು ನಡೆದವು. ಕೊನೆಯಲ್ಲಿ ಹೇಳಲೋ ಬೇಡವೋ ಅಂದುಕೊಂಡರೂ, ಧೈರ್ಯ ಮಾಡಿದ ವೈದ್ಯರು, " ನಿಮ್ಮ ಯಜಮಾನರು ಒಂದು ವಿಚಿತ್ರ ಸಮಸ್ಯೆ ಹೇಳಿದರು,ಅವರು ಮೊದಲ ಬಾರಿ ಸೆಕ್ಸ್ ಮಾಡೋವಾಗ ಸೆಕೆ ಆಗತ್ತಂತೆ, ಎರಡನೇ ಬಾರಿ ಚಳಿ ಆಗತ್ತೆ ಅಂದರು. ನಿಮ್ಮ ಗಮನಕ್ಕೇನಾದರೂ ಅದು ಬಂದಿದೆಯಾ?" ಎಂದು ಕೇಳಿದರು.

ಕೊಂಚ ಹೊತ್ತು ಏನೂ ಮಾತಾಡದ ರಾಯರ ಹೆಂಡತಿ, ಒಮ್ಮೆಗೇ ಧ್ವನಿ ಏರಿಸಿ ಹೇಳಿದರು.

"ಹೋಗಿ ಹೇಳಿ ಅವರಿಗೆ, ಯಾಕೆ ಹಾಗೆ ಆಗತ್ತೆ ಅಂದ್ರೆ ಮೊದಲನೆಯದು ನಡೆಯೋದು ಏಪ್ರಿಲ್ ನಲ್ಲಿ ಹಾಗೂ ಎರಡನೆಯದು ಡಿಸೆಂಬರ್ ನಲ್ಲಿ"

(ಇಂಗ್ಲಿಷ್ ಬ್ಲಾಗೊಂದರಿಂದ)

Wednesday, February 29, 2012

ಸ್ಟಿಕ್ಕರುಗಳು .....ಈಗ ಗೊತ್ತಾಯಿತಲ್ಲ ದೊಡ್ಡವರು ಯಾಕೆ "ಯಾವುದನ್ನ ಎಲ್ಲಿಡಬೇಕೋ ಅದನ್ನ ಅಲ್ಲೇ ಇಡಬೇಕು" ಅಂದಿದ್ದು ?

Thursday, February 23, 2012

ಸಾಯೋಕೆ ಮುನ್ನ ಮಾಡಬೇಕಾದ ೫೦ ಕಾಮಸಾಹಸಗಳು

ಬಕೆಟ್ ಲಿಸ್ಟ್ ಅನ್ನೋ ಪದ ನೀವು ಕೇಳಿರಬೇಕು. ಸಾಯುವುದಕ್ಕೆ ಮೊದಲು ಜೀವನದಲ್ಲಿ ಸಾಧಿಸಬೇಕಾದ ಕೆಲಸಗಳ ಬಗ್ಗೆ ಮಾಡಿಕೊಳ್ಳುವ ಪಟ್ಟಿ ಅದು. ಇಲ್ಯಾರೋ ಪುಣ್ಯಾತ್ಮರು, ಸಾಯುವುಕ್ಕೆ ಮುನ್ನ, ಲೈಂಗಿಕತೆಯ ವಿಚಾರದಲ್ಲಿ- ಮಾಡಬೇಕಾದ 50 ಸಾಹಸಗಳ ಪಟ್ಟಿ ಮಾಡಿಟ್ಟಿದ್ದಾರೆ.

ಮಾಡೋದು ಬಿಡೋದು ನಿಮಗೆ ಬಿಟ್ಟ ವಿಚಾರ. ಹಿಂಗಿದೆ ಅಂತ ಹೇಳೋದಷ್ಟೆ ನಮ್ಮ ಕೆಲಸ. ಈ ಲಿಂಕು ನೋಡಿ.
ಶುಭವಾಗಲಿ!

Tuesday, January 17, 2012

ಎ.ಕೆ ರಾಮಾನುಜನ್ ಗ-ಪದ್ಯ

ಜಿನ್

ಅಮೆರಿಕಕ್ಕೆ ಬಂದಾಗಲೇ
 ಕನ್ನಡ, ಪದ್ಯ.
 ಮೈಸೂರಲ್ಲಿ ಬರಿ ಮಾತು.

ಕೆಲವರಿಗೆ ಹೀಗೇ. ಸ್ವಂತ
ಮನೆಯಲ್ಲಿ ಬೆಣ್ಣೆ ಕೈಯೆಣ್ಣೆ
ಹಚ್ಚಿದರೂ ನಿರ್ಲಿಪ್ತ.

ತಾಲಿ ಕಟ್ಟಿದ  ಗ
ರತಿ ಒಂದಿಗೆ
ಸ್ವಾಮಿ ಏಳುವುದೇ ಇಲ್ಲ ಅಂತ

"ಹಾಳಾಗಿ ಹೋಗಲಿ, ಚಿತ್ರಗುಪ್ತ
ನ ದಫ್ತರಕ್ಕಿನ್ನು ಸಮಾಪ್ತ.
ಸರ್ಪ್ತಗತಿ  ಅಶ್ವಗತಿ

ಎಲ್ಲ ಹೋಗಿ ಕಡೆಗೆ ಕೂರ್ಮ
ಗತಿ ಬಂತೆ ? ಸತ್ತು
ಥಣ್ಣಗಾಯಿತು , ನಿಷ್ಕಾಮ

ಕರ್ಮವೇ ಗತಿ  ಇನ್ನು"
ಅಂದುಕೊಂಡಾಗ,
                       ಎಲ್ಲೋ ಕಾ-
ಬೂಲಿನಲ್ಲಿ

ಕಿಪ್ಪೊಟ್ಟೆ ಮಾತ್ರ ತೋರಿಸುವ
ಬುರುಕಿ ಹೆಣ್ಣುಗಳ ಮಧ್ಯ
                             ಹೆಂಡ-
ತಿ ವಾಸನೆ ಬಡಿದು ಪ್ರಚಂಡ

ಕಾಮೋದ್ರೇಕ.
                 ಎಕ್ಕ ಹುಟ್ಟಿ
ದ ಮನೆಯಲ್ಲೂ ಇವಳು
ಮದನ ಮಸ್ತಿ

ಎಲ್ಲಾದರೂ ಆಗಲಿ, ಸ್ವಾಮಿ,
ಹೇಗೋ ದೆಬ್ಬೆ ಕಟ್ಟದೆ
ತಾನೇ ಎದ್ದು ಬಂತ

ಲ್ಲ,
ಸಧ್ಯ.


(ಮತ್ತೊಬ್ಬನ ಆತ್ಮಕಥನ ದಿಂದ ಹೆಕ್ಕಿದ್ದು)
ಕಳಿಸಿದ್ದು:ಚಿನ್ಮಯ ಹೆಗಡೆ.