Tuesday, January 17, 2012

ಎ.ಕೆ ರಾಮಾನುಜನ್ ಗ-ಪದ್ಯ

ಜಿನ್

ಅಮೆರಿಕಕ್ಕೆ ಬಂದಾಗಲೇ
 ಕನ್ನಡ, ಪದ್ಯ.
 ಮೈಸೂರಲ್ಲಿ ಬರಿ ಮಾತು.

ಕೆಲವರಿಗೆ ಹೀಗೇ. ಸ್ವಂತ
ಮನೆಯಲ್ಲಿ ಬೆಣ್ಣೆ ಕೈಯೆಣ್ಣೆ
ಹಚ್ಚಿದರೂ ನಿರ್ಲಿಪ್ತ.

ತಾಲಿ ಕಟ್ಟಿದ  ಗ
ರತಿ ಒಂದಿಗೆ
ಸ್ವಾಮಿ ಏಳುವುದೇ ಇಲ್ಲ ಅಂತ

"ಹಾಳಾಗಿ ಹೋಗಲಿ, ಚಿತ್ರಗುಪ್ತ
ನ ದಫ್ತರಕ್ಕಿನ್ನು ಸಮಾಪ್ತ.
ಸರ್ಪ್ತಗತಿ  ಅಶ್ವಗತಿ

ಎಲ್ಲ ಹೋಗಿ ಕಡೆಗೆ ಕೂರ್ಮ
ಗತಿ ಬಂತೆ ? ಸತ್ತು
ಥಣ್ಣಗಾಯಿತು , ನಿಷ್ಕಾಮ

ಕರ್ಮವೇ ಗತಿ  ಇನ್ನು"
ಅಂದುಕೊಂಡಾಗ,
                       ಎಲ್ಲೋ ಕಾ-
ಬೂಲಿನಲ್ಲಿ

ಕಿಪ್ಪೊಟ್ಟೆ ಮಾತ್ರ ತೋರಿಸುವ
ಬುರುಕಿ ಹೆಣ್ಣುಗಳ ಮಧ್ಯ
                             ಹೆಂಡ-
ತಿ ವಾಸನೆ ಬಡಿದು ಪ್ರಚಂಡ

ಕಾಮೋದ್ರೇಕ.
                 ಎಕ್ಕ ಹುಟ್ಟಿ
ದ ಮನೆಯಲ್ಲೂ ಇವಳು
ಮದನ ಮಸ್ತಿ

ಎಲ್ಲಾದರೂ ಆಗಲಿ, ಸ್ವಾಮಿ,
ಹೇಗೋ ದೆಬ್ಬೆ ಕಟ್ಟದೆ
ತಾನೇ ಎದ್ದು ಬಂತ

ಲ್ಲ,
ಸಧ್ಯ.


(ಮತ್ತೊಬ್ಬನ ಆತ್ಮಕಥನ ದಿಂದ ಹೆಕ್ಕಿದ್ದು)
ಕಳಿಸಿದ್ದು:ಚಿನ್ಮಯ ಹೆಗಡೆ.