Friday, October 19, 2012

ಗುಬ್ಬಿ ಚಟ

"ಗುಬ್ಬಿ ಚಟ" ಅನ್ನೋ ಈ ನಾಣ್ಣುಡಿಯನ್ನ ತಾವು ಕೇಳಿರಲೇಬೇಕು. ಅದ್ರ ಅರ್ಥನೂ ಗೊತ್ತಿರಲೇ ಬೇಕು. ಆದ್ರೆ  ಗುಬ್ಬಿ ಚಟ ಅನ್ನೋ ಗಾದೆ ಅಥವಾ ಮಾತು ಹ್ಯಾಗೆ ಬಂತು ಗೊತ್ತ? ಇಲ್ಲಿ ಕೇಳಿ ಅದರ ಕತೆ.

ಒಂದಲ್ಲ ಒಂದು ದೊಡ್ಡ ಕಾಡಲ್ಲಿ ಒಂದು ದೊಡ್ಡ ಆನೆ ಇತ್ತಂತೆ. ಅದಕ್ಕೆ ಒಂದು  ದಿನ ಯಾಕೊ ಬೆನ್ನಲ್ಲಿ ತುರಿಕೆ ಬಂತು. ಅದು ಅಂತಿಂತಾ ಜಾಗ ಅಲ್ಲ, ಅದೆಲ್ಲೋ ಕೆರಕೊಳೋದು ಕಷ್ಟವಾದ ಜಾಗ. ತುರಿಕೆಯಿಂದ ಅದು ಅಸಹನೆಗೆ  ಒಳಗಾಯಿತು, ಘೀಳಿಡುತ್ತಾ ಅತ್ತ ಇತ್ತ ಸುತ್ತ ಮುತ್ತ ತಿರುಗಾಡ ತೊಡಗಿತು. ಇದನ್ನೆಲ್ಲಾ ಒಂದು ಪುಟ್ಟ ಗುಬ್ಬಿ ಅಲ್ಲೇ ಪಕ್ಕದ ಮರದಮೇಲೆ  ಕೂತು ನೋಡುತ್ತಿತ್ತು. ಅದಕ್ಕೆ ಆನೆಯ ಅಂತರಾಳ ಅರ್ಥವಾಗಲಿಲ್ಲ, ತನಗೆ ತಿಳಿದಂಗೆ ಅದು ಯೋಚಿಸತೊಡಗಿತು.

ಆನೆ ಬೆದೆಗೆ ಬಂದಿದೆ ಅದರ ಸಾಥಿ ಹಾಥಿಗಾಗಿ ಘಿಳಿಡುತ್ತಿದೆ ಅಂದುಕೊಂಡಿತು. ಆನೆಯ  ತುರಿಕೆಯ ಅಸಹನೆ ಹೆಚ್ಚಾಗುತ್ತ ಸಾಗಿತು. ಗುಬ್ಬಿ ಅತ್ತಿತ್ತ ಸುತ್ತಮುತ್ತೆಲ್ಲ ಹಾರಾಡಿ  ಗಂಡಾನೆ ಇದೆಯೋ ನೋಡಿತು, ಯಾವುದೂ ಕಂಡುಬರಲಿಲ್ಲ. ಆನೆ ದಾರಿಕಾಣದೆ ಸಿಕ್ಕಸಿಕ್ಕಲ್ಲೆಲ್ಲ ಓಡತೊಡಗಿತು. ಅತ್ತಿತ್ತ ಓಡಿದ ಆನೆಗೊಂದು ತೆಂಗಿನ ಮರ ಕಂಡಿತು. ತನ್ನ ತುರಿಕೆಯ ಬೆನ್ನನ್ನು ಹಾಕಿ ಅದಕ್ಕೆ ತಿಕ್ಕಿಕೊಳ್ಳ ತೊಡಗಿತು. ಇತ್ತ ಈ ಗುಬ್ಬಿಗೆ, ಆನೆಗೆ ಏನಾದರು ಸಹಾಯ ಮಾಡೇ ತೀರಬೇಕೆಂಬ ಬಯಕೆ ಮತ್ತಷ್ಟು ಜೋರಾಯಿತು. ಆನೆಗೆ ಸಂಗಾತಿ ಹಾತಿ ಸಿಗದಿದ್ದರೆ ಏನಂತೆ, ತನ್ನ ಕೈಲಾದಷ್ಟು (?) ಸಹಾಯ ಮಾಡುವ ಉದ್ದೇಶದಿಂದ ಆನೆಯ ಹಿಂದಿಂದ ತನ್ನೆಲ್ಲ ಶಕ್ತಿ ಹಾಕಿ ಬಜಾಯಿಸ ತೊಡಗಿತು. ಇದೇ ಸಮಯಕ್ಕೆ ಸರಿಯಾಗಿ ಆನೆ ಬೆನ್ನು ಹಾಕಿ ಉಜ್ಜಿದ ರಭಸಕ್ಕೆ  ಒಂದು ಒಣ ತೆಂಗಿನ ಕಾಯಿ ಆನೆಯ ತಲೆಯಮೇಲೆ ಬಿತ್ತು. ತೆಂಗಿನ ಕಾಯಿ ಬಿದ್ದ ಏಟಿಗೆ ಆನೆ ಒಮ್ಮೆ ಸೊಂಡಿಲೆತ್ತಿ ಜೋರಾಗಿ ಘೀಳಿಟ್ಟಿತು. ಗುಬ್ಬಿ ಅದನ್ನ ಕೇಳಿ, "ಆಹ್, ಆನೆ ಸಂತೃಪ್ತ ವಾಗಿದೆ, ತನ್ನ ಶ್ರಮ ಸಾರ್ಥಕ ಅಂದುಕೊಂಡು ಅಲ್ಲಿಂದ ಹಾರಿ ಹೋಯಿತು.

ಹೇಗಿದೆ ಗುಬ್ಬಿ ಚಟದ ಕಥೆ?