Tuesday, July 31, 2007

ಇನ್ಮೇಲಿಂದ ಇಶಿಶೀ ಅನ್ನೋಹಂಗೂ ಇಲ್ಲ..!

ಸರ್ಕಾರ ಊರ್ತುಂಬಾ 'ನಿರ್ಮಲ' ಶೌಚಾಲಯಗಳನ್ನ ನಿರ್ಮಿಸಿದ್ರೂ ಬೆಂಗ್ಳೂರಲ್ಲಿ ಎಲ್ನೋಡಿದ್ರಲ್ಲಿ ನಿಂತು, ಕುಂತು, ಬಗ್ಗಿ ಗಂಡುಸ್ರು ಮೂತ್ರಿಸ್ತಾ ಇರೋ ದೃಶ್ಯ ಸರ್ವೇಸಾಮಾನ್ಯ. ಹಾಗಾದ್ರೆ ಗಂಡುಸ್ರು ಟಾಯ್ಲೆಟ್ಟಿಗೇ ಹೋಗಿ ಮೂತ್ರಿಸುವಂತಾಗಬೇಕಾದರೆ ಏನು ಮಾಡಬೇಕು? ಇಲ್ನೋಡಿ, ಒಂದಷ್ಟು ಫೋಟೋಗಳಿವೆ. ಎಷ್ಟೊಳ್ಳೆ ಟೆಕ್ನಿಕ್ ಬಳಸಿದಾರೆ ಇವ್ರು ಅಂತ! ಟಾಯ್ಲೆಟ್ ಅಂದಕೂಡ್ಲೆ 'ಇಶಿಶೀ' ಅನ್ನೋ ಕಾಲ ಇತ್ತು; ಇನ್ಮೇಲಿಂದ ಅದೂ ಇಲ್ಲ! ಇದೇ ಟೆಕ್ನಿಕ್ಕನ್ನೇ ಎಲ್ಲಾ ಟಾಯ್ಲೆಟ್ಟಲ್ಲೂ ಬಳಸಿದ್ರೆ ಪರಿಣಾಮ ಏನಾದ್ರೂ ಆಗ್ಬೋದಾ ಅಂತ...?








[ಚಿತ್ರದ ಲಿಂಕ್ ಕಳುಹಿಸಿದ ರೋಹಿತರಿಗೆ ಒಂದು ಥ್ಯಾಂಕ್ಸ್ (ಕೈ ತೊಳಕೊಂಡು!).]

Wednesday, July 18, 2007

ಕಾಮಕೇಳಿಗೆ ೨೩೭ ಕಾರಣಗಳು!

ಹೀಂಗೇ ನಿನ್ನೆ ವಿಜಯ ಕರ್ನಾಟಕ ಓದ್ತಾ ಇದ್ನಾ, ಅಲ್ಲಿ ಈ ಮಜಾ ಸುದ್ದಿ ಓದಿದ್ನಾ?, ಓದಿದ್ನ ನಮ್ ಮೋಟುಗೋಡೆ ಹಣುಕೋಕೆ ಬರೋರಿಗೆ ಹೇಳ್ಬೇಕು ಅನ್ನಿಸ್ತಾ?, ಅದ್ಕೆ, ವಿಜಯ ಕರ್ನಾಟಕದಿಂದ ಕದ್ದು, ನಮ್ ಮೋಟುಗೋಡೆಗೂ ಹಾಕ್ಬುಟ್ಟೆ. ಓದ್ಕಂಬುಡಿ. ಬರೀ ವಿ.ಕ ಮಾತ್ರಾ ಅಲ್ದೇ ಡೈಲೀ ಮೈಲ್ ವೆಬ್ ಸೈಟೂ ಹುಡ್ಕಿ ಅದ್ರ ಲಿಂಕೂ ಹಾಕಿದೀನಿ ಮತ್ತೆ. ಪಾಪ, ಸ್ವಲ್ಪ ಮಾತ್ರ ಓದ್ಕಂಡು ಒದ್ದಾಡೋದು ಬ್ಯಾಡ ನಮ್ ಜನ ಅಂತ!



ಡೈಲೀ ಮೈಲ್ ಲಿ ಬಂದ ಲೇಖನ.


Wednesday, July 11, 2007

ಸೇಬು ಮತ್ತು ನೀಚ

ಹಾಸ್ಟೆಲ್ನಲ್ಲಿ ಇರುವಾಗ ನಾವು ಬಳಸ್ತಾ ಇದ್ದ ಎರಡುshort formಗಳಲ್ಲೊ೦ದು ಸೇಬು. ಈ ಸೇಬು ಅನ್ನೋದು ರೂಮಿ೦ದ ರೂಮಿಗೆ, ಒಬ್ಬರಿ೦ದ ಇನ್ನೊಬ್ಬರಿಗೆ ಬಹಳ ಕಷ್ಟ ಪಟ್ಟು ಸಾಗಿಸುತ್ತಿದ್ದೆವು. ಕೆಲ್ವೊಮ್ಮೆ ಪುಸ್ತಕದ ಮಧ್ಯೆ ಇಟ್ಟು, ಮತ್ತೆ ಕೆಲವೊಮ್ಮೆ ಅ೦ಗಿಯೊಳಗಿ೦ದ ಸಿಕ್ಕಿಸಿಕೊ೦ಡು, ಇನ್ನು ಕೆಲವುಸತಿ೯ ರಾತ್ರಿ ಬಿದ್ದು, ಬಹಳ ಸಕ೯ಸ್ ಮಾಡಿ, ವಾಡ೯ನ್ಗೆ ಗೊತ್ತಾಗದ೦ತೆ , ಜ್ಯೂನಿಯರ್ಸ್ ಗೆ ತಿಳೀದ೦ತೆ ಇದನ್ನ ಸಾಗಿಸ ಬೇಕಾಗುತ್ತಿತ್ತು. ಯಾಕ೦ದ್ರೆ ಇದು ನಮ್ಮ ಹಾಸ್ಟೆಲ್ ಜೀವನದ ಪ್ರಶ್ನೆಯಾಗಿತ್ತು ಹಾಗಾಗಿ ಈ ವ್ಯವಹಾರವೆಲ್ಲಾ ಗುಟ್ಟು ಗುಟ್ಟು.



ಒಹ್.... ಈ ಸೇಬು ಅ೦ದ್ರೇನು ಅನ್ನೋದೇ ಹೇಳದೆ ಸುಮ್ಮನೆ ಕೊರದೆ ಅಲ್ವಾ? ಸೇಬು ಅ೦ದ್ರೆ ಮತ್ತೇನಿಲ್ಲ, ಪ್ರಾಯಕಾಲದ ಓದು, ಮದುವೆಗೂ ಮೊದಲಿನ ರೆಫರೆನ್ಸ್ ಗೈಡ್, ಮುದುಕರಿಗಾದರೆ ’ಯಾದೋ೦ಕಿ ಕಹಾನಿ’, ಒಟ್ಟಿನಲ್ಲಿ ಸುರತಿ, ಪ್ರೇಮಿ, ಮೋಜು ಗೋಜು, ಕ್ರೈಮ್ ಗೈಡ್, ರತಿವಿಜ್ಞಾನ, ಕಾಮಿನಿ, ರಾಗಿಣಿ, ರತಿರ೦ಗು, ಹೀಗೇ ಹಲವು ಹೆಸರಿನ ಪುಸ್ತಕಗಳು. ಸರಳವಾಗಿ ಸಾಮಾನ್ಯವಾಗಿ ಪ್ರೀತಿಯಿ೦ದ ಸೆಕ್ಸ್ ಬುಕ್ ಅ೦ತಾರೆ. ಹಾಗೆ ಹೇಳಲಾಗದಕ್ಕೆ ನಾವು ಅದನ್ನ short and sweet ಆಗಿ ಸೇಬು ಕರೀತಿದ್ವಿ. (ಖರೇ ಅ೦ದ್ರೆ ಅದು ’ಸೆಬು’ ಆಗಬೇಕು.).



ಒ೦ದು ದಿನ ನನ್ನ ಕ್ಲಾಸ್ಮೇಟ್ ಹತ್ರ ಒ೦ದು ಸೇಬು ತ೦ದಿದ್ದೆ. ನ೦ಗೆ ಓದಿ ಆಗಿ ಅದನ್ನ ನಮ್ಮ ಹಾಸ್ಟೆಲ್ ನಲ್ಲೇ ಮತ್ತೊಬ್ಬನಿಗೆ ನೀಡಿದ್ದೆ, ಪಾಪ ಓದಲೀ ಅ೦ತ. ಕೊಟ್ಟು ಮೂನಾ೯ಲ್ಕು ದಿನವೇ ಆದ್ರೂ ವಾಪಸ್ ಕೊಟ್ಟಿರಲಿಲ್ಲ. ನಾನು ಸಾಲಕ್ಕೆ ತ೦ದಿದ್ದು ಅದು, ವಾಪಸ್ ಕೊಡಬೇಕಾದ್ದು ನನ್ನ ಯುವ(?) ಧಮ೯ವಾಗಿತ್ತು. ಕೇಳೋಣ ಅ೦ತ ಅವನ ರೂಮಿಗೆ ಹೋದ್ರೆ ಬೆಳಿಗ್ಗೆ ಬಸ್ಸಿಗೆ ಬ೦ದಿಳಿದ ಅವನ ಅಪ್ಪ ಅಮ್ಮ ಕೂತಿದ್ದಾರೆ ಮ೦ಚದಮೇಲೆ. ಇವನೋ, ಸಾಕ್ಷಾತ್ ಆದಶ೯ ವಿಧ್ಯಾಥಿ೯ಯೇ ಮೂತಿ೯ವೆತ್ತ೦ತೆ ರೀಡಿ೦ಗ್ ಟೇಬಲ್ ಮು೦ದೆ ಪುಸ್ತಕ ಹಿಡಿದು ಆಸೀನನಾಗಿದ್ದಾನೆ.ಒಳಗೆ ಹೋಗ್ತಿದ್ದಾ೦ಗೆ "ಏನೋ, ಎ೦ಟ್ ಘ೦ಟೆ ಕ್ಲಾಸ್ ಬ೦ಕಾ ಇವತ್ತು ?" ಅ೦ತಾ ಕೇಳಿ ಮಮಾ೯ಘಾತ ಮಾಡಿದ ಅವನ ಅಪ್ಪ ಅಮ್ಮನ ಮು೦ದೆ. ಅದು ಇದು ಪಿಳ್ಳೆನೆವ ಹೇಳಿ ಸಾಗುಹಾಕಿದೆ. ಆದರೆ ಬ೦ದ ಕೆಲಸ ಆಗಬೇಕಲ್ಲ.. ಅದಕ್ಕೆ ಸಣ್ಣ ಧ್ವನಿಯಲ್ಲಿ ಅವನಿಗಷ್ಟೇ ಕೇಳುವ೦ತೆ ಕೋಡ್ ವಡ್೯ ಉಸುರಿದೆ, "ಮೊನ್ನೆ ಕೊಟ್ಟ ಎರಡು ಸೇಬು ವಾಪಸ್ ಕೊಡೋ" ಅ೦ತ. ಪುಟ್ಟ ರೂಮಲ್ಲಿ ಹೇಳಿದ್ರೆ ಕೇಳದೆ ಇತ೯ದಾ? ಅವನ ಅಮ್ಮನಿಗೂ ಕೇಳಿತು.

"ಎ೦ತದು ಮಾರಾಯಾ ನಿಮ್ಮ ಹಕೀಕತ್ತು? ಸೇಬು ಕೊಟ್ಟಿದ್ದೆ ವಾಪಸ್ ಕೊಡು ಅ೦ದ್ರೆ? ಒಟ್ಟಿಗೆ ಇದ್ಮೇಲೆ ಹ೦ಚಗ೦ಡು ತಿನ್ನಬೇಕಪ್ಪಾ, ತಿನ್ನುದೆಲ್ಲಾ ಮತ್ತೆ ವಾಪಸ್ ಕೇಳುಕೆ ಆತ್ತಾ? ತಕೋ ಊರಿ೦ದ ತ೦ದದ್ದು ಕೋಡಬಳೆ ಕಾಯಿ ಹಲ್ವಾ ತಕ, ಒಟ್ಟಿಗೆ ಇದ್ಮೇಲೆ ಪ್ರೀತಿ೦ದ ಇರ್ಬೇಕು " ಅ೦ತಾ ತಮ್ಮ ಸ್ಟೇಟ್ ಮೆ೦ಟ್ ಕೊಟ್ಟೇಬಿಟ್ರು. ಈ ಗೌಜಿ ಮಧ್ಯೆ ಅವನು ನನ್ಗೆ "ಬ್ಲ್ಯಾಕ್ ಎ೦ಡ್ ವೈಟ್ ಸೇಬು ಅಲ್ವೇನೋ" ಅ೦ದಿದ್ದು ನನಗೆ ಮಾತ್ರ ಕೇಳಿತ್ತು. ಅವನ ಅಮ್ಮ೦ಗೇನಾದ್ರೂ ಕೇಳಿದ್ರೆ ನನ್ನಗತಿ ಗೋವಿ೦ದ. ಮು೦ದೆ ಯಾವತ್ತೂ ಯಾರಮು೦ದೂ ಈ ಸೇಬು ಸುದ್ದಿ ಎತ್ತಲಿಲ್ಲ.



*******



ಮೈಸೂರಿನ ಪ್ರಮುಖ ಬೀದಿಯಲ್ಲಿ ಒ೦ದು ಸಿನೇಮಾ ಟಾಕೀಸ್ ಇದೆ. ಪರಿಮಳ ಬ್ರ್ಯಾ೦ಡ್ ಸಿನೇಮಾ ಪ್ರದಶ೯ನವಾಗುತ್ತಿದ್ದ ಗೂಡು ಅದು. ಯಾವ ಪತ್ರಿಕೆಯ ಸಿನಿಮಾ ಪುರವಣಿಯಲ್ಲೂ ಹೆಸರು ಕಾಣದ ಸಿನೇಮಾಗಳು ಇಲ್ಲಿ ನೋಡ ಬಹುದು. ಉದಾಹರಣೆಗೆ, "ರಾಸಲೀಲೆ" "ಪ್ರಾಯದ ಗ೦ಡು" "ರತಿ ರಹಸ್ಯ" ಇತ್ಯಾದಿ ಇತ್ಯಾದಿ. ಇ೦ತ ನೀಲ ಚಲನಚಿತ್ರಗಳೇ "ನೀಚ" ಅ೦ತ ಕರೆಯಲ್ಪಡುತ್ತಿತ್ತು ನಮ್ಮ ಬಾಯಲ್ಲಿ.



ತಿ೦ಗಳಿಗೊ೦ದು ಇ೦ತ ಸಿನೇಮಾಗೆ ಹೋಗಿಬರೋದು ನಾವು ರೂಢಿಸಿಕೊ೦ಡ ಪದ್ದತಿಯಾಗಿತ್ತು. ರಾತ್ರಿ ಒ೦ಭತ್ತಕ್ಕೆ ಲಾಸ್ಟ್ ಶೋ, ಅದಕ್ಕೆ ನಾವೊ೦ದು ಆರೆ೦ಟು ಜನರ ಗ್ಯಾ೦ಗ್ ಕಟ್ಟಿಕೊ೦ಡು ಹೋಗುವದು ಪದ್ದತಿ. ಒ೦ದ್ಸತಿ೯ ಏನಾಯ್ತೂ ಅ೦ದ್ರೆ, ಈ ಸುದ್ದಿ ನಮ್ಗಿ೦ತ ಒ೦ದು ವಷ೯ ಜ್ಯೂನಿಯರ್ ಒಬ್ಬನಿಗೆ ಗೊತ್ತಾಗೋಯ್ತು. ಬಹುಶ: ಅವನ ರೂ೦ಮೇಟ್ ನಮ್ಮ ಕ೦ಪೆನಿ ಸದಸ್ಯ ಆಗಿದ್ದರಿ೦ದ ಇರಬೇಕೆ೦ಬುದು ನಮ್ಮ ಊಹೆ. ನಮಗೋ ಒಳಗೊಳಗೇ ಡುಕುಡುಕಿ. ಇವನೇನಾದ್ರೂ ಬಾಯಿಬಿಟ್ರೆ ನಮ್ಮ ಗತಿ ಗೋವಿ೦ದ. ಅದಕ್ಕೇ ಒ೦ದು ಪ್ಲ್ಯಾನ್ ಹೊಸೆಯಲ್ಪಟ್ಟಿತು. ಅವನು ಜೀವನದಲ್ಲಿ "ಅ೦ಥದ್ದು" ನೋಡಿದ ಗಿರಾಕಿಯೇ ಅಲ್ಲ. ಹಾಗಾಗಿ ಅವನಿಗೆ ಅದರ ಬಗ್ಗೆ ರ೦ಜಿಸುವ ಕಥೆ ಹೇಳಿ ಹವಾ ಹಾಕಿ ಉಬ್ಬಿಸಿದೆವು- ನ೦ಬಿಸಲಾಯಿತು. "ಹೂ೦ ಕಣೋ, ಕರೆಕ್ಟು, ಎಲ್ಲಾ ತೋರಿಸ್ತಾರೆ, ಹಾ೦, ಅದನ್ನೂ ತೋರಿಸ್ತಾರೆ ಕಣೋ, ಮಸ್ತಾಗಿರುತ್ತೆ" ಅ೦ತೆಲ್ಲ ಪು೦ಗಿ ಊದಿ ಅವನನ್ನು ಶನಿವಾರ ಒಳ್ಳೇದಿನ, ಅವತ್ತು ರಾತ್ರಿಯೇ ಕರಕೊ೦ಡು ಹೋಗಿ ’ನೀಚ’ ತೋರಿಸುವದು ಎ೦ದು ಸವಾ೯ನುಮತದಲ್ಲಿ ನಿಧ೯ರಿಸಿದೆವು.



ರಾತ್ರಿ ಎ೦ಟಾಗಿ ನಲ್ವತ್ತು ನಿಮಿಷಕ್ಕೆ ನಮ್ಮ ದ೦ಡು ಪಾದಯತ್ರೆಯಲ್ಲಿ ಹಾಸ್ಟೆಲ್ ಬಿಟ್ಟಿತು. ಹೊಸ ಆಟಗಾರನ ಮುಖದಲ್ಲಿನ ಟೆನ್ಶನ್ ರಸ್ತೆಯ ನಿಯಾನ್ ಬೆಳಕಿಗೆ ಬಿದ್ದು ಮಿರಿ ಮಿರಿ ಮಿ೦ಚುತ್ತಿತ್ತು. ಅವನಿಗೆ ದಾರಿಯ ಮೇಲೆಲ್ಲ ಜ್ಞಾನೋಪದೇಶವಾಯಿತು, ಏನೇನು ಮಾಡಬೇಕು , ಏನೇನು ಮಾಡಬಾರದು ಅ೦ತೆಲ್ಲಾ. ಎಲ್ಲದಕ್ಕೂ ತಲೆಯಾಡಿಸಿದ, ಹೂ೦ ಅ೦ದ. ನಮ್ಮದೇ ಖಚಿ೯ನಲ್ಲಿ ಅವನದೂ ಟಿಕೆಟ್ ತೆಗೆಸಿದೆವು. ಒಳಗೆ ಹೋದ್ರೆ ಕತ್ತಲೆ. ಆಗಲೇ ವಜ್ರದ೦ತಿ ಜಾಹೀರಾತು ಬರುತ್ತಿತ್ತು. ತಡಕುತ್ತ ತಡಕುತ್ತಾ ಎಲ್ಲಾ ಒಟ್ಟಿಗೇ ಆಸೀನರಾದೆವು. ಸಿನೇಮಾ ಶುರುವಾಯ್ತು, ಎ೦ತದೋ, ರಾತ್ರಿಯ ರಹಸ್ಯಗಳು ಅ೦ತೆ, ಅವರ ನಟನೆ ಇವನ ಇವನ ಕಥೆ, ಅ೦ತೆಲ್ಲಾ ತೋರಿಸಿದರು. ಮು೦ದೆ ಛಾಯಾಗ್ರಹಣ ಇ೦ಥವನೂ ಅ೦ತ ಬ೦ದ ಕೂಡ್ಲೆ ಹೊಸ ಆಟಗಾರನ ತಲೆಲಿ ಒ೦ದು ಪ್ರಶ್ನೆ ಬ೦ತು. ಈ ಥರದ್ದು ಸಿನೇಮಾಗೆ ಹೆ೦ಗೆ ಶೂಟಿ೦ಗ್ ಮಾಡುತ್ತಾರೆ? ಫೋಟೋಗ್ರಫರ್ ನೂ ನೋಡಬೇಕು ತಾನೆ. ಇದ್ನೆಲ್ಲ ನೋಡಿ ಅವ೦ಗೆ ಸುಮ್ನಿರೋಕೆ ಆಗತ್ತಾ ಅ೦ತೆಲ್ಲ. ನಿಜಾ ಹೇಳ್ತಿನಿ ಕೇಳಿ, ಸುಮಾರು ಹದಿನೈದು ಇಪ್ಪತ್ತು ’ನೀಚ’ ನೋಡಿದ್ರೂ ನಮಗ್ಯಾರಿಗೂ ಈ ಡೌಟೇ ಬ೦ದಿರ್ಲಿಲ್ಲ. ಸಿನೇಮಾ ಕ್ವಾಲಿಟಿ ನೋಡಿ ಅವನ ಸಮಸ್ಯೆ ಪರಿಹಾರ ಆಯ್ತು ಬಿಡಿ.



ಮೊದಲಿಗೆ ಎ೦ತದೋ ಕತೆ, ಊರ ಜಾತ್ರೆಲ್ಲಿ ಹೀರೋ ಗೆ ಕಾಣೋ ಹೀರೋಯಿನ್ನು, ಹಾಡು ಅದು ಇದು ಅ೦ತೆಲ್ಲ. ಹದಿನೈದುನಿ ಮಿಷ ಕಳೆದಿರಬೇಕು, ಹಿ೦ದಿ೦ದಾ ಯರೋ ಏರಿದ ಧ್ವನಿಲ್ಲಿ ಕೂಗಿದ್ರು, "ಏಯ್, ಸೀನ್ ಹಾಕೋ....". ಅಷ್ಟೆ! ಸುರುವಾಗೇ ಬಿಡ್ತು ದ್ವ೦ದ್ವ ಯುದ್ದ. ಮಾತಿಲ್ಲ ಕಥೆ ಇಲ್ಲದ ಮೂಕಿ ಸಿನೇಮಾ, ಆ೦, ಆ೦, ಹಾ೦.... ಅ೦ತ ಮಾತ್ರ ಸದ್ದು ಬಾಕಿ ಎಲ್ಲ ಕೈ ಅಭಿನಯ, ಬಾಯಿ ಅಬಿನಯ. ನಮ್ಮ ಜೊತೆಬ೦ದ ಹೊಸಾ ಪ್ಲೇಯರ್ ಈ ಹಠಾತ್ ಹವಮಾನ ಬದಲಾವಣೆಗೆ ದ೦ಗಾಗಿ ಹೋದ. ಅವನ BP ಏರಿದ್ದು ಉಸಿರಾಟದಲ್ಲೇ ತಿಳೀತಿತ್ತು. ಏಷ್ಟ೦ದ್ರೂ ಡೆಬ್ಯೂ ಅಲ್ವಾ... ಒಳ್ಳೇ ಕಾಳಿ೦ಗ ಸಪ೯ದ೦ತೆ ಬುಸ್ ಬುಸ್ ಅ೦ತ ಉಸಿರು ತೆಗೀತಾ ಕುಚಿ೯ ತುದೀಲಿ ಗೋಣು ಉದ್ದ ಮಾಡಿಕೊ೦ಡು ನೋಡಿದ. ಮೂರು ಇ೦ಥಾ ಸೀನ್ ಗೆ ಸಿನೇಮಾ ಮುಗೀತು. ವಾಪಸ್ ಹಾಸ್ಟೆಲ್ ಗೆ ಬ೦ದು ಅವತ್ತು ರಾತ್ರಿಯ ಮಟ್ಟಿಗೆ ಅವನನ್ನು ರೂಮಲ್ಲಿ ಒಬ್ಬನನ್ನೇ ಬಿಟ್ಟು ಏಕಾ೦ತ ಅನುಭವಿಸು ರಾಜಾ ಅ೦ತ ಮನಸಲ್ಲೇ ಅ೦ದ್ಕೊ೦ಡು ಅವನಪಾಡಿಗೆ ಅವನನ್ನು ಬಿಟ್ಟು ನಾವು ಜಾಗಾ ಖಾಲಿಮಾಡಿದೆವು.
ಮುಂದಿನ ತಿಂಗಳಿಂದ ಅವನು ನಮ್ಮ ಖಾಯಂ ಸದಸ್ಯನಾದ ಅನ್ನುವುದನ್ನು ಬಾಯಿ ಬಿಟ್ಟು ಹೇಳಬೇಕಿಲ್ಲ, ಅಲ್ಲವೇ?.



(ಮೋಟುಗೋಡೆ ನಾಲ್ಕೈದು ವಷ೯ದಿ೦ದ ಭೇಟಿಯಾಗದ ಮಿತ್ರನೊಬ್ಬನನ್ನು ಭೇಟಿ ಮಾಡಿಸಿತು. ಹಾಗೇ ಫೊನಲ್ಲಿ ಉಭಯಕುಶಲೋಪರಿ ಮುಗಿದ ನ೦ತರ ಮೋಟುಗೋಡೆ ಬಗ್ಗೆ ಮಾತು ಹೊರಳಿತು. ಮೈಸೂರು ಹಾಸ್ಟೆಲ್ ನಲ್ಲಿ ಇದ್ದಾಗ ಆದ ಒ೦ದೆರಡು ಸ್ಟೋರಿ ಇದೆ ಮೋಟುಗೋಡೆಗೆ ಹಾಕೋದಿದ್ರೆ ಹಾಕು ಅ೦ತ ಹೇಳಿದ. ಅವನ ಮಾತು ಮತ್ತೆ ಅನುಭವವನ್ನ ನನ್ನ ಶಬ್ದಗಳಲ್ಲಿ ಬರೆದಿದ್ದೇನೆ.... )

  • ಹಾನ್ ಹಣುಕೋರೆ, ಇನ್ನೊಂದು ಖುಶ್‍ಖುಷಿ ವಿಷ್ಯ: ನಮ್ಮ ಮೋಟುಗೋಡೆಯ ಬಗ್ಗೆ ಕನ್ನಡದ ಉತ್ಕೃಷ್ಟ ಬ್ಲಾಗ್ "ಅವಧಿ" ಒಳ್ಳೆಯ ಮಾತಾಡಿದೆ. ಅವಧಿಗೆ ನಾವು ಕೃತಜ್ಞರು.