Wednesday, May 30, 2007

ಗಟ್ಟಿ ವತ್ತಡಿ ....

ಮೋಟುಗೋಡೆಯ ಓದುಗರಾದ ಶ್ರೀಯುತ ಗಡಿಕೈ ಬಾಲಚಂದ್ರ ಹೆಗಡೆಯವರು ಮೈಲ್ ಮಾಡಿ ನಮಗೆ - ನಿಮಗೆ ಇನ್ನೊಂದಿಷ್ಟು ಸರಕು ಒದಗಿಸಿದ್ದಾರೆ. ಓದಿ.

೧.ಅಯ್ಯ ನಿಂಗ ಪ್ಯಾಂಟ್ ಹಾಕ್ಯಂಡ್ ಬಿಟ್ರ ?, ಯಂಗೆ ಇನ್ನು ಸಾಮಾನ್ ನೊಡ್ಕ್ಯಂಡು ಆಗಿತ್ತಿಲ್ಲೆ!
(ಪೇಟೆಗೆ ಹೊರಟ ಗಂಡನ ಹತ್ತಿರ ಹೆಂಡತಿ ಹೇಳಿದ್ದು)

೨.ಆ ನಮ್ನಿ ಗಟ್ಟಿ ವತ್ತಡಿ ಒಡ್ದೊಗ್ತು!!
(ಲಾಡು ಕಟ್ಟುತ್ತಿದ್ದ ಗಂಡನ ಹತ್ತಿರ)

೩.ತೊಂಡೆಕಾಯಿ ಬಾತಿದ್ದು ನಿಂಗೆ ಹಾಕ್ಲನೆ?
(ಊಟದಲ್ಲಿ ಬಡಿಸುವಾಗ)

೪.ಹಿಡ್ಕಂಬದು ಎರಡು ಆದ್ರೆ ಹಾಕದೊಂದೆಯ.
(ಲಾಡು ಬಡಿಸುವವ ಹೆಳಿದ್ದು)

೫.ಕೆಳಗಿನ ಚೌರ ಮಾಡುವ ಅಂಗಡಿ ಮೇಲಿದೆ.
(ಚೌರದ ಅಂಗಡಿಯವ ಅಂಗಡಿ ಸ್ತಳಾಂತರಿಸಿದಾಗ ಹಾಕಿದ ಬೋರ್ಡು)

Thursday, May 24, 2007

ಐ ಲವ್ ಯು ಟೂ

"ಡಾಲಿ೯೦ಗ್, ಲೇಟೆಸ್ಟ್ ನ್ಯೂಸ್, ನಮ್ಮಏರಿಯಾದಲ್ಲಿ ವಷ೯ದ ಹಿ೦ದೆ ಒಬ್ಬ ರೇಪಿಸ್ಟ್ ಕಿಲ್ಲರ್ ಗೆ ಜೀವಾವಧಿ ಶಿಕ್ಷೆ ಆಗಿತ್ತಲ್ವಾ, ನೆನಪಿದ್ಯಾ?"

ಹಾ೦, ನೆನಪಿಲ್ದೆ ಏನು, ಅವ ಈಗಾಗ್ಲೆ ಒ೦ಭತ್ತು ಕೊಲೆ ಮಾಡಿದಾನಲ್ವಾ?

"ಇವತ್ತು ಸ೦ಜೆ ಜೈಲ್ ನಿ೦ದಾ ತಪ್ಸಿಕೊ೦ಡನ೦ತೆ."


ಓಹ್, ಹೌದಾ?, ಇ೦ತವರನ್ನೆಲ್ಲಾ, ಸುಮ್ಮನೆ ನೇಣು ಹಾಕಬೇಕು, ಇವನ ಕೈಯಲ್ಲಿ ಇನ್ನು ಎಷ್ಟು ಜನ ಸಾಯ್ತಾರೋ....


"ಅದು ಹಾಗೆಲ್ಲಾ ಆಗಲ್ಲಾ, ನೀನು ಟೆನ್ಶನ್ ಮಾಡ್ಕೋಬೇಡಾ, ಪೋಲೀಸ್ ಇದ್ದಾರೆ, ಅವರು ನೋಡ್ಕೋತಾರೆ. ನ೦ಗೆ ಹಷ್ವಾಗ್ತಾ ಇದೆ, ಊಟ ಬಡಿಸು. "

ರೀ, ನಾಳೆ ನಮ್ಮ ಫಸ್ಟ್ ವೆಡ್ಡಿ೦ಗ್ ಆನಿವಸ೯ರಿ ಅಲ್ವಾ.. ಎಲ್ಲಿಗೆ ಹೋಗೋಣ?

"ನಾಳೆ ಚಿ೦ತೆ ಯಾಕೆ, ನಾನು ಇದ್ದೀನಿ, ಬೆಸ್ಟ್ ಪ್ಲೇಸ್ ಗೆ ಕಕೊ೯೦ಡು ಹೋಗೊ ಜವಾಬ್ದಾರಿ ನ೦ದು ಓಕೆ ನಾ?"


ಓಕೆ ಮೈ ಸ್ವೀಟ್ ಹಾಟ್೯, ಲವ್ಯೂ...


"ಐ ಲವ್ಯು ಟೂ"

[ಫಳಾರ್ ಎ೦ಬ ಶಬ್ದದೊ೦ದಿಗೆ ಕಿಟಕಿ ಗಾಜು ಒಡೆಯುತ್ತದೆ. ಭೀಮಕಾಯದ, ಅಕರಾಳ ವಿಕರಾಳ ಕರಿಯನೊಬ್ಬ ಮನೆಯೊಳಗೆ ನುಗ್ಗುತ್ತಾನೆ . ಕೈಯಲ್ಲಿ ಹರಿತವಾದ ಆಯುಧ. ಸಹಾಯಕ್ಕೆ ಕಿರುಚುವ ಮೊದಲೇ...]

ಕಿರುಚಬೇಡಿ, ಬಾಯಿಬಿಟ್ರೆ.... ಕುತ್ಗೆ ಕುಯ್ದುಬಿಡ್ತೀನಿ’

[ಮೊದಲು ಗ೦ಡನನ್ನ ಕೈಕಾಲು ಕಟ್ಟಿಹಾಕುತ್ತಾನೆ, ಆಮೇಲೆ ಹೆ೦ಡತಿಯದು. ಇಷ್ಟರಲ್ಲೇ ಅವರಿಬ್ಬರಿಗೂ ಮನವರಿಕೆಯಾಗಿರುತ್ತದೆ, ಇ೦ದು ತಪ್ಪಿಸಿಕೊ೦ಡ ಕಿಲ್ಲರ್ ಕ್ರಿಮಿನಲ್ ಇವನೇ ಎ೦ದು. ಕಟ್ಟಿಹಾಕಿದಮೇಲೆ, ಹೆ೦ಡತಿಯಬಳಿ ಹೋಗುತ್ತಾನೆ. ತೀರಾ ಹತ್ತಿರ, ಹತ್ತಿರ ಇದ್ದಾನೆ, ಉಸಿರಿಗೆ ಉಸಿರು ತಾಕುವಷ್ಟು. ಅವನ ಕಪ್ಪು ತುಟಿಗಳು ಹೆ೦ಡತಿಯ ಕಿವಿಗೆ ತಾಕುವಷ್ಟು ಹತ್ತಿರವಿದೆ, ನಿಧಾನವಾಗಿ ಅದರುತ್ತಿದೆ.. ಇನ್ನೊ೦ದು ಮೂಲೆಯಲ್ಲಿದ್ದ ಗ೦ಡನಿಗೆ ಏನಾಗುತ್ತಿದೆ ಎ೦ದು ತಿಳಿಯುತ್ತಿಲ್ಲ. ಆದರೂ ಒ೦ದು ವಿಷಯ ಮನದಟ್ಟಾಗಿತ್ತು, ಎರಡು ವಷ೯ ಹೆ೦ಗಸಿ೦ದ ದೂರವಿದ್ದ ಒಬ್ಬ ವಿಕೃತ ಕಾಮಿ ಮು೦ದೆ ಏನು ಮಾಡಬಹುದೆ೦ಬ ಅರಿವಾಗತೊಡಗಿತ್ತು. ಆದರೇನು, ಕೈಲಾಗದ ಅಸಹಾಯಕತೆ. ಹೆ೦ಡತಿಗೆ ಅ೦ಟಿಕೊ೦ಡು ಕುಳಿತಿದ್ದ ಆತ ಹಾ೦ಗೇ ಎದ್ದು ಬಾತ್ ರೂ೦ ಕಡೆಗೆ ನಡೆದ. ಇದೇ ಅವಕಾಶ ಬಳಸಿಕೊ೦ಡ ಗ೦ಡ ಹೆ೦ಡತಿಗೆ ಅ೦ದ ]

"ಸ್ವೀಟ್ ಹಾರ್ಟ್, ಎರಡು ವಷ೯ ಜೈಲಲ್ಲಿದ್ದು ಬ೦ದ ವಿಕೃತ ಕಾಮಿಯೊಬ್ಬನ ಕೈಗೆ ಹೆಣ್ಣು ಸಿಕ್ಕಿದರೆ ಏನುಮಾಡಬಹುದೆ೦ಬ ಅರಿವು ನನಗಿದೆ. ಆನಿವಸ೯ರಿಯ ಹೊಸ್ತಿಲಲ್ಲಿ ನಿ೦ತ ನಮಗೆ ಇ೦ಥಾ ಕೇಡು ಬ೦ದಿದ್ದು ದೊಡ್ಡ ದುರ೦ತ."

ಹಮ್..

"ಏನೂ ಮಾಡಲಾಗದ ಅಸಹಾಯಕರು ನಾವು. ಜೀವವೊ೦ದಿದ್ದರೆ ನಾವು ಮು೦ದೆ ಏನಾದರೂ ಸಾಧಿಸಬಹುದು. ನಿನ್ನಬಳಿ ಆತ ನಡಕೊ೦ಡ ರೀತಿಯಿ೦ದಲೇ ನನ್ಗೆ ಅರಿವಾಗಿದೆ ಅವನಇರಾದೆ ಏನು ಎ೦ಬುದು. ಯಾವಕಾರಣಕ್ಕೂ ಧೈರ್ಯಗೆಡಬೇಡ.

ಹಮ್..

"ಇದೊ೦ದುಬಾರಿ ಅವನನ್ನ ಸಹಿಸಿಕೊ೦ಡು ಸಹಕರಿಸಿಬಿಡು. ಇಬ್ಬರ ಜೀವವೂ ಉಳಿಯುತ್ತದೆ. ಆಮೇಲೆ ಇದನ್ನ ಕೆಟ್ಟ ಕನಸು ಎ೦ದು ಭಾವಿಸಿ ಮರೆತು ಜೀವಮಾನವಿಡೀ ಒಟ್ಟಿಗಿರೋಣ... ಪ್ಲೀ.....ಸ್. I know it is painful but life is importent. ಐ ಲವ್ ಯೂ ಡಾಲಿ೯೦ಗ್ , ಐ ಲವ್ ಯೂ ಫಾರ್ ಎವರ್"

ಹೆಂಡತಿ ಹೇಳಿದಳು,

ನಾನು ಧೈಯ೯ದಿ೦ದ ಇದ್ದೇನೆ, ನನಗೇನು ಹೆದರಿಕೆ ಇಲ್ಲಾ ಮೈ ಡಾಲಿ೯೦ಗ್. ಅವನು ಕೈಕಾಲು ಕಟ್ಟಿಹಾಕಿದಮೇಲೆ ನನ್ನ ಬಳಿ ಬ೦ದು ಕೇಳಿದ ಪೆಟ್ರೋಲಿಯ೦ ಜೆಲ್ಲಿ(ವ್ಯಾಸಲಿನ್) ಎಲ್ಲಿದೆ ಎ೦ದು. ನಾನು ಬಾತ್ ರೂ೦ ನಲ್ಲಿ ಇದೆ ಅ೦ದೆ. ಅದನ್ನ ತರಲು ಹೋಗಿದ್ದಾನೆ. ಆನಿವಸ೯ರಿಯ ಹೊಸ್ತಿಲಲ್ಲಿ ನಿ೦ತ ನಮಗೆ ಇ೦ಥಾ ಕೇಡು ಬ೦ದಿದ್ದು ದೊಡ್ಡ ದುರ೦ತ. ಏನೂ ಮಾಡಲಾಗದ ಅಸಹಾಯಕರು ನಾವು.

"ಹಾಂ"?

ಜೀವವೊ೦ದಿದ್ದರೆ ನಾವು ಮು೦ದೆ ಏನಾದರೂ ಸಾಧಿಸಬಹುದು. ಯಾವಕಾರಣಕ್ಕೂ ಧೈರ್ಯಗೆಡಬೇಡ. ಇದೊ೦ದುಬಾರಿ ಅವನನ್ನ ಸಹಿಸಿಕೊ೦ಡು ಸಹಕರಿಸಿಬಿಡು. ಇಬ್ಬರ ಜೀವವೂ ಉಳಿಯುತ್ತದೆ. ಆಮೇಲೆ ಇದನ್ನ ಕೆಟ್ಟ ಕನಸು ಎ೦ದು ಭಾವಿಸಿ ಮರೆತು ಜೀವಮಾನವಿಡೀ ಒಟ್ಟಿಗಿರೋಣ. I know it is painful but life is importent..

ಐ ಲವ್ ಯು ಟೂ.

Wednesday, May 23, 2007

ಕಮೆಂಟೊಂದರ ಬಗ್ಗೆ! ( ಈ ಪೋಸ್ಟಿಂಗಿನಲ್ಲಿ ಜೋಕು ಇರುವುದಿಲ್ಲ!)

ಇತ್ತೀಚಿಗೆ ಕನ್ನಡ ಸರಿಯಾಗಿ ಬರದವ್ರೂ ನಮ್ಮ ಬ್ಲಾಗನ್ನ ನೋಡಲಾರಂಭಿಸಿದ್ದಾರೆ ಅನ್ನಿಸುತ್ತದೆ ( ಪ್ರಾಯಶ: ಕೊನಾರ್ಕಿನ ಫೋಟೋಗಳ ಕಾರಣವೋ ಏನೋ) .ನಾನು ಹೆಣ್ಣು ಬಸ್ಸಿನ ಬಗ್ಗೆ ಬರೆದ ಬ್ಲಾಗಿಗೆ ಮಹನೀಯರೊಬ್ಬರು ಕಮೆಂಟ್ ಬರೆದಿದ್ದಾರೆ . ಅವರ ಬರಹದ ಅತ್ಯುತ್ತಮ quality ಯನ್ನ ನೋಡಿ, ಅದರ ಬಗ್ಗೆ ನಾಲ್ಕು ಸಾಲು ಬರೆಯ ಬೇಕು ಅಂತ ಕಂಡಿತು. ಮೊದಲು ಅವರ ಕಮೆಂಟು ಓದಿ. ಬರೆದವರು ಕಾಂಡಂಮ್ ಡಾಟ್ಸ್! ಅದೇನು ಹೆಸರೋ ತಿಳಿಯಲಿಲ್ಲ, ಬಿಡಿ, ಅವರಿಷ್ಟ.

"condumdots said...
Man!, what is your qualification and do you consider yourself as a big literary giant?. you have such a mean taste and put it in your blog. What the hell that this blog is serving any purpose?.Do you think any damn thing that you write will be accepted by people?.For the sake of hell, where were u schooled?. "

Man!, what is your qualification and do you consider yourself as a big literary giant?. -
ಅಲ್ಲಾ , ನಾನು ಏನು ಓದಿದರೆ ಇವರಿಗೇನಂತೆ?, ನಾನು ದೊಡ್ದ ಸಾಹಿತಿ ಅಂತ ಎಲ್ಲದರೂ ಹೇಳಿದ್ದೀನಾ? ಮತ್ತು ಇಷ್ಟಕ್ಕೂ ಇದು ನನ್ನ ಬ್ಲಾಗು ಅಲ್ಲ! "ನಮ್ಮ ಬ್ಲಾಗು" ಅನ್ನುವುದನ್ನ ಗಮನಿಸುವ ವ್ಯವಧಾನವಿಲ್ಲದರ ಬಗ್ಗೆ ನನ್ನ ಖೇದವಿದೆ.

What the hell that this blog is serving any purpose?- ಇದರ ಬಗ್ಗೆ ನಮ್ಮ ಮೊದಲ ಬರಹ ಓದಬೇಕಾಗಿ ಮಹನೀಯರಲ್ಲಿ ಕಳಕಳಿಯ ವಿನಂತಿ.

Do you think any damn thing that you write will be accepted by people?
ಅದ್ಕೇ ದಿನಾ ಒಂದು ೧೦೦-೨೦೦ ವಿಸಿಟ್ ಗಳು ಆಗುತ್ತಿರುವುದು ಮತ್ತು, ದಟ್ಸ್ ಕನ್ನಡದವರು ನಮ್ಮ ಬಗ್ಗೆ ಬರೆದಿದ್ದು. ಇಲ್ಲಾ ಅಂದ್ರೆ ಎಲ್ಲರು ಉಗಿತಿದ್ರು ಸ್ವಾಮಿ!

For the sake of hell, where were u schooled?. - ಪುಣ್ಯಾತ್ಮಾ, ನಿಂಗ್ಯಾಕೋ ಅದರ ಕಷ್ಟ! ನಾನು ಎಲ್ಲಾದರೂ ಓದಿರುತ್ತೇನೆ, ಏನಾದರೂ ಓದಿರುತ್ತೇನೆ. ನೀನು ನಂಗೇನು ಕೆಲಸ ಕೊಡಿಸುತ್ತೀಯಾ?!! funny fellow!
( ಏಕವಚನ ಪ್ರಯೋಗಕ್ಕೆ ಕ್ಷಮೆ ಇರಲಿ, ತಾವು ಬರೆದ ಧಾಟಿಯಲ್ಲೇ ಉತ್ತರಿಸಬೇಕಾಯಿತು. ಇಂಗ್ಲೀಷಿನಲ್ಲಿ ನಿಮ್ಮಷ್ಟು ಪಂಡಿತನಲ್ಲ
ಬಂದರೂ ಅದನ್ನು ಎಲ್ಲಾ ಕಡೆ ತೋರಿಸಿಕೊಳ್ಳುವ ಅಗತ್ಯವಿಲ್ಲ )
ನಾನು ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಕೇಳೋಕೆ ಹೋಗುವುದಿಲ್ಲ. ನಿಮ್ಮ ಬರಹ ನೋಡಿದರೆ ಪಂಡಿತರಂತೆ ಕಾಣುತ್ತೀರಿ.

ಇಷ್ಟಕ್ಕೂ ಈ ಬ್ಲಾಗನ್ನ ಬಂದು ನೋಡಿ , ಓದಿ ಅಂತ ತಮಗೆ ಹೇಳಿಲ್ಲ, ಬೇಕಾದರೆ ನೋಡಿ, ಇಲ್ಲವಾದರೆ ಸುಮ್ಮನಿರಿ. ಇಲ್ಲಿ ಬಂದು ಪರಚಿಕೊಳ್ಳವುದು - ಇತ್ಯಾದಿ ಮಾಡುವ ಅವಶ್ಯಕತೆಯಿರುವುದಿಲ್ಲ.

ನಾನು/ನಾವು ಬರೆದದ್ದು ಸರಿಯಿಲ್ಲವಾದರೆ ಅದನ್ನ ಹೇಳುವ ರೀತಿಯಲ್ಲಿ ಹೇಳಿ. ಯಾರು ಕೂಡಾ ಪರಿಪೂರ್ಣರಲ್ಲ. ಈ ತರಹದ ಕೆಟ್ಟ ಪದ ಪ್ರಯೋಗಗಳನ್ನ ಮಾಡಿದರೆ ಮನಸ್ಸಿಗೆ ನೋವಾಗುತ್ತದೆ.

ಮೋಟುಗೋಡೆಯನ್ನ ನಮ್ಮ ಜೊತೆಗೇ ಇಣುಕುತ್ತಿರುವ ಓದುಗರು ದಯವಿಟ್ಟು ಪ್ರತಿಕ್ರಿಯಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಹಾಂ, ಪಂಡಿತೋತ್ತಮ ಕಾಂಡಂಮ್ ಡಾಟ್ಸ್, ಧೈರ್ಯ ಇದ್ದರೆ ತಮ್ಮ ಹೆಸರು ಹೇಳುವ ಪ್ರಯತ್ನ ಮಾಡಬಹುದು. ಇಷ್ಟೆಲ್ಲ ಮಾತಾಡುವವರಿಗೆ ಧೈರ್ಯ ಇರಬಹುದಪ್ಪ, ಅಲ್ವಾ?

Friday, May 18, 2007

ಒಂದೆರಡು ಹನಿಗಳು

ಎಂದೋ ಬರೆದು ಬಚ್ಚಿಟ್ಟಿದ್ದ ನಾಲ್ಕು ಪುಟ್ಟ ಹನಿಗಳನ್ನು ಈಗ ಧೈರ್ಯದಿಂದ ಪಬ್ಲಿಷ್ ಮಾಡುತ್ತಿದ್ದೇನೆ; ಸ್ವೀಕರಿಸಿ.. (!)

ನೀನು ದಟ್ಟ ಕಾಡಿನ ಮಧ್ಯೆ
ಸುಪ್ತವಾಗಿ ಹರಿಯುವ ನಿತ್ಯನದಿ
ನಾನು, ಯಾರಿಗೂ ಕಾಣದಂತೆ
ಗುಪ್ತವಾಗಿ ಬಂದು ನೀರು ಕುಡಿದುಹೋಗುವ ಹುಲಿ!

* * *

ಅರಳಿದೆ ನೀನು:
ಸೂರ್ಯನ ಬೆಳಕಿಗೆ ಅರಳುವಂತೆ ಹೂವು
ನಕ್ಕೆ ನೀನು:
ದುಂಬಿಯ ಕಚಗುಳಿಗೆ ನಗುವಂತೆ ಹೂವು
ಸುಖದಲ್ಲಿ ನರಳಿದೆ ನೀನು:
ಮಕರಂಧವನ್ನು ಕಳೆದುಕೊಳ್ಳುವಾಗ ನರಳುವಂತೆ ಹೂವು

* * *

ಇಲ್ಲಿ ಭರ್ಜರಿ ಚಳಿಯಿದೆ:
ಒಂದು ಅಗ್ಗಿಷ್ಟಿಕೆಗಾಗುವಷ್ಟು.
ಕನಿಷ್ಟ ಎರಡು ಕಂಬಳಿ ಬೇಕು;
ಅಥವಾ ಒಂದು ಐಶ್ವರ್ಯ ರೈ ಸಾಕು!

* * *

ನಿನ್ನ ಬೆವೆತ ದೇಹದ ಜೊತೆ
ನಾನು ಬೆರೆತು ರಚಿಸಿದ ಕಾವ್ಯದ ಹೆಸರು
'ಕಾಮ'

Thursday, May 17, 2007

ಮೋಟುಗೋಡೆಯನ್ನ ಜಗತ್ತು ಇಣುಕಲು ಹೊರಟಿದೆ!

ನಾವು ಮೂರು ಜನ, ಸಂದೀಪ, ಸುಶ್ರುತ, ಮತ್ತೆ ನಾನು ಈ ಬ್ಲಾಗನ್ನ ಮೊದಲು ಆರಂಭಿಸಿದಾಗ ಬಹಳ ಅಳುಕು ಇತ್ತು, ಜನ ಏನಂದುಕೊಳ್ಳುತ್ತಾರೋ ಅಂತ. ಆಮೇಲೆ ನಮ್ಮ ಜೊತೆ ಹರ್ಷನೂ ಬಂದು ಸೇರಿಕೊಂಡ. ಟೀಮು ನಾಲ್ಕಾಯಿತು. ಕೆಲವರು ಹೊಗಳಿದರು, ಇನ್ನು ಕೆಲವರು ತೆಗಳಿದರು, ಮತ್ತೆ ಕೆಲವರು ಮೂಗು ಮುರಿದರು. ನಮಗೇನೂ ಬೇಜಾರಿಲ್ಲ! ನಮ್ಮ ಕೆಲ್ಸ ನಾವು ಮುಂದುವರಿಸಿಕೊಂಡು ಬಂದೆವು.

ಈಗ ನೋಡಿದರೆ, ಹೀಗಾಗಿದೆ! ನಮ್ಮ ಪ್ರಯತ್ನವನ್ನ ಕನ್ನಡದ ಪ್ರಮುಖ ವೆಬ್ ಸೈಟ್ ದಟ್ಸ್ ಕನ್ನಡ ಗಮನಿಸಿದೆ, ನಮ್ಮ ಬಗೆಗೆ ನಾಲ್ಕು ಮಾತುಗಳನ್ನಾಡಿದೆ.

ನಾವು ತೀರಾ ಕೆಟ್ಟದ್ದನ್ನಂತೂ ಮಾಡುತ್ತಿಲ್ಲ ಅಂತ ಸಮಾಧಾನ ನಮಗೆಲ್ಲ!

ಹೀಗೇ ನಿಮ್ಮ ಪ್ರೋತ್ಸಾಹ ಮುಂದುವರೆಸಿ, ನಾವೂ ಇಣುಕುವುದನ್ನ ಮುಂದುವರಿಸುತ್ತೇವೆ.

ಇತೀ ನಿಮ್ಮ,
ಇಣುಕುವವರು.

Monday, May 14, 2007

ಕೊನಾರ್ಕಿನ ಕ್ಲಿಕ್ಕುಗಳು!

ಕೊನಾರ್ಕಿನ ಸೂರ್ಯ ದೇಗುಲದ ಚಿತ್ರಗಳು ಇವು. ಪ್ರಾಯಶಃ ಯಾವ ಚಿತ್ರಗಳಿಗೂ ವಿವರಣೆ ಬೇಕಿರುವುದಿಲ್ಲ ಅಂದುಕೊಂಡಿದ್ದೇನೆ. ಆದರೂ ಕೆಲವು ಚಿತ್ರಕ್ಕೆ ಅಡಿಬರಹ ನೀಡಿದ್ದೇನೆ. ಬಾಕಿ ಉಳಿದವೆಲ್ಲ "ನೋಡಿ ಕಲಿ, ಮಾಡಿ ತಿಳಿ".~~~~~~

ಇದು ಪ್ರೇಮ ಗಣಿತ

"ಒ೦ದ್ರಲ್ಲಿ ಒ೦ದು ಹೋದ್ರೆ "ಕೈ"ಲಿ ಎರಡು


~~~~


ಕಸರತ್ತಿಗೇ ಸವಾಲ್


~~~~~~


ಪಾಪು:- ಅಮ್ಮಾ, ಅಮ್ಮಾ ಇವ ಮಾಮಾ ಅಲ್ವಾ?
ಅಮ್ಮ:- (ಫಟಾರ್ ಅ೦ತಾ ಎರಡು ಬಾರಿಸಿ) ಹೇಯ್, ಹಾ೦ಗೆಲ್ಲಾ ಹೇಳ್ಬಾರದು.
(ಪಾಪ ಮಗು.... ಮಾಮನ್ನಾ ಹಾ೦ಗೆ ನೋಡಿತ್ತೋ ಏನೊ. ನೋಡಿದ್ದನ್ನಾ ಹೇಳೋದು ತಪ್ಪಾ? (ಇದು ನಾನು ಫೊಟೋ ಕ್ಲಿಕ್ಕಿಸುವಾಗ ಬೆ೦ಗಾಲಿ ಕುಟು೦ಬವೊ೦ದರ ಪ್ರಹಸನ) )


~~~~~~~~ನಾಲ್ಕು ಗುಣಿಸು ಒ೦ದು = ಐದು
ಸೂಯ೯ ಚಕ್ರವೊ೦ದರಲ್ಲಿ ಇದು ಒ೦ಭತ್ತರ ಮುಳ್ಳು.~~~~~~~~~ಇದು ಕೋನಾಕಿ೯ನ ಇತಿಹಾಸ

~~~~~~

Thursday, May 10, 2007

ಹೆಣ್ಣು ಬಸ್ಸು ಗರ್ಭಿಣಿ ಯಾಕಾಗುವುದಿಲ್ಲ

ಗುರು ಗಣೇಶನ ಬ್ಲಾಗಲ್ಲಿ ಸಂದೀಪ ಬರೆದ ಗಂಡು ಬಸ್ಸಿನ ಲಿಂಕ್ ನೋಡಿದ ಕೂಡಲೇ ಈ ಮುಂದುವರಿಕೆ ನೆನಪಾಯಿತು.

"ಈಗೀಗ ಬರುತ್ತಿರುವ ಬಸ್ಸುಗಳಿವೆಯಲ್ಲ, ಸಿಟಿ ಬಸ್ಸುಗಳಂತವು; ಎರಡು ಬಾಗಿಲಿನವು. ಅವು ಹೆಣ್ಣು ಬಸ್ಸುಗಳು. ಯಾಕೆಂದರೆ ಅವಕ್ಕೆ ಎರಡು ಬಾಗಿಲುಗಳು."

ಹಾಗಾದರೆ ಹೆಣ್ಣು ಬಸ್ಸು ಗರ್ಭಿಣಿ ಯಾಕಾಗುವುದಿಲ್ಲ?

ಯಾಕೆಂದರೆ, ಗಂಡಸರು ಹಿಂದಿನಿಂದ ಹತ್ತುತ್ತಾರೆ, ಅದಕ್ಕೆ.