Monday, December 14, 2009

ಥಾಯ್ಲೆಂಡಿನ ಕಥೋಯ್‌ಗಳು

-ಡಾ| ಜೆ. ಬಾಲಕೃಷ್ಣ

ನೀವು ಥಾಯ್ಲೆಂಡ್‌ಗೆ ಭೇಟಿ ನೀಡಿದಲ್ಲಿ ಪಟ್ಟಾಯ ಹಾಗೂ ಬ್ಯಾಂಕಾಕ್‌ಗಳಿಗೆ ಭೇಟಿ ನೀಡುವುದು ಖಚಿತ. ಬೀಚ್ ಹಾಗೂ ನಗರದಲ್ಲಿ ಸುತ್ತಾಡುವುದರ ನಡುವೆ ಪಟ್ಟಾಯಾದಲ್ಲಿನ ಆಲ್ಕಜಾರ್ ಕ್ಯಾಬರೆ ನೋಡುವುದನ್ನು ಮರೆಯಬೇಡಿ. ಜಗತ್ಪ್ರಸಿದ್ಧವಾದ ಈ ಕ್ಯಾಬರೆ ಕಳೆದ ಇಪ್ಪತ್ತು ವರ್ಷಗಳಿಂದ ನಡೆಯುತ್ತಿದೆ. ಸುಮಾರು ನಾಲ್ಕು ನೂರು ಅತ್ಯಂತ ಸುಂದರ ಸ್ತ್ರೀ ಕಲಾವಿದರನ್ನು ಹೊಂದಿರುವ ಈ ಕ್ಯಾಬರೆ ಒಂದೂ ಒಂದೂವರೆ ಗಂಟೆಗಳ ಕಾಲ ವೀಕ್ಷಕರನ್ನು ಮನಮೋಹಕ ನೃತ್ಯಗಳಿಂದ, ಅತ್ಯದ್ಭುತ ರಂಗಸಜ್ಜಿಕೆಯಿಂದ ಮಂತ್ರಮುಗ್ಧಗೊಳಿಸುತ್ತದೆ. ಆಲ್ಕಜಾರ್ ಕ್ಯಾಬರೆ ವಿಶ್ವದರ್ಜೆಯದಾಗಿದ್ದು ಅದನ್ನು ಪ್ಯಾರಿಸ್‌ನ ಜಗದ್ವಿಖ್ಯಾತ ಲಿಡೊ ಮತ್ತು ಮೌಲಿನ್ ರೂಗೂ ಹೋಲಿಸಲಾಗುತ್ತದೆ.

ಸಾವಿರದ ಇನ್ನೂರು ಆಸನಗಳುಳ್ಳ ಸಭಾಂಗಣದಲ್ಲಿ ನೀವು ಕೂರುತ್ತಿದ್ದಂತೆ ನಿಮಗೆ ಕೋಲಾ ಅಥವಾ ಬಿಯರ್ ನೀಡಲಾಗುತ್ತದೆ. ಥಾಯ್ ಹಾಗೂ ಇಂಗ್ಲಿಷಿನ ಹಾಡುಗಳಿಗೆ ದಂಗುಬಡಿಸುವ ಸೌಂದರ್ಯದ, ನೀಳ ನಡುವಿನ, ತುಂಬಿದೆದೆಯ ಸುಂದರಿಯರು ನರ್ತಿಸುತ್ತಾರೆ. ಹಲವಾರು ಥಾಯ್‌ನ ಸಾಂಪ್ರದಾಯಕ ನೃತ್ಯಗಳೂ ಇರುತ್ತವೆ. ನಿಮಗೆ ಸಮಯಹೋಗುವುದೇ ತಿಳಿಯುವುದಿಲ್ಲ. ಇಷ್ಟು ಬೇಗ ಮುಗಿದುಹೋಯಿತೇ ಎನ್ನಿಸುತ್ತದೆ.......
ಪೂರ್ತಿ ಓದಿಗೆ ಭೇಟಿ ಕೊಡಿ: ಅಂತರಗಂಗೆ

Sunday, December 6, 2009

ಕ್ರಿಯೇಟಿವ್ ಕಾ೦ಡೋಮುಗಳು

ಜಾಹೀರಾತುಗಳೇ ಹೀಗೆ, ಎಷ್ಟು ಚಿಕ್ಕದಾಗಿ ಚೊಕ್ಕದಾಗಿ ಹೇಳಲಾಗುತ್ತೋ ಅಷ್ಟು ಪರಿಣಾಮಕಾರಿ. ಎಕ್ಸ್ ಎಕ್ಸ್ ಎಲ್ ಸೈಜ್ ಕಾ೦ಡೋಮ್ ಬಗ್ಗೆ ಸಹ ಪುಟ್ಟದಾಗಿಯೇ ಹೇಳಬೇಕಾಗುತ್ತದೆ ಇಲ್ಲಿ. ಉದ್ದುದ್ದ ಭಾಷಣಕ್ಕೆ ಅವಕಾಶ ಇಲ್ಲ. ಪುಟ್ಟದಾದರೇನ೦ತೆ ತಟ್ಟಬೇಕಾದಲ್ಲಿ ತಟ್ಟಿ ಹೇಳುವ೦ತ ಹದಿಮೂರು ಪ್ರಶಸ್ತಿ ವಿಜೇತ ಕಾ೦ಡೋಮ್ ಜಾಹೀರಾತುಗಳು ಇಲಿವೆ. ನೋಡಿ ಹೇಗಿದೆ ಅದು ಅ೦ತಾ.

ಕೃಪೆ: ವೇದವ್ಯಾಸ

Wednesday, December 2, 2009

ನಾ ಕುಣೀಬೇಕ..

ಮೋಟುಗೋಡೆಯಲ್ಲಿ ಇಷ್ಟೆಲ್ಲ ಕಂಡಮ್ಯಾಲ, ಕನ್ನಡದಲ್ಲಿ ಶೃಂಗಾರ ಸಾಹಿತ್ಯ ಅಂಬೋದು ಬಹಳ ಸಮೃದ್ಧವಾಗಿಯೇ ಅದs ಅಂತ ನಿಮಗ ಈಗಾಗ್ಲೇ ಅನಿಸಿರ್ಲಿಕ್ಕೆ ಸಾಕು. 'ಅದರ' ಬಗ್ಗೆ ಯಾರ್ ಬರೆದಿಲ್ಲ ಹೇಳ್ರಿ? ಪೆನ್ನು ಹಿಡಿದ ಪ್ರತಿ ಸಾಹಿತಿಯೂ ಅದಕ್ಕ ತಂದೊಂದು ಗರಿ ಸೇರಿಸಿಯೇ ಸೇರಿಸಿಯಾನ. ಬಹುಶಃ ಈ ಎಲ್ಲಾನೂ ಒಟ್ಟುಮಾಡಿ ಒಯ್ದು ಮುಂದಿಟ್ರ, ವಾತ್ಸಾಯನನೇ ನಿಬ್ಬೆರಗಾದಾನು! ಮೋಟುಗೋಡೆ ಹುಡುಗರೇನು ಅಂತಹ ಪ್ರಯತ್ನಕ್ಕ ತೊಡಗ್ಯಾರಾs ಅಂತ ಕೇಳಬ್ಯಾಡ್ರಿ ಮತ್ತ!

ಶೃಂಗಾರ ಸಾಹಿತ್ಯದ ಭಂಡಾರಕ್ಕೆ ನಮ್ಮ ಕಂಬಾರರು ಸಲ್ಲಿಸಿದ ಒಂದು ಕವಿತಾ, ಇಕೋ ಇಲ್ಲಿ ಅದ. ಇದು ಈಗಷ್ಟೇ ಸುರು ಆಗಿರೋ ಚಳಿಗಾಲಕ್ಕೆ ಮೋಟುಗೋಡೆ ನೀಡ್ತಿರೋ ಹೊದಿಕೆ. ಕಾಮೋನ್ಮತ್ತ ಹೆಣ್ಣೊಬ್ಬಳು ಹೀಗೆಲ್ಲ ಹಾಡಿಯಾಳಾ ಅಂತ ನಿಮಗ ಅನುಮಾನ ಬಂದ್ರ ಮಾತ್ರ, ಉತ್ತರ ನಮ್ ಹತ್ರಾನೂ ಇಲ್ಲ ನೋಡ್ರಿ!

ನಾ ಕುಣೀಬೇಕ ಮೈ ಮಣೀಬೇಕ..

-ಚಂದ್ರಶೇಖರ ಕಂಬಾರ

ನಾ ಕುಣೀಬೇಕ ಮೈ ಮಣೀಬೇಕ ಕಾಲ್ದಣೀಬೇಕ ತಾಯಿ!
ನವಿಲಿನ್ಹಾಂಗ, ಎಳಿ ಮಣಿಕಿನ್ಹಾಂಗ, ತಿರತಿರಗಿಧಾಂಗ ಬಗರಿ!
ತೊಡೀ ತೆರೆದು ತಲಿ ಬಿಚ್ಚಿ ಕೈಯ ಎದಿ ಮಿದುವಿನಾಗ ಹುಗದು,
ಬಗಲ ಬೆವತು ಅಹ ನಾರಬೇಕ ಗಿಜಗಳಿಕಿ ಸಿಂದಿಹಣ್ಣು.

ಕಾದ ತಗಡ ಈ ತೊಗಲಿನಾಗ ಹೊತ್ತೇತಿ ಕಾಡಬೆಂಕಿ
ಸಂದಿಗೊಂದಿ ಬುಗುಬುಗು ಅಂದು ತಲಿಗೂದಲುರಿಯ ಜ್ವಾಲಿ
ಸುಡಸುಡs ಇಂಥ ಈ ಸಪ್ಪ ಬಾಳೆ ನಿಂತೇನ ದೀಪಕಂಬ!
ಬಣ್ಣಬಣ್ಣದ ನೆರಳ ತಿರಗತಾವ ಊರ ಕೇರಿ ತುಂಬ.

ಕಣ್ಣ ಕಾಡಿಗೀ ಕೆನ್ನಿಗಿಳಿಧಾಂಗ ಮೂಡತಾವ ನೆನಪ
ಕೌದಿಯೊಳಗ ಹುಡಿಕ್ಯಾಡತೇನ ಹೊಳ್ಯಾಡತೇನ ಮತ್ತ
ಜೋಡನಾಗರಾ ತಿಡೀ ಬೀಳತಾವ ಕನಸಿನಾಗ ಬಂದಾ;
ಏನಾಡತಾವ ತಳಕ್ಯಾಡತಾವ ರೆಂಟೀಯ ಸಾಲ ಹಿಡದಾ.

ಬೆವರ ಆಗಿ ಹರಿದಾಡತೇನು ಇಡಿ ಹೊಲಾ ತುಂಬಿಕೊಂಡಾ
ಹಸಿಗೆ ಹಸೀ ಬೆರೆತಾಗ ಅಯ್ ಶಿವನ ಏಳತಾವ ನವಿರಾ!
ಬೆಳಿ ಏಳತೈತಿ ತೆನಿಗೊಂದ ಹಕ್ಕಿ ನಗತಾವ ಒಂದಸವನಾ
ಕಣ್ಣ ತೆರೆದರೇನೈತಿ ಹಾಳು ಮುದಿರಾತ್ರಿ ಮಗ್ಗುಲಾಗ!

ಕಡೀಬೇಕ ಅಹ ಕಚ್ಚಬೇಕ ಹಿಂಗಪ್ಪಬೇಕೊ ನಾನಾ
ಗಿಣಿ ಹಣ್ಣಿಗೀ ಜೋತು ಬಿದ್ಧಾಂಗ ಎಳೀಬೇಕೊ ನಿನ್ನಾ
ತೆಕ್ಕಿಮುಕ್ಯಾಗ ನೆಗ್ಗಬೇಕೊ ಮೀಸಲದ ಮಿಂಡ ಬಾರೊ
ಮಿಂಡಿ ಬಿದರ ನಿಂತೇನೊ ತೆರೆದು ಬಿರುಗಾಳಿಯಾಗಿ ಸೇರೋ

ನಿನ್ನ ಬಸವಿ ಬಸವಳಿಯತೇನೊ ಬಾ ಮೀಸೆ ಹೊತ್ತ ಧೊರಿಯೆ
ಎಲ್ಲೆಲ್ಲಿ ಹಿಡದರಲ್ಲಲ್ಲಿ ಬೆಣ್ಣೆ ಕರಗುವೆನೊ ತೋಳಿನೊಳಗೆ
ಕೋಳಿ ಒಣಗೀಯ ಹೋಳಿನಂಥ ತುಟಿಗಲ್ಲ ಕಡಿಯೊ ಗೆಣಿಯಾ
ಘಾಸಿಯಾಗಿ ಕನಸಿನಲಿ 'ಮಾವಾ' ಅನ್ನುವೆನೋ ಮೀಸಲೊಡೆಯ!

ಹಾಳಬಾಂವ್ಯಾಗ ನೀರ ಸೆಲಿ ಝಮ್ಮಂತ ಒಡೆದು ಬರಲಿ
ಕೆಳಗ ಹಾಕಿ ನೀ ಕುಟ್ಟೊ ನನ್ನ!
ಏ ನಾದೊ ನನ್ನ
ಲೇ ಮಾಡೊ ಜಿಬ್ಬಿಜಿಬ್ಬಿ!
ಅಲ್ಲಿತನಕ, ತೊಡಿ ಬೆವರುತನಕ ನವಿರೇಳುತನಕ, ತೆನಿ ಮೂಡುತನಕ
ನಾ ಕುಣೀಬೇಕ ಮೈ ಮಣೀಬೇಕ ಕಾಲ್ ದಣೀಬೇಕ ತಾಯಿ
ಹುಚ್ಚಿಯ್ಹಾಂಗ, ಮೈ ತುಂಬಿಧಾಂಗ ಬೆದಿಮಣಿಕಿನ್ಹಾಂಗ ಆಗಿ!

|| ಇದನ್ನ ಎಂ.ಡಿ. ಪಲ್ಲವಿ ಹಾಡಿದ್ದೂ ಒಸಿ ಕೇಳ್ರಿ ||