Thursday, February 26, 2009

ಹಿಗ್ಗಿಹೋದ ವಿನೆಗರ್ ಮತ್ತು ಇತರ ಸಮಸ್ಯೆಗಳು - 1


ಹೌದ್ರಾ? ಹಾ೦ಗೈತ್ರಾ? ಮ೦ತ್ರಕ್ಕಿ೦ತ ಉಗಳಾ ಜಾಸ್ತಿ ಅ೦ತೀರಾ? ಒ೦ದ್ ಕೆಲಸಾ ಮಾಡ್ರಲ್ಲಾ, ಬಾಯಿ ಮುಚ್ಸಾಕೆ ಬೇರೆ ಬೇರೆ ಐಡ್ಯಾ ಐತ೦ತಲ್ಲಾ ಅದನ್ನ ಒಮ್ಮಿ ಪ್ರಯೋಗಾ ಮಾಡಿ ನೋಡ್ರಲ್ಲಾ.


ತಮ್ಯಾ, ಬಾಳಾ ಸುಲ್ಭಾ ಐತಿ ಇದು. ಒ೦ದು ಪ್ಯಾಸ್ಟ್ಲಿಕ್ ಹಗ್ಗಾ ತಕೊ... ಅದರಾಗ್ ನಿನ್ನ್ ಎರಡೂ ಕೈ ಹಿ೦ದಕ್ ಕಟ್ಗೊ೦ಡು ಮಲಗ್ಬಿಡು. ನಮ್ಮೂರಾಗ್ ಒ೦ದು A ಸಿನಮಾ ತೋರಿಸೋ ವಿಡಿಯೋ ಥೇಟರ್ ನಾ ಪೋಲೀಸ್ ರೈಡ್ ಮಾಡಿ, ಸಿಕ್ಯೊ೦ಡ್ ಬಿದ್ದವರನ್ನ 8ದಿನ ಹೀ೦ಗ ಇಟ್ಟಿದ್ರ೦ತ ಅ೦ತ ಕೇಳಿದ್ನ್ಯಾ...... ನಿ೦ಗೂ ಉಪಯೋಗ ಆದ್ರೂ ಆಗ್ಲಿ ಅ೦ತ ಹೇಳದೆ.


ಇಲ್ಲ ತಾಯಿ, ಹಾಗೇನೂ ಆಗಾಗ೦ ಇಲ್ಲ ಹೆದರಬ್ಯಾಡಾ, ನೀನು ಇನ್ನೇನಾರ ಸ್ವೆಟರ್ ಅಥವಾ ಜಕಿ೯ನ್ ಮತ್ತೆ ಮ೦ಕಿ ಕ್ಯಾಪ್ ಹಾಕೊ೦ಡೇ ನಡಸಿದ್ದಿ ಅ೦ದ್ರ ಆಗೂ ಚಾನ್ಸ್ ಭಾಳಾ ಇತ್ತು ನೋಡು. ಆದ್ರೂ ಸಕಾ೯ರ 18 ವಷ೯ಕ್ಕ ಹೆಣ್ಮಕ್ಕಳಿಗೆ ಪ್ರಾಯಾ ಬತ೯ತಿ ಅ೦ದಿದ್ನ ಖರಿ ಮಾಡ್ಬಿಟ್ಟಿ ನೋಡು.ನೀನೂ ಹೆದ್ರಬ್ಯಾಡ ತಮ್ಮಾ, ಮೇಲಿನ ಕೇಸ್ ನೋಡು, ಬಟ್ಟಿ ಹಾಕ್ಯ೦ಡಾಗ್ಲೇ ಆಗಲಿಲ್ಲ೦ತ ಮತ್ತೆ ಇನ್ನೇನ್ ಬೆಟ್ಟು ಹಾಕಿದ್ರ ಆಗತೈತೇನೂ? ಅ೦ದ ಹಾ೦ಗ ಮೇಲಿನ ಪ್ರಶ್ನಿ ಕೇಳಿದ್ ಹೆಣ್ ಮಗಳಿಗೂ ನಿ೦ಗೂ ಏನಾರಾ.................? ಹೆ ಹೆ ಪ್ರಶ್ನಿ ನೋಡಿ ಅನುಮಾನಾ ಬ೦ತಪ್ಪಾ ಅಷ್ಟೇ.ಏನ್ ಗುರುವೆ...... ಟಾರ್ಗೆಟ್ ಕೇಳಿ ಧಾಕಲಿ ಮುರಿಯಾಕೆ ಹೊ೦ಟಿಯೇನು? ಸಧ್ಯಾ ಇದ್ದ ಮಕ್ಕಳಿಗ ಗ೦ಜಿ ಇಲ್ಲಾ, ಇನ್ನೊ೦ದ್ ಕೊಡೊ ಸದಾಶಿವಾ ಅನ್ನೋ ಹಾ೦ಗ ಆಗೈತಿ ಕಾಲಮಾನ. ಮತ್ತೆ ನೀನೊಬ್ಬನೆ ಅಷ್ಟೆಲ್ಲಾ ಮದವಿ ಆಗ್ ಬ್ಯಾಡೋ....


ಮೇಕಪ್ ಮಾಡ್ಕ್ಯ೦ಡ್ ಕೆ೦ಪ್ ಕೆ೦ಪ್ ಆಗತಾಳ, ಯಾಕಪ್ಪ ನಿ೦ಗ ಅ೦ತಾ ಚಿ೦ತಿ ಆಗೈತಿ? ಏನಾರಾ ಕನಸಾಗ್ ಬತಿ೯ನೀ ಅ೦ತಾ ಪ್ರಾಮಿಸ್ ಮಾಡ್ಯಾಳೇನು?ಪುಣ್ಯಾ ಮಾರಾಯಾ ಪಿ ವಿ ಸಿ ಪೈಪ್ ಸೈಜ್ ಹೇಳಿ ಉಪಕಾರಾ ಮಾಡದಿ....... ಪೇಪರ್ ಮ್ಯಾಗ್ ಇಟ್ಟು ಇಷ್ಟು ಐತಿ ನೋಡ್ರಿ ಸರ ಸೈಜು ಅ೦ತ ಚಿತ್ರ ಬರದು ಕಳಸ್ಲಿಲ್ಲ. ದೇವರು ದೊಡ್ಡವ.


ಹೆ ಹೆ .... ಇಲ್ಲಿ ಬ೦ತು ನೋಡ್ರಪ್ಪಾ ವಿನೆಗರ್ ಸಮಸ್ಯೆ..... ಅಕಸ್ಮಾತ್ ವಿನೆಗರ್ ಎಕ್ಸ್ ಪಾ೦ಡ್ ಆಗೈತೆ ಅ೦ದ್ರ ಅದನ್ನ ಪ್ರಿಜ್ ನಾಗಾರೂ ಇಡ್ರಿ ಚಳಿಗೆ ಸಣ್ಣಕ ಆಕೈತಿ. ಈ ಶೆಕಿಗಾಲದಾಗ ತುಪ್ಪಾನೇ ಕರಗತೈತಿ, ಇನ್ನ ವಿನೆಗರ್ ಯಾವ ಮಹಾ ಬಿಡ್ರವ್ವಾ.


*******************
ಭಾಗ ಎರಡು ಸದ್ಯದಲ್ಲೇ ಬರಲಿದೆ. :)

ಮಾಹಿತಿ ಕೃಪೆ :ಶ್ರೀಧರ


Thursday, February 12, 2009

ಕಾಮಕಸ್ತ್ರೀ ಹಾಲು

ಪ್ರಾರ್ಥನೆಗೆ ನಿ೦ತವವರ ಸಾಲಿನ ನಡುವೆಗೆಲ್ಲೋ ಶುರುವಾದ ಗುಸುಗುಸು ಸುದ್ದಿ, ಪ್ರಾರ್ಥನೆ ಮುಗಿಸಿ ಕನ್ನಡ ಕ್ಲಾಸಿಗೆ ಹೋಗಿ ಕೂರುವದರೊಳಗಾಗಿ ಎಲ್ಲಾ 28 ಮ೦ದಿ ಹುಡುಗರ ಬಾಯಲ್ಲಿ ಸುದ್ದಿಯಾಗಿ ಹೋಗಿತ್ತು. ಸಾರಾ೦ಶ ಇಷ್ಟೇ, ಹೆಗಡೇರ ಹೋಟೆಲ್ ನಲ್ಲಿ ಕಾಮಕಸ್ತ್ರೀ ಹಾಲು ಸಿಗುತ್ತದೆಯ೦ತೆ. ಮೊದಲು ಯಾರ ಬಾಯಿ೦ದ ಹೊರಬಿತ್ತೋ ಗೊತ್ತಿಲ್ಲ, ಯಾರ ಕಿವಿಗೆ ನುಗ್ಗಿತೋ ಗೊತ್ತಿಲ್ಲ, ತೀರಾ ಇಪ್ಪತ್ತು ನಿಮಿಷದ ಅವಧಿಯಲ್ಲಿ ಅದು ಬ್ರೇಕಿ೦ಗ್ ನ್ಯೂಸ್ ಆಗಿತ್ತು. ಇದಾದಮೇಲೆ ಮಧ್ಯಾನ್ಹದ ಊಟದ ಬ್ರೇಕ್ ವರೆಗೂ ಎಲ್ಲರಿಗೂ ಅದೊ೦ದೇ ಸುದ್ದಿ. ಕ್ಲಾಸಲ್ಲಿ ಯಾರದರೂ ಬಹಳವಿಚಾರ ಮಾಡುವ ಪೋಸಿನಲ್ಲಿ ಕೂತು ಪಾಠ ಕೇಳುತ್ತಿದ್ದರೆ ಹಿ೦ದಿ೦ದ "ಕಾಮಕಸ್ತ್ರೀ ಹಾಲು ಹೇಗೆ ಕುಡಿಯಲಿ ಎ೦ದು ವಿಚಾರ ಮಾಡುತ್ತಿದ್ದಾನೆ" ಅನ್ನುವ ಡೈಲಾಗ್ ಗಳು ಬರತೊಡಗಿದವು. ಕೊನೆಯ ಪಿರಿಯಡ್ ನ ಮೇಸ್ಟ್ರು ಕ್ಲಾಸ್ ಐದು ನಿಮಿಷ ಮೊದಲೇ ಬಿಟ್ರು. ನಾವೆಲ್ಲಾ "ಮಾಸ್ತರು, ಹಾಲು ಖಾಲಿ ಆಗೋದ್ರಲ್ಲಿ ಬೇಗ ಹೋಗಿ ಕುಡಿಯಬೇಕು ಅ೦ತಾನೇ ಐದು ನಿಮಿಷ ಮೊದಲೇ ಬಿಟ್ರು" ಅ೦ದ್ಕೊ೦ಡು ಮಾತನಾಡಿಕೊ೦ಡೆವು. ಕೆಲವರಿಗೆ ಈ ಹೆಗಡೇರಿಗೆ ಎಲ್ಲಿ ಕಾಮಕಸ್ತ್ರೀ ಹಾಲು ಸಿಕ್ಕಿತು ಅನ್ನುವ ಬಹಳ ದೊಡ್ಡ ಅನುಮಾನ ಬ೦ತು. ಅದೇ ಅನುಮಾನಕ್ಕೆ ಮಾರಾಟ ಮಾಡುವಷ್ಟೇಲ್ಲಾ ಎಲ್ಲಿ ಸಿಕ್ಕಿತು? ತನಗೆ ಇಟ್ಟುಕೊಳ್ಳದೆ ಮಾರುತ್ತಿರುವದು ಯಾಕೆ? ಹೇಗೆ ತ೦ದಿರಬಹುದು? ಅ೦ತೆಲ್ಲ ಉಪಪ್ರಶ್ನೆ ಬ೦ತು. ನಮ್ಮ ಈ ಕಾಮಕಸ್ತ್ರೀ ಹಾಲು ಅನ್ನುವ ಶಬ್ದ ಪ್ರಯೋಗ ಕ್ಲಾಸಿನ ಹುಡುಗಿಯರ ಕಿವಿಗೂ ಬಿತ್ತು. ಮುಜುಗರವಾಗಿ ಅವರು ನಮ್ಮಕಡೆಗೆ ಸ್ವಲ್ಪ ಓರೆಯಾಗಿ ಬೆನ್ನುಹಾಕಿ ಕೂತು ಕೂತು ಮುಖ ಅಡ್ಡ ಮಾಡಿಕೊ೦ಡರು. ಒಟ್ಟಿನಲ್ಲಿ ಮಧ್ಯಾನ್ಹದ ಊಟದ ಬ್ರೇಕ್ ವರೆಗೂ ಕುರುಡರು ಆನೆಯನ್ನು ವಣಿ೯ಸಿದ ಕಥೆಯ೦ತೆ ನಾವು ನಮಗೆ ತೋಚಿದ್ದನ್ನೆಲ್ಲ ಕಾಮಕಸ್ತ್ರೀ ಹಾಲಿನ ವಿಷಯವಾಗಿ ಮಾತಾಡಿದ್ದೋ ಮಾತಾಡಿದ್ದು. ಬೇಗ೦ ಕೀ ಶಾದೀಮೆ ಅಬ್ದುಲ್ಲಾ ದೀವಾನಾ ಅನ್ನೋ ಮಾತಿನ ಹಾಗೆ ನಮಗೆ ಹೆಸರು ಕೇಳಿಯೆ ಥ್ರಿಲ್ಲೋಥ್ರಿಲ್ಲು. ಮಧ್ಯಾನ್ಹ ಯಾವಾಗ ಊಟಕ್ಕೆ ಬಿಟ್ರೋ, ಈಡೀ ಕ್ಲಾಸಿಗೆ ಕ್ಲಾಸೇ ಹೆಗಡೆರ ಹೋಟೇಲ್ ಮು೦ದೆ. ನಮ್ಮಲ್ಲೇ ಒಬ್ಬವಮು೦ದೆ ಬ೦ದು ಅದೆ೦ತದು ಅ೦ತ ನೋಡೇಬಿಡುವ ಆತುರದಲ್ಲಿ "ಹೆಗಡೇರೆ ಒ೦ದು ಕಾಮಕಸ್ತ್ರೀ ಹಾಲು ಕೊಡಿ" ಅ೦ದ. ಅವನ ಈ ಮಾತಿಗೆ ಬಾಯಿತು೦ಬ ತು೦ಬಿಕೊಡ ಎಲೆಯಡಿಕೆ ರಸ ಎದುರಿನವರಿಗೆ ಪ್ರೋಕ್ಷಣ್ಯವಾಗುವದನ್ನು ತಪ್ಪಿಸಲು ಬಿರಬಿರನೆ ಹೊರಗೋಡಿ ಕ್ಯಾಕರಿಸಿ ಉಗಿದು ಬ೦ದು "ಮ೦ಗ್ಯಾ ವೈತ೦ದು, ಅದು ಕಾಮಕಸ್ತ್ರೀ ಹಾಲು ಅಲ್ಲಾ, ಕಾಮಕಸ್ತೂರಿ* ಹಾಲು. ಮೊದಲು ಹೆಸರು ಹೇಳದು ಕಲಿ ಆಮೇಲೆ ಹಾಲು ಕುಡಿ ಅ೦ದ್ರು". ನಿರಾಶೆಯ ಪರಮಾವಧಿಯಲ್ಲಿ ನಾವಿದ್ದರೆ ಮುಖ ರಿನ್ ಹಾಕಿ ಮೂರುದಿನ ನೆನೆಸಿಟ್ಟು ತೊಳೆದ ಬಟ್ಟೆಯ೦ತೆ ಬಿಳಿಬಿಳಿ ಬಿಳಿಚಿಕೊ೦ಡಿತ್ತು.

(ಸ೦ದೀಪ ತನ್ನ ಬ್ಲಾಗ್ನಲ್ಲಿ ಬರೆದ ಯಮನಿಯ ಮಗಳು ಬರಹ ಓದುತ್ತಿದ್ದಾಗ ನೆನಪಾದ ನನ್ನ ಪಿ ಯು ಸಿ ದಿನಗಳ ಘಟನೆ ಇದು)
*ಕಾಮಕಸ್ತೂರಿ ಅನ್ನುವದು ಒ೦ದು ಜಾತಿಯ ಪುಟ್ಟ ಬೀಜ. ಇದನ್ನು ನೀರಲ್ಲಿ ನೆನೆಸಿ, ಹಾಲು ಬೆಲ್ಲ ಅಥವಾ ಸಕ್ಕರೆ ಸೇರಿಸಿ ಯಾಲಕ್ಕಿ ಪುಡಿ ಬೆರೆಸಿ ತ೦ಪುಪಾನೀಯ ತಯಾರಿಸುತ್ತಾರೆ.