ಫೋಬಿಯಾ ಎಂದರೆ ಭಯ ಎಂದು ಎಲ್ಲೋ ಒಂದು ಕಡೆ ತಪ್ಪಾಗಿ ಪ್ರಚಾರವಾಗಿಬಿಟ್ಟಿದೆ. ಜನರ ಮನಸ್ಸಿನಲ್ಲಿ ಆ ಹೆಸರನ್ನು ಕೇಳಿದರೇನೇ ಒಂದು ಥರ ಭಯವುಂಟಾಗುತ್ತೆ. ಫೋಬಿಯೋಫೋಬಿಯಾ ಎನ್ನುತ್ತಾರೆ ಇದನ್ನು. ನನಗೆ ಯಾವುದಾದರೂ ಫೋಬಿಯಾ ಇರಬಹುದೇ ಎಂಬ ಭಯ!
ವಾಸ್ತವದಲ್ಲಿ, ಫೋಬಿಯಾ ಪದಕ್ಕೆ ನಾನಾರ್ಥಗಳಿವೆ. ಭಯ ಎಂಬುದೂ ಒಂದು ಅಷ್ಟೆ. ಯಾವುದಾದರೂ ವಸ್ತು, ವ್ಯಕ್ತಿ, ಘಟನೆ ಬಗ್ಗೆ ಅಸಹ್ಯ, ಆತಂಕ, ತಳಮಳ - ಇವಕ್ಕೂ ಫೋಬಿಯಾ ಎಂದೇ ಕರೆಯುತ್ತೆ ಮನಸ್‍ಶಾಸ್ತ್ರ. ಕೆಲವರಿಗೆ ಈ ನಮ್ಮ ಮೋಟುಗೋಡೆಯನ್ನು ಇಣುಕಲು ಕಸಿವಿಸಿಯಾಗುತ್ತೆ. ಇಷ್ಟವಾಗುವುದಿಲ್ಲ. "ಏನಿದು, ಛೀ!" ಎನ್ನುವವರೂ ಇರಬಹುದು. ಮೋಟುಗೋಡೆಯ ವಿಷಯ ಹಾಗಿರಲಿ. ಇನ್ನೂ ಹಲವು ಸುರತ (pornography) ತಾಣಗಳಿರುವ ಕಡೆ ಇಂಥಾ ಜನರು ತಲೆಯೆತ್ತಿಯೂ ನೋಡಲೊಲ್ಲರು. ಎರೋಟೋಫೋಬಿಯಾದ ಲಕ್ಷಣ ಇದು. ಈ ಜನರು ಸುರತ ಸಾಹಿತ್ಯ, ಅಶ್ಲೀಲ ದೃಶ್ಯ, ಲೈಂಗಿಕ ಚರ್ಚೆ - ಇವುಗಳಿಂದ ದೂರ ಇರಲು ಬಯಸುತ್ತಾರೆ.
ಕೆಲವು ವರ್ಷಗಳ ಹಿಂದೆ ನಾನು ಒಂದು ತಕ್ಕಮಟ್ಟಗಿನ "ಖ್ಯಾತ" ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಸಹೋದ್ಯೋಗಿಯೊಬ್ಬರು "ಈ ಆಫೀಸಿನಿಂದ ಆಚೆ ಹೋದರೆ ಸಾಕು ಎನ್ನಿಸುತ್ತೆ ದಿನಾಲೂ ನನಗೆ. ಪ್ರತೀ ಸಲ 'ಬಾಸ್' ನನ್ನ ಕರೆದಾಗಲೂ ಎದೆ ಹೊಡೆದುಕೊಳ್ಳುತ್ತೆ" ಎಂದರು. ನಾನು, "ಅಯ್ಯೋ, ಹೆದರಿಕೊಳ್ಳೋದ್ ಯಾಕೆ? ನೀವೇನ್ ತಪ್ಪು ಮಾಡಿದ್ದೀರಾ?" ಎಂದು ಪ್ರಶ್ನಿಸಿದೆ. "ಅಲ್ಲಾ, ಅದಕ್ಕಲ್ಲಾ, 'boss' is a gay. ನನ್ನೂ ಎಲ್ಲಿ......." ಎಂದು ತಮ್ಮ ಹೋಮೋಫೋಬಿಯಾ ಪ್ರದರ್ಶನ ಮಾಡಿದರು. ಅವರ ಫೋಬಿಯಾ ಅವರನ್ನು ಬಹಳ ಬೇಗ ಅಲ್ಲಿಂದ ರಾಜಿನಾಮೆ ಕೊಡಿಸಿತ್ತು.
ಯಾರೇ ಆಗಲೀ ಕೆಲವು ವಿಷಯಕ್ಕೆ "ಲಜ್ಜೆ"ಯು ಇರಲೇ ಬೇಕು. "... ಕಾಮಾತುರಾಣಾಂ ನ ಭಯಂ ನ ಲಜ್ಜಾ" ಎಂಬ ಸುಭಾಷಿತವೊಂದಿದೆ. ಈ ಲಜ್ಜೆಯೂ ಸಹ ಮನಸ್‍ಶಾಸ್ತ್ರಜ್ಞರಿಗೆ ಫೋಬಿಯಾನೇ. ನೈತಿಕವಾಗಿ ಯೋಚಿಸಿದರೆ ಅದು ಮಾನವನ ಉನ್ನತ ಮಟ್ಟದ ಆಲೋಚನೆ. ಆದರೆ ಮನಸ್‍ಶಾಸ್ತ್ರದ ಪ್ರಕಾರ ಅದೊಂದು ದೌರ್ಬಲ್ಯವಷ್ಟೆ. ಲಜ್ಜೆಯಿರುವವನಿಗೆ, ಅಂದರೆ, ತಾನು 'ತಪ್ಪು' ಮಾಡಿಬಿಡಬಹುದು ಎಂಬ ಸಾತ್ತ್ವಿಕ (?) ಭಯವಿರುವವನಿಗೆ ಹಮಾರ್ಟೋಫೋಬಿಯಾ ಎಂಬ ಸ್ಥಿತಿಯಿದೆಯೆನ್ನುತ್ತಾರೆ. ನಿಮಗೂ ಇದೆಯೇ? ಕಾಮವನ್ನು ಕನಸಿನಲ್ಲಿಯೂ ಬಯಸದವರೂ ಸಹ ಇದ್ದಾರೆ. ಈ ರೀತಿಯ ಉದ್ರೇಕಿತ ಕನಸು ಬಿತ್ತೆಂದರೆ ಮುಗಿಯಿತು, ಯಾವುದೋ ದೊಡ್ಡ ಪಾಪಕೃತ್ಯವೆಸಗಿದ್ದಾರೇನೋ ಎಂದುಕೊಂಡುಬಿಡುತ್ತಾರೆ. ಇವರಿಗೆ ಓನೀರೋಗ್ಮೋಫೋಬಿಯಾ ಇದೆಯೆಂದರ್ಥ.
ತಾವೇ 'ತಪ್ಪು' ಮಾಡಿಬಿಡಬಹುದೆಂಬ ಭಯವೊಂದಾದರೆ ತಮ್ಮ ಮೇಲೆ 'ತಪ್ಪು' ಎಸಗಬಹುದೆಂಬ ಭಯ ಇನ್ನೊಂದು ಬಗೆಯದು. ಸಾಮಾನ್ಯವಾಗಿ ಇದು ಹೆಂಗಸರಿಗೆ ಇರುವ ಭಯ. ಇದಕ್ಕೆ ಸಾಮಾಜಿಕ ಕಾರಣಗಳು ಅನೇಕವಿರಬಹುದು. "ಕೆಟ್ಟ" ಪುರುಷವರ್ಗ ಎಂದು ಸ್ತ್ರೀವಾದಿಗಳು ಸಮಾಜದಲ್ಲಿರುವ ಗಂಡಸರನ್ನೆಲ್ಲಾ ಕಾಮುಕರೆಂದು ದೂರಬಹುದು. ಅದೇನೇ ಇರಲಿ. ಈ "ಕೆಟ್ಟ" ಸಮಾಜದ ಪರಿಣಾಮದಿಂದ ತಮ್ಮ ಮೇಲೆ ಲೈಂಗಿಕ ಅತ್ಯಾಚಾರವಾಗ ಬಹುದೇ? ಎಂಬ ಭಯವುಂಟಾಗುತ್ತಲ್ಲಾ, ಆಗ್ರಫೋಬಿಯಾ ಅಥವಾ ಕಾಂಟ್ರೆಲ್ಟೋಫೋಬಿಯಾ ಇದೆಯಲ್ಲಾ ಇದು ದೂರವಾದರೆ ಸಮಾಜವನ್ನು ತಿದ್ದಲು ಸಹಕಾರಿಯಾದೀತು. ಈ ಫೋಬಿಯಾ ಇರುವ ಹೆಂಗಸರು ಇನ್ನೊಂದು ತಿಳಿದುಕೊಳ್ಳುವುದು ಉಚಿತ. ತಮ್ಮ ಸೌಂದರ್ಯವೇ ಅನೇಕ ಸಲ ತಮ್ಮ ಅಸ್ತ್ರವೂ ಆಗಿರುತ್ತೆ. ತಮಗಿರುವ ಈ ಫೋಬಿಯಾದಂತೆ ಪುರುಷರಿಗೆ ವಿಶೇಷವಾಗಿ ಉಂಟಾಗುವ ಫೋಬಿಯಾಗಳೆಂದರೆ ಕ್ಯಾಲಿಗೈನೀಫೋಬಿಯಾ ಅಥವಾ ವೆನುಸ್ಟ್ರಾಫೋಬಿಯಾ - ಈ ಫೋಬಿಯಾದವರು ಸುಂದರವಾದ ಹೆಣ್ಣುಗಳಿಂದ ಸಾಮಾನ್ಯ ದೂರ ಇರುತ್ತಾರೆ. ಅವರನ್ನು ನೇರವಾಗಿ ನೋಡುವುದಿಲ್ಲ. ಮಾತನಾಡಲು ಹಿಂಜರಿಯುತ್ತಾರೆ; ಗೈನೋಫೋಬಿಯಾ - ಇವರು ಸುಂದರವಾದ ಹೆಣ್ಣೇನು, ಹೆಣ್ಣು ಕುಲದಿಂದಲೇ ದೂರ ಇರಲು ಬಯಸುತ್ತಾರೆ.
ಎಲ್ಲ ಫೋಬಿಯಾಗಳೂ ಶಾಶ್ವತವಲ್ಲ. ಕೆಲವೇ ನಿಮಿಷಗಳು ಇದ್ದು ಮತ್ತೆ ಮಾಯವಾಗಬಹುದು. ಇನ್ನು ಕೆಲವು ದನಗಟ್ಟಲೆ ಜ್ವರದಂತೆ ಕಾಡಬಹುದು. ಮತ್ತೆ ಕೆಲವು ಡಯಾಬಿಟಿಸ್ಸಿನಂತೆ ಸಾಯುವವರೆಗೂ (ಅದು ನಮ್ಮನ್ನು ಸಾಯಿಸುವವರೆಗೂ) ನಮ್ಮೊಡನೆ ಇರಬಹುದು. ಒಬ್ಬರಿಗೆ ಎಷ್ಟು ಫೋಬಿಯಾಗಳು ಬೇಕಾದರೂ ಇರಬಹುದು. ಅನೇಕ ಪುರುಷರಿಗೆ ಸ್ತ್ರೀಯರನ್ನು ಕಂಡರೆ ಮುಜುಗರವಾಗುತ್ತೆ. ಅದೇ ರೀತಿ ಅನೇಕ ಸ್ತ್ರೀಯರಿಗೂ ಸಹ ಪುರುಷರನ್ನು ಕಂಡರೆ ಅಷ್ಟಕ್ಕಷ್ಟೆ. ಬಸ್ಸಿನಲ್ಲಿ ನಾವು ನೋಡುತ್ತಲೇ ಇರುತ್ತೇವೆ, ಗಂಡಸರ ಸೀಟಿನಲ್ಲಿ ಜಾಗ ಖಾಲಿಯಿದ್ದರೂ ಹೆಂಗಸೊಬ್ಬರು ಬಂದು ಕೂರುವುದೇ ಇಲ್ಲ. ಹಾಗೆ ತದ್ವಿರುದ್ಧ ಕೂಡ. ಇದಕ್ಕೆ ಹೆಟಿರೋಫೋಬಿಯಾ ಎನ್ನುತ್ತಾರೆ. ವಿರುದ್ಧ ಲಿಂಗಗಳ ಬಗ್ಗೆ ಇರುವ ಮುಜುಗರ. ಸಾಮಾನ್ಯವಾಗಿ ಅಪರಿಚಿತರಲ್ಲಿ ಇದು ಇರುತ್ತೆ. ನಮ್ಮ ಮನೆಯವರ ಬಗ್ಗೆಯೇ ಈ 'ಭಾವನೆ' ಬರುವುದು ವಿರಳ. (ಒಳ್ಳೆಯ ಭಾವನೆಯಿದ್ದರೆ ಅದಕ್ಕೆ ಫೀಲಿಯಾ ಎಂಬ ಪದವನ್ನೂ, ಕೆಟ್ಟ ಭಾವನೆಯಿದ್ದರೆ ಅದಕ್ಕೆ ಫೋಬಿಯಾ ಎಂಬ ಪದವನ್ನೂ ಸೇರಿಸುವುದು ಮನಸ್‍ಶಾಸ್ತ್ರದ ಗುಣ).
ಬೆತ್ತಲೆ ಸಿನಿಮಾಗಳನ್ನು ನೋಡಲು ಹಿಂಜರಿಯುತ್ತಾರೆ ಅನೇಕ ಸಭ್ಯರು. ಸಿನಿಮಾ ಹಾಗಿರಲಿ, ಚಿತ್ರಪಟವನ್ನೂ ನೋಡಲಾಗುವುದಿಲ್ಲ ಇವರುಗಳಿಗೆ. ಜಿಮ್ನೋಫೋಬಿಯಾ ಅಥವಾ ನ್ಯೂಡೋಫೋಬಿಯಾ ಎಂದರೆ ಇದೇ. ಬೆತ್ತಲೆ ಎಂಬ ಪದವೇ ಇವರಿಗೆ ಅಶ್ಲೀಲ. ಇನ್ನು ಕೆಲವರು ಇವರಿಗಿಂತ ಸ್ವಲ್ಪ ಭಿನ್ನರು. ಇವರಿಗೆ 'ಸರಸ'ವೆಂದರೆ ಅಶ್ಲೀಲ. ತಮ್ಮನ್ನು ತಾವು ಸರಸದಲ್ಲಿ, ಪ್ರಣಯದಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯುತ್ತಾರೆ - ಸರ್ಮಾಸೋಫೋಬಿಯಾದ ಜನ. ಮುಂದಿನ ರೀತಿಯ ಜನ ಸರಸವಾಡಲು ಇವರದೇನೂ ಅಡ್ಡಿಯಿಲ್ಲ, ಆದರೆ ಬೇರೊಬ್ಬ ವ್ಯಕ್ತಿಯೆದುರು (ಆ ವ್ಯಕ್ತಿ ಯಾರೇ ಆಗಿದ್ದರೂ) ಬೆತ್ತಲಾಗಲು ಇವರದು ಹಿಂಜರಿಕೆ - ಡೈಶಾಬಿಲಿಯೋಫೋಬಿಯಾ! ಪ್ರಣಯೋನ್ನತಕಾಲದಲ್ಲಿ ಸ್ತ್ರೀ "ಅಂಗವನ್ನು" ನೋಡಲು ಅಂಜುವವರೂ ಇದ್ದಾರೆ! ಯೂರೋಟೋಫೋಬಿಯಾ ಅಥವಾ ಕೋಲ್ಪೋಫೋಬಿಯಾ ಇತ್ತೆಂದರೆ ಮುಗಿಯಿತು, ಸಮೃದ್ಧರಾಗಿದ್ದರೂ ಸ್ತ್ರೀ-ಸಂಗ ಮಾಡರು. ಇದೇ ರೀತಿ ಉದ್ರೇಕಿತ ಶಿಶ್ನವನ್ನು ನೋಡಲೂ ಸಹ ಅಂಜುವವರೂ ಇದ್ದಾರೆ! ಮೆಡಾರ್ಥೋಫೋಬಿಯಾ ಇರುವ ಹೆಣ್ಣು ಪುರುಷಸಂಗ ಮಾಡಲು ಚಿತ್ರಹಿಂಸೆ ಪಡುತ್ತಾಳೆ. ಪ್ರಣಯಕ್ಕೆ ಬಹಳ ಮುಖ್ಯವಾದ ಸಂಗತಿಯೆಂದು ತಜ್ಞರು ಹೇಳುವುದು ದೈಹಿಕ ಘಮ. ಪರ್ಫ್ಯೂಮುಗಳು, ಹೂಗಳು, ಸಾಬೂನು ಇವೆಲ್ಲಾ ಬಳಸುವುದೇ ಸಂಗಾತಿಯನ್ನು ಉದ್ರೇಕಗೊಳಿಸಲು ಎನ್ನುತ್ತಾರೆ. ಆದರೆ ಈ ಘಮವೇ ವರಿಯಾದೀತು ಬ್ರಾಮಿಡ್ರೋಫೋಬಿಯಾ ಇರುವ ಜನಕ್ಕೆ! ಕೆಲವು ಪುರುಷರಿಗೆ ತಮ್ಮ ಲೈಂಗಿಕ ಉದ್ರೇಕವೆಲ್ಲಿ ಕಡಿಮೆಯಾಗಿಬಿಡುತ್ತೋ ಎಂಬ ಚಿಂತೆ, ಆತಂಕ - ಮೆಡೋಮೆಲಾಸುಫೋಬಿಯಾ. ಮತ್ತೆ ಕೆಲವರಿಗೆ ಲೈಂಗಿಕ ಕ್ರಿಯೆಯೆಂದರೇ ಅಲರ್ಜಿ - ಜೀನೋಫೋಬಿಯಾ!
ಗಮನಿಸಿ - ಸೆಕ್ಸೋಫೋಬಿಯಾ ಎಂದರೆ ಮೇಲೆ ಓದಿದ ಹೆಟಿರೋಫೋಬಿಯಾ ಎಂದೇ ಅರ್ಥ. ಹೆಣ್ಣಿಗೆ ಗಂಡೆಂದರೆ, ಗಂಡಿಗೆ ಹೆಣ್ಣೆಂದರೆ ಮುಜುಗರ, ಅಥವಾ ಅಸಹ್ಯ, ಅಥವಾ ದ್ವೇಷ, ಅಥವಾ ಭಯ, ಅಥವಾ....
ಮತ್ತೊಂದೇ ಒಂದು ಫೋಬಿಯಾದೊಂದಿಗೆ ಇವತ್ತಿನ ಮೋಟುಗೋಡೆ ಪ್ರವಚನವನ್ನು ಮುಗಿಸೋಣ. ಪ್ಯಾಂಟೋಫೋಬಿಯಾ ಎಂದು. ಪ್ಯಾಂಟ್ ಕಂಡರೆ ಭಯವೆಂದುಕೊಂಡಿರಾ? ಇಲ್ಲ. ಹೀಗೆಂದರೆ "ಎಲ್ಲದಕ್ಕೂ" ಅಸಹ್ಯ, ಅಥವಾ ಭಯ, ಅಥವಾ ದ್ವೇಷ, ಅಥವಾ ತಿರಸ್ಕಾರ, ಅಥವಾ ಮುಜುಗರ, ಅಥವಾ..... ಇರುವವರು ಎಂದು.
ಒಟ್ಟಿನಲ್ಲಿ ಪ್ರತಿಯೊಂದು ಭಾವನೆಯೂ ಫೀಲಿಯಾ ಆಗಿರಬೇಕು, ಅಥವಾ ಫೋಬಿಯಾ ಆಗಿರಬೇಕು ಎಂದು ಗೊತ್ತಾಯಿತಷ್ಟೆ. ಮುಂದಿನ ಪ್ರವಚನದಲ್ಲಿ ಮೋಟುಗೋಡೆಯ ಪರಿಧಿಯೊಳಗಿನ ಫೀಲಿಯಾಗಳ ಬಗ್ಗೆ ಗಮನ ಹರಿಸೋಣ. ಬದುಕು ಫೋಬಿಯಾರಹಿತವಾಗಿರಲಿ!
-ಅ
28.01.2009
11PM
Wednesday, January 28, 2009
Friday, January 9, 2009
ಪ್ರಕೃತಿಯ ಶಾಪ - ೨
ಈ ಪಾಠಕ್ಕೆ ಒಂದಷ್ಟು ಪೂರ್ವಸಿದ್ಧತೆಗಳು ಬೇಕು. ವಿಜ್ಞಾನದ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಬೇರೆಯವರಿಗೆ ಅರ್ಥವಾಗುವುದು ಕಷ್ಟ. ನನ್ನ ಕೈಯಲ್ಲಾದಷ್ಟು ಮಟ್ಟಿಗೆ ಇದನ್ನು simplify ಮಾಡಲು ಯತ್ನಿಸುತ್ತೇನೆ.
[ಟಿಪ್ಪಣಿ: ನಮ್ಮ ದೇಹವು ಲೆಕ್ಕವಿಲ್ಲದಷ್ಟು ಜೀವಕೋಶಗಳಿಂದ ಮಾಡಲ್ಪಟ್ಟಿದೆ. ಪ್ರತಿಯೊಂದು ಕೋಶದಲ್ಲೂ ನ್ಯೂಕ್ಲಿಯಸ್ ಎಂಬ ಅಂಶವಿದ್ದೂ, ಪ್ರತಿಯೊಂದು ನ್ಯೂಕ್ಲಿಯಸ್ಸಿನಲ್ಲೂ ಅಗಣಿತ ಡಿ.ಎನ್.ಎ.ಗಳು ಇರುತ್ತವೆ. ಪ್ರತಿಯೊಂದು ಡಿ.ಎನ್.ಎ ಕೂಡ ಕ್ರೋಮೋಸೋಮುಗಳಿಂದ ರಚಿಸಲ್ಪಟ್ಟಿದೆ. ಎರಡು ಬಗೆಯ ಕ್ರೋಮೋಸೋಮುಗಳಿವೆ: X ಮತ್ತು Y. ಕ್ರೋಮೋಸೋಮುಗಳು ಯಾವಾಗಲೂ ಜೋಡಿಗಳಾಗಿರುತ್ತವೆ. X ಕ್ರೋಮೋಸೋಮು ಗಂಡು ಹೆಣ್ಣು ಎರಡು ಜಾತಿಗಳಲ್ಲೂ ಇರುತ್ತೆ. ಆದರೆ Y ಕ್ರೋಮೋಸೋಮು ಕೇವಲ ಗಂಡು ಜಾತಿಯಲ್ಲಿ ಮಾತ್ರ ಲಭ್ಯ. ಹಾಗಾಗಿ XX ಎಂದರೆ ಸ್ತ್ರೀ ಎಂದೂ, XY ಎಂದರೆ ಪುರುಷ ಎಂದು ಅರ್ಥ ಮಾಡತಕ್ಕದ್ದು.]
ಸಿಗ್ನಲ್ಲುಗಳಲ್ಲಿ ನಾವು ನೋಡುವ ಆ "ಸ್ಪೆಷಲ್" ಭಿಕ್ಷುಕರನ್ನು ನೆನೆಸಿಕೊಳ್ಳಿ! ರೈಲುಗಳಲ್ಲಿ ಸೆರಗನ್ನು ಕೆಳಕ್ಕೆ ಸರಿಸಿ ಅರ್ಧಸ್ತನವನ್ನು ಪ್ರದರ್ಶಿಸಿ ಮೈಮೇಲೇ ಬಿದ್ದು ಹಣ ವಸೂಲಿ ಮಾಡುವ ಗಂಡು ಧ್ವನಿಯುಳ್ಳ ಆ "ಸ್ಪೆಷಲ್" ಭಿಕ್ಷುಕರನ್ನು ನೆನೆಸಿಕೊಳ್ಳಿ. ಅಜ್ಞಾತವಾಸದಲ್ಲಿ ನೃತ್ಯದ ಮೇಷ್ಟ್ರಾದ ಬೃಹನ್ನಳೆಯನ್ನು ನೆನೆಸಿಕೊಳ್ಳಿ (ಇವನ/ಇವಳ ದೆಸೆಯಿಂದ ಚಲನಚಿತ್ರಗಳಲ್ಲಿ ಡ್ಯಾನ್ಸ್ ಟೀಚರ್‍ಗಳೆಲ್ಲರೂ ಇವನಂತೆಯೇ/ಇವಳಂತೆಯೇ ಆಗಿಬಿಟ್ಟಿರುತ್ತಾರೆ)! ಮೈಕೆಲ್ ಜ್ಯಾಕ್ಸನ್‍ನನ್ನು ನೆನೆಸಿಕೊಳ್ಳಬೇಡಿ. (ಬೇಡ ಅಂದಿದ್ ಕೆಲ್ಸಾನೇ ಮಾಡೋದು ಜನ ಅಂತ ನನಗೆ ಗೊತ್ತು)!
ಇವರನ್ನು ನೋಡಿದಾಗ ಎಷ್ಟು ಅಸಹ್ಯವಾಗುತ್ತೆ ಅಲ್ಲವೆ? ಅವರ ಹುಚ್ಚಾಟವನ್ನೂ, ಹೆಂಗಸಿನ ರೂಪದಲ್ಲಿ ಅವರುಗಳು ಗಂಡಸುಗಳಂತಾಡುವುದನ್ನು ನೋಡಿದಾಗ ಮರೆಯಲ್ಲಿ ನಗು ಬರುತ್ತೆ ಅಲ್ಲವೆ? ಅವರು ಎದುರೇ ಬಂದಾಗ ಕೈಕಾಲು ನಡುಕವೂ ಬರಬಹುದು ಅಲ್ಲವೆ? ಅವರುಗಳಿಗೆ "ಹೆಸರು"ಗಳನ್ನು ಕೊಟ್ಟು ಹಾಸ್ಯ ಮಾಡಲು ಒಳ್ಳೇ ಕಥಾವಸ್ತುಗಳಲ್ಲವೆ?
ಹೀಗೆ ನಾವು ಕಂಡಿರುವ ಈ "ಸ್ಪೆಷಲ್" ಗುಣವುಳ್ಳ ಮಗುವೊಂದು ನಮ್ಮ ಮನೆಯಲ್ಲೇ ಹುಟ್ಟಿಬಿಟ್ಟರೆ?
ಇದು ಸಾಧ್ಯವೆಂಬುದು ನೆನಪಿನಲ್ಲಿರಲಿ!
ಅರ್ರೆ? ನಾನು ಆರೋಗ್ಯವಾಗಿದ್ದೀನಿ, ಪ್ಯೂರ್ ಗಂಡ್ಸು! ನನ್ನಾಕೆ ಪ್ಯೂರ್ ಹೆಂಗ್ಸು!! ನಮಗೆ ಹುಟ್ಟೋ ಮಗು ಅದು ಹೇಗೆ ..... ಆಗುತ್ತೆ? ಈ ಪ್ರಶ್ನೆ ಕೇಳಿಕೊಳ್ಳುವುದಕ್ಕೆ ಮುಂಚೆ ಒಂದಷ್ಟು ತಿಳಿವಳಿಕೆ ಅವಶ್ಯ.
ಹೆಂಗಸಿನ ವಿಷಯಕ್ಕೆ ಮುಂದಿನ ಪಾಠದಲ್ಲಿ ಬರುತ್ತೇನೆ. ಈಗ ಗಂಡಸಿನ ವಿಷಯದ ಬಗ್ಗೆ ಗಮನ ಹರಿಸೋಣ.
ನಾವು ಪ್ಯೂರ್ ಗಂಡಸೋ ಅಲ್ಲವೋ ಎನ್ನುವುದನ್ನು ತೀರ್ಮಾನ ಮಾಡುವುದು ನಮ್ಮ ಜೀನ್. ಟಿಪ್ಪಣಿಯಲ್ಲಿ ಹೇಳಿದಂತೆ XY ಜೋಡಿಯುಳ್ಳ ಕ್ರೋಮೋಸೋಮು ಹೊಂದಿರುವ ಜಾತಿಯನ್ನು ಗಂಡು ಎನ್ನಬಹುದು.
ನಮ್ಮ ಪ್ರತಿಯೊಂದು ಗುಣಲಕ್ಷಣಗಳಿಗೂ ಕಾರಣ ನಮ್ಮೊಳಗಿನ ಜೀನುಗಳು. ನಮ್ಮ ಮೈಬಣ್ಣ, ಕಣ್ಣಿನ ಗಾತ್ರ, ಧ್ವನಿ, ಆರೋಗ್ಯ, ಜೀರ್ಣಶಕ್ತಿ, ಸಂತಾನೋತ್ಪತ್ತಿ ಶಕ್ತಿ, ನಡತೆ, ಮನಸ್ಸಿನ ಭಾವಗಳು - ನಿರ್ಭಾವಗಳು - ಹೀಗೆ ಪ್ರತಿಯೊಂದಕ್ಕೂ ಜೀನ್‍ಗಳೇ ಕಾರಣ. ನಾನು ಪುರುಷನೋ ಸ್ತ್ರೀ-ನೋ ಎಂಬ ತೀರ್ಮಾನವನ್ನೂ ಜೀನೇ ಮಾಡುವುದು.
ಹರಿಸು - ದಕ್ಷಿಣ ಕೊರಿಯಾ ದೇಶದ ಪ್ರಖ್ಯಾತ ಗಾಯಕಿ, ನಾಯಕ 'ನಟಿ'/ಬಾಲ್ಯ'ನಟ' ಹಾಗೂ ರೂಪದರ್ಶಿ - ಹುಡುಗನನ್ನು ಮದುವೆಯಾಗಿ ಒಂದು ವರ್ಷವಾಯಿತು
ಜೆನಿಟಿಕ್ಸ್-ನಲ್ಲಿ X (Capital X) - ಅನ್ನು Dominant Gene ಎಂದೂ [ಗುಣವು ವ್ಯಕ್ತವಾಗುವ ಜೀನ್], x (Small x) - ಅನ್ನು Recessive Gene [ಗುಣವು ವ್ಯಕ್ತವಾಗದ, ಆದರೆ ಪೀಳಿಗೆಯಿಂದ ಪೀಳಿಗೆಗೆ ಸಾಗುವ ಜೀನ್] ಎಂದೂ ಕರೆಯುತ್ತೇವೆ. ಅಂತೆಯೇ Y ಮತ್ತು y ಅನ್ನು ಕ್ರಮವಾಗಿ Dominant ಮತ್ತು Recessive Genes ಎನ್ನುತ್ತೇವೆ. ಈ ಜೀನುಗಳು ಉತ್ಪತ್ತಿಯಾಗುವುದು ವೀರ್ಯಾಣುಗಳಲ್ಲಿ ಮೊದಲು (Meiosis).
ವೀರ್ಯರಸದಲ್ಲಿರುವ ಮಿಲಿಯಾಂತರ ವೀರ್ಯಾಣುಗಳಲ್ಲಿ ಒಂದು ಮಾತ್ರ ಅಂಡಾಣುವನ್ನು ಹೊಂದುವುದೆಂದು ನಮಗೆ ಗೊತ್ತಿದೆಯಷ್ಟೆ. ಯಾವ ವೀರ್ಯಾಣು ಮಿಲನವಾಗುತ್ತೋ ಅದರ ಲಿಂಗವೂ ಸಹ ಆಗಲೇ ನಿರ್ಣಯವಾಗಿರುತ್ತೆ. XY ಇರುವ ವೀರ್ಯಾಣು ಸೇರಿದರೆ ಗಂಡು ಭ್ರೂಣ, XX ಇರುವ ವೀರ್ಯಾಣು ಸೇರಿದರೆ ಹೆಣ್ಣು ಭ್ರೂಣ - ನಂತರ ಬದುಕಿದರೆ ಮಗುವಿನ ಜನನ. ನನ್ನಲ್ಲಿ ಯಾವುದಾದರೂ ಆನುವಂಶಿಕ (Genetic) ರೋಗದ Dominant Gene ಇತ್ತೆಂದರೆ ಅದು ಖಚಿತವಾಗಿ ನನ್ನ ಮುಂದಿನ ಪೀಳಿಗೆಗೂ ಮುಂದುವರೆಯುತ್ತೆ ಎಂಬುದನ್ನು ಸಾಮಾನ್ಯವಾಗಿ ಎಲ್ಲರೂ ಬಲ್ಲೆವು. ಆದರೆ, ನನ್ನಲ್ಲಿ ಒಂದು ವೇಳೆ Recessive Gene ಇದ್ದರೆ?
ಆಗಲೇ ಹೇಳಿದ ಹಾಗೆ Recessive Gene ಇದ್ದರೂ ಪೀಳಿಗೆಯಿಂದ ಪೀಳಿಗೆಗೆ ಅದು ಮುಂದುವರೆಯುತ್ತೆ. ಅದು ನನ್ನಲ್ಲಿ ವ್ಯಕ್ತವಾಗದೆ, ನನ್ನ 'ಮೊಮ್ಮಗ'ನಲ್ಲಿ ವ್ಯಕ್ತವಾಗುತ್ತೆ!! (ಮೊಮ್ಮಗಳ ವಿಷಯಕ್ಕೆ ಇನ್ನೊಮ್ಮೆ ಬರುತ್ತೇನೆ). ಯಾಕೆ ಮೊಮ್ಮಗನಲ್ಲಿ? ಮಗನಲ್ಲಿ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರವನ್ನು ಈ ಪವರ್‍ಪಾಯಿಂಟ್ ಪ್ರೆಸೆಂಟೇಷನ್ ನೀಡಬಲ್ಲುದು. ಇಲ್ಲವಾದರೆ ಆ ವಿಷಯವೇ ಹೆಚ್ಚು ಸ್ಥಳಾವಕಾಶ ತೆಗೆದುಕೊಂಡೀತು. (ಇದು ಅರ್ಥವಾಗದಿದ್ದಲ್ಲಿ ನಾನು ನಂತರ ವಿವರಿಸುತ್ತೇನೆ.)
ನನ್ನಲ್ಲಿ ಈ "ಸ್ಪೆಷಲ್" ಗಂಡಸಿನ ರಿಸಿಸಿವ್ ಜೀನ್ ಇದ್ದರೆ, ನನ್ನ ಮೊಮ್ಮಗನಲ್ಲಿ ಅದು ವ್ಯಕ್ತವಾಗಿ ಅವನು "ಸ್ಪೆಷಲ್" ಪುರುಷನಾಗುತ್ತಾನೆ ಎನ್ನುವುದು ಇಲ್ಲಿನ ತಾತ್ಪರ್ಯ. ಆದರೆ ಈ ರಿಸಿಸಿವ್ ಜೀನು ನನ್ನೊಬ್ಬನಲ್ಲಿ ಮಾತ್ರ ಇದ್ದರೆ ಸಾಲದು. ನನ್ನ ಪತ್ನಿಯಲ್ಲೂ ಇರಬೇಕು. ಎಂದರೆ, ನನ್ನ XY ಜಾಗದಲ್ಲಿ xY ಇರಬೇಕು, ಅವಳ XX ಜಾಗದಲ್ಲಿ xX ಅಥವಾ Xx ಅಥವಾ xx ಇರಬೇಕು. ಆಗ ಮಾತ್ರವೇ ಇದು ಸಾಧ್ಯ. ಆದರೆ, ಸಂಶೋಧನೆಯ ಪ್ರಕಾರ ಐದು ನೂರು ಪುರುಷರಲ್ಲೊಬ್ಬರಲ್ಲಿ ಈ ರಿಸಿಸಿವ್ ಕ್ಯಾರಿಯರ್ ಜೀನು ಇರುತ್ತೆ. ನನ್ನಲ್ಲಿ, ನಿಮ್ಮಲ್ಲಿ, ಅವನಲ್ಲಿ, ಅವಳಲ್ಲಿ - ಇರಬಹುದು ಗೊತ್ತಿಲ್ಲ. ಮಕ್ಕಳಾದ ಮೇಲೆ ಗೊತ್ತಾಗುತ್ತೆ. ಗೊತ್ತಾಗದೆಯೂ ಇರಬಹುದು!
ಅಂಥಾ 'ಮಗ'ನಲ್ಲಿ ('ಮಗಳ' ವಿಷಯಕ್ಕೆ ಇನ್ನೊಮ್ಮೆ ಬರುತ್ತೇನೆ) ಒಂದು X ಕ್ರೋಮೋಸೋಮು extra ಇರುತ್ತೆ. ಎಂದರೆ XY ಬದಲು XXY ಇರುತ್ತೆ. ಈ ಅನಾರೋಗ್ಯಕ್ಕೆ ಕ್ಲೈನ್‍ಫೆಲ್ಟರ್ ಸಿಂಡ್ರೋಮ್ ಎಂದು ಅದನ್ನು ಕಂಡು ಹಿಡಿದ ವಿಜ್ಞಾನಿಯ ಹೆಸರನ್ನೇ ಇಟ್ಟಿದ್ದಾರೆ.
ಈ ಅನಾರೋಗ್ಯ ಸ್ಥಿತಿಗೆ ಯಾರು ಕಾರಣ? ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕೇ ಈ "ಸ್ಪೆಷಲ್" ಜನ?
ಪ್ರಕೃತಿಯ ಈ ಶಾಪಕ್ಕೆ, ಎಂದರೆ ಕ್ಲೈನ್‍ಫೆಲ್ಟರ್ ಸಿಂಡ್ರೋಮ್‍ಗೆ ಗುರಿಯಾದವರು:
೧. ಹುಟ್ಟಿದಾಗ ಗಂಡು ಮಕ್ಕಳಾಗಿರುತ್ತಾರೆ. ಎಲ್ಲಿ ನೋಡಬೇಕೋ ಅಲ್ಲಿ ನೋಡಿದರೆ ಯಾವ ಸಂದೇಹವೂ ಇಲ್ಲದೆ ಗಂಡು ಎಂದು ತೀರ್ಮಾನ ಮಾಡಬಹುದು.
೨. ಖಂಡಗಳಾಗಲೀ, ಮೂಳೆಗಳಾಗಲೀ ಅಷ್ಟೇನೂ ಬಿಗಿಯಾಗಿರುವುದಿಲ್ಲ. ದೇಹವು ಬಲಾಢ್ಯವಾಗಿಯೂ ಇರುವುದಿಲ್ಲ.
೩. ಓದಲು, ಬರೆಯಲು, ಹೇಳಿದ್ದನ್ನು ಕೇಳಿಸಿಕೊಳ್ಳಲು, ಅದನ್ನು ಅರ್ಥ ಮಾಡಿಕೊಳ್ಳಲು, ಕಲಿಯಲು ಬಹಳ ಸಮಯ ತೆಗೆದುಕೊಳ್ಳುತ್ತಾನೆ.
೪. 'ವಯಸ್ಸಿಗೆ' ಬರುವಾಗ (Secondary Sexual Growth / Puberty) ಮುಖವು ಗಂಡಸಿನಂತಿದ್ದೂ ಸ್ತನಗಳು ಬೆಳವಣಿಗೆಯಾಗುತ್ತೆ. ಗಂಟಲು ಒಡೆಯುವುದಾದರೂ ಮಾತಿನ ಶೈಲಿ ಹೆಣ್ಣಿನಂತಿರುತ್ತೆ. ನಿತಂಬಗಳ ಗಾತ್ರವು ಹೆಚ್ಚುತ್ತೆ.
೫. ಎದೆಯ ಮೇಲೆ ಕೂದಲು, ಮೀಸೆ, ಗಡ್ಡವು ಬೆಳೆಯುವುದಿಲ್ಲ. ಬೆಳೆದರೂ ತೀರ ಕಡಿಮೆ.
೬. ಇವರು ಸಂಭೋಗ ಮಾಡಬಹುದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಹುದು! ಆದರೆ ವೀರ್ಯಾಣುಗಳು ಅತ್ಯಂತ ಕಡಿಮೆಯಾಗಿರುತ್ತೆ. ಇವರುಗಳು impotent ಅಲ್ಲ, ಬದಲಿಗೆ infertile.
೭. ಸ್ತನಗಳ ಕ್ಯಾನ್ಸರ್, ಆಸ್ಟಿಯೋಪೋರೋಸಿಸ್, ಹುಳುಕು ಹಲ್ಲು, ಮಾನಸಿಕ ಖಿನ್ನತೆ, ಬುದ್ಧಿ ಭ್ರಮಣೆ ಮುಂತಾದ ಕಾಯಿಲೆಗಳು ಈ "ಹುಡುಗ"ರಿಗೆ ಬರುವುದು ಸುಲಭ.
ಇನ್ನೂ ಹಣವಂತರು, ಛಲವಾದಿಗಳು ಆಪರೇಶನ್ ಮಾಡಿಸಿಕೊಂಡು ತಮ್ಮ ಜನನೇಂದ್ರಿಯವನ್ನು ತೆಗೆಸಿಕೊಂಡುಬಿಡುತ್ತಾರೆ. Officially ಸ್ತ್ರೀಯರಾಗುತ್ತಾರೆ. ಇಂಥವರನ್ನು Transsexual Females ಎಂದು ಕರೆಯುತ್ತಾರೆ. ಅಮೇರಿಕದ ಪ್ರಖ್ಯಾತ ಗಾಯಕಿ ಈಡೆನ್ ಅಟ್‍ವುಡ್, ರೂಪದರ್ಶಿ-ನಟಿ ಕ್ಯಾರೋಲಿನ್ ಕೋಸೀ, ಮಿಸ್ ಟೀನ್ ಪ್ರಶಸ್ತಿ ವಿಜೇತ ಜೇನಲ್ ಬಿಷಾಪ್, ಒಲಂಪಿಕ್ಸ್-ನಲ್ಲಿ ವಾಲಿಬಾಲ್ ಆಡಿದ ಬ್ರೆಜಿಲ್‍ನ ಎರಿಕಾ ಕೊಯಿಂಬ್ರಾ, ಕೊರಿಯಾದ ಗಾಯಕಿ ಹರಿಸು - ಇವರೆಲ್ಲರೂ ಹುಟ್ಟಿದಾಗ "ಪುರುಷ"ರೇ.. ಕ್ಲೈನ್‍ಫೆಲ್ಟರ್ ಸಿಂಡ್ರೋಮಿನವರೇ.
ಇನ್ನು ಮುಂದೆ ಪ್ರಕೃತಿಯ ಶಾಪವನ್ನು ಪಡೆದ ಈ ಸ್ಪೆಷಲ್ ಪುರುಷರನ್ನು ನೋಡಿದಾಗ ಅಸಹ್ಯವಾಗಲೀ, ನಗುವಾಗಲೀ, ಅಸ್ಪೃಶ್ಯ ಭಾವನೆಯಾಗಲೀ, ಭೀತಿಯಾಗಲೀ ಪಡುವ ಅವಶ್ಯವಿಲ್ಲವೆಂದು ನಂಬಿರುತ್ತೇನೆ. ಇದು ನಿಜವಾದರೆ ಈ ಪಾಠದ ಸಾರ್ಥಕ್ಯವು ದೊರೆತಂತೆ.
-ಅ
09.01.2009
4.30AM

ಕ್ಯಾರೊಲೊನ್ ಕೋಸೆ - ಪ್ರಖ್ಯಾತ ಪ್ಲೇಬಾಯ್ ಪತ್ರಿಕೆಗೆ ಪೋಸ್ ಮಾಡಿದ ಮೊದಲ ರೂಪದರ್ಶಿ, ಜೇಮ್ಸ್ ಬಾಂಡ್ ಚಿತ್ರದಲ್ಲಿ ನಟಿಸಿದಾಕೆ - ವಿಶೇಷವೆಂದರೆ ಈಕೆಗೆ XXXY ಇತ್ತು. ಎಂದರೆ, ಎರಡು X ಕ್ರೋಮೋಸೋಮು!!
ಇಂಥಾ ವಿದ್ಯಾರ್ಥಿಗಳನ್ನು ಶಿಕ್ಷಕರೇನಾದರೂ ಗುರುತಿಸಿದರೆ, ಇವರನ್ನೂ ಮತ್ತು ಇವರ ಸಹಪಾಠಿಗಳನ್ನು ಸರಿಯಾದ ರೀತಿಯಲ್ಲಿ ತಿಳಿವಳಿಕೆ ಹೇಳುವುದು ಒಳ್ಳೆಯದು. ಎಲ್ಲರಂತೆ ಈ ವಿದ್ಯಾರ್ಥಿಗಳೂ ಬಾಳುವ ಅಧಿಕಾರವನ್ನು ಹೊಂದಿದ್ದಾರೆಂದು ಮನವರಿಕೆ ಮಾಡಿಕೊಡತಕ್ಕದ್ದು. ಮನೋರೋಗ ತಜ್ಞರಿಂದ ಕೌನ್ಸೆಲಿಂಗ್ ಕೂಡ ಕೆಲವೊಮ್ಮೆ ಅವಶ್ಯವಿರುತ್ತೆ ಈ ವಿದ್ಯಾರ್ಥಿಗಳಿಗೆ. TRT (Testosterone Replacement Therapy) ಎಂಬ ಚಿಕಿತ್ಸೆಯಿಂದ ಈ ಹುಡುಗರೂ ಸಹ ಎಲ್ಲರಂತೆ, ಎಲ್ಲರಷ್ಟೇ ಟೆಸ್ಟೋಸ್ಟೀರೋನ್ ಉತ್ಪತ್ತಿಸಿ ಯಶಸ್ವಿ ಲೈಂಗಿಕ ಜೀವನವನ್ನು ನಡೆಸಬಲ್ಲರು.ಇನ್ನೂ ಹಣವಂತರು, ಛಲವಾದಿಗಳು ಆಪರೇಶನ್ ಮಾಡಿಸಿಕೊಂಡು ತಮ್ಮ ಜನನೇಂದ್ರಿಯವನ್ನು ತೆಗೆಸಿಕೊಂಡುಬಿಡುತ್ತಾರೆ. Officially ಸ್ತ್ರೀಯರಾಗುತ್ತಾರೆ. ಇಂಥವರನ್ನು Transsexual Females ಎಂದು ಕರೆಯುತ್ತಾರೆ. ಅಮೇರಿಕದ ಪ್ರಖ್ಯಾತ ಗಾಯಕಿ ಈಡೆನ್ ಅಟ್‍ವುಡ್, ರೂಪದರ್ಶಿ-ನಟಿ ಕ್ಯಾರೋಲಿನ್ ಕೋಸೀ, ಮಿಸ್ ಟೀನ್ ಪ್ರಶಸ್ತಿ ವಿಜೇತ ಜೇನಲ್ ಬಿಷಾಪ್, ಒಲಂಪಿಕ್ಸ್-ನಲ್ಲಿ ವಾಲಿಬಾಲ್ ಆಡಿದ ಬ್ರೆಜಿಲ್‍ನ ಎರಿಕಾ ಕೊಯಿಂಬ್ರಾ, ಕೊರಿಯಾದ ಗಾಯಕಿ ಹರಿಸು - ಇವರೆಲ್ಲರೂ ಹುಟ್ಟಿದಾಗ "ಪುರುಷ"ರೇ.. ಕ್ಲೈನ್‍ಫೆಲ್ಟರ್ ಸಿಂಡ್ರೋಮಿನವರೇ.
ಇನ್ನು ಮುಂದೆ ಪ್ರಕೃತಿಯ ಶಾಪವನ್ನು ಪಡೆದ ಈ ಸ್ಪೆಷಲ್ ಪುರುಷರನ್ನು ನೋಡಿದಾಗ ಅಸಹ್ಯವಾಗಲೀ, ನಗುವಾಗಲೀ, ಅಸ್ಪೃಶ್ಯ ಭಾವನೆಯಾಗಲೀ, ಭೀತಿಯಾಗಲೀ ಪಡುವ ಅವಶ್ಯವಿಲ್ಲವೆಂದು ನಂಬಿರುತ್ತೇನೆ. ಇದು ನಿಜವಾದರೆ ಈ ಪಾಠದ ಸಾರ್ಥಕ್ಯವು ದೊರೆತಂತೆ.
-ಅ
09.01.2009
4.30AM
Subscribe to:
Posts (Atom)