ಸುಮಾರು ಇಪ್ಪತ್ತು ವರ್ಷಗಳ ಕೆಳಗೆ ತಮ್ಮ ವಿದ್ಯಾರ್ಥಿ ಬಳಗವೊಂದನ್ನು ಕರೆದುಕೊಂಡು ಫ್ರಾನ್ಸಿನಿಂದ ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿ ಇಳಿಯೋಕೆ ಮುಂಚೆ ಮೇಡಮ್ಮು strict ಆಗಿ ಸೂಚನೆ ಕೊಟ್ಟಿದ್ದಾರೆ. ದೀರ್ಘ ಸಂಭಾಷಣೆಯೇ ನಡೆಯಿತು ಆ ಹದಿಹರೆಯ ವಿದ್ಯಾರ್ಥಿಗಳಿಗೂ ಮತ್ತು ಮೇಡಮ್ಮಿಗೂ.
"ನೋಡಿ, ಇಂಡಿಯಾ ದೇಶದಲ್ಲಿ ಪಬ್ಲಿಕ್ಕಲ್ಲಿ ಮುತ್ತು ಕೊಡಬಾರದು!"
"ಅಯ್ಯೋ, ಹೌದಾ? ಆದ್ರೆ, ನನ್ನ ಬಾಯ್‍ಫ್ರೆಂಡಿಗೂ....??"
"ಯಾರೇ ಆಗಲಿ, ಪಬ್ಲಿಕ್ಕಲ್ಲಿ ಉಹ್ಞೂಂ."
"ಸರಿ. :-( "
"ಮತ್ತೆ, ಇಂಡಿಯಾದಲ್ಲಿ ಪಬ್ಲಿಕ್ಕಲ್ಲಿ ಹುಡುಗ ಹುಡುಗಿ ಕೈ ಕೈ ಹಿಡಿದುಕೊಂಡು ಹೋಗಬಾರದು." (ಇದು ಇಪ್ಪತ್ತು ವರ್ಷದ ಹಿಂದಿನ ಬೆಂಗಳೂರಿನ ಮಾತು)
"ಅಯ್ಯೋ, ನನ್ನ ಗರ್ಲ್ ಫ್ರೆಂಡ್ ಕೈ????"
"ಉಹ್ಞೂಂ..."
"ಸರಿ.. :-( "
ಬೆಂಗಳೂರಿನ ಎಂ.ಜಿ.ರಸ್ತೆಗೆ ಬಂದಿದ್ದಾರೆ. ಕಣ್ಣ ಮುಂದೆ ಇಬ್ಬರು ಹೆಣ್ಣು ಮಕ್ಕಳು ತೋಳಿಂದ ಬಳಸಿಕೊಂಡು ಕೈ ಕೈ ಹಿಡಿದು ಫುಟ್‍ಪಾತ್ ಮೇಲೆ ನಡೆದು ಹೋಗುತ್ತಿದ್ದಾರೆ. ಆ ಕಡೆ ಸಿಗ್ನಲ್ಲಿನಲ್ಲಿ ಇಬ್ಬರು ಹುಡುಗರು ಹೆಗಲ ಮೇಲೆ ಕೈ ಹಾಕಿಕೊಂಡು ರಸ್ತೆ ದಾಟುತಿದ್ದಾರೆ. ಒಬ್ಬ ಹುಡುಗ ಕೇಳೇಬಿಟ್ಟ.
"ಮೇಡಂ, ಇಂಡಿಯಾ ದೇಶದಲ್ಲಿ homosexuality ಇಷ್ಟು open ಆಗಿದೆಯಾ??"
ಮೇಡಮ್ಮಿಗೆ ವಿವರಿಸಲು ಸಾಕು ಸಾಕಾಗಿ ಹೋಯಿತಂತೆ!

ಮೊನ್ನೆ ಸದ್ಯ ಅಮೇರಿಕದಲ್ಲಿರುವ ನನ್ನ ಆಪ್ತ ಗೆಳತಿ ಶ್ರೀ ಹೇಳಿದಳು -
"ಇವತ್ತು ನಮ್ಮ ಸಹೋದ್ಯೋಗಿಯೊಬ್ಬಳು ಅತ್ತೆ ಮನೆಗೆ ಹೋಗುತ್ತಿದ್ದೇನೆಂದಳು. ನಾನು ಕೇಳಿದೆ 'ನೀನು ನಿನ್ನ ಗಂಡ ಇಬ್ರೂ ಹೋಗ್ತೀರಾ ಅಂತ' . ಅದಕ್ಕವಳು 'ಇಲ್ಲ, ನಾನು ನನ್ನ ಹೆಂಡತಿ!!' ಎಂದಾಗಿಂದ ತಲೆ ತಿರುಗುತ್ತಾ ಇದೆ!"

ಹಾಗಂತ ಈ 'ಸಂಸ್ಕೃತಿ'ಯು ಇತ್ತೀಚಿನದೇನಲ್ಲ. ಅರಿಸ್ಟಾಟಲ್ ಕೂಡ ಸಲಿಂಗ ಮದುವೆ ಬಗ್ಗೆ ಚರ್ಚಿಸಿದ್ದಾನೆ. ಗ್ರೀಸಿನ ಆ ಗತಕಾಲದ ವೈಭವದಲ್ಲಿ ಸಲಿಂಗ ಮದುವೆಗಳು ಹೇರಳವಾಗಿತ್ತಂತೆ. (ಎಲ್ಲ ಅಂತೆ-ಕಂತೆಗಳು). ಆದರೆ ಅದಕ್ಕೆ ಪೂರಕವಾಗಿ ಹಾರ್ವಾರ್ಡ್ ವಿಶ್ವವಿದ್ಯಾನಿಲಯದವರ ಈ ಉಪನ್ಯಾಸವಿದೆ. ವಿಡಿಯೋದಲ್ಲಿ "ಕೈ ಎತ್ತುವ' ಜನರ ಸಂಖ್ಯೆಯನ್ನು ಗಮನಿಸಿ.
Speaking of homosexuality, ಇದು ಅಸ್ವಾಭಾವಿಕವೇನಲ್ಲ. ನ್ಯಾಷನಲ್ ಜಿಯಾಗ್ರಫಿಯವರು ಪ್ರಾಣಿಗಳಲ್ಲೂ ಸಲಿಂಗ ಕಾಮ ಚಟುವಟಿಕೆಗಳಿರುವುದರ ಬಗ್ಗೆ ಪತ್ತೆ ಮಾಡಿದ್ದಾರೆ. ಮನುಷ್ಯನಲ್ಲಿ ಇದರ ಹಿಂದಿನ ಕಾರಣಗಳನ್ನೂ ಮತ್ತು ಇದರ ಪರಿಣಾಮಗಳನ್ನೂ (ಸಾಮಾಜಿಕವಲ್ಲದ) ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.
-- ಮುಂದುವರೆಯುವುದು --
-ಅ
26.05.2009
12AM