Wednesday, July 15, 2009

ಈಜಿಪ್ತಿನಲ್ಲಿ ಈಜಿದರೆ..

(ಹೆಣ್ಣು ಮಕ್ಕಳಿಗೊಂದು ಎಚ್ಚರಿಕೆ)

ನೀವು ಸ್ವಿಮ್ಮಿಂಗ್ ಅಡಿಕ್ಟಾ? ಹೋಟೆಲು, ಕ್ಲಬ್ಬು, ರೆಸಾರ್ಟುಗಳಿಗೆ ಹೋದಾಗ, ಸ್ವಿಮ್ಮಿಂಗ್ ಪೂಲ್ ಕಂಡ ತಕ್ಷಣ ಪುಳಕ್ಕನೆ ಅದರೊಳಗೆ ಹಾರುತ್ತೀರಾ? ಅಥವಾ ನಿಮ್ಮ ಅಪಾರ್ಟ್‌ಮೆಂಟ್ ಬಿಲ್ಡಿಂಗಿನ ಕಾಮನ್ ಪೂಲಿನಲ್ಲಿ ಸೆಖೆಯಾದಾಗಲೆಲ್ಲ ಮುಳುಗಿಕೊಂಡಿರುತ್ತೀರಾ? ಹೌದಾದರೆ ಇನ್ನು ಮೇಲೆ ಸ್ವಲ್ಪ ಹುಷಾರಾಗಿರಿ!

Magdalena Kwiatkowska ಎಂಬ ಪೋಲೆಂಡಿನ ತಾಯಿ ತನ್ನ ಕುಟುಂಬ ಸಮೇತ ಈಜಿಪ್ತಿನ ಹೋಟೆಲೊಂದರಲ್ಲಿ ರಜೆಯ ಸಂದರ್ಭದಲ್ಲಿ ತಂಗಿದ್ದಾಗ, ಆಕೆಯ 13 ವರ್ಷದ ಮಗಳು ಆ ಹೋಟೆಲಿನ ಈಜುಕೊಳದಲ್ಲಿ ಈಜಿ ಗರ್ಭವತಿಯಾಗಿದ್ದಾಳೆ! ಇಂಥದ್ದೊಂದು ಆಘಾತಕಾರಿ ಅವಘಡಕ್ಕೆ ಕಾರಣ ಆ ಸ್ವಿಮ್ಮಿಂಗ್ ಪೂಲಿನ ನೀರಿನಲ್ಲಿ ಅಡ್ಡಾಡುತ್ತಿದ್ದ ವೀರ್ಯದ ಕಣಗಳು!

Magdalena Kwiatkowska ಈ ಸಂಬಂಧ ಹೋಟೆಲಿನ ಮಾಲಿಕನ ಮೇಲೆ ಕೋರ್ಟಿನಲ್ಲಿ ದಾವೆ ಹೂಡಿದ್ದಾಳೆ. ರಜೆಯ ದಿನಗಳಲ್ಲಿ ಮಗಳು ಯಾವುದೇ ಗಂಡಸಿನೊಂದಿಗೆ ಲೈಂಗಿಕ ಸಂಪರ್ಕ ಹೊಂದಿರಲಿಲ್ಲವೆಂದು ತಾಯಿ ಪ್ರಮಾಣ ಮಾಡಿ ಹೇಳುತ್ತಿದ್ದಾಳೆ.

ಇಂಥದೊಂದು ಪ್ರಕರಣ ನಡೆಯಲಿಕ್ಕೆ ಸಾಧ್ಯವೇ ಇಲ್ಲವೆಂದು ಬುದ್ಧಿವಂತರು ವಾದಿಸುತ್ತಿದ್ದಾರಾದರೂ, ಪೂಲಿಗೆ ಇಳಿಯುವ ಮುನ್ನ ಒಂದು 'ಪಿಲ್' ತೆಗೆದುಕೊಂಡೇ ಇಳಿಯೋದರಿಂದ ಹೀಗೆ ಫೂಲಾಗೋದು ತಪ್ಪುತ್ತದೆ ಅಂತ ಕಿಲಾಡಿಗಳು ತಮಾಷೆ ಮಾಡುತ್ತಿದ್ದಾರೆ. ಇನ್ನು ಕೋರ್ಟು ಏನು ಹೇಳುತ್ತದೋ ಕಾದು ನೋಡಬೇಕು.

ಲಿಂಕ್: http://www.nj.com/parenting/

Thursday, July 9, 2009

ನಿಮಗೇನನ್ನಿಸುತ್ತದೆ?

ಸುಘೋಷ್ ನಿಗಳೆ ಕನ್ನಡ ಬ್ಲಾಗರ್ಸ್‌ನಲ್ಲಿ ಒಂದು ಚರ್ಚೆ ಹುಟ್ಟು ಹಾಕಿದ್ದಾರೆ. ನಿಮಗೆ ಏನನ್ನಿಸುತ್ತದೆ, ಅಲ್ಲೇ ಹೋಗಿ ಹೇಳಿ:

ಸ್ಪರ್ಮ್ ಕೌಂಟ್ ಕಡಿಮೆಗೆ ಈಗ ಚಿಂತಿಸಬೇಕಿಲ್ಲ. ಲಂಡನ್ನಿನ ನ್ಯೂ ಕ್ಯಾಸಲ್ ವಿಶ್ವವಿದ್ಯಾಲಯ ಮತ್ತು ಈಶಾನ್ಯ ಇಂಗ್ಲೆಂಡ್ ವೀರ್ಯ ಸಂಸ್ಥೆಯ ಪ್ರೋಫೆಸರ್ ಕರೀಂ ನಯೀರ್ನಿಯ ತಂಡ ಮಾನವ ವೀರ್ಯವನ್ನೇ ತಯಾರಿಸಿದ್ದಾರಂತೆ. ಕೆಲಸವಿಲ್ಲದ ಬಡಗಿ ಮಗನ ಅದೆನ್ನನ್ನೋ ಕೆತ್ತಿದನಂತೆ ಎಂದು ಕೆಲವರು ಈ ಸಂಶೋಧನೆಯ ಬಗ್ಗೆ ಮೂಗು ಮುರಿದಿದ್ದಾರೆ. ನಿಮಗೆ ಏನೆನ್ನಿಸುತ್ತದೆ?
ವಿಸಿಟ್: http://kannadablogs.ning.com/forum/topics/2958967:Topic:29959