Sunday, January 24, 2010

ಬುಡಕ್ಕೇ ಕೈ ಹಾಕಿದ ಸಮೀಕ್ಷೆ...

ತುಂಟ ಕುಂಟಿನಿ ಸಾರ್ ಗೆ, ಎಲ್ಲಿಂದ ಏನಾದರೂ ಹುಡುಕೋ ಚಟ.
ನನ್ನ ಬರಹಗಳನ್ನ ಕದ್ದು ಹಾಕ್ಕೋತೀರಿ ನೀವು ಅಂತ ಪ್ರೀತಿಯಿಂದಲೇ ಬೈಯುವ ಕುಂಟಿನಿಯವರು, ಮತ್ತೆ ಅವರ ಬರಹ ಕದಿಯೋ ಹಾಗೆ ಮಾಡಿದ್ದಾರೆ.

ಕ್ಷಮಿಸಿ,ನಿಮ್ಮ ಬಳಿಗೆ ಯಾರಾದರೂ ಆ ವಿಚಾರ ಕೇಳಿ ಬಂದಿದ್ದಾರೋ..?
ನನ್ನ ಸ್ಟೈಲೇ ಬೇರೆ ಅಂತ ನೀವು ವಾದಿಸಿದರೆ ನಾನೇನೂ ಮಾಡುವ ಹಾಗಿಲ್ಲ.
ಆದರೆ ಇದು ನಮ್ಮ ಬುಡಕ್ಕೇ ಅವರು ಕೈ ಹಾಕಿದ ಸಮೀಕ್ಷೆ.ಯಾರು ಯಾವಾಗ ಮಾಡಿದರು ಅಂತ ಕೇಳಬೇಡಿ..ಒಂದು ಲೆಕ್ಕ ಅಂತ ಕೊಟ್ಟಿದ್ದಾರೆ,ಜಸ್ಟ್ ಎಂಜಾಯ್.
ಯಾರೋ ಕಾಂಡೋಮ್ ಕಂಪನಿಯವರಂತೆ ಈ ಸಮೀಕ್ಷೆ ಮಾಡಿದವರು.
ಬಾಪ್ರೇ..ಕಾಂಡೋಮ್ ಕಂಪನಿಯವರು ಆ ವಿಚಾರ ಅಲ್ಲದೇ ಬೇರೇನು ಸಮೀಕ್ಷೆ ಮಾಡಿಯಾರು?ಅವರೇನು ನೀವು ಎಷ್ಟು ಬಾರಿ ಸೂರ್ಯನಮಸ್ಕಾರ ಮಾಡ್ತೀರಿ ಅಂತ ಕೇಳ್ತಾರಾ?
ಹೌದು,
ಅವರು ನಿಮ್ಮ ಅಥವಾ ನಮ್ಮ ಆ ಕೆಲಸದ ಬಗ್ಗೆ ಒಂದು ಅಕೌಂಟ್ ಕೊಟ್ಟಿದ್ದಾರೆ..ಓದಿಕೊಳ್ಳಿ.
ಆವರೇಜು ಭಾರತೀಯರು ಸೆಕ್ಸ್ ಮಾಡೋದರಲ್ಲಿ ಭಾರೀ ಅರ್ಜೆಂಟಿನವರಂತೆ.
ಮುಂದೆ ಓದಿ..

Tuesday, January 12, 2010

ಪೋಲಿ ಪ್ರಕೃತಿ- ೨

ಇದು ಪೋಲಿ ಪ್ರಕೃತಿ ಸರಣಿಯ ಎರಡನೇ ಕಂತು. ಮೋಟುಗೋಡೆಗೆ ಮೊನ್ನೆ ಜನವರಿ 8ನೇ ತಾರೀಖಿಗೆ ಎರಡು ವರ್ಷ ತುಂಬಿತು. ಮತ್ತೆ, ಬೋನಸ್ ಸಂಭ್ರಮ ಏನಪ್ಪಾ ಅಂದ್ರೆ, ಇದು ಮೋಟುಗೋಡೆಯ 100ನೇ ಪೋಸ್ಟು. ;)

ನಿಮ್ಮ ಇಣುಕುವಿಕೆಯ ಪ್ರೋತ್ಸಾಹ ಹೀಗೇ ಇರಲಿ, ಧನ್ಯವಾದ.







Tuesday, January 5, 2010

ತೂಕ ಇಳಿಸಿಕೊಳ್ಳಿ .....

ತೂಕ ಇಳಿಸಿಕೊಳ್ಳಿ .....

ಒ೦ದುಘ೦ಟೆಯಲ್ಲಿ ಎರಡೂವರೆಯಿ೦ದ ಮೂರು ಕಿಲೋ ತೂಕ ಇಳಿಸಿಕೊಳ್ಳಿ .......

ಇ೦ಥ ಜಾಹೀರಾತು ಕ೦ಡಮೇಲೆ ಯಾವ ಧಡೂತಿಗೆ ತಾನೇ ಆಸೆಯಾಗದು ಹೇಳಿ? ನುಗ್ಗಿಯೇಬಿಟ್ಟ ನಮ್ಮ ಹಾತೀರಾಯ ಸ್ಲಿಮ್ಮಿ೦ಗ್ ಸೆ೦ಟರ್ ಗೆ. "ನೋಡಿ, ನಿಮ್ಮ ತೂಕ ಖ೦ಡಿತ ಇಳಿಸಿಕೊಡಲಾಗುತ್ತೆ ಇಲ್ಲಿ, ನಮ್ಮ ವಿಶೇಷ ವಿಧಾನದಲ್ಲಿ ಒ೦ದು ಘ೦ಟೆಯಲ್ಲಿ ಮೂರು ಕಿಲೋ ವರೆಗೆ ತೂಕ ಇಳಿಸಿಕೊಳ್ಳಬಹುದು ನಿಮಗೆ ಐದುಸಾವಿರ ಖರ್ಚಾಗುತ್ತೆ" ಮತ್ತದನ್ನೇ ತಿರಗಾಮುರಗಾ ಹೇಳಿ ಒ೦ದು ತಾಸಿನ ಕೋರ್ಸ್ ಗೆ ಒಪ್ಪಿಸಿಯೇ ಬಿಟ್ಟರು. ದುಡ್ಡು ಕಿತ್ತುಕೊ೦ಡು ರೂ೦ ನ೦. 01ಕ್ಕೆ ಕಳಿಸಲಾಯಿತು.

ಅ೦ದವಾದ ವಿಶಾಲವಾದ ರೂಮು, ಅದಕ್ಕೊಪ್ಪುವ ಇ೦ಟೀರಿಯರು, ಅದರ ಪಕ್ಕದಲ್ಲೊ೦ದು ಹೂದಾನಿ- ಅದರ ಪಕ್ಕದಲ್ಲೇ ಒ೦ದು ಕಾಟ್ ವಿತ್ ಡಬ್ಬಲ್ ಬೆಡ್ ಇತ್ತು. ಅದರ ಮೇಲೊಬ್ಬಳು ಮಾಯಾ೦ಗನೆ ಪವಡಿಸಿದ್ದಳು.ಧರಿಸಿದ ವಸ್ತ್ರ ಸಮೇತ ಸಾಕ್ಷಾತ್ ಶಿಲಾಬಾಲಿಕೆಗೆ ಜೀವ ಬ೦ದ೦ತೆ ಇದ್ದಳು. ಅವಳು "ನೀನು ನನ್ನನ್ನು ಹಿಡಿದರೆ ನನ್ನನ್ನು ಅನುಭವಿಸ ಬಹುದು"- ಹೀಗೆಂದು ಒಳಕ್ಕೆ ಬ೦ದ ಹಾತೀರಾಯನಿಗೆ ಹೇಳಿದಳು ಮತ್ತು ಬೇಟೆಗಾರನ ಬಾಣದ ಮೊನಚು ಕ೦ಡ ಹರಿಣಿಯ೦ತೆ ಟ೦ಗನೆ ನೆಗೆದಳು- ಮ೦ಚದಿ೦ದ. ಗಡಿಯಾರದ ನಿಮಿಷದ ಮುಳ್ಳು ಅರವತ್ತು ಸುತ್ತು ತಿರುಗುವದರೊಳಗಾಗಿ ಅವಳ ಹಿ೦ದೆ ಹಾತೀರಾಯ ರೂಮನ್ನು ಏನಿಲ್ಲವ೦ದರೂ ಮುನ್ನೂರುಬಾರಿ ಸುತ್ತಿದ್ದ, ಅವಳು ಸೋಲಲಿಲ್ಲ, ಇವನಿಗೆ ಗೆಲ್ಲಲಾಗಲಿಲ್ಲ. ಆದರೂ ಐದು ಸಾವಿರದ ಜೂಟಾಟ ಭಾರೀ ಮಜಾ ಬ೦ದಿತ್ತು.

ಹೊರಗೆ ಬರುತ್ತಿದ್ದ೦ತೆ ರಿಸೆಪ್ಶನ್ ನಲ್ಲಿ ಕೇಳಿದ, ನಿಮ್ಮಲ್ಲಿ ಮತ್ತೆ ಯಾವ ಕೋರ್ಸಿದೆ? "ನಮ್ಮಲ್ಲಿ ಇನ್ನೊ೦ದು ಕೋರ್ಸಿದೆ, ಎರಡು ತಾಸಿನಲ್ಲಿ ಐದು ಕಿಲೋ ಇಳಿಸಿಕೊಳ್ಳುವ ಕೋರ್ಸು. ಸೇರಲು ಬಯಸುತ್ತೀರಾ?" ಕೌನ್ಸಿಲರ್ ಕೇಳಿ ಮುಗಿಸುವಷ್ಟರಲ್ಲಿ ಕ್ರೆಡಿಟ್ ಕಾರ್ಡು ಟೇಬಲ್ಲಿನ ಮೇಲಿತ್ತು. ಈ ಬಾರಿ ನಮ್ಮ ಹಾತೀರಾಯರನ್ನು ರೂಂ ನ೦. ಎರಡಕ್ಕೆ ಕಳಿಸಲಾಯಿತು. ಮೊದಲಿನ ರೂ೦ನ ಪಡಿಯಚ್ಚು, ಆದರೆ ಈ ಬಾರಿ ಇಬ್ಬರು ಜೀವ೦ತ ಶಿಲಾಬಾಲಿಕೆಯರಿದ್ದರು ರೂಮಿನಲ್ಲಿ. ಮತ್ತದೇ ಮಾತನ್ನೂ ಹೇಳಿದರು. "ನೀನು ನಮ್ಮನ್ನು ಹಿಡಿದರೆ ನಮ್ಮನ್ನು ಅನುಭವಿಸ ಬಹುದು" ಮತ್ತೆ ಶುರುವಾಯಿತು ಅದೃಷ್ಟದ ಬೆನ್ನುಹತ್ತಿ ಓಡುವ ಆಟ, ಓಡಿದ್ದೂ ಓಡಿದ್ದೇ, ಸುತ್ತಿದ್ದೂ ಸುತ್ತಿದ್ದೇ, ಪ್ರಯೋಜನವಿಲ್ಲ. ಎರಡು ತಾಸಿನ ಆಟ ಮುಕ್ತಾಯವಾಗಿತ್ತು, ಡ್ರಾನಲ್ಲಿ ಕೊನೆಗೊ೦ಡ ನೀರಸ ಟೆಸ್ಟ್ ಮ್ಯಾಚಿನ೦ತೆ.

ಆದರೆ ತೂಕ ಇಳಿಸುವ ಉಮೇದು ಮಾತ್ರ ದ್ವಿಗುಣ ಗೊ೦ಡಿತ್ತು. ನಾಕುತಾಸಿನಲ್ಲಿ ಹತ್ತುಕಿಲೋ ಇಳಿಸುವ ಕೋರ್ಸಿಗೆ ಸೇರಿಬಿಟ್ಟರು ನಮ್ಮ ಹಾತೀರಾಯರು. ಈ ಬಾರಿಯ ಕೋರ್ಸು, ಮೂರನೇ ರೂಮಿನಲ್ಲಿ. ಒಳಗೆ ಹೋದರೆ ರೂಮು ಸ್ವಲ್ಪ ಬೇರೆಯದಾಗಿಯೇ ಇತ್ತು. ಮೊದಲಿನ ಎರಡರಷ್ಟು ಒಪ್ಪ ಓರಣವಾಗಿರಲಿಲ್ಲ, ಸ್ವಲ್ಪ ಕತ್ತಲೆ ಬೇರೆ ಮತ್ತು ಸ್ವಲ್ಪ ಚಿಕ್ಕದೂ ಸಹ. ಒಳಕ್ಕೆ ಬರುತ್ತಿದ್ದ೦ತೆ ದುತ್ತನೆ ಹೊತ್ತಿಕೊ೦ಡ ಪ್ಲೋರೋಸೆ೦ಟ್ ಲೈಟ್ ನ ಅಡಿಯಲ್ಲಿ ಮಿರಮಿರ ಮಿ೦ಚುತ್ತ ನಿ೦ತಿದ್ದ ಗನಘೋರ ದೈತ್ಯ ನಿಗ್ರೋ. ಮೂವತ್ತು ಸೆಕೆ೦ಡು ಗಳ ವಿಶಾಲ ಮೌನದ ನ೦ತರ ಆತ ಹೇಳಿದ

"ನಾನೆಲ್ಲಾದರೂ ನಿನ್ನನ್ನು ಹಿಡಿದರೆ, ನಾನು ನಿನ್ನನ್ನು ಅನುಭವಿಸುತ್ತೇನೆ".




ಮೂಲ ಕೃಪೆ: ವಿನಾಯಕ, ನವದೆಹಲಿ.

Friday, January 1, 2010

ಸಣ್ಣ ಟೆಸ್ಟ್ ..

ಭಾರತೀಯರು ರಸಿಕರು, ಕಾಮಶಾಸ್ತ್ರ ಪ್ರವರ್ತಕರು ಇತ್ಯಾದಿಯೆಲ್ಲ ಹಳೇ ಸುದ್ದಿಯಾಯಿತು. ಆದರೆ ಜಗತ್ತಿಗೇ ಪ್ರಣಯ ಹೇಳಿಕೊಟ್ಟ ಭಾರತದ ಜನಕ್ಕೆ, ಇನ್ನೂ ಈ ಬಗ್ಗೆ ಪೂರ್ತಾ ವಿಶ್ಯ ಬಗೆ ಹರಿದಿಲ್ಲ. ಗೂಗಲ್ ದೇವರೇ ಇದಕ್ಕೆ ಸಾಕ್ಷಿ.

ಗೂಗಲ್ ನಲ್ಲಿ ಎಲ್ಲರಿಗೂ ತಿಳಿದಿರುವ ಹಾಗೆ, Suggestion ಅನ್ನುವ ಸೌಲಭ್ಯ ಇದೆ. ನೀವೇನಾದರೂ ಹುಡುಕ ಹೊರಟಾಗ- ನಿಮಗೆಬೇಕಿರೋದು ಇದಾ ಅಂತ ಗೂಗಲೇ ಕೇಳುತ್ತದೆ.

ಈಗೊಂದು ಸಣ್ಣ ಟೆಸ್ಟ್ ಮಾಡಿ ನೋಡಿ-

ಗೂಗಲ್ ನ ಹೋಮ್ ಪೇಜ್, www.google.com ಗೆ ಹೋಗಿ, removing ಅಂತ ಸರ್ಚ್ ಕೊಟ್ಟು ನೋಡಿ-



ಅದೇ, ಭಾರತೀಯ ಗೂಗಲ್ ನ ಹೋಮ್ ಪೇಜ್, www.google.co.in ಗೆ ಹೋಗಿ ಅದೇ ಸರ್ಚ್ ಕೊಟ್ಟು ನೋಡಿ,


ಇನ್ನೂ ಹೆಚ್ಚಿನ ನಿವರಣೆ ಬೇಡ ಅಂದುಕೊಂಡಿದ್ದೇನೆ:)

( ಕೆಲ ಬಾರಿ google.com ಗೆ ಹೋದರೂ, ಅದು ತಾನಾಗೇ google.co.in ಗೆ ರಿ-ಡೈರೆಕ್ಟ್ ಆಗುತ್ತದೆ, ಅಂತಹ ಸಂದರ್ಭದಲ್ಲಿ google.com/ncr ಅಂತ ಟೈಪಿಸಿ)