- ಚಂದ್ರಶೇಖರ ಕಂಬಾರ
ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ?
ಗಂಧ ಲೇಪನವ್ಯಾತಕೆ? -ಈ ದೇಹಕೆ..
ಮಂದ ಮಾರುತ ಮೈಗೆ ಬಿಸಿಯಾದವೇ ತಾಯಿ?
ಬೆಳುದಿಂಗಳು ಉರಿವ ಬಿಸಿಲಾಯಿತೆ ನನಗೆ?
ಹೂಜಾಜಿ ಸೂಜಿಯ ಹಾಗೆ -ಚುಚ್ಚುತಲಿವೆ..
ಉರಿಗಳು ಮೂಡ್ಯಾವು ನಿಡುಸುಯ್ಲಿನೊಳಗೆ
ಉಸಿರಿನ ಬಿಸಿ ಅವಗೆ ತಾಗದೇ ಹುಸಿ ಹೋಯ್ತೇ?
ಚೆಲುವ ಬಾರದಿರೇನು ಫಲವೇ? -ಈ ಚೆಲುವಿಗೆ..
ಕಾಮನ ಬಾಣ ಹತ್ಯಾವ ಬೆನ್ನ
ಆತುರ ತೀವ್ರ ಕಾಮಾತುರ ತಾಳೆ ನಾ..
ಆರ್ತಳಿಗೆ ಆಶ್ರಯವಿರದೇ -ಒದ್ದಾಡುವೆ..
ಅನ್ಯ ಪುರುಷನ್ ಮಾರ ಅಂಗನೆಯನೆಳೆದರೆ
ಕೈ ಹಿಡಿದ ಸರಿಪುರುಷ ಸುಮ್ಮನಿರುತಾರೇನೆ?
ಕರುಣೆಯ ತೋರುವರ್ಯಾರೇ? -ಸಣ್ಣವಳಿಗೆ
--
ರತ್ನಮಾಲಾ ಪ್ರಕಾಶ್ ದನಿಯಲ್ಲಿ ಈ ಹಾಡು