Tuesday, June 19, 2012

ಕಾಮ ಕಲೆಗೆ 28,000 ವರ್ಷಗಳ ಇತಿಹಾಸ!

 ಆಸ್ಟ್ರೇಲಿಯಾದ ಗುಹೆಯೊಂದರಲ್ಲಿ ಕಂಡ ಪೇಟಿಂಗು, ಕಾಮಕಲೆಗೆ 28 ಸಾವಿರ ವರ್ಷಗಳ ಇತಿಹಾಸ ಇದೆ ಅನ್ನೋದನ್ನ ಪ್ರೂವ್ ಮಾಡಿದೆ ಎಂದು ವರದಿಯೊಂದು ಹೇಳಿದೆ.ವಿವರಗಳು ಇಲ್ಲಿವೆ:)

http://www.indiatimes.com/art-and-culture/porn-may-be-28000-years-old-28426.html

Monday, June 11, 2012

ಅಕ್ಕಾ……ನಿಜವೇನೆ….

ಸಂಜೆ ಮುಡಿದ ಮಲ್ಲಿಗೆ
ಮೆಲ್ಲಗೆ ಬಾಡಿದೆ,
ಹಣೆಯ ಕುಂಕುಮ
ಯಾರೋ ತೀಡಿದ ಹಾಗಿದೆ…

ಅಧರಾಮೃತದ ಬಟ್ಟಲು ಕಾಲಿ,
ನೋಡು ನಡೆಯುವಾಗಲು ಯಾಕಿಷ್ಟು ಜೋಲಿ….
ಕೆನ್ನೆ ಬೆಂಕಿಯ ಕೆನ್ನಾಲಿಗೆ!!
ನಿನ್ನ ಗಲ್ಲವೇನು ಬೆಲ್ಲದುಂಡೆಯ?
ಯಾಕಿಷ್ಟು ಗಾಯಾ…!

ಕೊರಳಬಳ್ಳಿಯಲ್ಯಾರು ಜೋಕಾಲಿ ಆಡಿದರು,
ಎದೆಯ ಹೊಲದೊಳಗ್ಯಾರು ಓಕುಳಿ ಹಚ್ಚಿದರು…
ಎದೆಯ ಇಳಿಜಾರಿನಲ್ಲಿ
ಸುಖದ ಹೂವೆನೆ,
ಮತ್ತೆ ಹಿತವಾದ ನೋವೇನೆ….

ಮುತ್ತಿನ ಮೂಗುತಿ ಎಲ್ಲಿ ಮರೆತೆಯೆ?
ಇಂತ ಬಂಗಾರದ ಮೈಯ್ಯಿಗೂ ಬಟ್ಟೆಯ ಕೊರತೆಯೆ…!!
ಸೆರಗಲ್ಲೇನು ಮಕ್ಕಳನ್ನಾಡಿಸುತ್ತಿದ್ದೆಯ?
ಕಣ್ಣುಗಳಲ್ಲಿ ಬೆಳದಿಂಗಳನ್ನೇ ಸುರಿದುಕೊಂಡಿದ್ದೀಯ….

ಬೆಳ್ಳಿ ಗೆಜ್ಜೆಗಳನ್ನೇನು ಗಿರವಿ ಇಟ್ಟೆಯ,
ಹಸಿರು ಬಳೆಗಳನ್ನ ಬೆಂಕಿಯಲ್ಲಿ ಸುಟ್ಟೆಯ…
ರೆಪ್ಪೆಗಳೇಕೆ ಕಾಡಿಗೆ ಬೇಡುತ್ತಿವೆ?
ನಿನ್ನ ತುಂಟ ಹೊಕ್ಕಳೇಕೆ ಎನೋ ಹೇಳುತ್ತಿದೆ…
ಅಕ್ಕಾ.. ನಿನ್ನ ಗುಟ್ಟುರಟ್ಟು ಮಾಡಿಬಿಟ್ಟೆ
ಮಜವೇನೆ? ಇಲ್ಲ ನನಗೆ ಸಜೆಯೇನೆ?..
ಅಕ್ಕಾ……ನಿಜವೇನೆ….


(ಬರೆದಿದ್ದು ನ.ಸೋಮು) :)