ನೀಲು. ಒಂದು ಕಾಲದ ಹುಡುಗರ ನಿದಿರೆ ಕೆಡಿಸಿದ್ದ ನೀರೆ. ಯಾರಿರಬಹುದು ಈಕೆ, ಹೇಗಿರಬಹುದು ಈಕೆ ಎಂದೆಲ್ಲ ಕಲ್ಪನೆಗಳನ್ನು ಕಟ್ಟಿಸಿದ್ದ ನಿಗೂಢೆ. ಯವ್ವನದ ಹುಡುಗಿಯರ ನಿರ್ಭಿಡೆಯ ದನಿಯಾಗಿದ್ದ ನಿಸ್ಸೀಮೆ. ನೀಲು ಮುಟ್ಟದ ವಿಷಯವಿಲ್ಲ. ಪುರಾಣ, ಇತಿಹಾಸ, ರಾಜಕೀಯ, ಕ್ರೀಡೆ, ಸಾಹಿತ್ಯ, ಜನ, ಜೀವನ, ಪ್ರೇಮ, ಕಾಮ... ಎಲ್ಲವೂ ನೀಲುವಿನ ಕಾವ್ಯದಲ್ಲಿ ವಸ್ತುವಾಗಿ ಬಂದಿವೆ. ನೀಲುವೆಂದರೆ ಕಾಮಿನಿ, ಭಾಮಿನಿ, ನಾಲ್ಕು ಮಿನಿ ಸಾಲುಗಳಲ್ಲೇ ಏನೇನೋ ಹೊಳೆಸುವ ಸೌದಾಮಿನಿ.
ಈಗಿಲ್ಲಿ ನಾವು ಕೊಡುತ್ತಿರುವ ಕೆಲ ಪದ್ಯಗಳಲ್ಲಿ ಕಾಣುವುದೂ ಅದೇ: ಹಸಿ ಹಸಿ ಕಾಮ, ಬಿಸಿ ಬಿಸಿ ಜವ್ವನ, ಚುಚ್ಚುವ ವ್ಯಂಗ್ಯ, ಪ್ರಬುದ್ಧ ಹಾಸ್ಯ. ಇವುಗಳಲ್ಲೆಲ್ಲ ನೀಲುವಿನ ಸೂಕ್ಷ್ಮ ದೃಷ್ಟಿಕೋನ ಕೆಲಸ ಮಾಡಿರುವುದು ತಿಳಿಯುತ್ತದೆ. ನೀಲುವಿಗೊಂದು ಗಟ್ಟಿ ಆತ್ಮವಿಶ್ವಾಸವಿದೆ ಹಾಗೇ, ಹೆಣ್ಣಿನ ಕರಗಿಬಿಡುವ ಸಹಜ ಗುಣವಿದೆ. ಇಂತಹ ನೀಲುವನ್ನು ಕಟ್ಟಿಕೊಟ್ಟ ಲಂಕೇಶರಿಗೊಂದು ಸಲಾಮು ಹೇಳುತ್ತಾ, ನೀಲು ಕಾವ್ಯದ ಕೆಲ ಝಲಕ್ ಮೊದಲ ಕಂತಾಗಿ ಕೊಡುತ್ತಿದ್ದೇವೆ; ಸ್ವೀಕರಿಸಿ!
೧
ಲಿಂಗ ಯೋನಿಗಳೆಂಬ
ಮುಗ್ಧ ಅಂಗಗಳಲ್ಲಿ
ಮಾಂತ್ರಿಕ ಶಕ್ತಿಯನ್ನಿಟ್ಟು
ಸಂತಾನಕ್ಕಾಗಿ ಶ್ರಮಿಸುವ
ಪ್ರಕೃತಿಯ ಶ್ರದ್ಧೆಯ ಹೇಗೆ
ತಿಳಿದುಕೊಳ್ಳುವುದು?
೨
ಅಖಂಡ ಬ್ರಹ್ಮಚಾರಿ ಬಸವ
ತನ್ನ ಅಚಲತೆಯ ಬಗ್ಗೆ ಪರೀಕ್ಷೆ ಮಾಡಲು
ಸುರಸುಂದರಿಯ ಎದೆ ಮೇಲೆ
ತಲೆಯನ್ನಿಟ್ಟು
ಆನಂದದಿಂದ ಆ ಪರೀಕ್ಷೆಯಲ್ಲಿ ಫೇಲಾದ
೩
ನನಗೆ ಅತ್ಯಂತ ಸಂಕೋಚದ
ನೆನಪು ಯಾವುದೆಂದರೆ
ನಾನು ನನ್ನ ಪ್ರೀತಿಯ ತಂದೆಗೆ
'ಇನ್ನು ನನಗೆ ಸ್ನಾನ ಮಾಡಿಸಬೇಡ'
ಎಂದು ಲಂಗದಿಂದ
ಸೀರೆಗೆ ಜಾರಿದ್ದು
೪
ನನ್ನ ನಲ್ಮೆಯ ತರುಣ
ನನ್ನ ಸ್ತನವ ಸ್ಪರ್ಶಿಸಲು ಬಿಚ್ಚಿದ
ಹತ್ತು ಬೆರಳಿನ ಹಸ್ತದ
ಬೆಂಕಿ
ಸುಡದೆ ಸೃಷ್ಟಿಸುವುದು ಎಂಥ ವಿಸ್ಮಯ!
೫
ಮಲೆನಾಡಿನಲ್ಲಿ ಹತ್ತು ವರ್ಷಕ್ಕೆ ಹತ್ತು ಮಕ್ಕಳು
ಮಾಡಿದ ಶಿವಪ್ಪ ಮಾಸ್ತರು ವರ್ಗವಾಗುವಾಗ
ಹೆಂಡತಿಯನ್ನು "ಎಲ್ಲಿಗೆ ವರ್ಗವಾಗೋಣ?" ಎಂದಾಗ
ಆಕೆ "ಮೊಳಕೆ ಕೂಡ ಹೊರಡದ ಜಾಗಕ್ಕೆ"
ಎಂದು ಮಂಕಾಗಿ ನಕ್ಕಳು
೬
ಮುನಿದು ನಕ್ಕರೆ, ಮುಟ್ಟಿ ಬೆಚ್ಚಿಸಿದರೆ
ಹೆಡೆ ತೆರೆದು ಕೂರುವ
ನನ್ನವನ ಅಂತರಂಗವ
ಅರ್ಥ ಮಾಡಿಕೊಳ್ಳುವುದೇ
ಮಿಥುನ
೭
ಎಂಭತ್ತರ ಮುದುಕನೊಬ್ಬನಿಗೆ ಬೈದು
"ಇನ್ನೂ ಯೋನಿಯ ಚಿಂತೆಯೇ?" ಎಂದರೆ
"ನನ್ನಮ್ಮ ನನ್ನನ್ನು ಕಿವಿಯಿಂದ ಹಡೆದಿದ್ದರೆ
ಆ ಚಿಂತೆ ಇರುತ್ತಿರಲಿಲ್ಲ" ಅಂದ
೮
ಹುಡುಗನ ದೇಹ ಹುಡುಗಿಗೆ
ಹುಡುಗಿಯ ವಂಕಿಗಳು ಹುಡುಗನಿಗೆ
ಉತ್ಸಾಹ ಹುಟ್ಟಿಸದ ದಿನವೇ
ಪ್ರಳಯ
೯
ಕಾಮುಕನ ಆಲಿಂಗನ
ಕೊಂಚ
ಅಸಹ್ಯವಾದರೂ
ಅದೇ ವಾಸಿ
೧೦
ವೇಶ್ಯೆಯ ಅಂಶವಿಲ್ಲದ
ಯಾವ ಬೆಡಗಿಯೂ
ನೇರವಾಗಿ
"ನಿನ್ನನ್ನು ಪ್ರೇಮಿಸುವೆ"
ಎಂದು ಹೇಳುವುದಿಲ್ಲ
Thursday, September 3, 2009
Thursday, August 13, 2009
ಬೇಕಾಗಿದ್ದಾರೆ
ಬೆ೦ಗಳೂರಿನ ಪ್ರಸಿದ್ಧ ಗೈನಕಾಲಜಿಸ್ಟ್ ಒಬ್ಬರಿಗೆ ಸಹಾಯಕರು ಬೇಕಾಗಿದ್ದಾರೆ. ಯಾವುದೇ ಈ ಮು೦ಚಿನ ಕೆಲಸದ ಅನುಭವ ಅಗತ್ಯವಿಲ್ಲ. ಸ೦ಬಳ ತಿ೦ಗಳಿಗೆ ರೂ. 14,500. ಹೆಚ್ಚಿನ ಮಾಹಿತಿಗಾಗಿ ನಮ್ಮ ಕಛೇರಿಯನ್ನು ಸ೦ಪರ್ಕಿಸಿ. ............
ಬೆಳಿಗ್ಗೆ ಚಹಾದ ಜೊತೆಗೆ ಇ೦ತಾದ್ದೊ೦ದು ಸುದ್ದಿ ಈ ರಿಸೆಶನ್ ಕಾಲದಲ್ಲಿ ಬ೦ದಿದ್ದೇ ಕೆಲಸದ ತಲಾಶ್ ನಲ್ಲಿ ಇದ್ದ ನಮ್ಮ ಲಿ೦ಗಣ್ಣ ಖುಶ್. ತಡಮಾಡದೆ ತನ್ನ ಇ೦ಟರ್ವ್ಯೂಗೆ ಹೋಗುವ ಎಲ್ಲ ಹತಾರಗಳೊ೦ದಿಗೆ ಆ ಜಾಹೀರಾತು ಕೊಟ್ಟ ಕ೦ನ್ಸಲ್ಟೆನ್ಸಿಗೆ ದಾಳಿಮಾಡೇಬಿಟ್ಟ

***************
ನಮಸ್ಕಾರ ಮೇಡ್೦, ನಾನು ಲಿ೦ಗಣ್ಣ ಅ೦ತ ಇವತ್ತು ಬೆಳಿಗ್ಗೆ ನೀವು ಕೊಟ್ಟ ಜಾಹೀರಾತು ನೋಡಿ ಬ೦ದಿದ್ದೇನೆ. ನಾನು ಕೆಲಸದ ಹುಡುಕಾಟದಲ್ಲಿ ಇದ್ದೇನೆ, ಯಾವ ಕೆಲಸವಾದರೂ ಸರಿ, ನಿಷ್ಟೆಯಿ೦ದ ಮಾಡುತ್ತೇನೆ ಅ೦ದ.
"ಸರಿ, ಒಳ್ಳೇದು, ಹಾಗಾದರೆ ನೀವು ಗೈನಾಕಾಲಜಿಸ್ಟ್ ಅಸಿಸ್ಟ೦ಟ್ ಹುದ್ದೆಗೆ ಇ೦ಟರ್ವ್ಯೂ ತಗೊಳ್ಳೋಕೆ ರೆಡಿ ಅ೦ತಾಯ್ತು. ನೋಡಿ ನಿಮ್ಮ ಕೆಲಸ ದಿನಾ ಬೆಳಿಗ್ಗೆ 10.30 ರಿ೦ದ ಸ೦ಜೆ ಎ೦ಟು ಘ೦ಟೆ ವರೆಗೆ, ಮಧ್ಯ ಒ೦ದು ಘ೦ಟೆ ಊಟಕ್ಕೆ ಬ್ರೇಕ್, ರವಿವಾರ ಮಾತ್ರ ರಜೆ ಇರುತ್ತದೆ. ಸ೦ಬಳ ತಿ೦ಗಳಿಗೆ 14,500. ಡಾಕ್ಟರ್ ಹತ್ತಿರ ಬರುವ ರೋಗಿಗಳು ಬಹುತೇಕ ಸ್ವಲ್ಪ ಸ೦ಕೋಚದ ಸ್ವಭಾವದವರಾಗಿರುತ್ತಾರೆ, ಹಾಗಾಗಿ ಅಲ್ಲಿಗೆ ಬರುವ ರೋಗಿಗಳನ್ನು ಡಾಕ್ಟರ್ ಪರೀಕ್ಷಿಸಲು ಅನುವಾಗುವ೦ತೆ ಸ್ವಛ್ಛಮಾಡಿ ಸಿದ್ದಮಾಡುವ ಜವಾಬ್ದಾರಿ ನಿಮ್ಮದು. ಹೇಗೆ ಮಾಡುತ್ತೀರಾ ಅನ್ನುವದು ನಿಮಗೆ ಬಿಟ್ಟದ್ದು, ಅರ್ಥವಾಯಿತಾ?" ಕು೦ತಲ್ಲಿ೦ದನೇ ಲಿ೦ಗಣ್ಣನನ್ನು ನೋಡಿ ಹುಳ್ಳಗೆ ನಕ್ಕಳು ಕ೦ನ್ಸಲ್ಟೆನ್ಸಿಯ ಲಲನಾಮಣಿ.
"ಸರಿ ಮೇಡ೦, ನನಗೆ ಈ ಕೆಲ್ಸ ಒಪ್ಪಿಗೆ ಇದೆ.."
"ಹೌದಾ, ಓಕೆ ಹಾಗಾದರೆ ತಾವು ಈಗಲೇ ಮೈಸೂರಿಗೆ ಹೊರಡಿ."
"ಹಾ೦! ಮೈಸೂರಿಗಾ? ಮತ್ತೆ ಬೆ೦ಗಳೂರಿನ ಗೈನಾಕಾಲಜಿಸ್ಟ್ ಗೆ ಅಸಿಸ್ಟೆ೦ಟ್ ಬೇಕಾಗಿದ್ದು ತಾನೆ? ಮೈಸೂರಿಗೆ ಯಾಕೆ"
"ಹೌದು ಲಿ೦ಗಣ್ಣನವರೆ, ಅಸಿಸ್ಟೆ೦ಟ್ ಬೇಕಾಗಿದ್ದು ಬೆ೦ಗಳೂರ ಗೈನಕಾಲಜಿಸ್ಟ್ ಗೇ, ಆದರೆ ಅದಕ್ಕೆ ಇ೦ಟರ್ವ್ಯೂಗೆ ಬ೦ದವರು ಸಾಲಲ್ಲಿ ನಿ೦ತಿದ್ದಾರೆ. ಆ ಸಾಲು ಮೈಸೂರಲ್ಲಿ ಮುಗಿಯುತ್ತಲ್ಲಾ..........."
Wednesday, July 15, 2009
ಈಜಿಪ್ತಿನಲ್ಲಿ ಈಜಿದರೆ..
(ಹೆಣ್ಣು ಮಕ್ಕಳಿಗೊಂದು ಎಚ್ಚರಿಕೆ)
ನೀವು ಸ್ವಿಮ್ಮಿಂಗ್ ಅಡಿಕ್ಟಾ? ಹೋಟೆಲು, ಕ್ಲಬ್ಬು, ರೆಸಾರ್ಟುಗಳಿಗೆ ಹೋದಾಗ, ಸ್ವಿಮ್ಮಿಂಗ್ ಪೂಲ್ ಕಂಡ ತಕ್ಷಣ ಪುಳಕ್ಕನೆ ಅದರೊಳಗೆ ಹಾರುತ್ತೀರಾ? ಅಥವಾ ನಿಮ್ಮ ಅಪಾರ್ಟ್‌ಮೆಂಟ್ ಬಿಲ್ಡಿಂಗಿನ ಕಾಮನ್ ಪೂಲಿನಲ್ಲಿ ಸೆಖೆಯಾದಾಗಲೆಲ್ಲ ಮುಳುಗಿಕೊಂಡಿರುತ್ತೀರಾ? ಹೌದಾದರೆ ಇನ್ನು ಮೇಲೆ ಸ್ವಲ್ಪ ಹುಷಾರಾಗಿರಿ!
Magdalena Kwiatkowska ಎಂಬ ಪೋಲೆಂಡಿನ ತಾಯಿ ತನ್ನ ಕುಟುಂಬ ಸಮೇತ ಈಜಿಪ್ತಿನ ಹೋಟೆಲೊಂದರಲ್ಲಿ ರಜೆಯ ಸಂದರ್ಭದಲ್ಲಿ ತಂಗಿದ್ದಾಗ, ಆಕೆಯ 13 ವರ್ಷದ ಮಗಳು ಆ ಹೋಟೆಲಿನ ಈಜುಕೊಳದಲ್ಲಿ ಈಜಿ ಗರ್ಭವತಿಯಾಗಿದ್ದಾಳೆ! ಇಂಥದ್ದೊಂದು ಆಘಾತಕಾರಿ ಅವಘಡಕ್ಕೆ ಕಾರಣ ಆ ಸ್ವಿಮ್ಮಿಂಗ್ ಪೂಲಿನ ನೀರಿನಲ್ಲಿ ಅಡ್ಡಾಡುತ್ತಿದ್ದ ವೀರ್ಯದ ಕಣಗಳು!
Magdalena Kwiatkowska ಈ ಸಂಬಂಧ ಹೋಟೆಲಿನ ಮಾಲಿಕನ ಮೇಲೆ ಕೋರ್ಟಿನಲ್ಲಿ ದಾವೆ ಹೂಡಿದ್ದಾಳೆ. ರಜೆಯ ದಿನಗಳಲ್ಲಿ ಮಗಳು ಯಾವುದೇ ಗಂಡಸಿನೊಂದಿಗೆ ಲೈಂಗಿಕ ಸಂಪರ್ಕ ಹೊಂದಿರಲಿಲ್ಲವೆಂದು ತಾಯಿ ಪ್ರಮಾಣ ಮಾಡಿ ಹೇಳುತ್ತಿದ್ದಾಳೆ.
ಇಂಥದೊಂದು ಪ್ರಕರಣ ನಡೆಯಲಿಕ್ಕೆ ಸಾಧ್ಯವೇ ಇಲ್ಲವೆಂದು ಬುದ್ಧಿವಂತರು ವಾದಿಸುತ್ತಿದ್ದಾರಾದರೂ, ಪೂಲಿಗೆ ಇಳಿಯುವ ಮುನ್ನ ಒಂದು 'ಪಿಲ್' ತೆಗೆದುಕೊಂಡೇ ಇಳಿಯೋದರಿಂದ ಹೀಗೆ ಫೂಲಾಗೋದು ತಪ್ಪುತ್ತದೆ ಅಂತ ಕಿಲಾಡಿಗಳು ತಮಾಷೆ ಮಾಡುತ್ತಿದ್ದಾರೆ. ಇನ್ನು ಕೋರ್ಟು ಏನು ಹೇಳುತ್ತದೋ ಕಾದು ನೋಡಬೇಕು.
ಲಿಂಕ್: http://www.nj.com/parenting/

Labels:
News Room,
Swimming Pool,
ಈಜುಕೊಳ,
ಗರ್ಭವತಿ,
ವೀರ್ಯ
Thursday, July 9, 2009
ನಿಮಗೇನನ್ನಿಸುತ್ತದೆ?
ಸುಘೋಷ್ ನಿಗಳೆ ಕನ್ನಡ ಬ್ಲಾಗರ್ಸ್‌ನಲ್ಲಿ ಒಂದು ಚರ್ಚೆ ಹುಟ್ಟು ಹಾಕಿದ್ದಾರೆ. ನಿಮಗೆ ಏನನ್ನಿಸುತ್ತದೆ, ಅಲ್ಲೇ ಹೋಗಿ ಹೇಳಿ:
ಸ್ಪರ್ಮ್ ಕೌಂಟ್ ಕಡಿಮೆಗೆ ಈಗ ಚಿಂತಿಸಬೇಕಿಲ್ಲ. ಲಂಡನ್ನಿನ ನ್ಯೂ ಕ್ಯಾಸಲ್ ವಿಶ್ವವಿದ್ಯಾಲಯ ಮತ್ತು ಈಶಾನ್ಯ ಇಂಗ್ಲೆಂಡ್ ವೀರ್ಯ ಸಂಸ್ಥೆಯ ಪ್ರೋಫೆಸರ್ ಕರೀಂ ನಯೀರ್ನಿಯ ತಂಡ ಮಾನವ ವೀರ್ಯವನ್ನೇ ತಯಾರಿಸಿದ್ದಾರಂತೆ. ಕೆಲಸವಿಲ್ಲದ ಬಡಗಿ ಮಗನ ಅದೆನ್ನನ್ನೋ ಕೆತ್ತಿದನಂತೆ ಎಂದು ಕೆಲವರು ಈ ಸಂಶೋಧನೆಯ ಬಗ್ಗೆ ಮೂಗು ಮುರಿದಿದ್ದಾರೆ. ನಿಮಗೆ ಏನೆನ್ನಿಸುತ್ತದೆ?ವಿಸಿಟ್: http://kannadablogs.ning.com/forum/topics/2958967:Topic:29959
Labels:
Blogroll,
Inventions,
Sperm,
ವೀರ್ಯ,
ಸುಘೋಷ್ ನಿಗಳೆ
Thursday, June 25, 2009
ಅಡಿಗರ ’ಮೋಟುಗೋಡೆ’ ಕವನ
ಗೋಪಾಲ ಕೃಷ್ಣ ಅಡಿಗರ ವಿರುದ್ಧ ಡಿ.ವಿ.ಗುಂಡಪ್ಪನವರು ಜಗಳ ಮಾಡಲು ಒಂದು ಕಾರಣವಿತ್ತು. 1957ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾದ ಅಡಿಗರ ಒಂದು ಕವನವು ಎಲ್ಲೆ ಮೀರಿದ ಅಶ್ಲೀಲತೆಯಿಂದ ಕೂಡಿದೆಯೆಂದು ಡಿ.ವಿ.ಜಿ.ಯ ಅಭಿಪ್ರಾಯ. ಅಡಿಗರ ವಿರುದ್ಧ ಕೋರ್ಟಿನಲ್ಲಿ ಕೇಸು ಹಾಕುವವರೆಗೂ ಹೋಗಿದ್ದರಂತೆ ಗುಂಡಪ್ಪನವರು. ವಾಸ್ತವದಲ್ಲಿ ಡಿ.ವಿ.ಜಿ ಕೂಡ ಅನೇಕ ’ಶೃಂಗಾರ’ ಕವನಗಳನ್ನು ನಮಗೆ ಕೊಟ್ಟಿದ್ದಾರಾದರೂ, ವಯಕ್ತಿಕವಾಗಿ ಅವರೂ ಸಹ ನಮ್ಮ ’ಮೋಟುಗೋಡೆ’ಗಿಂತಲೂ ಒಂದು ಹೆಜ್ಜೆ ಮೀರಿದ ಚರ್ಚೆಗಳಲ್ಲಿ ತೊಡಗಿದ್ದಾರಾದರೂ ಪತ್ರಿಕೆಗಳಲ್ಲಿ ಪ್ರಕಟವಾಗುವ ಕವನಗಳಿಗೆ, ಅಂಕಣಗಳಿಗೆ ಒಂದು ಮಿತಿಯಿರುತ್ತೆಂದು ನಂಬಿದ್ದವರು. ಮತ್ತು ಆ ಮಿತಿಯನ್ನು ದಾಟಿದವರ ಬಗ್ಗೆ ಗೌರವವೂ ಇಟ್ಟುಕೊಳ್ಳುವುದಿಲ್ಲ ತಾವೆಂದು ಕೆಂಡಾಮಂಡಲವಾಗಿ ಗುಡುಗಿದ್ದವರು.
ಅಡಿಗರೆಂದರೆ ನಮಗೆ ನೆನಪಿಗೆ ಬರುವ ಕೇವಲ ’ಯಾವ ಮೋಹನ ಮುರಲಿ’ಯೋ ’ಅಮೃತವಾಹಿನಿ’ಯೋ, ’ಅಳುವ ಕಡಲೊಳು’ನೋ, ’ಮೌನ ತಬ್ಬಿತು ನೆಲವ ಜುಮ್ಮೆನೆ’ಯೋ ಅಲ್ಲದೆ, ಶಾಶ್ವತವಾಗಿ ಕುವೆಂಪುರವರ ವೈರುಧ್ಯದಲ್ಲಿದ್ದ ಅಡಿಗರಿಗೆ ಡಿ.ವಿ.ಜಿ.ಯವರ ವೈರುಧ್ಯವನ್ನೂ ಗಳಿಸಿಕೊಟ್ಟ ಒಂದು ’ಪ್ರಾರ್ಥನೆ’ಯೂ ಇದೆ!
ಕವನದ ಗಾತ್ರವು ದೊಡ್ಡದಾಗಿರುವುದರಿಂದ ಇಲ್ಲಿ ಪ್ರಕಟಿಸುತ್ತಿಲ್ಲ. ಅದರ PDF ಇಲ್ಲಿದೆ, ಕ್ಲಿಕ್ಕಿಸಿ ಕವನವನ್ನು ಓದಿಕೊಳ್ಳಿ.
(ಮೇಲಿನ ಘಟನೆಗೆ ಮೂಲವು ಪ್ರೊ.ಅ.ರಾ.ಮಿತ್ರ ಅವರ ಒಂದು ಉಪನ್ಯಾಸ)

Subscribe to:
Posts (Atom)