Monday, January 22, 2007

ಕೂದ್ಲಿಗೆ?

Ragging ಮಾಡುವುದು ಸರಿಯಲ್ಲವೆಂದು ಗೊತ್ತಿದ್ದರೂ ಅದನ್ನು ತಪ್ಪೆಂದು ಒಪ್ಪಿಕೊಳ್ಳಲು ಮನಸ್ಸಿಲ್ಲದ ಕಾಲ. ಆಶಿರ್ವಾದ ಜ್ಯೂಸ್ ಸೆಂಟರಿನ ಪಕ್ಕದ ಕಾಲಿ ಕಟ್ಟೆಯ ಮೇಲೆ ಗುಂಪಿನೊಡನೆ ಕುಳಿತಿದ್ದಾಗ ನಡೆದ ಒಂದು ಘಟನೆ.

ಬೆಳಿಗ್ಗೆ ಸುಮಾರು ಹತ್ತಾಗಿತ್ತೇನೊ. ಹಾಸ್ಟೆಲ್ ಕಡೆಯಿಂದ ಒಂಟಿ ಹುಡುಗಿ ನಡೆದು ಬರುತ್ತಿದ್ದಳು. ಮುಖ ನೋಡುವುದೇಕೆ, ಅವಳ ನಡಿಗೆಯೇ ಹೇಳುತ್ತಿತ್ತು; ಅವಳು ಮೊದಲನೇ ಸೆಮಿಸ್ಟರಿನ ಹುಡುಗಿಯೆಂದು. ಅವಳು ನಾವು ಕುಳಿತಿದ್ದಲ್ಲಿಗೆ ಬರುತ್ತಿದ್ದಂತೆ ನಮ್ಮಲ್ಲೊಬ್ಬ ಅವಳನ್ನು ಕರೆದ. ನಾವು ಯಾಕೆ ಕರೆಯುತ್ತಿದ್ದೇವೆಂದು ಗೊತ್ತಿದ್ದರೂ, ಅವಳಿಗೆ ಬರದೇ ಬೇರೆ ವಿಧಿಯಿರಲಿಲ್ಲ. ಸ್ವಲ್ಪ ಅಳುಕುತ್ತಲೇ, ತನ್ನ ಭಯವನ್ನು ಮುಗುಳ್ನಗೆಯಲ್ಲಿ ಮರೆಸುವ ಪ್ರಯತ್ನ ಮಾಡುತ್ತ ಬಂದು ನಿಂತಳು.

ಮೊದಲ ಪ್ರಶ್ನೆ: ಹೆಸ್ರೇನು.
ನಿರ್ಭೀತಿಯಿಂದ ಉತ್ತರಿಸಿದಳು.
ಯಾವೂರು?
C E T Rank ?
ಹೀಗೆ ಹತ್ತಾರು ಮಾಮೂಲಿ ಪ್ರಶ್ನೆಗಳು ಒಂದಾದಮೇಲೊಂದರಂತೆ ಬಂದರೆ, ಅವಳು ಅಷ್ಟೆ ಸಹಜವಾಗಿ ಸ್ವಲ್ಪವೂ ತಡವರಿಸದೆ ಪಟ ಪಟನೆ ಉತ್ತರಿಸುತ್ತಿದ್ದಳು. ತುಸುವೂ ವ್ಯಂಗ, ಅಧಿಕಾರದ ಧ್ವನಿಯಿಲ್ಲದೆ ಸ್ನೇಹಪೂರ್ಣ ಸ್ವರದಲ್ಲೇ ಮಾತನಾಡುತ್ತಿದ್ದ ನಮ್ಮನ್ನು ಕಂಡು ಅವಳಿಗೆ ಅಷ್ಟೊತ್ತಿಗೆ ಸಾಕಷ್ಟು ಧೈರ್ಯ ಬಂದಿತ್ತು. ಅಂತೆಯೇ ಮುಗುಳ್ನಗುತ್ತಾ ಮಾತನಾಡಹತ್ತಿದಳು.
ಅಷ್ಟೊತ್ತಿಗೆ, ನನ್ನ ಗೆಳೆಯನ ಕಣ್ಣು ಅವಳ ಅತ್ಯಂತ ಸುಂದರವಾದ ಕೂದಲಿನ ಮೇಲೆ ಬಿತ್ತು. ಬೆಳಗಿನ ಬಿಸಿಲಿಗೆ ಅದು ರೇಶಿಮೆಯಂತೆ ಹೊಳೆಯುತ್ತಿತ್ತು.


ಕಟ್ಟೆಯಮೇಲೆ ಕುಂತಂತೆಯೇ ಕೆಳಗೆ ನಿಂತ ಅವಳ ಕೂದಲಿನ ಮೇಲೊಮ್ಮೆ ಕೈಯಾಡಿಸಿ ಹೇಳಿದ.
"ಕೂದ್ಲು ತುಂಬಾ ಚೆನ್ನಾಗಿದೆ".
ಅವಳು ನಾಚಿಗೆ, ಸಂತೋಷ ಬೆರೆತ ಸ್ವರದಲ್ಲಿ: "ಥ್ಯಾಂಕ್ ಯು ಸರ್!".
"ಏನ್ಹಾಕ್ತೀಯಮ್ಮ ಕೂದ್ಲಿಗೆ"? ಈ ಬಾರಿ ಪ್ರಶ್ನೆ ನನ್ನ ಬಲಕ್ಕೆ ಕುಳಿತವನಿಂದ ಬಂದಿತ್ತು.
ಅವಳು ಮತ್ತದೇ ಸ್ವರದಲ್ಲಿ ತಲೆಯನ್ನು ತಗ್ಗಿಸುತ್ತಾ ಉತ್ತರವಿತ್ತಳು: "ಶ್ಯಾಂಪೂ ಹಾಕ್ತೀನಿ".
ಅವನ ಎಡಕ್ಕೆ ಇಲ್ಲಿಯವರೆಗೆ ಸುಮ್ಮನೆ ಕುಳಿತಿದ್ದವ ಬಾಯಿಬಿಟ್ಟ:
"ಓಹ್! ಹೌದಾ, ತುಂಬಾ ಸಂತೋಷ.
.....................
ಅಂದ್ಹಾಗೆ, ತಲೆ ಕೂದ್ಲಿಗೆ ಏನ್ಹಾಕ್ತೀಯಾ?"

6 comments:

Anonymous said...

ಅಲ್ಪಜ್ನ ಅವ್ರ,

ಮಸ್ತ್ ಬರದೀರಿ ನೋಡ್ರಿ, ಭಾರಿ ಮಜ ಬ೦ತು ಓದಿ. :)

ಆರಾಮ ತೊಗೊರಿ,
ಚಿನ್ನು...

Anonymous said...

che che che godamru neevu hudagarella!!!
enigma

Sandeepa said...

@ಚಿನ್ನು,
ನಮ್ಸ್ಕಾರ್ರೀ ಯಪ್ಪ!

ಹೀಂಗ ನಿಮ್ಮಂತವ್ರ್ ಬಂದ್ ಓದ್ತಿರ್ಬೇಕ್ರಿ..

@enigma,
:) ಅದೂ ಸ್ವಲ್ಪ ಬೇಕು ಜೀವನಕ್ಕೆ..
ಏನ್ ಹೇಳ್ತೆ? :D

Anonymous said...

kharma kanda..ha ha ha

ಪ್ರಶಾಂತ ಯಾಳವಾರಮಠ said...

Ha ha ha.... ye sikkapatti katharnaka aithiree avanoun namag hinthavella holile illaree...

ye bhesh bidaree... hinga mundhvarili...

Sandeepa said...

@anony,
:-)

@prashanth,
Thanks a lot!