Thursday, January 11, 2007

ಹಲ್ಕಟ್ ಶಾಯರ್

ಶಾಯರಿಗಳಿದ್ದೇ ಒಂದು ಸುಂದರ ಲೋಕ. ನನಗೆ ಶಾಯರಿಗಳೆಂದರೆ ಇಷ್ಟ. ಅವು ಎಂತವೇ ಇರಲಿ. ಈ ಶಾಯರಿಗಳ ಗುಂಪಿನಲ್ಲಿ so called 'ಹಲ್ಕಟ್ ಶಾಯರಿ'ಗಳೇ ಬೇರೆ ಬಣ್ಣದ ಚಾದರ ಹೊದ್ದು ಮಲಗುತ್ತವೆ. ನಾನೂ ನನಗೆ ತಿಳಿದ ಈ ಬಗೆಯ ಶಾಯರಿಗಳನ್ನು ಗೆಳೆಯರ ಗುಂಪಿನಲ್ಲಿದ್ದಾಗ ಒಮ್ಮೊಮ್ಮೆ ಒಗೆಯುವುದಿದೆ. ಅಕ್ಕಿ ಪಾಯಸದಲ್ಲಿ ಅನಿರೀಕ್ಷಿತವಾಗಿ ಸಿಕ್ಕ ಒಣದ್ರಾಕ್ಷಿಯಂತೆ ಇವು ಬೇರೆಯದೇ ರೀತಿಯ ಸುಖ ಕೊಡುವುದು ಸುಳ್ಳಲ್ಲ.

ಈಗ ಹೇಳಹೊರಟಿರುವುದು ಹೀಗೆ (ನನ್ನಹಾಗಲ್ಲ, ನನಗೆ ಇವನಷ್ಟು ಶಾಯರಿಗಳು ಬರುವುದಿಲ್ಲ; ಮತ್ತು ಇದುವರೆಗೂ ಒಮ್ಮೆಯೂ ಶಾಯರಿ ಹೇಳಿ ಏಟು ತಿಂದಿಲ್ಲ) ಒಬ್ಬ ಶಾಯರನ ಕತೆ. ಅವನೊಬ್ಬ ಯುವಕ. ಅವನ ಊರು ಹೈದರಾಬಾದ್ ಕರ್ನಾಟಕದ ಒಂದು ಹಳ್ಳಿ. ಇತರ ಯುವಕರಂತೆ ಅವನು ಗೆಳೆಯರ ಗುಂಪಿನಲ್ಲಿ ಹೆಚ್ಚಾಗಿ ಬೆರೆಯುವುವವನಲ್ಲ. ಮಾತು ಕೂಡ ಬಹಳ ಕಡಿಮೆ. ಆಡಿದರೆ ಶಾಯರಿ, ಅವನು ಶಾಯರಿ ಹೇಳುತ್ತಿದ್ದನೆಂದಲ್ಲ; ಅವನು ಹೇಳಿದ್ದೆಲ್ಲ ಶಾಯರಿಯಾಗಿತ್ತು. ಹಾಗಿತ್ತುಅವನ ಮಾತು. ಇಲ್ಲ ಮೌನ. ಯಾರ ಉಸಾಬರಿಗು ಹೋಗದೇ ತನ್ನ ಪಾಡಿಗೆ ತಾನಿದ್ದುಬಿಡುತ್ತಿದ್ದ.

ಒಮ್ಮೇ ನಮ್ಮ ಶಾಯರ್ ಅಪರೂಪಕ್ಕೆ ಬೀದಿಯಲ್ಲಿ ಕಾಣಿಸಿಕೊಂಡ. ಅವನ ಬಗ್ಗೆ, ಅದಕ್ಕಿಂತ ಹೆಚ್ಚಾಗಿ ಅವನ 'ಹಲ್ಕಟ್' ಶಾಯರಿಗಳ ಬಗ್ಗೆ ಊರವರೆಲ್ಲ ತಿಳಿದಿದ್ದರು. ಯೌವ್ವನಕ್ಕೆ ಕಾಲಿಡುತ್ತಿದ್ದ ಹುಡುಗಿಯರು ಮನಸ್ಸಿನಲ್ಲೇ ಅವನ್ನು ಮೆಚ್ಚಿ ಎಲ್ಲರೆದುರು ಅವನ ವಿಚಾರ ಬಂದಾಗ ಮುಖ ಸಿಂಡರಿಸುತ್ತಿದ್ದರು.

ಹಾಗಾಗಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಅವನನ್ನು ನೋಡುವ ಸಹಜ ಕುತೂಹಲ ಊರಿನ ಹೆಣ್ಣುಮಕ್ಕಳಿಗಿತ್ತು. ಆದರೆ ನೇರವಾಗಿ ಅವನ ಮುಖವನ್ನು ನೋಡಲು ಅವರಿಗೆ ಧೈರ್ಯ ಸಾಲುತ್ತಿರಲಿಲ್ಲ. ಇಂದು ಕೂಡ ಅವನ ಮುಂದೆ ಹೋಗುತ್ತಿದ್ದ ಲಲನೆಯರು ಕದ್ದು ಮುಚ್ಚಿ ಅವನನ್ನು ನೋಡ ತೊಡಗಿದರು. ಒಬ್ಬೊಬ್ಬರೇ ಏನೇನು ನೆಪಮಾಡಿ- ಕೊಂಡು ಹಿಂದೆ ತಿರುಗುತ್ತಾ...

ಶಾಯರನ ಪ್ರತಿಕ್ರಿಯೆ:
ಮುಡ್ ಮುಡ್ ಕೆ ನ ದೇಕ್, ಏ ಹಸೀನೊ
ಮುಡ್ ಮುಡ್ ಕೆ ನ ದೇಕ್!
ತಮನ್ನಾಯೆ ಹಮ್ ಭಿ ರಕ್ ತೇ ಹೈ
ತಮನ್ನಾಯೆ ಹಮ್ ಭಿ ರಕ್ ತೇ ಹೈ,
ಫರಕ್ ಇತ್ನಾ ಹೈ ಕಿ, ಫರಕ್ ಸಿರ್ಫ್ ಇತ್ನಾ ಹೈ, ಕಿ
ಆಪ್ ಗೆಹರಾಯಿ ಮೆ ರಕ್ ತೇ ಹೈ,
ಔರ್ ಹಮ್ ಲಂಬಾಯಿ ಮೆ!!!

ನಿಜಾಮನ ಮಗಳ ಮದುವೆಯ ಸಂದರ್ಭ. ಮದುವೆಯ ಆಮಂತ್ರಣವನ್ನು ಊರಿಗೆಲ್ಲ ಡಂಗುರಸಾರಿಸಿಯಾಗಿತ್ತು. ಆದರೆ ಈ ಹಲ್ಕಟ್ ಶಾಯರನನ್ನು ಏನು ಮಾಡುವುದು?? ಊರನ್ನೆಲ್ಲ ಕರೆದು ಅವನನ್ನು ಕರೆಯದೆ ಇದ್ದರೆ ಸರಿಯಾಗುವುದಿಲ್ಲ. ಅವನು ಮದುವೆಗೆ ಬಂದರೆ, ಅಲ್ಲಿ ಎಲ್ಲರೆದುರೂ ಏನಾರು ಹೇಳಿ, ಬಂದ ನೆಂಟರಿಷ್ಟರ ಎದುರು ಅವಮಾನವಾಗಬಹುದೆಂಬ ಭಯ! ಅಂತೂ ಏನಾದರಾಗಲಿ ಎಂದು ಹಲ್ಕಟ್ ಶಾಯರಿಗಳನ್ನು ಹೇಳಬಾರದೆಂಬ ಶರತ್ತಿನ ಮೇಲೆ ಅವನನ್ನು ಮದುವೆಗೆ ಕರೆಯಲಾಗಿತ್ತು. ಹಾಗು ಅವನ ಸುತ್ತಮುತ್ತ ಇರುವಂತೆ ಕೆಲವು ಹುಡುಗರಿಗೆ ಹೇಳಿ ವ್ಯವಸ್ಥೆ ಮಾಡಿದ್ದರು.
ಅಂತೂ ನಿಜಾಮನ ಮಗಳ ಮದುವೆಗೆ 'ಹಲ್ಕಟ್ ಶಾಯರ್' ಬಂದ.

ದೂರದಲ್ಲಿದ್ದ ಮದುಮಗಳನ್ನು ನೋಡಿದವನೇ...

ಆಯೀತಿ ಮೇರೆ ತುರ್ಬತ್ ಪೆ, ಮೂತ್ನೆ ಕೆ ಲಿಯೆ,
ಮೂತ್ನಾ ತೊ ಎಕ್ ಬಹಾನ ಥಾ,
ಮೂತ್ ನಾ ತೊ ಸಿರ್ಫ್ ಎಕ್ ಬಹಾನಾ ಥಾ,
ಚೂತ್ ಧಿಕಾಕರ್ ಚಲೀ ಗಯಿ!!!

ಅವನು ಸುತ್ತಮುತ್ತ ಹೆಚ್ಚೇನು ಜನರಿರದಿದ್ದರಿಂದ, ಅವನನ್ನು ನೋಡಿಕೊಳ್ಳಲೆಂದೇ ನೇಮಿಸಲ್ಪಟ್ಟವರು, ಒಳಗೇ ನಗುತ್ತಾ, ಅವನನ್ನು ಗದರಿ, ತಾವು ಸುಮ್ಮನಾದರು.

ಹಾಗೆಯೇ ಬಂದ ಆತ ಜನರ ಮಧ್ಯೆ ಒಂದು ಕಡೆ ಕುಳಿತ. ನಿಜಾಮನ ಮಗಳ ಮದುವೆಯ ಸಡಗರವನ್ನು ನೋಡುತ್ತ. ನೋಡಿದವರ ಮನಸೂರೆಗೊಳ್ಳುವ ಮದುವೆಯ ಅಲಂಕಾರ!!
ಅದನ್ನೇಲ್ಲಾ ನೋಡಿದವನೇ..

ಕ್ಯಾ ಕಹೂ ಇಸ್ ಇಂತಜಾಮ್ ಕಿ,
(ಅಪರೂಪಕ್ಕೆ ಹಲ್ಕಟ್ ಶಾಯರನ ಬಾಯಲ್ಲಿ ಒಳ್ಳೆಯ ಶಬ್ಧ ಕೇಳಿದ ಜನ,
ಶುಭ ಸೂಚನೆ ಸಿಕ್ಕಂತೆ ಆಸೆಯಿಂದ ಅವನ ಮುಖನೋಡಿದರು. ಅವನು ಮುಂದುವರಿಸಿದ..)
ಕ್ಯಾ ಕಹೂ ಇಸ್ ಇಂತಜಾಮ್ ಕಿ,
ಚುದಾನೆ ಚಲೀ ಹೈ, ಭೇಟಿ ನಿಜಾಮ್ ಕಿ!!

ಇದ್ದಕ್ಕಿದ್ದ ಹಾಗೆ ಎತ್ತೆತ್ತಲೋ ತಿರುಗಿದ ಶಾಯರಿಯಿಂದ ದಿಕ್ಕುಗೆಟ್ಟ ಜನ, ಕೈ ಕಾಲು ಮುಖವೆಂದು ನೋಡದೆ ಶಾಯರನಿಗೆ ಹೊಡೆಯತೊಡಗಿದರು. ಅವನನ್ನು ಹೊಡೆಯುತ್ತಲೇ ಸಭೆಯಲ್ಲಿ ಗದ್ದಲವಾಗದಿರಲೆಂದು ಬೀದಿಗೆ ಎಳೆದುಕೊಂಡು ಬಂದು ಹೊಡೆಯಹತ್ತಿದರು. ಕೆಲವರು ರಸ್ತೆಬದಿಯ ಕಲ್ಲುಗಳನ್ನು ಎತ್ತಿ ಅವನತ್ತ ಬೀಸಿದರು..

ಆಗ.. ಒಮ್ಮೆಲೇ..

ಗಾಯವಾಗಿ ರಕ್ತ ಸೋರುತ್ತಿದ್ದ ಕೈಯನ್ನೇ ಮೇಲೆತ್ತಿ ಆಕಾಶದತ್ತ ತೋರುತ್ತಾ..

ಆಸ್ಮಾನ್ ಕಿ ತಾರೋ! ಸಿತಾರೋನ್ ಕಿ ಪ್ಯಾರೊ!
(ಜನ ಹೊಡೆಯುವುದನ್ನು ನಿಲ್ಲಿಸಿ, ಹಗಲಿನಲ್ಲೇ ನಕ್ಷತ್ರ ಕಂಡವರಂತೆ ದಿಗಂತದತ್ತ ನೋಡಿದರು)

ಆಸ್ಮಾನ್ ಕಿ ತಾರೋ! ಸಿತಾರೋನ್ ಕಿ ಪ್ಯಾರೊ!
ತುಮ್ಹಾರಿ ಮಯ್ಯಾ ಕೆ ಚೂತ್, ಪತ್ರಾ ನಕೊ ಮಾರೊ!!

5 comments:

Arunkumar SI Kembhavi said...

Anna namaskaara kananno...

sakhat bardidiya kanla..

Mechhide kanla...

C-Re-ativity andre idena..

Arunkkumar.SI

Anonymous said...

thanksale Aruna!!
thanksu:)

Anonymous said...

ha ha beligeg beligeg idanna odi naktha idde, ofifce nalli irovru enaythappa ivlige antha andkondirbeku :P

kelavondu artha agalle so offline swlpa helu nange
enigma

Sandeepa said...

@enigma,
nee ee blogu odthe anta
gotthe irle!!

artha agdiddella gtalkalli
heLthi :)
tata

Anonymous said...

ಅರೆ, ಇಷ್ಟು ದಿನ ನಾನು ಮೋಟುಗೋಡೆಯನ್ನು ನೋಡಿಯೆ ಇರಲಿಲ್ಲ. ಈಗ ಮೋಟುಗೋಡೆಯಾಚೆ ಇಣುಕಿದಾಗ ತುಂಬಾ ಖುಶಿಯಾಯಿತು. ಹಾಸ್ಯ ಜೀವನದ ಅತಿ ಅವಶ್ಯ ರಸ. ಅದನ್ನು ಇನ್ನಷ್ಟು ನೀಡಿ.