Wednesday, January 31, 2007

ಗಂಡ್ ಬಸ್ಸು...

ಮೊನ್ನೆ ಜನವರಿ ಇಪ್ಪತ್ತೊಂದರ ಭಾನುವಾರ ಸಿರ್ಸಿಗೆ ಬರಬೇಕೆಂದು ಉಮ್ಮಚ್ಗಿ ಬಸ್ ನಿಲ್ದಾಣದಲ್ಲಿ ನಾನು, ಹರ್ಷ ಹಾಗು ರವೀಂದ್ರ ಬಸ್ಸಿಗಾಗಿ ಕಾಯುತ್ತಿದ್ದೆವು. ಸ್ವಲ್ಪ ಹೊತ್ತಿನಲ್ಲಿಯೇ ಯಲ್ಲಾಪುರ ಕಡೆಯಿಂದ ಕೆಂಪು ಬಣ್ಣದ ಗಂಡು ಬಸ್ಸೊಂದು ಬಂದು ನಿಂತಿತು.

ನಾನಂತು ಗಂಡು ಬಸ್ಸನ್ನು ನೋಡದೇ ಅದೆಷ್ಟೋ ದಿನಗಳಾಗಿದ್ದವು. ಈಗೇನಿದ್ದರೂ ಹೆಣ್ಣುಬಸ್ಸುಗಳದ್ದೇ ಕಾರು-ಬಾರು. ಹಾಗೆಂದುಕೊಳ್ಳುತ್ತಲೇ ಬಸ್ಸೇರಿದವನು, ಅದನ್ನೇ ಗೆಳೆಯರ ಬಳಿ ಹೇಳಿದೆ. ಮೊದಲು ಅವರಿಗೆ ಅದೇನೆಂದು ಅರ್ಥವಾಗದಿದ್ದರೂ, ಬಿಚ್ಚಿ ಹೇಳಿದ ಮೇಲೆ 'ಗಂಡು ಬಸ್ಸುಗಳ ಸಂಖ್ಯೆ ಗಣನೀಯವಾಗಿ ಕುಗ್ಗಿದೆ' ಯೆಂದು ಅವರೂ ಒಪ್ಪಿದರು.

ಮೊದಲೆಲ್ಲಾ ಬರೀ ಗಂಡು ಬಸ್ಸುಗಳೇ ಇರುತ್ತಿದ್ದವು. ಬಹುಷಃ, ನಾನು ಮೊಟ್ಟಮೊದಲು ಹೆಣ್ಣು ಬಸ್ಸನ್ನು ನೋಡಿದ್ದು ಬೆಂಗಳೂರಿನಲ್ಲಿಯೇ ಇರಬೇಕು. ಈಗೀಗ ಊರಕಡೆಗೂ ಹೆಣ್ಣುಬಸ್ಸುಗಳೇ ತುಂಬಿಹೋಗಿವೆ. ಎಲ್ಲರೂ ಅವನ್ನೇ ಇಷ್ಟಪಡುತ್ತಾರೇನೋ?!

ಗಂಡು ಬಸ್ಸಿಗಳಿಗಾದರೆ ಹಿಂದುಗಡೆ ಮಾತ್ರ ಬಾಗಿಲು. ಈಗೀಗ ಬರುತ್ತಿರುವ ಬಸ್ಸುಗಳಿವೆಯಲ್ಲ, ಸಿಟಿ ಬಸ್ಸುಗಳಂತವು; ಎರಡು ಬಾಗಿಲಿನವು. ಅವು ಹೆಣ್ಣು ಬಸ್ಸುಗಳು. ಯಾಕೆಂದರೆ ಅವಕ್ಕೆ ಎರಡು ಬಾಗಿಲುಗಳು.


ಮುಂದುಗಡೆಯಿಂದಲೂ ಹತ್ತಬಹುದು, ಹಿಂದುಗಡೆಯಿಂದಲೂ ಹತ್ತಬಹುದು.

1 comment:

Arun said...

Bengalooralli eega mooru baagilu iruva bassugalu ive.... ;)