Thursday, March 1, 2007

ಕಂಡಕ್ಟರ್ ಹತ್ತಿದ, ಡ್ರೈವರ್ ಹತ್ತಿದ....

ಮತ್ತೊಂದಿಷ್ಟು ಸಾಲುಗಳು...

೧. ಕಂಡಕ್ಟರ್ ಹತ್ತಿದ, ಡ್ರೈವರ್ ಹತ್ತಿದ, ಅಚೆ ಮನೆ ಭಾವ ಓಡಿ ಬಂದು ಹತ್ತಿದ, ನಿಂಗ ಮಾತ್ರ ಹತ್ತಿದ್ರೇ ಇಲ್ಲೆ..
( ಬಸ್ಸು ಹತ್ತದ ಗಂಡನನ್ನ ಹೆಂಡತಿ ಬೈಯುವ ಪರಿ)

೨. ಯಾರಾದ್ರೂ ಮಾಡವು ಇದ್ರೆ, ಉದ್ದಕೆ ಕೈ ಕಾಲು ನೀಡಿ ಮಲಗವು ಕಾಣಸ್ತು!
( ಕೆಲ್ಸ ಮಾಡುವವರು ಇದ್ರೆ..)

೩. ಆಳಗ ಬತ್ತ, ಅವು ಬೇರೆ ಮನೆಲಿ ಇಲ್ಲೆ, ನಾನೇ ಒಳಗೂ , ಹೊರಗೂ ನಿಂತು ಮಾಡ್ಸ್ ಗ್ಯಳವು..
( ಗಂಡ ಮನೇಲಿಲ್ಲ, ನಾನೇ ಎಲ್ಲ ಕೆಲ್ಸ ಮಾಡಿಸ್ಕೋಬೇಕು ಅಂತ, ಹೆಂಡತಿಯ ಅಳಲು)

೪. ಇವತ್ತು ನಂಗೆ ಬರಲೆ ಆಗ್ತಲ್ಲೆ, ಒಳಗೆಂತೂ ಹಚ್‍ಕ್ಯಳಡ!
(ನಾನು ಇವತ್ತು ಬರೋದಿಲ್ಲ, ಏನೊ ಅಡ್ಗೆ ಮಾಡ್ಬೇಡಾ ಅಂತ)

೫. ಕೂಸೇ ನಿಂಗೆ ಬೆಂಡೆಕಾಯಿ ಹಿಡಸ್ತಾ?, ತೊಂಡೆಕಾಯಿ ಹಿಡಸ್ತಾ?, ಮೂಲಂಗಿ, ಕ್ಯಾರೆಟ್ಟು? ಬಹುಶಃ ಹೀರೇಕಾಯಿ ಹಿಡಸ್ತಲ್ಲೆ ಮಾಡಿದ್ದಿ..
(ಯಾವ ತರಕಾರಿ ಇಷ್ಟ ಅಂತ ಕೇಳಿದ್ದು..)

೬. "ನೀನು ಇದ್ದಿದ್ದಿಲ್ಲೆ, ನಿನ್ ಹೆಂಡ್ತಿ ಇತ್ತು, ನಾನು ಅಲ್ಲಿಗೆ ಹೋದ್ದು ಎತ್ನೋಡಲೆ ಹೇಳಿ, ಅಲ್ಲೇ ಜಡ್ದು ಕವಳ ಹಾಕ್ಯಂಡು ಬಂದಿ..
( ಎತ್ತು ನೋಡಲು ಹೋದಾತ ಗೆಳೆಯನಿಗೆ ಹೇಳಿದ್ದು, ಜಡಿದು ಹಾಕಿದ್ದು ಕವಳ- ಎಲೆ ಅಡಿಕೆನ)

೭. "ನೀನು ಹಾಲು ಕುಡಿದೇ ಹೋದ್ರೆ ಕಂಡಕ್ಟ್ರಂಗೆ ಕೊಟ್ ಬಿಡ್ತಿ ನೋಡು!!
(ಮಗುವಿಗೆ ಬಾಟಲಿ ಹಾಲು ಕುಡಿಸುತ್ತಿದ್ದ ತಾಯಿ)

೮. ನಿಂಗೆ ಉಬ್ಬಿದ್ದಾ, ನಿಂಗೆ ಉಬ್ಬಿದ್ದಾ..
( ಊಟದ ಪಂಕ್ತಿಯಲ್ಲಿ, ಪೂರಿ ಬಡಿಸುತ್ತಾ..)

ಲಾಸ್ಟು, ಆದ್ರೆ ಇಂಪಾರ್ಟೆಂಟು,

೯. ಇವೆಲ್ಲಾ ಎನ್ ಕೇದವೇಯಾ..
( ಇವರೆಲ್ಲ, n.k (Northa Canara) ದವರು ಅಂತ ಹುಡುಗಿಯೊಬ್ಬಳು ತನ್ನ ಸ್ನೇಹಿತರನ್ನ ಪರಿಚಯ ಮಾಡಿಸಿದ್ದು)

8 comments:

Ravindra H said...

ಸೂಪರ್ ಅಂದ್ರೆ ಸೂಪರ್ ಮಗಾ........!!!!!!

Anonymous said...

yappa rama krishan shiva shivaa en hudgaro enkatehyo
enigma

ಶ್ರೀನಿಧಿ...... said...

Ravindra,
thankzamma:)

Enigma,
enri,astella devr hesru ottige heLideera, en kathe:)

Parisarapremi said...

ಹ ಹ್ಹ ಹ್ಹಾ...

"ಮಾವ್ ಬಂದ ಹಿಡಿ ತರಡಾ..." ನೆನಪಾಯ್ತು!!

(ಮಾವನ ಎದುರು ಹಿಡಿ/ಪೊರಕೆಯನ್ನು ತಂದವನನ್ನು ಕುರಿತು "ಹಿಡಿ ತರಬೇಡ" ಅಂತ ಹೇಳಿದ ಮಾತು)

ಭಾವಜೀವಿ... said...

ಸೂಪರ್!! ;)
ಅಂದ ಹಾಗೆ ನನಗೂ ಒಂದು ನೆನಪಾಯ್ತು ನೋಡಿ...
ನನ್ನೂರು ಶ್ರಿಂಗೇರಿಯ ಸಮೀಪದ ಒಂದು ಸಣ್ಣ ಹಳ್ಳಿ.
ನಮ್ಮ ಪಕ್ಕದ ಮನೆಯವನು ಹೇಳಿದ್ದು..
ಸನ್ನಿವೇಶ: ಅವರ ಮನೆಯ ದನ ಒಂದು ಹೀಟಿಗೆ (ಬೆದೆಗೆ)ಬಂದಿತ್ತು, ಆದರೆ ಆ ದಿನ ಅದನ್ನು ಹೋರಿಯವರೆಗೆ ಕೊಂಡೊಯ್ಯುವಲು ಮನೆಯಲ್ಲಿ ಅವನು ಅಥವ ಅವನ ಅಪ್ಪ ಯಾರೂ ಇರಲಿಲ್ಲ.ಅದನ್ನು ಅವನು ಹೇಳಿದ್ದು ಹೀಗೆ..
"ಮನ್ನೆ, ನಮ್ಮನೆ ಪುಟ್ಟಿ (ದನದ ಹೆಸರು) ಹೀಟಿಗ್ ಬಂದಿತ್ತು ಮರಾಯ, ಆದ್ರೆ ಮನೆಲಿ ನಾನೂ ಇರ್ಲ್ ,ಅಪ್ನು ಇರ್ಲ ಮರಾಯ!!"

Sham said...

ಶಿವ.. ನಗು ತಡ್ಕಳಕ್ಕಾಗ್ದೆ ಕಿಸಿತಾ ಇದೀನಿ..

Anonymous said...

ಇನ್ನೊಂದು ಇದೇ ತರಹದ್ದು,
ದಕ್ಷಿಣ ಕನ್ನಡದಲ್ಲಿ ಬಹಳಷ್ಟು ಬಿಜಾಪುರ, ಧಾರವಾಡ ಕಡೆಯ ಕಾರ್ಮಿಕರು ಬರುವುದುಂಟು.ಅವರ ನಡುವಿನ ಸಂವಾದ:
ಯಜಮಾನ: ಏನಪ್ಪಾ ಕೂಲಿ ಎಷ್ಟು ಕೊಡ್ಬೇಕು ?
ಕೂಲಿ: ನನಗ್ ನಲುವತ್ತ್ರೀ ಯಪ್ಪ, ನನ್ ಹೆಂಡ್ತಿಗೆ ಊಟಾ ಕೊಟ್ಟು ಹತ್ರಿ (ಹತ್ತು ರೂಪಾಯಿ!!)

thalae haratae said...

abba..adbutha..bayankara..

elli ittidro intha bayankaara thalaena..(before u start thinking of possible answers for this, I am talking about the idea of 'Motugodae')
volleye prayanthna..munduvarilli...