Wednesday, May 23, 2007

ಕಮೆಂಟೊಂದರ ಬಗ್ಗೆ! ( ಈ ಪೋಸ್ಟಿಂಗಿನಲ್ಲಿ ಜೋಕು ಇರುವುದಿಲ್ಲ!)

ಇತ್ತೀಚಿಗೆ ಕನ್ನಡ ಸರಿಯಾಗಿ ಬರದವ್ರೂ ನಮ್ಮ ಬ್ಲಾಗನ್ನ ನೋಡಲಾರಂಭಿಸಿದ್ದಾರೆ ಅನ್ನಿಸುತ್ತದೆ ( ಪ್ರಾಯಶ: ಕೊನಾರ್ಕಿನ ಫೋಟೋಗಳ ಕಾರಣವೋ ಏನೋ) .ನಾನು ಹೆಣ್ಣು ಬಸ್ಸಿನ ಬಗ್ಗೆ ಬರೆದ ಬ್ಲಾಗಿಗೆ ಮಹನೀಯರೊಬ್ಬರು ಕಮೆಂಟ್ ಬರೆದಿದ್ದಾರೆ . ಅವರ ಬರಹದ ಅತ್ಯುತ್ತಮ quality ಯನ್ನ ನೋಡಿ, ಅದರ ಬಗ್ಗೆ ನಾಲ್ಕು ಸಾಲು ಬರೆಯ ಬೇಕು ಅಂತ ಕಂಡಿತು. ಮೊದಲು ಅವರ ಕಮೆಂಟು ಓದಿ. ಬರೆದವರು ಕಾಂಡಂಮ್ ಡಾಟ್ಸ್! ಅದೇನು ಹೆಸರೋ ತಿಳಿಯಲಿಲ್ಲ, ಬಿಡಿ, ಅವರಿಷ್ಟ.

"condumdots said...
Man!, what is your qualification and do you consider yourself as a big literary giant?. you have such a mean taste and put it in your blog. What the hell that this blog is serving any purpose?.Do you think any damn thing that you write will be accepted by people?.For the sake of hell, where were u schooled?. "

Man!, what is your qualification and do you consider yourself as a big literary giant?. -
ಅಲ್ಲಾ , ನಾನು ಏನು ಓದಿದರೆ ಇವರಿಗೇನಂತೆ?, ನಾನು ದೊಡ್ದ ಸಾಹಿತಿ ಅಂತ ಎಲ್ಲದರೂ ಹೇಳಿದ್ದೀನಾ? ಮತ್ತು ಇಷ್ಟಕ್ಕೂ ಇದು ನನ್ನ ಬ್ಲಾಗು ಅಲ್ಲ! "ನಮ್ಮ ಬ್ಲಾಗು" ಅನ್ನುವುದನ್ನ ಗಮನಿಸುವ ವ್ಯವಧಾನವಿಲ್ಲದರ ಬಗ್ಗೆ ನನ್ನ ಖೇದವಿದೆ.

What the hell that this blog is serving any purpose?- ಇದರ ಬಗ್ಗೆ ನಮ್ಮ ಮೊದಲ ಬರಹ ಓದಬೇಕಾಗಿ ಮಹನೀಯರಲ್ಲಿ ಕಳಕಳಿಯ ವಿನಂತಿ.

Do you think any damn thing that you write will be accepted by people?
ಅದ್ಕೇ ದಿನಾ ಒಂದು ೧೦೦-೨೦೦ ವಿಸಿಟ್ ಗಳು ಆಗುತ್ತಿರುವುದು ಮತ್ತು, ದಟ್ಸ್ ಕನ್ನಡದವರು ನಮ್ಮ ಬಗ್ಗೆ ಬರೆದಿದ್ದು. ಇಲ್ಲಾ ಅಂದ್ರೆ ಎಲ್ಲರು ಉಗಿತಿದ್ರು ಸ್ವಾಮಿ!

For the sake of hell, where were u schooled?. - ಪುಣ್ಯಾತ್ಮಾ, ನಿಂಗ್ಯಾಕೋ ಅದರ ಕಷ್ಟ! ನಾನು ಎಲ್ಲಾದರೂ ಓದಿರುತ್ತೇನೆ, ಏನಾದರೂ ಓದಿರುತ್ತೇನೆ. ನೀನು ನಂಗೇನು ಕೆಲಸ ಕೊಡಿಸುತ್ತೀಯಾ?!! funny fellow!
( ಏಕವಚನ ಪ್ರಯೋಗಕ್ಕೆ ಕ್ಷಮೆ ಇರಲಿ, ತಾವು ಬರೆದ ಧಾಟಿಯಲ್ಲೇ ಉತ್ತರಿಸಬೇಕಾಯಿತು. ಇಂಗ್ಲೀಷಿನಲ್ಲಿ ನಿಮ್ಮಷ್ಟು ಪಂಡಿತನಲ್ಲ
ಬಂದರೂ ಅದನ್ನು ಎಲ್ಲಾ ಕಡೆ ತೋರಿಸಿಕೊಳ್ಳುವ ಅಗತ್ಯವಿಲ್ಲ )
ನಾನು ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಕೇಳೋಕೆ ಹೋಗುವುದಿಲ್ಲ. ನಿಮ್ಮ ಬರಹ ನೋಡಿದರೆ ಪಂಡಿತರಂತೆ ಕಾಣುತ್ತೀರಿ.

ಇಷ್ಟಕ್ಕೂ ಈ ಬ್ಲಾಗನ್ನ ಬಂದು ನೋಡಿ , ಓದಿ ಅಂತ ತಮಗೆ ಹೇಳಿಲ್ಲ, ಬೇಕಾದರೆ ನೋಡಿ, ಇಲ್ಲವಾದರೆ ಸುಮ್ಮನಿರಿ. ಇಲ್ಲಿ ಬಂದು ಪರಚಿಕೊಳ್ಳವುದು - ಇತ್ಯಾದಿ ಮಾಡುವ ಅವಶ್ಯಕತೆಯಿರುವುದಿಲ್ಲ.

ನಾನು/ನಾವು ಬರೆದದ್ದು ಸರಿಯಿಲ್ಲವಾದರೆ ಅದನ್ನ ಹೇಳುವ ರೀತಿಯಲ್ಲಿ ಹೇಳಿ. ಯಾರು ಕೂಡಾ ಪರಿಪೂರ್ಣರಲ್ಲ. ಈ ತರಹದ ಕೆಟ್ಟ ಪದ ಪ್ರಯೋಗಗಳನ್ನ ಮಾಡಿದರೆ ಮನಸ್ಸಿಗೆ ನೋವಾಗುತ್ತದೆ.

ಮೋಟುಗೋಡೆಯನ್ನ ನಮ್ಮ ಜೊತೆಗೇ ಇಣುಕುತ್ತಿರುವ ಓದುಗರು ದಯವಿಟ್ಟು ಪ್ರತಿಕ್ರಿಯಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಹಾಂ, ಪಂಡಿತೋತ್ತಮ ಕಾಂಡಂಮ್ ಡಾಟ್ಸ್, ಧೈರ್ಯ ಇದ್ದರೆ ತಮ್ಮ ಹೆಸರು ಹೇಳುವ ಪ್ರಯತ್ನ ಮಾಡಬಹುದು. ಇಷ್ಟೆಲ್ಲ ಮಾತಾಡುವವರಿಗೆ ಧೈರ್ಯ ಇರಬಹುದಪ್ಪ, ಅಲ್ವಾ?

17 comments:

Parisarapremi said...

[ಕಾಂಡಮ್ ಡಾಟ್ಸ್] ಅಯ್ಯೋ ಪಾಪ!!

[ಮೋಟುಗೋಡೆ ಟೀಮ್] ಕ್ಯಾರಿ ಆನ್..

Anonymous said...

halag hogli bidri.. neevu carry on... tumba jana nimma barahagalannu oduttivi

Naveen said...

Go Ahead!

ವಿಕಾಸ್ ಹೆಗಡೆ/ Vikas Hegde said...

ಮಾತೃಭಾಷೆಯಲ್ಲಿ ಶಿಕ್ಷಣ ಬೇಕೂ ಅಂತ ಇದಕ್ಕೇ ಹೇಳೋದಿರ್ಬೇಕು..ಆವಾಗ ಜೊತೆಗೆ ಕಾಮನ್ ಸೆನ್ಸೂ ಬರತ್ತೆ. ಈ ಪುಣ್ಯಾತ್ಮ ಬೇರೆಯವರು ಸ್ಕೂಲಿಂಗ್ ಎಲ್ಲಿ ಮಾಡಿದ್ರು ಅಂತ ಕೇಳ್ತಾನೆ. ತಾನು ಮಾತ್ರ ಈ ರೀತಿ ಎಡವಟ್ಟಾಗೋಗಿದ್ದು ಯಾವ ಸ್ಕೂಲಲ್ಲೋ ಏನೋ . ಅಷ್ಟು ಚೆನ್ನಾಗಿ ’ಈ ಬ್ಲಾಗಿನ ಬಗ್ಗೆ" ಅಂತ ಬರೆದು ಉದ್ದೇಶ ವಿವರಿಸಿದಾರೆ.

ಮೊದ್ಲು qualification ಅಂದ್ರೆ ಏನ್ ಅಂತ ಕೇಳ್ಬೇಕು ಇವ್ನಿಗೆ. ಇಂಗ್ಲೀಷಲ್ಲಿ ದೊಡ್ಡ ದೊಡ್ಡ ಪದ ಬರೆದರೆ ಮಾತ್ರ ಇರೋದಾ qualificationಉ??

ಬರೆದದ್ದನ್ನು ಖಂಡಿಸುವ ಇಚ್ಚೆಯಿದ್ದರೆ ಸರಿಯಾದ ಮಾತುಗಳಲ್ಲಿ ಹೇಳಲಿ, ಅದು ಬಿಟ್ಟು ಬರೆದವರ ಮೇಲೆ ವೈಯಕ್ತಿಕ ನಿಂದನೆ ಮಾಡುವುದು ಸಭ್ಯಸ್ಥನ ಲಕ್ಷಣವಲ್ಲ.

ನರವಿದ್ದರೆ ನಿಜವಾದ ಹೆಸರು ಹೇಳಿ ಚರ್ಚೆಗೆ ಬರಲಿ. ಇಲ್ಲದಿದ್ದರೆ ಅವರ qualificationnu ಏನೆಂದು ನಾವೇ ತೀರ್ಮಾನಿಸಿ ನಗಬೇಕಾಗುತ್ತದೆ :-)

ಹಾಲ್ಸ್ said...

ಅದ್ಯಾವನೋ ಮರುಭೂಮಿಯ ಬಡ್ಡಿ ಮಗ ಅಂಗಂದಾಂತ ನೀವ್ಯಾಕೆ ಮುನಿಸ್ಕೊಂತೀರಿ... ಅವನು ಬೇಕಾರೆ ತುಳಸಿಮಾಲೆ ಹಿಡ್ಕೊಂಡು ಕೂರ್‍ಲಿ ಬಿಡಿ...ನಾವೊಂದಷ್ಟು ಜನ ಗೆಳೆಯರು ಮೋಟುಗೋಡೆ ಚಟ ಹತ್ತಿಸ್ಕೊಂಡಿದ್ದೀವಿ.... ಪಂಡಿತರು ಬೇಕಾದ್ದೂ ಬರ್‍ಕೊಂಡು ತಮ್ಮ ಪ್ರತಿಭಾ ಪ್ರದರ್ಶನ ಮಾಡ್ಕೊಂಡ್ಲಿ... ನಮಗೆ ಅದರೊಂದಿಗೆ ಇಂಥ ಒಂದಷ್ಟು ತುಂಟತನ ಬೇಕೇ ಬೇಕು.. ಜೀವನದಲ್ಲಿ ಇಷ್ಟು ತುಂಟತನ ಇಲ್ಲದಿದ್ದರೆ.....ಹೇಗೆ ಸ್ವಾಮಿ...

ಪ್ರವೀಣ್ ಮಾವಿನಸರ said...

ಅಂತವರ ಬಗ್ಗೆ ನೀವು ಏನೂ ತಲೆ ಕೆಡಿಸಿಕೊಳ್ಳಬೇಡಿ.ಮೋಟುಗೋಡೆ ರಯಿಟ್, ರಯಿಟ್.........................

yaatrika said...

ಇರ್ಲಿ ಬಿಡಿ ಸರ್. ಅವನಿಗೆ ತಾನೊಬ್ಬ ಸುಭಗ ಅಂತ ತೋರಿಸಿಕೊಳ್ಳಬೇಕಾಗಿದೆ. ಬೇಕಾದಷ್ಟು ಬೇಡಾದ್ದನ್ನು ಹೇಳಿಕೊಳ್ತಾನೆ. ಹೇಟ್‍ಮೇಲ್ ಫೋಲ್ಡರ್‍ನಲ್ಲಿ ಇಡಲಿಕ್ಕೂ ಯೋಗ್ಯ ಅಲ್ಲ ಅವನ ಪೋಸ್ಟ್. ನೀವು ’ಹತ್ತುವ’ ಕೆಲಸ ಮುಂದುವರೆಸಿ(ಮೋಟುಗೋಡೆ ಹತ್ತುವುದು ಮಾರಾಯ್ರೆ!). ನಾವು ಜೊತೆಗಿದ್ದೇವೆ.

Anonymous said...

howdu neevu mOTugODe balapaDisi hattuva janara sankhye dinE dinE hecchuttide :P

Enigma said...

he hematte bandillwa dottsu :-P

Alpazna said...

@enigma,

barada..?

aa mansha.. ee kade thalenu(hehhe.. ) haaki mankyambdille!

Vishwanatha Krishnamurthy Melinmane said...

E Commentsnalli Joku iruvudilla annode ondu joku :)

Good work Motugode team...Carry on.

Intha Dots galu sumaru jana irthare. avru onthara...oorkade heltharalla...Thavu uddaragalla...Bereyavru uddara agoke bidalla antha hage....

Thavu enjoy madalla, Bereyavaru enjoy madoke bidalla ....Avra bagge thale bisi madkolbedi...

Punyathma avna blogerID ne helutte avnenu antha...

Avrige idu gottilla antha kansutte...

"Kandre kayi odi, kande iddare kai mugi " antha...

Keep it going...

--
Vishwa

ಸಿಂಧು Sindhu said...

ಮೋಟು ಗೋಡೆ ಇರುವುದೇ ಇಣುಕಿ ನೋಡಲಿಕ್ಕೆ ಅಂತ ಬ್ಲಾಗಿನ ಭಾವಾರ್ಥ. ಇದು ಅರ್ಥವಾಗದೆ ಯಾವನೋ ಅಸಡ್ಡಾಳ ಬರೆದಿದ್ದಕ್ಕೆ ನೀವು ಕಮೆಂಟ್ ಮಾಡುವುದೇ ಬೇಡ.
ಪೋಸ್ಟಿಂಗಿನಲ್ಲಿ ಇರದ ಜೋಕು ಮಜವೇ ಆಗಿದೆ.. :)
ತುಂಟತನ ಜೀವನದ ಮುಗುಳ್ನಗೆ. ವಿಕೃತವಲ್ಲದ ಸಹಜ ಅಭಿವ್ಯಕ್ತಿಗಳು ಎಲ್ಲರ ಮನಕ್ಕೂ ಆಹ್ಲಾದ ನೀಡುತ್ತವೆ.

ಬರೆಯುವುದರಲ್ಲಲ್ಲದೆ ಓದುವುದರಲ್ಲೂ ವಿಕೃತಿ ಇರುತ್ತದೆ. ನಿಮಗೆ ಅಸಡ್ಡಾಳ ಕಮೆಂಟ್ ಬರೆದ ಅನಾಮಿಕರದ್ದು ಇದೇ ಜಾತಿ. ನಿಮ್ಮ ಸಮಯ-ಸತ್ವವನ್ನ ಅಂತವರ ಪ್ರತಿಸ್ಪಂದನೆಗೆ ಉಪಯೋಗಿಸಬೇಡಿ.

ನೀವು ಮೋಟುಗೋಡೆಯನ್ನ ಯಥಾಸ್ಠಿತಿ ಮುಂದ್ವರಿಸಿ.. ಇಲ್ಲಾದರೆ ಎಲ್ಲಿ ಇಣುಕುವುದು..:)

ಶ್ರೀನಿಧಿ.ಡಿ.ಎಸ್ said...

ಬೆನ್ನು ತಟ್ಟಿದ ಎಲ್ಲರಿಗೂ ನಮ್ಮ ವಂದನೆಗಳು!
ಮೋಟುಗೋಡೆಯನ್ನ ಇಣುಕೋದನ್ನ ಮುಂದುವರಿಸುತ್ತೇವೆ, ನಿಮ್ಮನ್ನೆಲ್ಲ ಸೇರಿಸಿಕೊಂಡು!

Satish S Aiholli said...

kaamale kannige jagavella haladi
do not worry sir

coffeelandguy said...

namaskara mitraree,
nimagee ennu ansuthe adunna baririii, jai karnatka.
onde ondu request dont blame some one career or job matters.

Sreeharsha said...

ಹೋಗ್ಲಿ ಬಿಡಿ ಸರ, ನೀವ್ಯಾಕ್ ತಲಿ ಕೆಡಿಸ್ಕ೦ತೀರ... ಬೊಗಳೋದ್ ಬೊಗಳ್ಲಿ.. ನಿಮ್ ಪಾಡಿಗೆ ನೀವ್ "ಕೆಲ್ಸ ಮು೦ದುವರ್ಸಿ"... ;-)

ಕಾವ್ಯಾ ಕಾಶ್ಯಪ್ said...

super reply kanri... avarige kashtavaadare visit koduva agatyavilla... nimma blog odi nakku kushi padalu, innoo halavaaru baari GK goo upayuktavaagide... neevu baravanige munduvaresi... late aagi nimma blog odittiddene... :)