Wednesday, November 14, 2007

ಚಳಿಗಾಲಕ್ಕೊಂದು ಬೆಚ್ಚನೆ ಕವಿತೆ

ವಿರಹಿಗಳಿಗಿದು ಕಷ್ಟಕಾಲ. ಚಳಿಗಾಲ ಶುರುವಾಗಿಬಿಟ್ಟಿದೆ. ಎಷ್ಟು ಕಂಬಳಿ ಹೊದ್ದುಕೊಂಡರೂ ಕೊನೆಗೂ ಸಂದಿಯಿಂದೆಲ್ಲೋ ತೂರಿ ಬರುವ ಚಳಿಯ ಸುಳಿಗಾಳಿ. ಚಡಪಡಿಸುವಂತೆ ಮಾಡುವ, ಮತ್ತಷ್ಟು ಮತ್ತಷ್ಟು ಮುರುಟಿ ಮಲಗುವಂತೆ ಮಾಡುವ ಪಾಪಿ. ಹೆಂಡತಿಯನ್ನು ತವರಿಗೆ ಕಳುಹಿಸಿಕೊಡಲು ಒಲ್ಲದ ಮನಸಿನ ಗಂಡ. ತವರಿಗೆ ಬಂದವಳಿಗೂ ರಾತ್ರಿ ನಿದ್ರೆಯಿಲ್ಲ. ಸುಮ್ಮನೆ ನಿಡುಸುಯ್ಯುವಿಕೆ, ನಿಟ್ಟುಸಿರು. ಈ ವರ್ಷ ಭಾರೀ ಮಳೆಯಾಗಿರುವುದರಿಂದ ಚಳಿಯೂ ಜಾಸ್ತಿಯೇ ಇರಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಹವಾಮಾನ ತಜ್ಞರು. ಮದುವೆಗೆ ಒಪ್ಪದ ಗರ್ಲ್‍ಫ್ರೆಂಡ್, ಡೈವೋರ್ಸ್ ಕೊಟ್ಟು ಮತ್ತೊಬ್ಬನೊಂದಿಗೆ ಓಡಿ ಹೋದ ಹುಡುಗಿಯ ಸಂಗಾತಿ, ಅವಳೆಲ್ಲೋ ಇವನೆಲ್ಲೋ ಆಗಿರುವ ವಿರಹಿಗಳ ಪಾಡು, ವ್ಯರ್ಥ ಕನಸುಗಳನ್ನು ಹೊದ್ದು ಕಣ್ತೆರೆದೇ ಮಲಗಿರುವ ಹುಡುಗಿಯ ಹೊರಳಾಟ.... ಹೇಳತೀರದ್ದು.

ಈ ಚಳಿಗಾಲದ ಶುರುವಿಗೆ, ನಿಮಗಾಗಿ, ಗಂಗಾಧರ ಚಿತ್ತಾಲರ ಮತ್ತೊಂದು ಕವಿತೆಯನ್ನು ಇಲ್ಲಿ ಕೊಡುತ್ತಿದ್ದೇವೆ. ನೃತ್ಯವೊಂದರಿಂದ ಪ್ರೇರಿತವಾದ ಹಾಡು ಇದು. ಬೇಗ ಚಳಿಗಾಲ ಮುಗಿಯಲಿ; ತಲ್ಲಣಿಸುವ ಎದೆಗಳ ಮುದುರಿದ ಜೀವಸೆಲೆಗೆ ಬಿಸಿಲ ಚುರುಕು ತಾಕಿ ಮತ್ತೆ ಚಿಗುರಿಕೊಳ್ಳಲಿ.

ಕಾಮಸೂತ್ರ (೨)

ಯೌವನಮತ್ತೆಯರು ನಾವು
ಕಾಮಮದೋನ್ಮತ್ತೆಯರು

ಬಾ ಪುರುಷನೆ ಬಾ ಗೆಲ್ಲು
ವೀರ್ಯ ಸೂಸು ವಶಗೊಳ್ಳು

ದೂಡಿ ಹೊಮ್ಮುತಿದೆಯೋ ಹರೆಯು
ದುಂಡುಮೊಲೆಯ ಮೊಗ್ಗಿನಲ್ಲಿ
ತೊಡೆಕಣಿವೆಯ ತಗ್ಗಿನಲ್ಲಿ

ಮೆಲ್ಲನೆ ತಿರುಗಲು ತಿರೆಯೂ
ಹೊಸ ಋತುವಿನ ಉಗ್ಗಿನಲ್ಲಿ
ತಡೆಯಲಾರದಂಥ ತ್ವರೆಯು
ನೆತ್ತರ ಈ ಹಿಗ್ಗಿನಲ್ಲಿ.

ಬಾ ಹೆದೆಗೇರಿದ ಬಾಣ
ನಿಮಿರುತ ನಿಗುರುತ ಚೆಲ್ಲುತ
ಬರುವಂತೆಯೆ, ಈ ಪ್ರಾಣ
ತೊನೆಯಿಸಿ ನೆನೆಯಿಸಿ ಬಾ ಬಾ

ಸುಖಸುಖಸುಖದೀ ಮಿಂಚು
ಸಂಚರಿಸಲಿ ಒಡಲಿನ ಒಳ ಒಳ ಅಂಚು

ದ್ರವಿಸುವೆವು ಸ್ರವಿಸುವೆವು
ನಿನ್ನಾಘಾತದ ಸುಖಕೆ
ಸಂತೃಪ್ತಿಯ ಸವಿಸುವೆವು
ಎತ್ತುತ ಮುಖವನು ಮುಖಕೆ.

ಉದರದಲ್ಲಿ
ಜೀವದ ಒಳಪದರದಲ್ಲಿ
ಒಂದೇ ಒಂದೇ ಬಯಕೆ
ಫಲಿಸೋ ಫಲಿಸೋ ಫಲಿಸು
ಜೀವರಸವನುಚ್ಚಳಿಸು
ಗುಹ್ಯವನೊಡೆ ಭೇದಿಸಿ ನಡೆ
ಆಂತರ್ಯದ ಸವಿಗೆ

ಹೊಸ ಪ್ರಾಣಾಂಕುರ ಮಿಳ್ಳಿಸಿ
ಒಡೆಯಲಿ ಈ ಭುವಿಗೆ.

4 comments:

Anonymous said...

good poem
please reproduce chandrashekara kambara's naa kuneebeka, my maneebeka..poem also
it suits to your blog

ಸುಧನ್ವಾ ದೇರಾಜೆ. said...

ee tharahadoo jasthi irli.
u can conduct a survey using 'poll'!
keep it up

ಚಿನ್ಮಯ said...

very good one!
kavite yavaglu blog ge meragannu kodutte!
If possible invite such things from readers...many will come up with good ones

Ragu Kattinakere said...

vayaskara jokaroo idu!