Thursday, October 2, 2008

ಹೆಡ್ ಫೋನು ಸಮಸ್ಯೆ

ಆವತ್ತೊಂದು ದಿನ, ಊರಿಗೆ ಹೊರಟಿದ್ದೆ. ಕೆ.ಎಸ್.ಆರ್.ಟಿ.ಸಿಯ ರಾಜಹಿಂಸೆಯ ಕೊನೆಯ ಸೀಟು. ನನ್ನ ಮುಂದಿನ ಸೀಟಿನಲ್ಲಿ ಒಂದು ಜೋಡಿ. ಹುಡುಗ, ಸ್ವಲ್ಪ ಜೋಶ್ ನಲ್ಲೇ ಇದ್ದ. ಬಸ್ಸಿನ ನಾಗಂದಿಗೆ ಮೇಲೆ ಹೊಸ ಲ್ಯಾಪ್ ಟಾಪಿನ ಟ್ಯಾಗು ಇನ್ನೂ ಹಾಗೇ ತೂಗುತ್ತಿತ್ತು. ಅವನಿಗೆ ತನ್ನ ಲ್ಯಾಪ್ ಟಾಪನ್ನು ಹುಡುಗಿಗೆ ತೋರಿಸಬೇಕು ಅನ್ನುವ ಹುಚ್ಚು. ಅವಳೋ, "ಬಸ್ಸಲ್ಲೆಲ್ಲ ಬ್ಯಾಡ, ಎಂತಕಾ ಸುಮ್ನೆ, ಸಮಾ ಕಾಣೂದಿಲ್ಲ" ಅನ್ನುವವಳು.

ಇವನ ಬಳಿ ಹೊಸ ನೋಕಿಯಾ ಮೊಬೈಲು, ಅದಕ್ಕೊಂದು ಚಂದದ ಹೆಡ್ ಫೋನು. ಯಾವುದಾದರೂ ಹಾಡು ಹಚ್ಚಿದರೆ, ಕಿವಿ ತಮಟೆ ಕಿತ್ತು ಹೋಗುವಷ್ಟು ದೊಡ್ಡ ಸೌಂಡು. ಅವಳಿಗೆ ಹೇಗೆ ಆ ಮೊಬೈಲನ್ನು ಆಪರೇಟ್ ಮಾಡಬೇಕು, ಹೇಗೆ ಹಾಡು ಕೇಳಬೇಕು ಅನ್ನುವುದನ್ನೆಲ್ಲ ಹೇಳಿಕೊಟ್ಟ ಇವ, ಸುಮಾರು ಹೊತ್ತು.

ಬಸ್ ಎಲ್ಲೋ ಕೆಟ್ಟು ನಿಂತಿತು. ಲೈಟ್ ಹಾಕಿರಲಿಲ್ಲ. ಕಂಡಕ್ಟರ್ ಏನೋ ಜೋರಾಗಿ ಗೊಣಗುತ್ತಿದ್ದ.
ಅವಳ ಕಿವಿಯೊಳಗಿಂದ ಸಿಂಗ್ ಇಸ್ ಕಿಂಗ್ ಮೊಳಗುವುದು ಹಿಂದಿನ ಸೀಟಿನಲ್ಲಿದ್ದ ನಂಗೂ ಕೇಳಿಸುತ್ತಿತ್ತು.

ಸ್ವಲ್ಪ ಹೊತ್ತು ಕಳೆದಿರಬಹುದು, ಅವಳು, "ಹಗೂರಕ್ ಒತ್ತಾ" ಅಂದಿದ್ದು, ಅರ್ಧ ಬಸ್ಸಿಗಂತೂ ಕೇಳಿಸಿತು!

ಅರೆಕ್ಷಣ ಮೌನ, ನಂತರ ನಗುವಿನ ಸ್ಫೋಟ. ಆಮೇಲೆ ಆ ರಾತ್ರಿ ಅವಳು ಹಾಡು ಕೇಳಲಿಲ್ಲ.

( ಇದು ನಡೆದ ಘಟನೆ)

12 comments:

Alpazna said...

hahhha!!! :-)

ಥೊ.. ಥೊಥೊ...

ಸ್ವಲ್ಪ ಹುಶಾರಾಗಿರಕೇನಪ ಹುಡ್ರಿಗೆ?!

ವಿಕಾಸ್ ಹೆಗಡೆ said...

hha hha hha

ಹಲ್ಟಿಮೇಟು !

Prashant C said...

hahhha!!!

ಎನ್ ಒತ್ತಾ ಇದ್ದ ಅಂತ್, ಇಣುಕ್ ನೊಡಬೆಕಾಗಿತಲ್ವಾ??

;)

ಪಾಪಣ್ಣ (Amar Tumballi) said...

ಎ೦ತ ಒತ್ತಾಇದ್ದಿದ್ದ ಅನ್ನೊದು ಒ೦ತರ obvious ಅಲ್ದಾ?

shivu K said...

ಬೊಂಬಾಟಾಗಿದೆ. ಆಹಾ , ಎಲ್ಲಿ ಹುಡುಕುತ್ತಿರಿ ನೀವು ಅವರು ನೆಮ್ಮದಿಯಾಗಿರಲಿಕ್ಕೂ ಬಿಡಲ್ವಲ್ಲ!

sunaath said...

ಛೇ! ಆ ಜೋಡಿಯ ಮಾನ ತೆಗೆದು ಬಿಟ್ರಲ್ರಿ, ಶ್ರೀನಿಧಿ!

ಇರಲಿ,ನವರತ್ನ ರಾಮ ಅವರು ಬರೆದ ಒಂದು ಕತೆಯನ್ನು ಸಂಕ್ಷಿಪ್ತವಾಗಿ ಹೇಳ್ತೇನೆ:

ಹೊಸ ಜೋಡಿಯೊಂದು ಬೆಂಗಳೂರಿನಲ್ಲಿ ಟ್ಯಾಕ್ಸಿಯಲ್ಲಿ ವಿಹಾರ ಮಾಡ್ತಾ ಇದ್ದಾರೆ. ಚಾಲಕ ಟ್ಯಾಕ್ಸಿಯನ್ನ ಜೋರಾಗಿ ಓಡಿಸ್ತಾ ಇದ್ದಾನೆ.
ಹುಡುಗಿ: "ಸ್ವಲ್ಪ slow, ಸ್ವಲ್ಪ slow."

ಚಾಲಕ ಜೋರಾಗಿ ಒಡಿಸ್ತಾನೇ ಇದ್ದಾನೆ.
ಟ್ಯಾಕ್ಸಿಯಿಂದ ಇಳಿದ ಬಳಿಕ ಹುಡುಗಿ ಚಾಲಕನಿಗೆ ಹೇಳಿದಳು: "ಏನಪ್ಪಾ, slow ಅಂತಾ ಹೇಳಿದರೂ, fast ಆಗಿ ಓಡಿಸ್ತಾ ಇದ್ದೆಲ್ಲಪ್ಪ."
ಚಾಲಕ: "ಹೌದಾ, ನೀವು ಯಜಮಾನ್ರಿಗೆ ಹೇಳ್ತಾ ಇದ್ದೀರಿ ಅಂತ ಅಂದ್ಕೊಂಡಿದ್ದೆ."

Krishna said...

ಈ ತರ ಒಂದೊಕ್ಕೊಂದು ಬೋನಸ್ (Sunath ಕಾಮೆಂಟ್) ಕೊಡುತ್ತಾ ಇದ್ರೆ ಬಹಳ ಚೆನ್ನಾಗಿರುತ್ತೆ!

Prashant C said...

@ಪಾಪಣ್ಣ(Amar Tumballi)

ಹುಡುಗ ರಸಿಕನಾಗಿದ್ದು, obvious ಅಲ್ಲದೆ ಇರೊದೆನ್ನಾನ್ನದರು ಒತ್ತಾ ಇದ್ನಾ ಅಂತ್ ಕೂತುಹಲ ಅಷ್ಟೆ!!


@sunaath
LOL :D

ಹೃದಯದಿಂದ said...

ಚೆನ್ನಗಿದೆ. ತುಂಬಾದಿನಗಳಿಂದ ನಿಮ್ಮ blog ನ ಓದುತಿದ್ದೇನೆ but ಕಾಮೆಂಟ್ ಮಾಡೋಕೆ ಇವತ್ತೇ time ಸಿಗ್ತು
ಲೇಟಾಗಿ ಕಾಮೆಂಟ್ ಮಾಡಿದಕ್ಕೆ ಕ್ಷಮೆ ಇರಲಿ
ಸಾಧ್ಯ ಇದ್ರೆ ಇಲ್ಲಿಗೆ ಭೇಟಿ ನೀಡಿ- ontipremi.param.mobi

Anonymous said...

ಪಾಪ ಅವನು ಏನು ಒತ್ತುತ್ತಿದ್ನೋ ನೀವೇನು ಅಪಾರ್ಥ ಮಾಡಿಕೊಂಡ್ರೋ ? [:)]

sunaath said...

skhalana ಅವರ ಟಿಪ್ಪಣಿ ಓದಿ ರಾಶಿ ಬರೆದ ಹಾಸ್ಯಲೇಖನ ಒಂದು ನೆನಪಾಯಿತು. ಅದರ ಅಲ್ಪ ಭಾಗ ಮಾತ್ರ ಇಲ್ಲಿ ಕೊಡುತ್ತೇನೆ:

ಹುಚ್ಚಾಸ್ಪತ್ರೆ ಡಾಕ್ಟರು ರೋಗಿಯ ಪರೀಕ್ಷೆ ಮಾಡುವಾಗ ಕೇಳಿದ ಪ್ರಶ್ನೆ:
"ನೋಡಪ್ಪಾ, ದುಂಡು ದುಂಡಾಗಿರುತ್ತ; ಒಳಗೆ ಮೃದುವಾಗಿದ್ದು, ಹೊರಗೆ ಗಟ್ಟಿಯಾಗಿರುತ್ತೆ; ಕೆಂಪನೆ ತುಂಬು ಇರುತ್ತೆ. ಏನು ಹೇಳು."
ರೋಗಿ: "ಕಿತ್ತಳೆ ಹಣ್ಣು!"
ಡಾಕ್ಟರು ಈತ ತಪ್ಪು ತಪ್ಪು ಹೇಳ್ತಾ ಇದ್ದಾನೆ. ಈತನ ಹುಚ್ಚು ಕಮ್ಮಿಯಾಗಿಲ್ಲ ಅಂತ ಶಿಫಾರಸು ಮಾಡಿದರು.

Chinmay Shastri said...
This comment has been removed by the author.