ಎಸ್.ಎಲ್. ಭೈರಪ್ಪನವರ 'ಸಾರ್ಥ' ಕಾದಂಬರಿಯಲ್ಲಿ 'ಯೋನಿಪೂಜೆ'ಯ ಕುರಿತಾದ ವಿವರಗಳಿವೆ. ಸನ್ಯಾಸಿ (ಭೈರಾಗಿ)ಯಾಗಲು ಹೊರಟ ಕಾದಂಬರಿಯ ನಾಯಕ ಈ ವಿಶಿಷ್ಠ ಪೂಜೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ಆ ದೃಶ್ಯವನ್ನು ಭೈರಪ್ಪ ಎಲ್ಲೂ ಅಶ್ಲೀಲ ಎನಿಸದಂತೆ, ಮನೋಜ್ಞವಾಗಿ ಚಿತ್ರಿಸಿದ್ದಾರೆ. ಎಂಟನೇ ಶತಮಾನದಲ್ಲಿ ಭಾರತದಲ್ಲಿದ್ದ ಧರ್ಮಗಳ ತಿಕ್ಕಾಟದ ಕುರಿತಾದ ಕಾದಂಬರಿ 'ಸಾರ್ಥ', ಒಂದು ಓದಲೇಬೇಕಾದ ಗ್ರಂಥ.
ಈಗ ಇಲ್ಲಿ ರೋಹಿತ್ ನಮಗೊಂದು ವರದಿ ಕಳುಹಿಸಿದ್ದಾರೆ. ಇದು ವಿಶ್ವದ ಕೆಲ ಭಾಗಗಳಲ್ಲಿ, ಕೆಲ ಜನಾಂಗಗಳಲ್ಲಿ ಆಚರಣೆಯಲ್ಲಿರುವ 'ಶಿಶ್ನಪೂಜೆ'ಯ ಬಗೆಗಿನ ಆಸಕ್ತಿಕರ ಲೇಖನ! ಇದನ್ನು ಕನ್ನಡಕ್ಕೆ ಭಾಷಾಂತರಿಸುವ ಗೋಜಿಗೆ ಹೋಗದೇ, ಅದರ ಲಿಂಕನ್ನು ಹಾಗೇ ಕೊಡುತ್ತಿದ್ದೇವೆ; ಓದಿಕೊಳ್ಳಿ:
ಶಿಶ್ನವನ್ನು ಪೂಜಿಸುವ ಐದು ಧರ್ಮಗಳು
4 comments:
ಅದ್ಭುತ ಕೊಂಡಿಗೆ ಧನ್ಯವಾದ!
good link.
ಡಾ|| ಶಿವರಾಮ ಕಾರಂತರು 'ಮೂಕಜ್ಜಿಯ ಕನಸುಗಳು' ಪುಸ್ತಕದಲ್ಲಿ ಶಿವಲಿಂಗದ ಬಗ್ಗೆ ಹೇಳಿದ್ದು ನೆನಪಾಯಿತು. ವಿಚಾರ ಅಂದ್ರೆ ಅವರು ೩೦ ವರ್ಷ ಮೊದಲೆ ಇದರ ಬಗ್ಗೆ ಬರೆದಿದ್ದರು.
ಮೋಟುಗೋಡೆ ಟೀಮ್ ಗೆ ನಮಸ್ಕಾರ, ನಿಮಗೊಂದು ಆಹ್ವಾನ ಪತ್ರಿಕೆ.
ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.
ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.
http://saadhaara.com/events/index/english
http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.
ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.
ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.
ನಿಮ್ಮ ಬೆಂಗಳೂರುವಾಸಿ ಸ್ನೇಹಿತರಿಗೆ link forward ಮಾಡಿ ಕನ್ನಡದ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಸಹಕರಿಸಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.
ಗುರು
-ಕನ್ನಡಸಾಹಿತ್ಯ.ಕಾಂ ಬಳಗ
Anthropologistರು ಇಂತಹ ಪೂಜೆಗಳ ಬಗೆಗೆ ಸಾಕಷ್ಟು ಸಂಶೋಧನೆ ಮಾಡಿದ್ದಾರೆ. ಆದರೆ ಈ ಕೊಂಡಿಯಲ್ಲಿ ನೀಡಲಾದ ಎಲ್ಲ surmiseಗಳು ಸರಿಯಾಗಿಯೇ ಇವೆ ಎಂದು ಹೇಳಲಾಗುವದಿಲ್ಲ.
ಭೈರಪ್ಪನವರ ”ಸಾರ್ಥ” ಕಾದಂಬರಿ ೮ನೆಯ ಶತಮಾನದ ಭಾರತದ ಬಗೆಗೆ ಬರೆಯಲಾದ ಅದ್ಭುತ ಕಾದಂಬರಿ.
Post a Comment