ಹೇಳಿ ಕೇಳಿ ನಾನೊಬ್ಬ ಸ್ಕೂಲ್ ಮೇಷ್ಟ್ರು. ಇಲ್ಲಿ ಬರೆಯುವಂಥಾ ವಿಷಯಗಳನ್ನೆಲ್ಲಾ ತಲೆಯಲ್ಲಿ ತುಂಬಿಕೊಂಡಿದ್ದಾನಾ, ಮೇಷ್ಟ್ರಾಗಿ ನಾಚಿಕೆಯಾಗಲ್ವಾ? ಅಂತ ಬೈಯ್ಯುವವರಿದ್ದಾರೆ. ಮೇಷ್ಟ್ರಾಗಿ ಇಷ್ಟೂ ಹಿಂಜರಿಕೆಯಿರುವವನಾ ಅಂತ ಬೈಯ್ಯುವವರೂ ಇದ್ದಾರೆ. ಬೈಯ್ಯೋರು ಬೈಯ್ಯುತ್ತಲೇ ಇರುತ್ತಾರೆ - ಹೇಗಿದ್ದರೂ..
ಮೋಟುಗೋಡೆಯ ಮೇಲೆ ನಿಂತು ಮೊದಲ ಪಾಠ ಶುರು ಮಾಡೇ ಬಿಡೋಣ ಅಂತ ಬಂದಿದ್ದೀನಿ.
ಶ್ರೀನಿವಾಸನೊಡನೆ ದೇಹ ಎಂಥ ವಿಸ್ಮಯ ಅಂತ ಮಾತನಾಡಿಕೊಳ್ಳುತ್ತಾ ಇರುವಾಗ ಮಾತಿಗೆ ಮಾತು ಬಂದು ಹಾರ್ಮೋನುಗಳಿಗೆ ತಿರುಗಿತು. ಅವನೋ ಯೋಗಾಸನದ ಮೇಷ್ಟ್ರು. ನಾನೋ ಬಯಾಲಜಿ ಹವ್ಯಾಸೀ ಮೇಷ್ಟ್ರು. ಸರಿ, ಮಾತು FSH ಮತ್ತು LH ಕಡೆ ಹೋಗದೇ ಇರಲು ಸಾಧ್ಯವೇ ಇರಲಿಲ್ಲ. ಪುರಾಣ ಕಥೆಗಳೆಲ್ಲವೂ ನಮ್ಮ ಚರ್ಚೆಯ ಪರಿಧಿಯೊಳಗೆ ಬಂದುಬಿಟ್ಟವು.
FSH ಮತ್ತು LH ಕಥೆ ಕೊನೆಗೆ ಹೇಳ್ತೀನಿ. ಮೊದಲು ಒಂದಷ್ಟು ನಿದರ್ಶನಗಳನ್ನು ನೋಡೋಣ.
ಮಹಾಭಾರತದ ಕಾಲ.
ಸತ್ಯವತಿ ಎಂಬಾಕೆಯನ್ನು ನೋಡಿ ಮೋಹಿತನಾಗುತ್ತಾನೆ ಪರಾಶರ ಮುನಿ. ಮುನಿಗಳೂ ಮೋಹಿತರಾಗುವುದುಂಟು. ಮುನಿಗಳು ಸನ್ಯಾಸಿಗಳೇನಲ್ಲ. ಸಾಮಾನ್ಯ ಮನುಷ್ಯರಿಗಿಂತ ಸ್ವಲ್ಪ ಜಾಸ್ತಿಯೇ ಅಂತ ಹೇಳಬೇಕು. ತಪ: ಎಂದರೆ ಉಷ್ಣ ಎಂದೂ ಅರ್ಥ ಇದೆ. ಹಾಗಾಗಿ ತಪಸ್ಸನ್ನಾಚರಿಸಿ ದೇಹದ ಉಷ್ಣವನ್ನು ಹೆಚ್ಚು ಮಾಡಿಕೊಂಡಿರುತ್ತಿದ್ದರು. ಸತ್ಯವತಿಯನ್ನು ಸ್ಪರ್ಶಮಾತ್ರವೂ ಇಲ್ಲದೆ ಗರ್ಭವತಿಯನ್ನಾಗಿಸಿದರು ಪರಾಶರ ಮುನಿಗಳು. ಅವರಿಗೆ ಹುಟ್ಟಿದ ಮಗುವೇ ವ್ಯಾಸ ಮಹರ್ಷಿಗಳು ಎಂಬುದು ಬೇರೆಯದೇ ಕಥೆ. ಇಲ್ಲಿ ಪರಾಶರರ ಕಥೆಯಿಂದ ನಾವು FSH ಮತ್ತು LH ಬಗ್ಗೆ ಕಲಿಯುವುದಿದೆ. ಇದನ್ನು ಬದಿಗಿಡೋಣ.
ಇನ್ನೂ ಸ್ವಲ್ಪ ನೂರುವರ್ಷಗಳ ಕಾಲ ಸವೆಸೋಣ.
ವ್ಯಾಸರ ತಂದೆಯ ಕಥೆಯಾಯಿತು. ಈಗ ಮಗನ ಕಥೆ. ವ್ಯಾಸರು ಹಣ್ಣು ಹಣ್ಣು ಮುದುಕರು. ಅವರ ಮಗ ಶುಕ ಮುನಿ. ವಿಹಾರಕ್ಕೆಂದು ಹೊರಟಿದ್ದ ವ್ಯಾಸರು ಕೊಳವೊಂದರಲ್ಲಿ ನಗ್ನರಾಗಿ ಜಲಕ್ರೀಡೆಯಾಡುತ್ತಿದ್ದ ಹೆಂಗಳೆಯರನ್ನು ನೋಡುತ್ತಾರೆ. ತತ್‍ಕ್ಷಣವೇ ಆ ಹೆಂಗಳೆಯರೆಲ್ಲರೂ ತಮ್ಮ 'ಮಾನ' ಮುಚ್ಚಿಕೊಂಡು ಓಡಿ ಹೋಗುತ್ತಾರೆ. ಇನ್ನೊಮ್ಮೆ ಅದೇ ಸ್ಥಳಕ್ಕೆ ವ್ಯಾಸರ ಮಗ ಶುಕ ಮುನಿ ಬರುತ್ತಾರೆ. ನವತರುಣ ಶುಕ. ಆದರೂ ಆ ಹೆಂಗಳೆಯರೂ ಎಳ್ಳಷ್ಟೂ ನಾಚಿಕೆಯನ್ನು ತೋರದೆ ಸ್ನಾನ ಮಾಡುತ್ತಲೇ ಇರುತ್ತಾರೆ. ಇದೇನು ಮರ್ಮ? ಅದಕ್ಕೆ ಆ ಹೆಂಗಳೆಯರು ಕೊಡುವ ತಾರ್ಕಿಕ ಉತ್ತರಗಳದು ಬೇರೆಯದೇ ಕಥೆ ಇದೆ.. ಆದರೆ ಇಲ್ಲಿ ಆ ಹೆಂಗಸರ FSH ಮತ್ತು LH ಬಗ್ಗೆ ಅರಿಯುವುದಿದೆ.
ಕಥೆಗಳು ಸಾಕೆನಿಸುತ್ತೆ. ಮೊನ್ನೆ ಟ್ರೆಕ್ ಒಂದರಲ್ಲಿ ಗೆಳೆಯರೊಬ್ಬರು ಹೇಳುತ್ತಿದ್ದರು. "ಇಂಗ್ಲೆಂಡಿನಲ್ಲಿ ನಮ್ಮ ಮಗನನ್ನು ಶಾಲೆಗೆ ಸೇರಿಸಲು ಭಯವಾಗಿಹೋಗಿದೆ. ಟಾಯ್ಲೆಟ್ಟಿನಲ್ಲಿ ಕಾಂಡೋಮ್ ಇಟ್ಟು ಬೇಕಿದ್ದರೆ ಉಪಯೋಗಿಸಿ ಎಂದು ಬೋರ್ಡು ಬೇರೆ ಹಾಕಿದ್ದಾರೆ. ತೀರಾ ಪ್ರೈಮರಿ ಶಾಲೆಯಲ್ಲೇ!" ಎಂದು ನಿಟ್ಟುಸಿರು ಬಿಟ್ಟರು. ಆ ದೇಶದ ಸಮಸ್ಯೆ ಇನ್ನೆಷ್ಟಿರಬೇಕು ಯೋಚಿಸಲೇ ಬೇಕು. ಪ್ರೈಮರಿ ಶಾಲೆಯಲ್ಲಿ ಇದರ ಅಗತ್ಯವಿದೆಯೇ? Of course, ನಮ್ಮ ದೇಶದಲ್ಲಿ ಸೆಕ್ಸ್ ಎಜುಕೇಷನ್ ಅನ್ನು ಶಾಲೆಯ ಮಟ್ಟದಲ್ಲಿ ಇಡಬೇಕೋ ಬೇಡವೋ ಎಂಬ ಚರ್ಚೆಯೇ ಇನ್ನೂ ಬಗೆಹರಿದಿಲ್ಲ. ಆದರೆ ಅಷ್ಟೊಂದು ದೊಡ್ಡ ಸಮಸ್ಯೆ ನಮ್ಮ ದೇಶದಲ್ಲಿಲ್ಲ ಎಂಬುದು ನಮ್ಮ ಪುಣ್ಯವಷ್ಟೆ.
ಹುಡುಗ (ಅಥವಾ ಹುಡುಗಿ) ಬೆಳೆಯುವುದು ಎಂದರೆ ವಾಸ್ತವವಾಗಿ FSH ಮತ್ತು LH ಉತ್ಪತ್ತಿ ಆಗಲು ಆರಂಭವಾಗಿದೆ ಎಂದರ್ಥ. Follicle Stimulating Hormone ಮತ್ತು Luteinizing Hormone. ಯಾರಲ್ಲಿ ಈ ಹಾರ್ಮೋನುಗಳೆರಡು ಅಧಿಕವಾಗಿ ಉತ್ಪತ್ತಿಯಾಗುತ್ತೋ ಅವರು ಪರಾಶರರಂತೆ ವೀರರೂ (ಶೌರ್ಯವುಳ್ಳವನು ಶೂರ, ವೀರ್ಯವುಳ್ಳವನು ವೀರ) ಆಗಬಹುದು, ಶುಕಮುನಿಗಳನ್ನು ಕಂಡ ಬಾಲೆಯರಂತೆ "open hearted" ಕೂಡ ಆಗಬಹುದು. ಬರಬರುತ್ತಾ ಈ ಹಾರ್ಮೋನುಗಳು ಅತಿ ಸಣ್ಣ ವಯಸ್ಸಿನಲ್ಲೇ ಉತ್ಪತ್ತಿಯಾಗಲಾರಂಭಸಿದೆ. ಪ್ರೈಮರಿ ಶಾಲೆಯ ಮಕ್ಕಳೂ ಗರ್ಭಿಣಿಯರಾದ ಕೇಸುಗಳು ದಾಖಲಾಗಿವೆ.
ಈ FSH ಮತ್ತು LH ಗಳು progesterone ಮತ್ತು estrogen ಎಂಬ ಇನ್ನೆರಡು ಹಾರ್ಮೋನುಗಳನ್ನು ಉತ್ಪತ್ತಿ ಮಾಡಲು ಅವಕಾಶ ಮಾಡಿಕೊಡುತ್ತೆ. ಮನಸ್ಸಿನೊಳಗಿನ 'ಅನುರಾಗ'ದ ಭಾವನೆಗಳಿಗೂ ಇದೇ ಕಾರಣ ಎಂದು ಮನಸ್‍ಶಾಸ್ತ್ರಜ್ಞರು ಹೇಳುವುದು ಕವಿಗಳಿಗೆ ಕಿರಿಕಿರಿಯಾದ ಮಾತುಗಳು. ಕವಿಗಳು ಏನನ್ನುತ್ತಾರೋ ಏನೋ..
ಇವತ್ತಿನ ಪಾಠ ಇಲ್ಲಿಗೆ ಮುಗಿಸೋಣ. ಏನಾದರೂ ಡೌಟ್ ಇದ್ರೆ ಮುಂದಿನ ತರಗತಿಯಲ್ಲಿ ವಿವರಿಸುತ್ತೇನೆ..
ಹೋಮ್‍ವರ್ಕ್ - FSH ಮತ್ತು LH ಉತ್ಪತ್ತಿ ಆಗದೇ ಇದ್ದರೆ ಬದುಕು ಏನಾಗುತ್ತೆ ಎಂಬುದನ್ನು ಯೋಚಿಸಿ.
11 comments:
ಒಳ್ಳೆಯ ಪಾಠ. ನಮಗೆ testosterone ಮತ್ತು androgen ಗಳ ಬಗ್ಗೆಯೂ ತಿಳಿಯಬೇಕಿದೆ. ಕ್ಲಾಸು ಯಾವಾಗ?
ಈ FSH ಮತ್ತು LH ಉತ್ಪತ್ತಿ ಆಗದೇ ಇದ್ದರೆ, ಮೋಟುಗೋಡೆಯಾಚೆ ಇಣುಕೊಕೆ ಆಗಾತಾ ಇರ್ಲಿಲ್ಲ್ !!
FSH & LH ಇಲ್ಲದೇ ಹೋಗಿದ್ದರೆ ಏನು ಕೆಡುಕಾಗುತ್ತಿತ್ತೋ ಕಾಣೆ, ಆದರೆ ಅತ್ಯಾಚಾರದಂತಹ ಅಮಾನವೀಯ ಕೃತ್ಯವಂತೂ ನಡೆಯುತಿರಲಿಲ್ಲ ಎಂಬುದು ಸತ್ಯ! ಮೋಟುಗೋಡೆಯಲ್ಲಿ ಇಂತಹ ಉತ್ತಮ ಪಾಠಗಳನ್ನೊಳಗೊಂಡ ಬರಹಗಳು/ಅಂಕಣಗಳು ಮತ್ತಷ್ಟು ಬರಲಿ.
motugode nalli ninna modala post ge congrats ... yellhodru meshtru budhdhi bidolla nodu!!!! 'veera'na definition superr!!! :-)
Education reethya iruva lekhana swagatharha...
Innu hechu hechchu e-tharaha lekhanagalu barali endu haraisona...
Yarigadaroo holedare heli...
sentence to death, 15 years jail, Jeevavadhi shikshe anthella judgement koduttaralla...elladaru keliddeera...Athyachara esagabekide endu judgement irodanna ? iradiralu karana ?
Hagiddare enaguttittu ?
So called pathirvatheyarige(dayavittu kshamisi..so called andare nijavada pathirvatheyaru alla adare avaru janara kannige mathra for example majestic kadege 10 ganteya nanthara baruva nariyaru duddige thamma dehavannu marikolluva nariyaru...) avakashavo athava dourbhagyavo ?
e-postannu dayavitt udelete madbedi...ella huduga hudugiyaru alochane maduva vishaya nanage thilida hage :-)
--
Vishwa alias Vishu
Vijiya Said...
FSH & LH bagge savistarvagi tilisi,
mattu adu produce aagade hodare enu problem aagutte hagu enu nivaranopayagalannu tilisi.
FSH ಹಾಗು LHಗಳ ಬಗೆಗೆ ಪುರಾಣದ ಉದಾಹರಣೆಗಳೊಂದಿಗೆ, ತಿಳಿಯಾಗಿ ತಿಳಿಸಿದ್ದೀರಿ. ಇಂಥಾ ವೈಜ್ಞಾನಿಕ ಅಂಶಗಳನ್ನು ಪುರಾಣವಾಚನದಲ್ಲಿ ಹೇಳುವದು ಅವಶ್ಯವಿದೆ. ಆದುದರಿಂದ ಹರಿಕಥಾಕೇಸರಿ ಕೇಶವದಾಸರೊಂದಿಗೆ ನೀವು ದ್ವಂದ್ವ programme ಇಟ್ಟುಕೊಳ್ಳಲು ವಿನಂತಿ.
oLLe FSH-u LH-u... hmmm. avugaLu utpatti aagde hodre enagutte anta naanantu heLalla. class alliro bere huDgru answer maaDli. correct-a ilva heLtini.. hege? :P
[krishna] mundina special class alli... tapskondre bench mele nilstini.. ;-)
[prashanth] nija nija... very good.. idakke education bhaashe li "elicitation" anthivi nODi... :-)
[saahiti hegade] atyaachaara naDeyOdakke FSH mattu LH kaaraNa antha adanna badige iDOke aagalvalla.. santati ne beLyalvalla... dhanyavaadagaLu hegade avare..
[vijaya] shourya iruvavanu shoora.. dhairya iruvavanu dheera.. haage veera andre??
[vishvanath] nimma svaagatakke naavu krutaartha. dhanyavaadagaLu...
[vijiya] khandita.. pustakadalli teera technical aagi irutte.. adanna simplify maadOke aadashtu try maadteevi.. dhanyavaadagaLu.. :-)
[sunaath] harikathaa kesari ....yaar avaru?? avara jothe en itkobeku?? yaakO nimma maatu artha ne aaglilla nOdi.. svalpa vivarsi pa.. :-)
[gandabherunda] hmmm.. jaasti taleharate aaytu...
ಮುಂದಿನ ಪಾಠ ಯಾವಾಗ???
Post a Comment