ಚಿತ್ರ: ಹರ್ಷ,
ಸ್ಥಳ: ಸಂಭಲ್ ಪುರ, ಒರಿಸ್ಸಾ
ಚಿತ್ರ:ಶ್ರೀನಿಧಿ
ಸ್ಥಳ: ಮುನ್ನಾರ್- ಕೊಚ್ಚಿ ರಸ್ತೆ, ಯಾವುದೋ ಜಲಪಾತದ ಬಳಿ.
ಎಂದಿನಂತೆ, ಯಾವುದೇ ವಿವರಣೆಗಳ ಅಗತ್ಯವಿಲ್ಲ ಅಂದುಕೊಂಡಿದ್ದೇನೆ.
Tuesday, September 30, 2008
Sunday, September 21, 2008
ಇಳಿಯಬೇಕು ನಿನ್ನೊಳಗೆ ನಾನು..
ಇಳಿಯಬೇಕು ನಿನ್ನೊಳಗೆ ನಾನು
ಸುರಿದಂತೆ, ಸೋನೆ ಇಳೆಗೆ
ಒಳಗೊಳಗಿನಾಳ ಶೋಧಿಸುವ ಬಯಕೆ
ಮರಬೇರು ಬಸಿದಂತೆ ಭುವಿಗೆ
ಮುತ್ತಿಕ್ಕಬೇಕು ಉನ್ಮತ್ತ ತುಟಿಗೆ
ಪರಾಗವನು ಹೀರ್ದಂತೆ ದುಂಬಿ
ಬಂಗಾರ ದೇಹ ಮುದ್ದಾಡಬೇಕು
ಹಾಲುಕ್ಕಿದಂತೆ, ತುಂಬಿ
ನಿನ್ನೇರುತಗ್ಗು ಹತ್ತಿಳಿಯಬೇಕು
ಹೊಕ್ಕಂತೆ ಸಲಗ ವನಕೆ
ಎರಡಿದ್ದ ಜೀವ ಒಂದಾಗಬೇಕು
ಒರಳೊಳಗೆ ಇದ್ದಂತೆ, ಒನಕೆ
ನಿನ್ನೊಳಗನುತ್ತು ಚಿತ್ತಾಗಬೇಕು
ಹಲ ಸೀಳಿದಂತೆ ಹೊಲವ
ಅರಳಬೇಕು ನೀ ನನ್ನ ಒಳಗೆ
ಹೂವರಳಿ ಬಿರಿದಂತೆ ಒಲವ
ಸುರಿದಂತೆ, ಸೋನೆ ಇಳೆಗೆ
ಒಳಗೊಳಗಿನಾಳ ಶೋಧಿಸುವ ಬಯಕೆ
ಮರಬೇರು ಬಸಿದಂತೆ ಭುವಿಗೆ
ಮುತ್ತಿಕ್ಕಬೇಕು ಉನ್ಮತ್ತ ತುಟಿಗೆ
ಪರಾಗವನು ಹೀರ್ದಂತೆ ದುಂಬಿ
ಬಂಗಾರ ದೇಹ ಮುದ್ದಾಡಬೇಕು
ಹಾಲುಕ್ಕಿದಂತೆ, ತುಂಬಿ
ನಿನ್ನೇರುತಗ್ಗು ಹತ್ತಿಳಿಯಬೇಕು
ಹೊಕ್ಕಂತೆ ಸಲಗ ವನಕೆ
ಎರಡಿದ್ದ ಜೀವ ಒಂದಾಗಬೇಕು
ಒರಳೊಳಗೆ ಇದ್ದಂತೆ, ಒನಕೆ
ನಿನ್ನೊಳಗನುತ್ತು ಚಿತ್ತಾಗಬೇಕು
ಹಲ ಸೀಳಿದಂತೆ ಹೊಲವ
ಅರಳಬೇಕು ನೀ ನನ್ನ ಒಳಗೆ
ಹೂವರಳಿ ಬಿರಿದಂತೆ ಒಲವ
Saturday, September 13, 2008
ವಯಾಗ್ರ - ಟಾಪ್ - 3 ಜಾಹೀರಾತುಗಳು
ಮೋಟುಗೋಡೆ ಬಹುಮಾನ ವಿಜೇತ ಜಾಹೀರಾತುಗಳು ಇಂತಿವೆ.
3. ವ್ಯಾಯಾಮ ಮಾಡುವುದು ಹೇಗೆ?
2. ಅಂಗರಕ್ಷಣೆ
1. ಸೈಕಲ್ ಸವಾರಿ
3. ವ್ಯಾಯಾಮ ಮಾಡುವುದು ಹೇಗೆ?
2. ಅಂಗರಕ್ಷಣೆ
1. ಸೈಕಲ್ ಸವಾರಿ
Wednesday, September 10, 2008
ಕುಂಟಿನಿಯ ಬ್ಲಾಗಲ್ಲೊಂದು ಕತೆ
"ಈ ಭೂಮಿಯ ಮೇಲಣ ಮೋಸ್ಟ್ ಹ್ಯಾಂಡ್‍ಸಮ್ ಮ್ಯಾನ್ ಯಾರು?" ಅಂತ ಕನ್ನಡ ಬ್ಲಾಗ್‍ಲೋಕದ ಪರಿಚಿತರಿಗೆ ಕೇಳಿದರೆ ತಕ್ಷಣ ಬರುವ ಉತ್ತರ 'ಕುಂಟಿನಿ' ಎಂಬುದು! ತಮ್ಮನ್ನು ತಾವೇ ತುಂಬಾ ಸ್ಮಾರ್ಟಾಗಿ ಹೊಗಳಿಕೊಂಡಿರೋ ಈ ವ್ಯಕ್ತಿ ಹಾಗೆ ಹೊಗಳಿಕೊಳ್ಳುವುದರ ಮೂಲಕವೇ ಬ್ಲಾಗೋದುಗರಿಗೆ ಇಷ್ಟವಾಗುತ್ತಾರೆ. ತಮ್ಮ ಬ್ಲಾಗನ್ನು 'ನಾಲ್ಕು ಸಾಲು', ಪುಟ್ಟ-ಚಂದ ಕತೆಗಳ ಮೂಲಕ ಅಲಂಕರಿಸುವ ಇವರು ಕೆಲವೊಮ್ಮೆ ಅನಾಹುತಕಾರೀ ಫೋಟೋಗಳನ್ನೂ ಹಾಕಿ ಓದುಗರನ್ನು ಸಂಕಷ್ಟಕ್ಕೆ ನೂಕುತ್ತಾರೆ.
'ಗೋಪಾಲಕೃಷ್ಣ' ಎಂಬ ತಮ್ಮ ಹೆಸರಿಗೆ ತಕ್ಕಂತೆ ರಸಿಕತೆಯನ್ನು ಮೈತುಂಬಿಕೊಂಡಿರುವ ಇವರ ಇತ್ತೀಚಿನ ಕತೆ 'ಅವಳ ಇವನ ಬಳಿಕ ಕತೆಗಾರ ಹೇಳುವ ಕತೆ' ಮೋಟುಗೋಡೆ ಓದುಗರಿಗೆ ಇಷ್ಟವಾಗಬಹುದು ಎಂಬ ನಂಬಿಕೆಯಿಂದ ಇಲ್ಲಿ ಲಿಂಕಿಸಲಾಗಿದೆ. ಒಂದಷ್ಟು ಹೊಸ ಹೊಳಹುಗಳು ಈ ಕತೆಯಲ್ಲಿದ್ದಂತಿವೆ.
ಥ್ಯಾಂಕ್ಸ್ ಕುಂಟಿನಿ ಸಾರ್... :-)

Thursday, September 4, 2008
Some stats..
ಇಷ್ಟು ದಿನಗಳಿಂದ ನೀವು ನೋಡುತ್ತಿರುವ ಮೋಟುಗೋಡೆ, ನೆಟ್ಟಿನಲ್ಲಿ ಯಾವ್ಯಾವ ಶಬ್ದಗಳನ್ನು ಹುಡುಕುವಾಗ ಸಿಕ್ಕೀತು ಎಂಬ ಕುತೂಹಲ ನಿಮಗೂ ಇರಬಹುದು.
ಇಲ್ಲಿಯವರೆಗೆ ಯಾವ ಯಾವ ಶಬ್ದಗಳನ್ನು ಅರಸಿ ಎಷ್ಟು% ಜನ ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ ಹಾಗು ಇನ್ನಿತರ ಮಾಹಿತಿಗಳು ಕೆಳಗಿನ ಚಿತ್ರದಲ್ಲಿ ಅಡಕವಾಗಿದೆ.
ವಿ. ಸೂ: ದೊಡ್ಡ (ಹಾಗು ಸ್ಪಷ್ಟ) ಚಿತ್ರಕ್ಕಾಗಿ ಅದರ ಮೇಲೆ ಕ್ಲಿಕ್ಕಿಸಿ.
ಇಲ್ಲಿಯವರೆಗೆ ಯಾವ ಯಾವ ಶಬ್ದಗಳನ್ನು ಅರಸಿ ಎಷ್ಟು% ಜನ ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ ಹಾಗು ಇನ್ನಿತರ ಮಾಹಿತಿಗಳು ಕೆಳಗಿನ ಚಿತ್ರದಲ್ಲಿ ಅಡಕವಾಗಿದೆ.
ವಿ. ಸೂ: ದೊಡ್ಡ (ಹಾಗು ಸ್ಪಷ್ಟ) ಚಿತ್ರಕ್ಕಾಗಿ ಅದರ ಮೇಲೆ ಕ್ಲಿಕ್ಕಿಸಿ.
Subscribe to:
Posts (Atom)