"ಈ ಭೂಮಿಯ ಮೇಲಣ ಮೋಸ್ಟ್ ಹ್ಯಾಂಡ್‍ಸಮ್ ಮ್ಯಾನ್ ಯಾರು?" ಅಂತ ಕನ್ನಡ ಬ್ಲಾಗ್‍ಲೋಕದ ಪರಿಚಿತರಿಗೆ ಕೇಳಿದರೆ ತಕ್ಷಣ ಬರುವ ಉತ್ತರ 'ಕುಂಟಿನಿ' ಎಂಬುದು! ತಮ್ಮನ್ನು ತಾವೇ ತುಂಬಾ ಸ್ಮಾರ್ಟಾಗಿ ಹೊಗಳಿಕೊಂಡಿರೋ ಈ ವ್ಯಕ್ತಿ ಹಾಗೆ ಹೊಗಳಿಕೊಳ್ಳುವುದರ ಮೂಲಕವೇ ಬ್ಲಾಗೋದುಗರಿಗೆ ಇಷ್ಟವಾಗುತ್ತಾರೆ. ತಮ್ಮ ಬ್ಲಾಗನ್ನು 'ನಾಲ್ಕು ಸಾಲು', ಪುಟ್ಟ-ಚಂದ ಕತೆಗಳ ಮೂಲಕ ಅಲಂಕರಿಸುವ ಇವರು ಕೆಲವೊಮ್ಮೆ ಅನಾಹುತಕಾರೀ ಫೋಟೋಗಳನ್ನೂ ಹಾಕಿ ಓದುಗರನ್ನು ಸಂಕಷ್ಟಕ್ಕೆ ನೂಕುತ್ತಾರೆ.
'ಗೋಪಾಲಕೃಷ್ಣ' ಎಂಬ ತಮ್ಮ ಹೆಸರಿಗೆ ತಕ್ಕಂತೆ ರಸಿಕತೆಯನ್ನು ಮೈತುಂಬಿಕೊಂಡಿರುವ ಇವರ ಇತ್ತೀಚಿನ ಕತೆ 'ಅವಳ ಇವನ ಬಳಿಕ ಕತೆಗಾರ ಹೇಳುವ ಕತೆ' ಮೋಟುಗೋಡೆ ಓದುಗರಿಗೆ ಇಷ್ಟವಾಗಬಹುದು ಎಂಬ ನಂಬಿಕೆಯಿಂದ ಇಲ್ಲಿ ಲಿಂಕಿಸಲಾಗಿದೆ. ಒಂದಷ್ಟು ಹೊಸ ಹೊಳಹುಗಳು ಈ ಕತೆಯಲ್ಲಿದ್ದಂತಿವೆ.
ಥ್ಯಾಂಕ್ಸ್ ಕುಂಟಿನಿ ಸಾರ್... :-)
No comments:
Post a Comment