ಎರಡನೆಯ ಪಾಠಕ್ಕೆ ಸಿದ್ಧರಾಗಿಪ್ಪಾ.. ಇವತ್ತು ಒಂದು ಕಾಯಿಲೆಯ ಬಗ್ಗೆ ತಿಳಿದುಕೊಳ್ಳೋಣ. (ಇದನ್ನು ಕಾಯಿಲೆಯೆಂದು ಕರೆಯುವುದೋ ಇಲ್ಲವೋ ಎಂಬುದೇ ಇನ್ನೂ ವೈದ್ಯಲೋಕ ತೀರ್ಮಾನಿಸಿಲ್ಲ.)
ಕ್ರಿಸ್ತವರ್ಷ 1600ರ ಆಸುಪಾಸಿನಲ್ಲಿ ವೆಕರ್ ಎಂಬಾತ ಆ ಕಾಲದ ವೈದ್ಯರನ್ನು ಬೆರಗುಗೊಳಿಸಿದ್ದು ತನ್ನ ದೇಹಾಂಗದ ಸ್ಥಿತಿಯ ವರದಿಯಿಂದ. ಆತನಿಗೆ ಎರಡು ಶಿಶ್ನವಿತ್ತು!! ಅಲ್ಲಿಯವರೆಗೂ ವೈದ್ಯಜಗತ್ತು ಮನುಷ್ಯರಲ್ಲಿ ಎರಡು ಶಿಶ್ನವಿದ್ದ ವ್ಯಕ್ತಿಯನ್ನು ಕಂಡರಿತಿರಲಿಲ್ಲ.
ಆತನ ಕೆಲಸ ಕಾರ್ಯಗಳಾದರೂ ಹೇಗೆ? ಬೇರೆ ಅಂಗಗಳ ಕೆಲಸಗಳು, ವಿನ್ಯಾಸಗಳು ಹೇಗೆ, ಏನು ಎತ್ತ ಎಂಬುದನ್ನು ಯೋಚಿಸಿ, ಸಂಶೋಧಿಸಿದಾಗ ಅವರಿಗೆ ಅನೇಕ ಹೊಸ ವಿಷಯಗಳು ತಿಳಿದವು. ಮೂತ್ರಪಿಂಡವಾಗಲೀ, ಗುದದ ಅಂಗಗಳಾಗಲೀ ಎಲ್ಲದರ ಕೆಲಸವೂ ನಕಲಾಗಬೇಕಾಗಿತ್ತು. ಮತ್ತೊಂದು ಸಮಸ್ಯೆಯೆಂದರೆ ಆತನ ಬೆನ್ನುಹುರಿಯು (spinal cord) ಒಡೆದಿತ್ತು. ಸ್ಪೈನಾ ಬಿಫಿಡಾ ಎಂಬುದು ಈ ಸ್ಥಿತಿಯ ಹೆಸರು.
ಮೂತ್ರವಿಸರ್ಜನೆಯನ್ನು ಎರಡು ಶಿಶ್ನದಿಂದಲೂ ಮಾಡಬಹುದಾಗಿತ್ತು. ಆದರೆ ಲೈಂಗಿಕ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಗರ್ಭದಲ್ಲಿದ್ದಾಗಲೇ ಏನಾದರೂ ಏಟು ಬಿದ್ದೋ, ಹಾರ್ಮೋನುಗಳ ವ್ಯತ್ಯಾಸವಾಗೋ, ಅಥವಾ ಜೀನ್‍ಗಳಿಂದಲೋ ಇಂಥಾ ಸ್ಥಿತಿಯನ್ನು ತಲುಪಿದ ಎಂದು ಹೇಳಲಾಗಲಿಲ್ಲ. ಯಾಕೆಂದರೆ ವೆಕರ್ ಈ ವರದಿ ನೀಡಿದ ಮೊದಲ ವ್ಯಕ್ತಿ!
ವಿಶ್ವದಾದ್ಯಂತ ಇಂತಹ ಕೆಲವೇ ಕೇಸುಗಳು ವರದಿಯಾಗಿದ್ದು, ಐವತ್ತು ಲಕ್ಷ ಜನರಿಗೆ ಒಬ್ಬರಿಗೆ ಈ ದೇಹ ಲಕ್ಷಣವು ಒದಗುವುದೆನ್ನಲಾಗಿದೆ.
ವಿಶೇಷವೆಂದರೆ, ಅನೇಕ ಹಾವುಗಳು, ಕ್ರಸ್ಟೇಶಿಯಾಗಳು, ಮತ್ತು ಎಲ್ಲಾ ಕೊಆಲಾ ಕರಡಿಗಳಿಗೆ ಈ ಎರಡು ಶಿಶ್ನವುಳ್ಳ ಸ್ಥಿತಿಯು ಕಂಡುಬರುತ್ತೆ. ಮನುಷ್ಯನಲ್ಲಿ ಮಾತ್ರ ಇದು ಒಂದು ಕಾಯಿಲೆಯೇ ಸರಿ. ಈ ಕಾಯಿಲೆಗೆ ಡೈಫಾಲಿಯಾ ಟೆರಾಟಾ ಎನ್ನುತ್ತಾರೆ.
ಇದು ಎಂಥಾ ಶಾಪವಲ್ಲವೇ?
ಮುಂದಿನ ಪಾಠದಲ್ಲಿ ಬೇರೊಂದು ಶಾಪದ ಬಗ್ಗೆ ತಿಳಿದುಕೊಳ್ಳೋಣ.
-ಅ
16.10.2008
2.20PM
Thursday, October 16, 2008
Thursday, October 2, 2008
ಹೆಡ್ ಫೋನು ಸಮಸ್ಯೆ
ಆವತ್ತೊಂದು ದಿನ, ಊರಿಗೆ ಹೊರಟಿದ್ದೆ. ಕೆ.ಎಸ್.ಆರ್.ಟಿ.ಸಿಯ ರಾಜಹಿಂಸೆಯ ಕೊನೆಯ ಸೀಟು. ನನ್ನ ಮುಂದಿನ ಸೀಟಿನಲ್ಲಿ ಒಂದು ಜೋಡಿ. ಹುಡುಗ, ಸ್ವಲ್ಪ ಜೋಶ್ ನಲ್ಲೇ ಇದ್ದ. ಬಸ್ಸಿನ ನಾಗಂದಿಗೆ ಮೇಲೆ ಹೊಸ ಲ್ಯಾಪ್ ಟಾಪಿನ ಟ್ಯಾಗು ಇನ್ನೂ ಹಾಗೇ ತೂಗುತ್ತಿತ್ತು. ಅವನಿಗೆ ತನ್ನ ಲ್ಯಾಪ್ ಟಾಪನ್ನು ಹುಡುಗಿಗೆ ತೋರಿಸಬೇಕು ಅನ್ನುವ ಹುಚ್ಚು. ಅವಳೋ, "ಬಸ್ಸಲ್ಲೆಲ್ಲ ಬ್ಯಾಡ, ಎಂತಕಾ ಸುಮ್ನೆ, ಸಮಾ ಕಾಣೂದಿಲ್ಲ" ಅನ್ನುವವಳು.
ಇವನ ಬಳಿ ಹೊಸ ನೋಕಿಯಾ ಮೊಬೈಲು, ಅದಕ್ಕೊಂದು ಚಂದದ ಹೆಡ್ ಫೋನು. ಯಾವುದಾದರೂ ಹಾಡು ಹಚ್ಚಿದರೆ, ಕಿವಿ ತಮಟೆ ಕಿತ್ತು ಹೋಗುವಷ್ಟು ದೊಡ್ಡ ಸೌಂಡು. ಅವಳಿಗೆ ಹೇಗೆ ಆ ಮೊಬೈಲನ್ನು ಆಪರೇಟ್ ಮಾಡಬೇಕು, ಹೇಗೆ ಹಾಡು ಕೇಳಬೇಕು ಅನ್ನುವುದನ್ನೆಲ್ಲ ಹೇಳಿಕೊಟ್ಟ ಇವ, ಸುಮಾರು ಹೊತ್ತು.
ಬಸ್ ಎಲ್ಲೋ ಕೆಟ್ಟು ನಿಂತಿತು. ಲೈಟ್ ಹಾಕಿರಲಿಲ್ಲ. ಕಂಡಕ್ಟರ್ ಏನೋ ಜೋರಾಗಿ ಗೊಣಗುತ್ತಿದ್ದ.
ಅವಳ ಕಿವಿಯೊಳಗಿಂದ ಸಿಂಗ್ ಇಸ್ ಕಿಂಗ್ ಮೊಳಗುವುದು ಹಿಂದಿನ ಸೀಟಿನಲ್ಲಿದ್ದ ನಂಗೂ ಕೇಳಿಸುತ್ತಿತ್ತು.
ಸ್ವಲ್ಪ ಹೊತ್ತು ಕಳೆದಿರಬಹುದು, ಅವಳು, "ಹಗೂರಕ್ ಒತ್ತಾ" ಅಂದಿದ್ದು, ಅರ್ಧ ಬಸ್ಸಿಗಂತೂ ಕೇಳಿಸಿತು!
ಅರೆಕ್ಷಣ ಮೌನ, ನಂತರ ನಗುವಿನ ಸ್ಫೋಟ. ಆಮೇಲೆ ಆ ರಾತ್ರಿ ಅವಳು ಹಾಡು ಕೇಳಲಿಲ್ಲ.

( ಇದು ನಡೆದ ಘಟನೆ)
Subscribe to:
Posts (Atom)