Friday, November 21, 2008

ಇವರದು ಜಗದ ಅತಿಚಂದದಂಡು!

ಈ ದುನಿಯಾದಲ್ಲಿ ಎಂಥೆಂಥೆಲ್ಲಾ ನಡೆಯೊತ್ತಪ್ಪಾ ಅಂದ್ರೆ ಅಂಥಂಥದ್ದೆಲ್ಲಾ ನಡೆಯೊತ್ತೆ. ಸ್ಲಾಗಿ (Sloggi) ಎನ್ನುವ ಒಳ ಉಡುಪುಗಳ ತಯಾರಿಕಾ ಕಂಪನಿಯೊಂದು ಇತ್ತೀಚೆಗೆ ಒಂದು ಸ್ಪರ್ಧೆ ನಡೆಸಿತ್ತು. ಅದೇನು ಸ್ಪರ್ಧೆಯಪ್ಪಾಂದ್ರೆ, 'ಪ್ರಪಂಚದ ಅತಿ ಸುಂದರ ನಿತಂಬ' ಸ್ಪರ್ಧೆ!

www.sloggi.comನಲ್ಲಿ ತಮ್ಮ ಫೋಟೋ ಕಳುಹಿಸುವುದರೊಂದಿಗೆ ಈ ಸ್ಪರ್ಧೆಗೆ ಹೆಸರನ್ನು ನೊಂದಾಯಿಸಿಕೊಂಡವರ ಸಂಖ್ಯೆ 11,200. ಸುಮಾರು 31 ಮಿಲಿಯನ್ ಮಂದಿ ಈ ಸ್ಪರ್ಧೆಯಲ್ಲಿ ಮತ ಚಲಾಯಿಸಿದರು. ಈ ಸ್ಪರ್ಧೆಯ ಕೊನೆಯ ಸುತ್ತು ಮೊನ್ನೆ ನವೆಂಬರ್ 12ರಂದು ಪ್ಯಾರಿಸ್ಸಿನಲ್ಲಿ ನಡೆಯಿತು. 26 ದೇಶಗಳ 45 ಸ್ಪರ್ಧಿಗಳು ಈ ಸುತ್ತಿನಲ್ಲಿದ್ದರು. ಕೊನೆಯಲ್ಲಿ ಬ್ರೆಜಿಲ್ಲಿನ ಮೆಲನಿ ನ್ಯೂನ್ಸ್ ಫ್ರಾಂಕೋವೇಕ್ ಮತ್ತು ಫ್ರಾನ್ಸಿನ ಸಾಯ್ಬಾ ಬೊಂಬೋಟ್ ವಿಜೇತರಾಗಿ 15,000 ಡಾಲರ್ ಹಣ, ಒಳ ಉಡುಪು ಪ್ರದರ್ಶನದ ಗುತ್ತಿಗೆ ಪರವಾನಗಿ ಮತ್ತು ತಮ್ಮ ಸುಂದರ ನಿತಂಬಗಳಿಗೆ ವಿಮಾ ಸೌಲಭ್ಯ ಸಹ ಪಡೆದರು.



ಯಾರಿಗಾದರೂ ಕಾವ್ಯರಚನೆಗಾದರೂ ಸ್ಪೂರ್ತಿಯಾದೀತೇನೋ ಎಂಬ ದೃಷ್ಟಿಯಿಂದ ಆ ಸ್ಪರ್ಧೆಯ ಕೆಲ ಫೋಟೋ ಮತ್ತು ವೀಡಿಯೋಗಳ ಲಿಂಕು ಕೊಡುತ್ತಿದ್ದೇವೆ, ನೋಡಿಕೊಳ್ಳಿ:

http://ibnlive.in.com/photogallery/1099-0.html#view_start

http://www.stuff.co.nz/thepress/4759749a19749.html

http://blogofhilarity.com/2008/11/13/a-competition-for-best-ass-in-the-world-you-say

ಮಾಹಿತಿದಾರ: ರೋಹಿತ್ ಕೆ.ಜಿ.

6 comments:

Prakash Payaniga said...

spardhege neevoo hogidranthe... hagantha yaro suddi kottaru

by- http://www.hejjenu.blogspot.com

Prashant said...

Thank God!!!
ಈ ತರಾ ಐಡಿಯಾ, ಕಾಂಡೊಮ್ ತಯಾರಿಕರಿಗೆ ಬಂದಿಲ್ಲಾ, ಇಲ್ಲಾಂದ್ರೆ ಮೋಟುಗೋಡೆಯಾಚೆ ಇನ್ನು ಎನೆನ್ ಕಣತ್ತಿತ್ತೊ ಗೊತ್ತಿಲ್ಲಾ...


ಹಗೆನಾದ್ರು ಆದರೆ ನಾನು ಕಣ್ಣ್ ಮುಚ್ಕೊಂದು ಇಣಕತಿನಿ :D

sunaath said...

ಛೇ ಏನ್ರೀ ಇದು?
’ಮುಖಾ ತೋರಿಸೇ ಚೆಲುವೇ’ ಅಂದರೆ,
ಮತ್ತೇನೋ ತೋರಿಸಿದ್ದೀರಲ್ರಿ!
ಇನ್ನು ಕನ್ಯಾಪರೀಕ್ಷೆಗೆ ಹೋದಂತಹ ಹುಡುಗರು, ಸೌಂದರ್ಯವನ್ನು ಎಲ್ಲಿ ನೋಡಬೇಕಂತೀರಿ?

Prashant said...

@Sunaath
ಸೌಂದರ್ಯ ಹುಡುಗಿಯರ ಪ್ರತಿ ತಿರುವು,ಉಬ್ಬುತಗ್ಗು ಗಳಲ್ಲಿ ಇರುತ್ತೆ, ನಿವು ಅದನ್ನಾ ಎಲ್ಲಾದತರು ಕಂಡಕೊಳ್ಳಬಹುದು... ;)

Ramesh BV (ಉನ್ಮುಖಿ) said...

rueckseitiges Teil ist auch wichtig als Frontseite!

Prashant said...

fantastische Gedanken! :)