Tuesday, December 16, 2008

ಏನು ಫಲ? - ಈ ಫಲ?

ಬೇಕಾಗಿರುವುದು:

ಕಲ್ಲಂಗಡಿ ಹಣ್ಣು - ಒಂದು
ನಿಂಬೆ ಹಣ್ಣು - ಎರಡು
ಚಾಕು - ಒಂದು
ಮಿಕ್ಸರ್ - ಒಂದು
ಪಾತ್ರೆ/ ಸಾಸ್ ಪ್ಯಾನ್ - ಒಂದು
ಒಲೆ - ಒಂದು
ಬೆಂಕಿ ಪೊಟ್ಟಣ, ಕಡ್ಡಿಗಳ ಸಮೇತ ಅಥವಾ ಲೈಟರ್ - ನಿಮ್ಮ ಕೆಪಾಸಿಟಿಗೆ ತಕ್ಕ ಹಾಗೆ.

ಕೆಲಸ:

ಕಲ್ಲಂಗಡಿ ಹಣ್ಣನ್ನು ಚಾಕುವಿನಿಂದ ಹೆಚ್ಚಿ. ಮಿಕ್ಸರ್ ಒಳಗೆ ಹಾಕಿ. ಜ್ಯೂಸ್ ಮಾಡಿ. ನೀರು ಬೆರೆಸಬೇಡಿ. ಕಲ್ಲಂಗಡಿ ಹಣ್ಣಿನಲ್ಲಿರುವ ನೀರು ಸಾಕು. ಪಾತ್ರೆಯೊಳಗೆ ಈ ಜ್ಯೂಸನ್ನು ಸುರಿದು ನಿಂಬೆ ಹಣ್ಣನ್ನು ಚಾಕುವಿನಿಂದ ಹೆಚ್ಚಿ ಕಲ್ಲಂಗಡಿ ರಸವಿರುವ ಪಾತ್ರೆಯೊಳಗೆ ಹಿಂಡಿರಿ. ಒಲೆಯ ಮೇಲೆ ಪಾತ್ರೆಯನ್ನಿಟ್ಟು, ಒಲೆಯನ್ನು ಹಚ್ಚಿ ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿರಿ. ಎಲ್ಲಿಯವರೆಗೂ ಕುದಿಯಬೇಕೆಂದರೆ - ತೀರಾ ನೀರಾಗಿರುವ ಈ ದ್ರವವು ಸ್ವಲ್ಪ ಗಟ್ಟಿಯಾಗಿ ಪಾಕದಂತಾಗುವವರೆಗೂ. ಆರಿದ ಮೇಲೆ ಒಂದು ಸಣ್ಣ ಬಾಟಲಿಯಲ್ಲಿ ಶೇಖರಿಸಿಡಿ. ಯಾವಾಗ ಕುಡಿಯಬೇಕೋ ಆಗ ಕುಡಿಯಿರಿ. ಯಾವಾಗ ಕುಡಿಯಬೇಕೆಂಬ ಪ್ರಶ್ನೆಯಿದೆಯೆಂದಾರೆ ಮುಂದೋದಿ.

ಏನು ಫಲ? - ಈ ಫಲ?

ರಾತ್ರಿಯ ಯಶಸ್ವಿ ಪ್ರಣಯಕ್ಕೆ ಪ್ರಕೃತಿ ಚಿಕಿತ್ಸಕರು ಸಲಹೆ ಮಾಡುವ ಒಂದು ಪಥ್ಯ ಇದು. ಇದನ್ನು ನೈಸರ್ಗಿಕ ವಯಾಗ್ರ ಎಂದೂ ಹಲವರು ಹೇಳುತ್ತಾರೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಔಷಧಿಗಳನ್ನು ತೆಗೆದುಕೊಂಡು ದೇಹವನ್ನು ಕೆಮಿಕಲ್ ಗುಡಾಣ ಮಾಡಿಕೊಳ್ಳುವುದಕ್ಕಿಂತ ಇದು ಸಾವಿರಪಾಲು ಮೇಲು.

ರಹಸ್ಯ?

ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರುಲೀನ್ ಮತ್ತು ಲೈಸೊಪೀನ್ ಎಂಬ ಎರಡು ರಾಸಾಯನಿಕ ವಸ್ತುಗಳಿವೆ. ಇವುಗಳು ದೇಹದ ಎನ್‍ಜೈಮುಗಳ ಜೊತೆ ಬೆರತು ಹಿಂದೆ ಹೇಳಿದ್ದೆನಲ್ಲಾ, FSH ಮತ್ತು LH, ಇವುಗಳ ಉತ್ಪತ್ತಿಯನ್ನು ಸಾರಾಸಗಟಾಗಿ ಮಾಡುತ್ತವೆ. ಮೆಡಿಕಲ್ ಶಾಪಿನ ಕೆಮಿಕಲ್ ಭರಿತ ಔಷಧಿಗಳೂ ಮಾಡುವುದು ಇದನ್ನೇ - ಜೊತೆಗೆ ಇನ್ನಷ್ಟು ಕಾಯಿಲೆಗಳನ್ನೂ ತರಿಸಿ!!

ಹೆಚ್ಚನ ಮಾಹಿತಿಗಳಿಗೆ ಈ ತಾಣವನ್ನು ನೋಡಬಹುದು.

ನಿಮ್ಮ ವಯಸ್ಸೆಷ್ಟೇ ಇರಲಿ, ಆದರೆ ರಾತ್ರಿಯು ಸುಂದರಮಯವಾಗಿರಲಿ.

-ಅ
16.11.2008
6.45PM

10 comments:

Sandeepa said...

ಚಳಿಗಾಲಕ್ಕೊಂದು ಸಮಯೋಚಿತ ಮಾಹಿತಿ!
ಧನ್ಯವಾದ:-)

ವಿ.ರಾ.ಹೆ. said...

ಕಲ್ಲಂಗಡಿ , ನಿಂಬೆಹಣ್ಣಿಂದು ಬೀಜಗಳನ್ನೂ ಸೇರಿಸಿ ಪಾಕ ಆದ್ರೆ ಪರ್ವಾಗಿಲ್ವಾ ಅಥವಾ ಅದನ್ನು ತೆಗೀಬೇಕಾ?

ಅಲ್ಲಾ, ಕೆಮಿಕಲ್ ಕಾಂಬಿನೇಷನ್ ಏನಾದ್ರೂ ಹೆಚ್ಚು ಕಮ್ಮಿ ಆಗೋದ್ರೆ ಅಂತ ... :)

Parisarapremi said...

[ವಿಕಾಸ್] ಒಳ್ಳೇ ಡೌಟು. ಬೀಜ ಇದ್ದರೆ ಏನೂ ತೊಂದರೆ ಇಲ್ಲ ನೋಡಿ.. ನಿಂಬೇ ರಸದಲ್ಲಿ ಸಿಟ್ರಿಕ್ ಆಮ್ಲವು ಇರುವುದರಿಂದ ಸಿಟ್ರುಲಿನ್ ಜೊತೆ ಬೆರೆತು ಒಳ್ಳೆಯ ಪರಿಣಾಮಕಾರಿಯಾಗುವುದು ಇಲ್ಲಿನ ಉದ್ದಿಶ್ಯ. ಬೀಜದಲ್ಲೂ ಇದರ ಅಂಶವಿರುವುದರಿಂದ ಏನೂ ತೊಂದರೆಯಿಲ್ಲ.

ಹೆದರಬೇಡಿ. ನಿಂಬೆ ಬೀಜದಿಂದ 'ಬೇರೆ' ಬೀಜಕ್ಕೆ ಏನೂ ಹೆಚ್ಚು ಕಮ್ಮಿಯಾಗುವುದಿಲ್ಲ. ;-)

Chin said...

comment bardavrella madve agde irovre :D

-Chin

Unknown said...

ಏನ್ರಿ. ಮಾರ್ಕೆಟ್ನಲ್ಲಿದ್ದ ಕಲ್ಲಂಗಡಿ ಎಲ್ಲ ಮಾಯಾ ಆಗೋಗಿದೆ!

Unknown said...

ನೋಡ್ವ -೧೭ ಡಿಗ್ರಿಯಲ್ಲಿ ಕೆಲಸ ಮಾಡ್ತಾ ಹೇಳಿ (Leh, Ladhak)

sunaath said...

ಎಷ್ಟು ಕುಡೀಬೇಕು ಅಂತ ಹೇಳಿಲ್ಲಲ್ಲರೀ.
ಒಂದು ರಾತ್ರಿಗೆ ಅರ್ಧ ಲಿಟರ್ ಸಾಕಾ?

Parisarapremi said...

[ಕೃಷ್ಣ] -೧೭ ಡಿಗ್ರಿಯಲ್ಲಿ ಕಲ್ಲಂಗಡಿ ಹಣ್ಣು ಸಿಕ್ಕರೆ ಖಂಡಿತ ಆಗುತ್ತೆ!! :-)
ನೆನಪಿರಲಿ, ಇದು ಪಥ್ಯವಷ್ಟೆ, ಔಷಧಿಯಲ್ಲ.

[ಸುನಾಥ್] ಎಷ್ಟು ಬೇಕಾದರೂ ಕುಡಿಯಬಹುದು. ನಿಮಗಿಷ್ಟವಾಗುವಷ್ಟು. ಏಕೆಂದರೆ, ಇದು ಔಷಧಿಯಲ್ಲ.

Ramesh BV (ಉನ್ಮುಖಿ) said...

ಈರುಳ್ಳೀ ನುಗ್ಗೇಕಾಯಿ... ಈಗ ಕಲ್ಲಂಗಡಿ ಕೂಡಾನಲ್ಲಪಾ..! :)

ಇವುನೆಲ್ಲಾ ಹಾಕಿ ಕಾಕ್ಟೈಲ್ ಮಾಡ್ದ್ರೇ.. ಏನ್ ಹೆಸ್ರು ಕೊಡಬಹುದು...?

Ambresha said...

normally how mach can we have per day and shaal we have daily how much