ಮಹಾಭಾರತದಲ್ಲಿ ಕುಂತಿಗೆ ಪಾಂಡುವಿನಿಂದ ಮಕ್ಕಳಾಗದ ಕಾರಣ ಆಕೆ ನಿಯೋಗ ಪದ್ಧತಿಯಿಂದ ಮಕ್ಕಳನ್ನು ಪಡೆಯುವ ಕತೆ ನಮಗೆಲ್ಲಾ ತಿಳಿದದ್ದೇ. ಆದರೆ ಜರ್ಮನಿಯಲ್ಲಿ ನಡೆದ ವಿಚಿತ್ರ ಪ್ರಕರಣವೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ.
ಸೋಪಲಸ್ಗೆ ಮದುವೆಯಾಗಿ ವರುಷಗಳಾದರೂ ಮಕ್ಕಳಾಗಿರಲಿಲ್ಲ. ಡಾಕ್ಟರ್ ಬಳಿ ಹೋದಾಗ ಅವನಿಗೆ ತಾನು ನಿಷ್ಪ್ರಯೋಜಕ ಎಂಬುದು ತಿಳಿಯುತ್ತದೆ. ಆಗ ಅವನಿಗೆ ಒಂದು ಉಪಾಯ ಹೊಳೆಯೊತ್ತೆ: ತನ್ನ ಹೆಂಡತಿ ಟ್ರಾಟ್ಳನ್ನು ಗರ್ಭಿಣಿಯನ್ನಾಗಿ ಮಾಡಿಕೊಡುವಂತೆ, ಪಕ್ಕದ ಮನೆಯ -ನೋಡಲಿಕ್ಕೆ ತನ್ನಂತೆಯೇ ಇರುವ- ಆಗಲೇ ಎರಡು ಮಕ್ಕಳ ತಂದೆಯಾಗಿರುವ- ಫ್ರಾಂಕ್ ಮಾಸ್ನನ್ನು ವಿನಂತಿಸಿಕೊಂಡು ಒಪ್ಪಂದ ಮಾಡಿಕೊಳ್ಳುತ್ತಾನೆ. ಟ್ರಾಟ್ ಮೊದಲು ಇದನ್ನು ಪ್ರತಿಭಟಿಸಿದರೂ ನಂತರ ಒಪ್ಪುತ್ತಾಳೆ.
ಸೋಪಲಸ್ ಮಾಸ್ಗೆ 2,500 ಡಾಲರ್ ಹಣವನ್ನು ಈ ಕೆಲಸಕ್ಕಾಗಿ ಕೊಡುತ್ತಾನೆ. ಮಾಸ್ ಆರು ತಿಂಗಳ ಕಾಲ, ವಾರಕ್ಕೆ ಮೂರು ರಾತ್ರಿಯಂತೆ, ಒಟ್ಟು 72 ಸಲ ಪ್ರಯತ್ನಿಸುತ್ತಾನೆ. ಮಾಸ್ನ ಹೆಂಡತಿ ಗಂಡನ ಇಂತಹ ಕೆಲಸಕ್ಕೆ ಆಕ್ಷೇಪಿಸಿದಾಗ ಅವನು, ’ನನಗೂ ಇವೆಲ್ಲಾ ಇಷ್ಟವಿಲ್ಲ; ಆದರೆ ತಾನು ಕೇವಲ ಹಣಕ್ಕಾಗಿ ಮಾಡುತ್ತಿದ್ದೇನೆ’ ಎಂದು ಸಮಾಧಾನಿಸುತ್ತಾನೆ!
ಆದರೆ ಆರು ತಿಂಗಳ ಪರಿಶ್ರಮದ ನಂತರವೂ ಟ್ರಾಟ್ ಗರ್ಭಿಣಿಯಾಗದೇ ಉಳಿದಾಗ ಸೋಪಲಸ್ ಮಾಸ್ನನ್ನು ಒಮ್ಮೆ ಡಾಕ್ಟರ್ ಬಳಿ ಹೋಗಿ ಪರೀಕ್ಷಿಸಿಕೊಂಡು ಬರುವಂತೆ ಸೂಚಿಸುತ್ತಾನೆ. ಮಾಸ್ನನ್ನು ಪರೀಕ್ಷಿಸಿದ ಡಾಕ್ಟರ್, ಮಾಸ್ ಸಹ ಸಂತಾನ ಅನುಗ್ರಹಿಸಲು ಅಯೋಗ್ಯ ಎಂಬ ಸತ್ಯವನ್ನು ಘೋಷಿಸುತ್ತಾರೆ.
ಈ ಸುದ್ದಿ ಕೇಳಿ ಮಾಸ್ನ ಹೆಂಡತಿಯೊಬ್ಬಳನ್ನು ಬಿಟ್ಟು ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಬಲವಂತ ಮಾಡಿ ಕೇಳಿದಾಗ, ತನ್ನ ಇಬ್ಬರು ಮಕ್ಕಳು ನಿಜವಾಗಿ ಮಾಸ್ನ ಸೃಷ್ಟಿ ಅಲ್ಲ ಎಂಬುದಾಗಿ ಅವಳು ಒಪ್ಪಿಕೊಳ್ಳುತ್ತಾಳೆ!
ಈಗ ಸೋಪಲಸ್ ಮಾಸ್ನ ಮೇಲೆ ಕರಾರುಭಂಗ ಮಾಡಿದ್ದಕ್ಕಾಗಿ ಕೋರ್ಟಿನಲ್ಲಿ ಕೇಸ್ ಹಾಕಿದ್ದಾನೆ! 2,500 ಡಾಲರ್ ಹಣವನ್ನು ವಾಪಸ್ ಕೊಡಬೇಕೆಂಬುದು ಸೋಪಲಸ್ ಬೇಡಿಕೆ. ಆದರೆ ಮಾಸ್, ತಾನು ಕೇವಲ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಒಪ್ಪಿಕೊಂಡಿದ್ದೆನೇ ಹೊರತು ಗರ್ಭಧಾರಣೆಯ ಬಗ್ಗೆಯೇನು ಖಾತ್ರಿ ಕೊಟ್ಟಿರಲಿಲ್ಲ ಎಂದು ವಾದಿಸುತ್ತಿದ್ದಾನೆ.
ಪಾಪ, ಜಡ್ಜಿನ ಪರಿಸ್ಥಿತಿ ಮಾತ್ರ ಶೋಚನೀಯ!
[ಲಿಂಕ್: http://www.just-whatever.com/; ಥ್ಯಾಂಕ್ಸ್: ರೋಹಿತ್]
3 comments:
ಮಾಸ್ ನಿಷ್ಪ್ರಯೋಜಕನೇನಲ್ಲ. ಆತ ಕಾಂಡೋಮ್ ಧರಿಸಿಕೊಂಡೇ
ನಿಯೋಗ ಮಾಡಿದನೇನೊ?
ಅದೆಲ್ಲ ಸರಿ,ಈ ನಿಯೋಗ ಪದ್ದತಿ ಅಂದ್ರೆನಂಥ ಯಾರಾದ್ರು ಬಿಡಿಸಿ ಹೇಳ್ತಿರ?namana
ಇಲ್ಲಿ ಬೇರೇನೋ ಎಡವಟ್ಟಾಗಿರಬೇಕು....ಅದು ಜಡ್ಜ್ ತಲೆಗೆ ಹೊಳೆಯುತ್ತಿಲ್ಲ!
Post a Comment