Friday, May 8, 2009

ಕಾಮಸೂತ್ರ ಚಾಕೊಲೇಟ್ಸ್!

ಚಾಕ್ಲೇಟು ಅಂದ್ರೆ ಯಾರಿಗೆ ತಾನೆ ಬಾಯಲ್ಲಿ ನೀರೂರೋದಿಲ್ಲ? ಅದು ಕ್ಯಾಡ್ಬರೀಸ್ ಇರಬಹುದು ಅಥವಾ ಅಪ್ಪ ತಂದುಕೊಡುತ್ತಿದ್ದ ಹಸಿರು ಜರಿಯ ಚಾಕ್ಲೇಟ್ ಇರಬಹುದು; ಆದರೆ ಚಾಕ್ಲೇಟಿಗೆ ಹಾತೊರೆಯದ ಜೀವವಿಲ್ಲ. ಕೋಕೋ, ಬಟರ್, ಮಿಲ್ಕ್, ನಟ್ಸ್, ಡ್ರೈ ಫ್ರೂಟ್ಸ್, ಲಿಕ್ಕರ್... ಏನಿಲ್ಲ ಏನಿದೆ ಚಾಕ್ಲೇಟಿನಲ್ಲಿ?

ಆದರೆ ಚಾಕಲೇಟುಗಳು ಇನ್ನು ಬರೀ ಬಾಯಲ್ಲಿ ಸವಿಯಲಿಕ್ಕೆ ಮಾತ್ರ ಮೀಸಲಲ್ಲ; ಕಣ್ಣಲ್ಲಿ ಸವಿದು ನಂತರ ಬಾಯಿಗಿಟ್ಟುಕೊಳ್ಳಬೇಕು! Bon Bon ಎಂಬ ಶಿಕಾಗೋದ ಕಂಪನಿ ಹೊರತಂದಿರುವ ಈ ಹೊಸ ನಮೂನೆಯ ಚಾಕಲೇಟುಗಳ ಕಡೆಗೆ ಒಮ್ಮೆ ಗಮನ ಹರಿಸಿ. ಆದರೆ ನಿಮ್ಮ ಗರ್ಲ್ ಫ್ರೆಂಡಿಗೋ ಬಾಯ್ ಫ್ರೆಂಡಿಗೋ ಇದನ್ನು ಗಿಫ್ಟಿಸುವ ಆಲೋಚನೆ ಇದ್ದರೆ ಮಾತ್ರ ಅದರಿಂದಾಗುವ ಪರಿಣಾಮಗಳಿಗೆ ಮೋಟುಗೋಡೆ ಜವಾಬ್ದಾರಿಯಲ್ಲ ಮತ್ತೆ!







7 comments:

Govinda Nelyaru said...

ನಮ್ಮ ಸಂಸ್ಕೃತಿಯ ಬಾಗವಾಗಿರುವ ಪ್ರಾಚೀನ ಶೃಂಗಾರ ಶಿಲ್ಪಗಳು ಅವರಿಗೆ ಕಾಸು ಮಾಡಲು ಅವಕಾಶ ಮಾಡಿಕೊಟ್ಟದ್ದು ತಿಳಿಸಿದ್ದಕ್ಕೆ ದನ್ಯವಾದಗಳು. ಇಂತಹ ವಿಚಾರದಲ್ಲಿ ಅವರು ಬಹಳ ಚುರುಕು.

ಬಾನಾಡಿ said...

ಬಾಯಾಲಿಟ್ಟೊಡನೆ ನೀರಾಗುವುದೇ?
ಗೆಳತಿ ಮೆಚ್ಚಿಯಾಳೇ?

Unknown said...

ಬಾಯಲ್ಲೊಂದೇ ಅಲ್ಲ, ಬೇರೆಲ್ಲೆಲ್ಲೋ ನೀರೊಡೆಯುವ ಸಾಧ್ಯತೆಯಿದೆ

ಮೂರ್ತಿ ಹೊಸಬಾಳೆ. said...

chocolate galanna nodidaaga baayalli neeroorovudu sahaja aadare inta chocolate galanna kandaaga tinnuva manassu deevaraane baruvudilla.
fridg nallittu dinakkomme nodi neeru surisuvavaree heccu (baayalli)!!!!!!!!!!!!!

sunaath said...

ಅಣ್ಣಾ, ಇವು wholesaleನಲ್ಲಿ ಸಿಗುವ ಅಡ್ರೆಸ್ ತಿಳಿಸುತ್ತೀರಾ?

Santhosh Kumar said...

ಸೂಪರ್ ಆಗಿದೆ...
eBay ಲಿ ಆರ್ಡರ್ ಮಾಡಕೆ ನೋಡಿದೆ.. ಇನ್ನ ಅಲ್ಲಿ ಇಲ್ಲ.. ಬಂದ ಮೇಲೆ ತಗೊಳ್ಳುವ...
ಇಂಥ ಚಾಕಲೇಟ್ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು...

ಸಂದೀಪ್ ಕಾಮತ್ said...

ಅಯ್ಯೋ ಟೆಂಪ್ಟ್ ಆಗ್ತಾ ಇದೆ .....

ತಿನ್ನೋದಿಕ್ಕೆ!