ಸ್ಪರ್ಮ್ ಕೌಂಟ್ ಕಡಿಮೆಗೆ ಈಗ ಚಿಂತಿಸಬೇಕಿಲ್ಲ. ಲಂಡನ್ನಿನ ನ್ಯೂ ಕ್ಯಾಸಲ್ ವಿಶ್ವವಿದ್ಯಾಲಯ ಮತ್ತು ಈಶಾನ್ಯ ಇಂಗ್ಲೆಂಡ್ ವೀರ್ಯ ಸಂಸ್ಥೆಯ ಪ್ರೋಫೆಸರ್ ಕರೀಂ ನಯೀರ್ನಿಯ ತಂಡ ಮಾನವ ವೀರ್ಯವನ್ನೇ ತಯಾರಿಸಿದ್ದಾರಂತೆ. ಕೆಲಸವಿಲ್ಲದ ಬಡಗಿ ಮಗನ ಅದೆನ್ನನ್ನೋ ಕೆತ್ತಿದನಂತೆ ಎಂದು ಕೆಲವರು ಈ ಸಂಶೋಧನೆಯ ಬಗ್ಗೆ ಮೂಗು ಮುರಿದಿದ್ದಾರೆ. ನಿಮಗೆ ಏನೆನ್ನಿಸುತ್ತದೆ?ವಿಸಿಟ್: http://kannadablogs.ning.com/forum/topics/2958967:Topic:29959
4 comments:
ಹೌದS?
ಹೆಂಡತಿ ಈಗ ಗಂಡನ ಮೇಲೆ ಅವಲಂಬಿಸಬೇಕಿಲ್ಲ!
"ನೀನ್ಯಾಕೊ ನಿನ್ನ ವೀರ್ಯವ್ಯಾಕೊ,
ಕೃತಕ semen ಸಿಕ್ಕುವವರೆಗೆ." ಅಂತ ಹಾಡಬಹುದು!
sushruta it is a welcome change doctors charge heavily on artificialinsemination...
god knows what it is is india turning on i wonder....!
ಇದು ಒಂದು ಚೂರು ಸರಿಯಲ್ಲ. ನಾವು ಮುಂದುವರೆದರೂ ಮನಸ್ಥಿತಿ ಮುಂದುವರೆಯದನ್ನು ಸೂಚಿಸುತ್ತೆ. ಕೆಲಸವಿಲ್ಲದ..... ಎನ್ನುವ ಪದ ಒಂದು ವರ್ಗವನ್ನು ಹೀಯಾಳಿಸಲು ಉಪಯೋಗಿಸಿದ ಪದಗಳು. ವಿಧ್ಯಾವಂತರಾಗಿದ್ದು ಈ ರೀತಿ ಬರೆಯಬಾರದಿತ್ತು
ರೀ..ದಾರಿಯಲ್ಲಿ...
ನೀವು ಗಂಭೀರವಾಗಿ ಕಮೆಂಟ್ ಮಾಡಿದ್ದೀರೋ ತಮಾಷೆಗೆ ಮಾಡಿದ್ದಿರೋ ಅರ್ಥವಾಗುತ್ತಿಲ್ಲ. ತಮಾಷೆಗೆ ಮಾಡಿದ್ದರೆ ಓಕೆ. ಆದರೆ ಗಂಭೀರವಾಗಿ ಮಾಡಿದ್ರೆ ಮಾತ್ರ ಇದನ್ನು ಓದಿ.
ಬರೆದಿರುವುದನ್ನು ಪೂರ್ಣ ಅರ್ಥಮಾಡಿಕೊಳ್ರೀ ಮೊದಲು. ಕೆಲಸ್ ಇಲ್ಲದ ಬಡಗ್ಯಾ ಮಗನ ಮುಕಳಿ ಕೆತ್ತಿದನಂತ ಎಂದು ಉತ್ತರ ಕರ್ನಾಟಕದಲ್ಲಿ ಮಾತಿದೆ. ಅದರರ್ಥ ಕೆಲಸವಿಲ್ಲದ ಮನುಷ್ಯ ಅನಗತ್ಯವಾದ ಕೆಲಸ ಮಾಡಿದ ಎಂದರ್ಥ. ಇಲ್ಲಿ ಬಡಗಿ ನೆಪ ಮಾತ್ರ. ಇದನ್ನು ಬೇಕಾದಲೆ ಕೆಲಸವಿಲ್ಲದ ಮೆಕ್ಯಾನಿಕ್ ಮಗನ ..ಕ ಕ್ಕೆ ಪಂಚರ್ ಹಾಕಿದನಂತೆ, ಅಥವಾ ಕೆಲಸವಿಲ್ಲದ ಸಾಫ್ಟವೇರ್ ಇಂಜಿನಿಯರ್ ಮಗನ ಕಂಪ್ಯೂಟರ್ ಸಾಫ್ಟ್ ವೇರ್ ಹಾಳುಮಾಡಿದನಂತೆ, ಅಥವಾ ಕೆಲಸವಿಲ್ಲದ ಪುರೋಹಿತ ಮಗನಿಗೆ ಹತ್ತು ಕೋಟಿ ಸಲ ರಾಮನಾಮ ಬರೆಯಲು ಹೇಳಿದನಂತೆ ಎಂದೆಲ್ಲ ಬದಲಾಯಿಸಬಹುದು. ಇದರರ್ಥ ಆ ವೃತ್ತಿಯನ್ನು ಹೀಯಾಳಿಸುವುದಲ್ಲ. ಕೆಲವರು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಾರೆ. ನೀವೂ ಮಾತ್ರ ಬಂಡೆಗಲ್ಲನ್ನೇ ಹುಡುಕುವ ಕೆಲಸ ಮಾಡುತ್ತಿದ್ದೀರಿ. ಗಾದೆ ಮಾತುಗಳ ಅರ್ಥ ಮೊದಲು ಸರಿಯಾಗಿ ತಿಳಿದುಕೊಳ್ಳಿ. ಆಮೇಲೆ ಇದು ಯಾವ ಮನಸ್ಥಿತಿಯನ್ನು ಮುಂದುವರೆಯುವುದನ್ನೂ ಸೂಚಿಸುವುದಿಲ್ಲ. ವಿದ್ಯಾವಂತರಾಗಿ ಹೀಗೆ ಬರೆಯಬಾರದಾಗಿತ್ತು ಎಂದಿದ್ದೀರಿ.ಸರಿಯಾಗಿ ವಿದ್ಯಾವಂತರಾದರೆ ಈ ರೀತಿಯ ಕನ್ ಫ್ಯೂಶನ್ ಗಳು ಬರುವುದಿಲ್ಲ.
Post a Comment