(ಹೆಣ್ಣು ಮಕ್ಕಳಿಗೊಂದು ಎಚ್ಚರಿಕೆ)
ನೀವು ಸ್ವಿಮ್ಮಿಂಗ್ ಅಡಿಕ್ಟಾ? ಹೋಟೆಲು, ಕ್ಲಬ್ಬು, ರೆಸಾರ್ಟುಗಳಿಗೆ ಹೋದಾಗ, ಸ್ವಿಮ್ಮಿಂಗ್ ಪೂಲ್ ಕಂಡ ತಕ್ಷಣ ಪುಳಕ್ಕನೆ ಅದರೊಳಗೆ ಹಾರುತ್ತೀರಾ? ಅಥವಾ ನಿಮ್ಮ ಅಪಾರ್ಟ್ಮೆಂಟ್ ಬಿಲ್ಡಿಂಗಿನ ಕಾಮನ್ ಪೂಲಿನಲ್ಲಿ ಸೆಖೆಯಾದಾಗಲೆಲ್ಲ ಮುಳುಗಿಕೊಂಡಿರುತ್ತೀರಾ? ಹೌದಾದರೆ ಇನ್ನು ಮೇಲೆ ಸ್ವಲ್ಪ ಹುಷಾರಾಗಿರಿ!
Magdalena Kwiatkowska ಎಂಬ ಪೋಲೆಂಡಿನ ತಾಯಿ ತನ್ನ ಕುಟುಂಬ ಸಮೇತ ಈಜಿಪ್ತಿನ ಹೋಟೆಲೊಂದರಲ್ಲಿ ರಜೆಯ ಸಂದರ್ಭದಲ್ಲಿ ತಂಗಿದ್ದಾಗ, ಆಕೆಯ 13 ವರ್ಷದ ಮಗಳು ಆ ಹೋಟೆಲಿನ ಈಜುಕೊಳದಲ್ಲಿ ಈಜಿ ಗರ್ಭವತಿಯಾಗಿದ್ದಾಳೆ! ಇಂಥದ್ದೊಂದು ಆಘಾತಕಾರಿ ಅವಘಡಕ್ಕೆ ಕಾರಣ ಆ ಸ್ವಿಮ್ಮಿಂಗ್ ಪೂಲಿನ ನೀರಿನಲ್ಲಿ ಅಡ್ಡಾಡುತ್ತಿದ್ದ ವೀರ್ಯದ ಕಣಗಳು!
Magdalena Kwiatkowska ಈ ಸಂಬಂಧ ಹೋಟೆಲಿನ ಮಾಲಿಕನ ಮೇಲೆ ಕೋರ್ಟಿನಲ್ಲಿ ದಾವೆ ಹೂಡಿದ್ದಾಳೆ. ರಜೆಯ ದಿನಗಳಲ್ಲಿ ಮಗಳು ಯಾವುದೇ ಗಂಡಸಿನೊಂದಿಗೆ ಲೈಂಗಿಕ ಸಂಪರ್ಕ ಹೊಂದಿರಲಿಲ್ಲವೆಂದು ತಾಯಿ ಪ್ರಮಾಣ ಮಾಡಿ ಹೇಳುತ್ತಿದ್ದಾಳೆ.
ಇಂಥದೊಂದು ಪ್ರಕರಣ ನಡೆಯಲಿಕ್ಕೆ ಸಾಧ್ಯವೇ ಇಲ್ಲವೆಂದು ಬುದ್ಧಿವಂತರು ವಾದಿಸುತ್ತಿದ್ದಾರಾದರೂ, ಪೂಲಿಗೆ ಇಳಿಯುವ ಮುನ್ನ ಒಂದು 'ಪಿಲ್' ತೆಗೆದುಕೊಂಡೇ ಇಳಿಯೋದರಿಂದ ಹೀಗೆ ಫೂಲಾಗೋದು ತಪ್ಪುತ್ತದೆ ಅಂತ ಕಿಲಾಡಿಗಳು ತಮಾಷೆ ಮಾಡುತ್ತಿದ್ದಾರೆ. ಇನ್ನು ಕೋರ್ಟು ಏನು ಹೇಳುತ್ತದೋ ಕಾದು ನೋಡಬೇಕು.
ಲಿಂಕ್: http://www.nj.com/parenting/
6 comments:
ರಾಮಾಯಣದಲ್ಲಿ ಹೀಗೇ ಒಂದು ಉಪಕಥೆ ಇದೆ. ಹನುಮಂತ ಲಂಕೆ ಸುಟ್ಟಮೇಲೆ ಬಾಲದ ಬೆಂಕಿ ಆರಿಸಿಕೊಳ್ಳಲು ಸಮುದ್ರದಲ್ಲಿ ಬಾಲ ಅದ್ದುವಾಗ ಅರಿವಿಲ್ಲದೇ ಆತನ ವೀರ್ಯ ಸಮುದ್ರದಲ್ಲಿ ಬಿದ್ದಿರುತ್ತದೆ. ಇದರಿಂದ ಒಂದು ಮೀನು (ಮತ್ಯಕನ್ಯೆ? ) ಗರ್ಭ ಧರಿಸಿ ಅದಕ್ಕೆ ಹನುಮಂತನಂತದ್ದೇ ಒಂದು ಮಗ ಹುಟ್ಟಿರುತ್ತಾನೆ. ಆತನನ್ನು ಮುಂದೆ ಯಾವಾಗಲೋ ಹನುಮಂತ ಒಮ್ಮೆ ಪಾತಾಳ ಲೋಕದಲ್ಲಿ ಸಂಧಿಸುತ್ತಾನೆ.
ಸುಶ್ರುತ ಆ ವೀರ್ಯಅಲ್ಲೇಕೆ ತೇಲಾಡುತ್ತಿದ್ದವು ಇದು ಚಿದಂಬರ ರಹಸ್ಯ ಅದಕ್ಕೇ ಹಿರಿಯರು ಹೇಳುವುದು ಹುಟ್ಟು ಯಾರ ಕೈಯಲ್ಲಿಲ್ಲ...!
ಈ ವೀರ್ಯದ್ದು ಅತೀ ಆಯ್ತಪ್ಪಾ....ಸ್ವಲ್ಪ ಅವಕಾಶ ಸಿಕ್ಕರೆ ಎಲ್ಲೆಲ್ಲೋ ಹೋಗಿ ಬಿಡುತ್ತದೆ.
ಮನೇಲಿ ಬಿಡಲು ಆಗದವನು ಪೂಲಿನಲ್ಲಿ ಬಿಟ್ಟು ಹೋದನಂತೆ ಅನ್ನೋ ‘ಗಾದೆ’ಮಾತು ಕೇಳಿದ್ದೀರಾ?
ಎಲ್ಲ ಅಲ್ಲಾಡಿಸುವವರೆ, ಆದರೆ ಆ ಪುಣ್ಯಾತ್ಮ ನೀರಿನಲ್ಲಿ ಅಲ್ಲಾಡಿಸಿದ್ದ! ಆತನ ವಿರ್ಯದ ಶಕ್ತಿ ಮೆಚ್ಚಲೇ ಬೇಕು ಏನಂತಿರಾ ?!!
ಹೀಗೂ ಉಂಟೆ?
Post a Comment