-ಡಾ| ಜೆ. ಬಾಲಕೃಷ್ಣ
ನೀವು ಥಾಯ್ಲೆಂಡ್‌ಗೆ ಭೇಟಿ ನೀಡಿದಲ್ಲಿ ಪಟ್ಟಾಯ ಹಾಗೂ ಬ್ಯಾಂಕಾಕ್‌ಗಳಿಗೆ ಭೇಟಿ ನೀಡುವುದು ಖಚಿತ. ಬೀಚ್ ಹಾಗೂ ನಗರದಲ್ಲಿ ಸುತ್ತಾಡುವುದರ ನಡುವೆ ಪಟ್ಟಾಯಾದಲ್ಲಿನ ಆಲ್ಕಜಾರ್ ಕ್ಯಾಬರೆ ನೋಡುವುದನ್ನು ಮರೆಯಬೇಡಿ. ಜಗತ್ಪ್ರಸಿದ್ಧವಾದ ಈ ಕ್ಯಾಬರೆ ಕಳೆದ ಇಪ್ಪತ್ತು ವರ್ಷಗಳಿಂದ ನಡೆಯುತ್ತಿದೆ. ಸುಮಾರು ನಾಲ್ಕು ನೂರು ಅತ್ಯಂತ ಸುಂದರ ಸ್ತ್ರೀ ಕಲಾವಿದರನ್ನು ಹೊಂದಿರುವ ಈ ಕ್ಯಾಬರೆ ಒಂದೂ ಒಂದೂವರೆ ಗಂಟೆಗಳ ಕಾಲ ವೀಕ್ಷಕರನ್ನು ಮನಮೋಹಕ ನೃತ್ಯಗಳಿಂದ, ಅತ್ಯದ್ಭುತ ರಂಗಸಜ್ಜಿಕೆಯಿಂದ ಮಂತ್ರಮುಗ್ಧಗೊಳಿಸುತ್ತದೆ. ಆಲ್ಕಜಾರ್ ಕ್ಯಾಬರೆ ವಿಶ್ವದರ್ಜೆಯದಾಗಿದ್ದು ಅದನ್ನು ಪ್ಯಾರಿಸ್‌ನ ಜಗದ್ವಿಖ್ಯಾತ ಲಿಡೊ ಮತ್ತು ಮೌಲಿನ್ ರೂಗೂ ಹೋಲಿಸಲಾಗುತ್ತದೆ.
ಸಾವಿರದ ಇನ್ನೂರು ಆಸನಗಳುಳ್ಳ ಸಭಾಂಗಣದಲ್ಲಿ ನೀವು ಕೂರುತ್ತಿದ್ದಂತೆ ನಿಮಗೆ ಕೋಲಾ ಅಥವಾ ಬಿಯರ್ ನೀಡಲಾಗುತ್ತದೆ. ಥಾಯ್ ಹಾಗೂ ಇಂಗ್ಲಿಷಿನ ಹಾಡುಗಳಿಗೆ ದಂಗುಬಡಿಸುವ ಸೌಂದರ್ಯದ, ನೀಳ ನಡುವಿನ, ತುಂಬಿದೆದೆಯ ಸುಂದರಿಯರು ನರ್ತಿಸುತ್ತಾರೆ. ಹಲವಾರು ಥಾಯ್‌ನ ಸಾಂಪ್ರದಾಯಕ ನೃತ್ಯಗಳೂ ಇರುತ್ತವೆ. ನಿಮಗೆ ಸಮಯಹೋಗುವುದೇ ತಿಳಿಯುವುದಿಲ್ಲ. ಇಷ್ಟು ಬೇಗ ಮುಗಿದುಹೋಯಿತೇ ಎನ್ನಿಸುತ್ತದೆ.......
ಪೂರ್ತಿ ಓದಿಗೆ ಭೇಟಿ ಕೊಡಿ: ಅಂತರಗಂಗೆ
3 comments:
ಥಾಯ್ ಲ್ಯಾಂಡಿಗೆ ಭೇಟಿ ಕೊಡಬೇಕಾಯ್ತು!
ಸುಶ್ರುತಾರವರಿಗೆ ನಮಸ್ಕಾರಗಳು. ಲಿಂಕ್ ಬಳಸಿಕೊಂಡಿದ್ದಕ್ಕೆ ಅನುಮತಿಯಿದೆ. ಧನ್ಯವಾದಗಳು.
ಜೆ.ಬಾಲಕೃಷ್ಣ
ಥಾಯ್ ಲ್ಯಾಂಡ್ ಗೆ ಹೋಗಿ ಈ ನೃತ್ಯ ಮತ್ತು ಬೀಚ್ ಗಳನ್ನ ನೋಡದೇ ಬರುವ ಹಾಗೇ ಇಲ್ಲ ಅಂತ ನನ್ನ ಮಿತ್ರ ಹೇಳಿದಾಗಿನಿಂದ ಅಲ್ಲಿಗೆ ಹೋಗಲೇ ಬೇಕು ಒಮ್ಮೆ ಅನಿಸಿತ್ತು..ನಿಮ್ಮ ಈ ಲೇಖನದ ನಂತರ..!! ...
Post a Comment