ಜಗತ್ತಿನ ಜನಕ್ಕೆ ಹೆಂಗೆಗೆಲ್ಲ ಆಗಿ ಬಿಡತ್ತಪಾ ಅಂದ್ರೆ, ಅಂದ್ರಿಂದಾಗಿ ಮತ್ತೆ ಇನ್ ಹೆಂಗೆಗೋ ಆಗೋಗತ್ತೆ!.
ಮೊನ್ ಮೊನ್ನೆ, ಇರಾನಿನ ಧಾರ್ಮಿಕ ಮುಖಂಡನೊಬ್ಬನಿಗೆ, ಬೆಳಗ್ಗೆ ಏಳುತ್ತಲೇ ಹೊಸದೊಂದು ಜ್ಞಾನೋದಯವಾಗಿ ಬಿಟ್ಟಿತು. ಜಗತ್ತಿನಲ್ಲಾಗುವ ಭೂಕಂಪಗಳಿಗೆ, ಎದೆಗಾರಿಕೆ ತೋರಿಸಿಕೊಂಡು ಓಡಾಡುವ ಹೆಂಗಳೆಯರೇ ಕಾರಣರಂತೆ ಎಂಬೊಂದು ಆಘಾತಕಾರೀ ಹೇಳಿಕೆ ಕೊಟ್ಟುಬಿಟ್ಟ. ಇಂತಹ "ಅಧಾರ್ಮಿಕ" ನಡವಳಿಕೆಯಿಂದಾಗಿಯೇ ಭೂಮಿಯಲ್ಲಿ ಭೂಕಂಪನಗಳು ಸಂಭವಿಸುತ್ತಿದೆ ಅನ್ನೋದು ಈ ಪುಣ್ಯಾತ್ಮನ ಕಟ್ಟಾ ನಂಬಿಕೆ!. ಧರ್ಮಕ್ಕೆ ಕೂಡಲೇ ಶರಣಾಗಿ, ಸರಿಯಾದ ವಸ್ತ್ರ ಸಂಹಿತೆ ಪಾಲಿಸದಿದ್ದರೆ, ಈ ಅನಾಹುತಗಳನ್ನ ತಪ್ಪಿಸೋಕೆ ಸಾಧ್ಯವೇ ಇಲ್ಲವಂತೆ.
ಆತನೇನೋ ಈ ಮಾತುಗಳನ್ನಾಡಿ ಸುಮ್ಮನಾಗಿಬಿಟ್ಟ. ಆದರೆ ಈತನ ಹೇಳಿಕೆಗಳಿಂದ ರೊಚ್ಚಿಗೆದ್ದ ಹೆಂಗಳೆಯರು, ಆತನ ವಿರುದ್ದ ಹೋರಾಟಕ್ಕಿಳಿದರು! ವಿಜ್ಞಾನಕ್ಕೇ ಸವಾಲೆಸೆವ ಮಾತಾಡಿರೋ ಧಾರ್ಮಿಕ ಮುಖಂಡನ ಅಜ್ಞಾನಕ್ಕೆ ಧಿಕ್ಕಾರ ಅಂದ ಇವರುಗಳು, ಸ್ತನ ಕಂಪನ- boob equake- ಆಂದೋಲನ ಮಾಡಿಬಿಟ್ಟರು! ಯಥಾಸಾಧ್ಯ ಎದೆಗಾರಿಕೆ ಪ್ರದರ್ಶಿಸೋ ಬಟ್ಟೆ ತೊಟ್ಟುಕೊಂಡು ಓಡಾಡಿ ತೋರಿಸುತ್ತೇವೆ, ಭೂಕಂಪ ಆಗ್ಲಿ ನೋಡೋಣ ಅಂತ ಸವಾಲು ಹಾಕಿದ್ರು. ಜಾಥಾ ಗೀಥಾ ಎಲ್ಲ ಮಾಡಿ, ಯೂ ಟ್ಯೂಬಿಗೆ ವೀಡಿಯೋ ಹಾಕಿ ಜೈ ಅಂದ್ರು.
ಮೊನ್ನೆ ಇಪ್ಪತ್ತಾರಂದು ಮಾಡಿದ ವಿಶ್ವವ್ಯಾಪೀ ಸ್ತನಕಂಪನದ ಫಲಿತಾಂಶ ಹೊರಬಿದ್ದಿದ್ದು, ಎದೆ ಪ್ರದರ್ಶನದಿಂದ ಎಲ್ಲೂ ಭೂಕಂಪ ಆಗಿಲ್ಲ ಅಂತ ಸಂಘಟಕಿಯೊಬ್ಬಳು ಆಧಾರ ಸಮೇತ ಹೇಳಿಕೊಂಡಿದ್ದಾಳೆ. ಅಲ್ಲಿ ಯಾರೋ ಚಂದದ ಕಮೆಂಟೂ ಬರೆದಿದ್ದಾರೆ, I do believe breasts doesn't cause earthquakes -- in fact, I think it can feed and nourished people (e.g: haiti) ಅಂತ!
ಇರ್ಲಿ, ಆವತ್ತು ಭೂಕಂಪ ಆಗಿರ್ಲಿಲ್ಲ ನಿಜ, ಆದ್ರೆ ಹುಡುಗೀರ ಸಡನ್ನಾದ ಎದೆಗಾರಿಕೆಯಿಂದಾಗಿ ಎಷ್ಟು ಜನರೊಳಗೆ ಕಂಪನವಾಗಿದೆ ಅನ್ನುವ ಲೆಕ್ಕ ಸಿಗುವುದು ಕಷ್ಟ.
4 comments:
Somebody gave foolish statement
Somebody excited by statemetn & protested.
somebody enjoyed it.
However as a Geologist I totally agree that boobs will not cause quake in earth but about heart I am not sure!
ಭೂಗರ್ಭಶಾಸ್ತ್ರಜ್ಞರ ಕಾಮೆಂಟ್ ನನಗೂ ಸರಿಯೆನಿಸಿತು. !!
ಭೂಕಂಪ ಗೀಕಂಪ ಎಲ್ಲ ಸುಳ್ಳು, ಹೆಚ್ಚೆಂದರೆ ಕಾಕ್ಕಂಪ (cock ಕಂಪ!!, ಸಂಧಿ ಯಾವುದು ಗೊತ್ತಿದ್ದವರು ತಿಳಿಸಿ!) ಆಗಬಹುದು ಅಷ್ಟೇ! -D.M.Sagar,Dr.
ಜ್ಞಾನಿಯೊ ಅಜ್ಞಾನಿಯೊ?
ಕೊಟ್ಟ ಒಂದು ಒಂದು ಹೇಳಿಕೆಯ
ಹಾಲೋ, ಆಲ್ಕೋಹಾಲೋ ಕಾರಣ ಅದಕ್ಕೆ
ಧರೆಯೇ ನಡುಗುವುದು ಅಂದದಾ ಕಳಶಗಳಿನ್ದ ಅಂದ
ಧರೆಯೇ ಸುಂದರ ಹೆಣ್ಣು
ಅವಳಿಗೇಕೆ ಮತ್ಸರ ತನ್ನದೇ ಪ್ರತಿರೂಪಗಳಿನ್ದ
ಅದಕ್ಕೇ ಇಟ್ಟಳು ನಿಸರ್ಗದೇವತೆ ಗನ್ಡಿಗೆ ನಡುಕವ
ನೋಡಿದರೆ ಕುಂಭ ಕಲಶವ
ಹಾಗೆ ನೋಡಿದರೆ
ಧರೆ ನಡುಗುವುದೇ ಅಧ್ವಾನಿಗಳ ಹುಚ್ಚು ಹೇಳಿಕೆಗಳಿಗೆ ಪ್ರತಿಯಾಗಿ
Post a Comment