ಒರಿಟ್ ಫಾಕ್ಸ್ ಎಂಬ ಇಸ್ರೇಲಿ ಮಾಡೆಲ್ ಸ್ಟೇಜ್ಶೋ ಒಂದರಲ್ಲಿ ಹಾವಿನೊಂದಿಗೆ ಸರಸವಾಡುತ್ತಾ ಕೆಮೆರಾಗಳಿಗೆ ಪೋಸ್ ಕೊಡುತ್ತಿದ್ದಾಗ ನಡೆದ ಘಟನೆಯಿದು. ಸ್ವಲ್ಪ ಹೊತ್ತು ಎಲ್ಲಾ ಚೆನ್ನಾಗೇ ಇತ್ತು. ಹಾವನ್ನು ಕಾಲಿಗೆ ಸುತ್ತಿಕೊಂಡಳು, ಕೈಗೆ ಸುತ್ತಿಕೊಂಡಳು, ಸೊಂಟಕ್ಕೆ ಸುತ್ತಿಕೊಂಡಳು... ಹಾವೂ ಸುಮ್ಮನೆ ಕೋ-ಆಪರೇಟ್ ಮಾಡುತ್ತಿತ್ತು. ಆದರೆ ಯಾವಾಗ ಆಕೆ ಹಾವಿನ ತುಟಿಗೆ ಮುತ್ತಿಡಲು ಹೋದಳೋ, ಹಾವಿಗೆ ಅದೇನಾಯಿತೋ, ಸ್ವಲ್ಪ ಕೊಸರಾಡಿದೆ. ಇವಳ ಕೈಹಿಡಿತ ತಪ್ಪಿದೆ. ಹಾವು ಸೀದಾ ಹೋಗಿ ಏನ್ ಮಾಡಿದ್ಯೋ ನೋಡಿ! (ಚಿತ್ರ / ವೀಡಿಯೋ ನೋಡಿ)
ತಕ್ಷಣ ಫಾಕ್ಸ್ಳನ್ನು ಹತ್ತಿರದ ಆಸ್ಪತ್ರೆಗೆ ಒಯ್ದು ಇಂಜೆಕ್ಷನ್ ಕೊಡಿಸಿದ್ದಾರೆ. ಆಕೆ ಚೇತರಿಸಿಕೊಂಡಿದ್ದಾಳೆ.
ಆದರೆ ವಿಷ್ಯ ಅದಲ್ಲ, ಪೀನಕುಂಭ ಪಯೋದದತ್ತ ಬಾಯಿಹಾಕಿದ್ದ ಆ ಹಾವು ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದಿದೆ! ಕಾರಣ ಏನಪ್ಪಾ ಅಂತ ನೋಡಲಾಗಿ, ಹಾವು ಸತ್ತಿದ್ದು 'ಸಿಲಿಕಾನ್ ಪಾಯ್ಸನಿಂಗ್'ನಿಂದ!
ಯಾವುದು ಕೃತಕ, ಯಾವುದು ನೈಸರ್ಗಿಕ ಅಂತ ಹಾವಿಗೆಲ್ಲಿ ತಿಳಿಯಬೇಕು? ಪಾಪ ಹಾವು! ಆದ್ರೆ ಹುಷಾರಾಗಿರಬೇಕು ನೀವೂ!