Showing posts with label ಮಾಡೆಲ್. Show all posts
Showing posts with label ಮಾಡೆಲ್. Show all posts

Wednesday, March 16, 2011

ಪಾಪ, ಹಾವು!

"ಮಾಡೋಕ್ ಕೆಲಸ ಇಲ್ದೇ ಮೈಮೇಲೆ ಇರುವೆ ಬಿಟ್ಕೊಂಡ್ರು" ಅನ್ನೋ ಒಂದು ಮಾತಿದೆ. ಹಾಗೇ ಈ ಚೆಲುವೆಯದೂ ಕತೆ. ಆದರೆ ಈಕೆ ಮೈಮೇಲೆ ಬಿಟ್ಟುಕೊಂಡದ್ದು ಇರುವೆಯಲ್ಲ, ಜೀವಂತ ಹಾವು!

ಒರಿಟ್ ಫಾಕ್ಸ್ ಎಂಬ ಇಸ್ರೇಲಿ ಮಾಡೆಲ್ ಸ್ಟೇಜ್‌ಶೋ ಒಂದರಲ್ಲಿ ಹಾವಿನೊಂದಿಗೆ ಸರಸವಾಡುತ್ತಾ ಕೆಮೆರಾಗಳಿಗೆ ಪೋಸ್ ಕೊಡುತ್ತಿದ್ದಾಗ ನಡೆದ ಘಟನೆಯಿದು. ಸ್ವಲ್ಪ ಹೊತ್ತು ಎಲ್ಲಾ ಚೆನ್ನಾಗೇ ಇತ್ತು. ಹಾವನ್ನು ಕಾಲಿಗೆ ಸುತ್ತಿಕೊಂಡಳು, ಕೈಗೆ ಸುತ್ತಿಕೊಂಡಳು, ಸೊಂಟಕ್ಕೆ ಸುತ್ತಿಕೊಂಡಳು... ಹಾವೂ ಸುಮ್ಮನೆ ಕೋ‌-ಆಪರೇಟ್ ಮಾಡುತ್ತಿತ್ತು. ಆದರೆ ಯಾವಾಗ ಆಕೆ ಹಾವಿನ ತುಟಿಗೆ ಮುತ್ತಿಡಲು ಹೋದಳೋ, ಹಾವಿಗೆ ಅದೇನಾಯಿತೋ, ಸ್ವಲ್ಪ ಕೊಸರಾಡಿದೆ. ಇವಳ ಕೈಹಿಡಿತ ತಪ್ಪಿದೆ. ಹಾವು ಸೀದಾ ಹೋಗಿ ಏನ್ ಮಾಡಿದ್ಯೋ ನೋಡಿ! (ಚಿತ್ರ / ವೀಡಿಯೋ ನೋಡಿ)

ತಕ್ಷಣ ಫಾಕ್ಸ್‌ಳನ್ನು ಹತ್ತಿರದ ಆಸ್ಪತ್ರೆಗೆ ಒಯ್ದು ಇಂಜೆಕ್ಷನ್ ಕೊಡಿಸಿದ್ದಾರೆ. ಆಕೆ ಚೇತರಿಸಿಕೊಂಡಿದ್ದಾಳೆ.

ಆದರೆ ವಿಷ್ಯ ಅದಲ್ಲ, ಪೀನಕುಂಭ ಪಯೋದದತ್ತ ಬಾಯಿಹಾಕಿದ್ದ ಆ ಹಾವು ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದಿದೆ! ಕಾರಣ ಏನಪ್ಪಾ ಅಂತ ನೋಡಲಾಗಿ, ಹಾವು ಸತ್ತಿದ್ದು 'ಸಿಲಿಕಾನ್ ಪಾಯ್ಸನಿಂಗ್'ನಿಂದ!

ಯಾವುದು ಕೃತಕ, ಯಾವುದು ನೈಸರ್ಗಿಕ ಅಂತ ಹಾವಿಗೆಲ್ಲಿ ತಿಳಿಯಬೇಕು? ಪಾಪ ಹಾವು! ಆದ್ರೆ ಹುಷಾರಾಗಿರಬೇಕು ನೀವೂ!