Monday, July 11, 2011

ಒಂದು ನೀತಿ ಕಥೆ


ಒಂದಲ್ಲಾ ಒಂದು ಊರಲ್ಲಿ ಒಂದು ಗಂಡ ಹೆಂಡತಿ ಸಂಸಾರ ಮಾಡ್ಕೊಂಡು ಇದ್ರಂತೆ.
ಆ ಹೆಂಡತಿಗೆ ಅನುಮಾನ ಗಂಡನಮೇಲೆ, ಕೆಲಸದವಳ ಜೊತೆ ಗಂಡನಿಗೆ ಅಕ್ರಮ ಸಂಭಂದ ಅಂತ.

ಒಂದು ರಾತ್ರಿ ಗಂಡ ಊಟವಾದ ನಂತರ ಹೊಟ್ಟೆ ಸರಿ ಇಲ್ಲ, ಟಾಯ್ಲೆಟ್ ಗೆ ಹೋಗಿ ಬರ್ತೀನಿ ಅಂತ ಅಂದ.
ಹೆಂತತಿಗೆ ಮನಸ್ಸಲ್ಲೇ ಅನುಮಾನ, ಕೆಲಸದವಳ ಹತ್ರ ಹೋಗಿದಾನೆ ಅಂತ. ಹೆಂಡತಿ ಅಂದ್ಕೊಂಡಳು ಇವ ಕೆಲಸದವಳ ಬಳಿಗೆ ಹೋದ ಅಂದು.

ಪರೀಕ್ಷಿಸಿಯೇ ಬಿಡೋಣ ಅಂತ ಶಾಂತವಾಗಿ ಹೋಗಿ ಕೆಲಸದವಳ ಹಾಸಿಗೆಲಿ ತಾನು ಮಲಗಿ ದೀಪ ಆರಿಸಿದಳು....

ಆತ ಕಳ್ಳ ಹೆಜ್ಜೆಗಳಿಂದ ಮೆಲ್ಲಗೆ ಬಂದ ......

ಹೆಚ್ಚು ಸಮಯ ಹಾಳುಮಾಡಲಿಲ್ಲ .. ಮೆಲ್ಲಗೆ ತಾನು ಬಂದ ಕೆಲಸ ಆರಂಭಿಸಿದ ......

ಕೆಲ ಹೊತ್ತಿಗೆ ಎಲ್ಲವು ಮುಗಿಯಿತು, ಹೆಂಡತಿ ನಿಧಾನವಾಗಿ " ನಾನು ಇಲ್ಲಿ ಮಲಗಿರಬಹುದು ಎಂದು ಅಂದುಕೊಂಡಿರಲಿಲ್ಲ ಅಲ್ಲವಾ?" ಅಂದಳು ಲೈಟ್ ನ ಗುಂಡಿ ಅದುಮುತ್ತಾ ...

"ಅಯ್ಯೋ .. ದೇವರಾಣೆ ಇಲ್ಲ ..... !!!" ಮೇಲೇಳುತ್ತಿದ್ದ ವಾಚ್ಮನ್ ಗಾಬರಿಯಿಂದ ಹೇಳುತ್ತಿದ್ದ.

ಈ ಕಥೆಯ ನೀತಿ ಇಂಗ್ಲೀಷ್ ನಲ್ಲಿ ಹೇಳಬೇಕು ಅಂದ್ರೆ "
Sometimes getting too smart can get you screwed
! "



(ಮೋಟುಗೋಡೆ ಇಂದು ಮೂರು ಲಕ್ಷ ಹಿಟ್ಸು, ಇನ್ನೂರಕ್ಕೂ ಮಿಕ್ಕ ಪ್ಹಾಲೋವರ್ಸ್ ಗಳ ಒಂದು ಸಮೃದ್ದ ಬ್ಲಾಗ್ ಆಗಲು ತಾವು ಓದುಗರೇ ಕಾರಣ. ತಮಗೆಲ್ಲರಿಗೂ ಒಂದು ತುಂಬು ಹೃದಯದ ಧನ್ಯವಾದಗಳು.)

Monday, July 4, 2011

ಶಕುಂತಲಾ

  • ಬನ್ನಂಜೆ ಗೋವಿಂದಾಚಾರ್ಯ

ತಾಯಿ ಇಲ್ಲ; ತಂದೆ ಇಲ್ಲ
ಇದೂ ಒಂದು ತಬ್ಬಲಿ
ಅವಳು ಸೂಳೆ ಇವ ಮಹರ್ಷಿ
ಇವರ ಕೀರ್ತಿ ಹಬ್ಬಲಿ ||೧||

ಕಚ್ಚೆ ಬಿಗಿದು ನಡೆದನವನು
ತಪಕ್ಕೆಂದು ಕಾಡಿಗೆ
ಸೀರೆ ಕೊಡವಿ ನಡೆದಳವಳು
ದೇವತೆಗಳ ನಾಡಿಗೆ ||೨||

ನೇಸರುದಿಸಿ ಬಲೆಯನೆಸೆದ
ಹಕ್ಕಿ ಕೊರಳ ಹಾಡಿಗೆ
ಹಳತಾದರು ಮಾಸಲಿಲ್ಲ
ಅವಳ ಕಣ್ಣ ಕಾಡಿಗೆ ||೩||

ಅವನು ಅವಳು ನಡೆದರಯ್ಯ
ತಮ್ಮ ತಮ್ಮ ಪಾಡಿಗೆ
ಎಂತೋ ಮುಂದೆ ಸಾಗಬೇಕು
ದಾರಿಗಿಲ್ಲ ಬಾಡಿಗೆ ||೪||

* * *
ಎದೆಯ ಎತ್ತರಕ್ಕೆ ನಾಚಿ
ಸೆರಗು ಸ್ವಲ್ಪ ಜಾರಿದೆ
ಗಮನವಿಟ್ಟು ನಡೆಯಬೇಕು
ದಾರಿಯೂ ಇಳಿಜಾರಿದೆ ||೫||

ತಾಯಿಯಂತೆ ಮಗಳು ಕೂಡ
ಆಹ! ಎಂಥ ರೂಪಸಿ
ಕಾಡು ಜನರ ನಡುವೆ ತಾನು
ಆದರೂನು ರೂಪಸಿ ||೬||

ಹಕ್ಕಿ ಹಾಡು ಕಲಿಸಿತೇನು
ಜಿಂಕೆ ಕಣ್ಣ ಕೊಟ್ಟಿತು?
ಕಾಡು ಮರದ ಕಳಿತ ಹಣ್ಣು
ಮೊಲೆಯ ಮೊಟ್ಟೆಯಿಟ್ಟಿತು? ||೭||

ಕಣ್ವ ಕೂಡ ಕಣ್ಣುಬಿಟ್ಟ
ಯಾರು ಇವಳ ನಲ್ಲನು!
ಇವಳ ಎದೆಯ ಬೆದೆಯ ಸೊದೆಯ
ಯಾರು ಗೆದೆಯಬಲ್ಲನು! ||೮||

* * *
ಗಡ್ಡನೆರೆತ ಮುದುಕ ಇನ್ನೂ
ತೋರಿಸಿಲ್ಲ ಜಾತಕ
ಅವನು ಬರುವ ಮುನ್ನ ಇಲ್ಲಿ
ನಡೆಯಿತೊಂದು ನಾಟಕ ||೯||

ಜಿಂಕೆ ಹೊಡೆಯಬಂದ ರಾಜ
ಜಿಂಕೆ ಕಣ್ಣ ಹೆಣ್ಣಿಗೆ
ಕಣ್ಣು ಹೊಡೆದನಂತೆ ಏಕೊ
ನಂಟುಬಿತ್ತು ಕಣ್ಣಿಗೆ ||೧೦||

ಎದೆಯ ಎತ್ತರಕ್ಕೆ ಸೋತು
ಸೀರೆ ಜಾರಿಬಿಟ್ಟಿದೆ
ಗಮನವಿಟ್ಟು ನಡೆದರೂನು
ಹೇಳದಂಥ ಗುಟ್ಟಿದೆ ||೧೧||

ಕೆನ್ನೆ ತುಂಬ ಕೆಂಪುಕೆಂಪು
ಎದೆಯು ಎದೆಯನಪ್ಪಿದೆ
ಒಳಗು ಹೊರಗು ತಂಪುತಂಪು
ತೊಡೆಯ ತಾಳ ತಪ್ಪಿದೆ ||೧೨||   

* * *

ಕಣ್ವ ಕೂಡ ಕಣ್ಣು ಬಿಟ್ಟ
ಏನು ನಡೆದುಹೋಯಿತು
ಮದುವೆಗೆಂದು ತಂದ ದರ್ಭೆ               
ಜಾತಕರ್ಮಕಾಯಿತು ||೧೩||


[“ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ” ಪುಸ್ತಕದಿಂದ]